Free Treatment-ನಾಯಿ, ಹಾವು ಕಡಿತಕ್ಕೆ ತಕ್ಷಣ ಉಚಿತ ಚಿಕಿತ್ಸೆ ಕಡ್ಡಾಯ ಸುಪ್ರೀಂ ಕೋರ್ಟ್ ಆದೇಶ!

November 22, 2025 | Siddesh
Free Treatment-ನಾಯಿ, ಹಾವು ಕಡಿತಕ್ಕೆ ತಕ್ಷಣ ಉಚಿತ ಚಿಕಿತ್ಸೆ ಕಡ್ಡಾಯ ಸುಪ್ರೀಂ ಕೋರ್ಟ್ ಆದೇಶ!
Share Now:

ಆರೋಗ್ಯ ಇಲಾಖೆಯ ವತಿಯಿಂದ ನಾಯಿ ಕಡಿತ, ಹಾವು ಅಥವಾ ಇತರೆ ಪ್ರಾಣಿಗಳ ದಾಳಿ ಪ್ರಕರಣದಲ್ಲಿ ಮುಂಗಡ ಹಣಕ್ಕೆ ಒತ್ತಾಯಿಸದೆ ಚಿಕಿತ್ಸೆ(Free rabies vaccine India)ನೀಡಲು ಖಾಸಗಿ ಆಸ್ಪತ್ರೆಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ.

ದೇಶದಾದ್ಯಂತ ನಾಯಿ ಕಡಿತ, ಹಾವು ಕಚ್ಚುವಿಕೆ(Snakebite emergency treatment) ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ರೋಗಗಳಿಗೆ ತಕ್ಷಣದ ಚಿಕಿತ್ಸೆ ಸಿಗದಿದ್ದಲ್ಲಿ ಸಾವು ಕಚಿತವಾಗಿದೆ. ಇಂತಹ ಅನೇಕ ಸಂದರ್ಭಗಳಲ್ಲಿ ಬಡತನ, ಆಸ್ಪತ್ರೆಗೆ ತಲುಪಲು ಆಗುವ ವಿಳಂಬ, ಆಸ್ಪತ್ರೆಗಳಲ್ಲಿನ Anti-venom ಅಥವಾ Rabies Vaccine ಕೊರತೆ, ಹಾಗೂ ಕೆಲವು ಕೇಂದ್ರಗಳಲ್ಲಿ ರೋಗಿಗಳಿಗೆ ವಿಧಿಸಲಾಗುವ ಅನಾವಶ್ಯಕ ಶುಲ್ಕ ಇವೆಲ್ಲವು ಜೀವಕ್ಕೆ ನೇರ ಹೊರೆಯಾಗುತ್ತಿವೆ.

ಇದನ್ನೂ ಓದಿ: Revenue Site Khata-ರೆವಿನ್ಯೂ ಸೈಟ್ ಗೂ ಇನ್ಮುಂದೆ ಸಿಗಲಿದೆ ಇ-ಖಾತಾ!

ಆದ್ದರಿಂದ ಸುಪ್ರೀಂ ಕೋರ್ಟ್ ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಅಥವಾ ನಾಯಿ ಕಡಿತ ಸಂಭವಿಸಿದ ಕ್ಷಣದಿಂದಲೇ, ಯಾವುದೇ ರೀತಿಯ ಶುಲ್ಕವಿಲ್ಲದೆ ತಕ್ಷಣದ ಉಚಿತ ಚಿಕಿತ್ಸೆ ನೀಡುವುದು ಕಡ್ಡಾಯ ಮಾಡಲಾಗಿದ್ದು, ವೈದ್ಯಕೀಯ ನಿರ್ಲಕ್ಷ್ಯದೀಮ್ದ ಸಾವುಗಳಾದರೆ ಸಂಭದಿತ ವೈದ್ಯಾಧಿಕಾರಿ ಅಥವಾ ಸಂಸ್ಥೆಯ ಮುಖ್ಯಸ್ಥರಿಗೆ ಎರಡು ವರ್ಷದ ವರೆಗೆ ಜೈಲು ಶಿಕ್ಶೆಯನ್ನು ವಿಧಿಸಲಾಗುವುದು.

Main points of the Supreme Court order-ಸುಪ್ರೀಂ ಕೋರ್ಟ್ ಆದೇಶದ ಮುಖ್ಯ ಅಂಶಗಳು?

೧) ಉಚಿತ ಮತ್ತು ತಕ್ಷಣದ ಚಿಕಿತ್ಸೆ ಕಡ್ಡಾಯ(Free and immediate treatment is mandatory):

ಆದೇಶದಂತೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜುಗಳಲ್ಲಿ ಕಡ್ಡಾಯವಾಗಿ Anti-venom (AVS) ಹಾಗೂ ಅಗತ್ಯವಾದ ಎಲ್ಲಾ ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು.

ಯಾವುದೇ ರೋಗಿಯ ಹತ್ತಿರ ಮುಂಗಡ ಹಣವನ್ನು ಪಾವತಿ ಮಾಡಿಸಿಕೊಳ್ಳುವಂತಿಲ್ಲ.

ತಕ್ಷಣವೇ ಮೊದಲ ಡೋಸ್ Rabies Vaccine (ARV) ವ್ಯಾಕ್ಸಿನ್ ಅನ್ನು ಹಾಕಬೇಕು.

ಇದನ್ನೂ ಓದಿ: AI Fact Check Training-ಎಐ ಹಾಗೂ ಫ್ಯಾಕ್ಟ್‌ಚೆಕ್‌ ಕುರಿತು ಒಂದು ದಿನದ ತರಬೇತಿಗೆ ಅರ್ಜಿ ಆಹ್ವಾನ!

೨) ಸ್ಟಾಕ್ ಕಡ್ಡಾಯ(Stock is mandatory):

ಎಲ್ಲಾ ಆಸ್ಪತ್ರೆಗಳಲ್ಲಿಯೂ Anti-Rabies Vaccine (ARV) ಮತ್ತು Anti-Rabies Serum (ARS) ಅಥವಾ Human Rabies Immunoglobulin (HRIG) ಕಡ್ಡಾಯವಾಗಿ ಇಟ್ಟುಕೊಳ್ಳಬೇಕು.

ಒಂದು ವೇಳೆ ಸ್ಟಾಕ್ ಇಲ್ಲದಿದ್ದಲ್ಲಿ ಕಾನೂನು ಅದರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

೩) ರೋಗಿಯನ್ನು ನಿರ್ಲಕ್ಷ್ಯಸಿದ್ದಲ್ಲಿ ಕಠಿಣ ಶಿಕ್ಷೆ(Severe punishment for neglecting a patient):

ತಕ್ಷಣ ಚಿಕಿತ್ಸೆ ನೀಡದೆ ತಡ ಮಾಡುವುದು, Anti-venom, Rabies Vaccine ಇಲ್ಲ ಎಂಬ ಕಾರಣ ಹೇಳುವುದು, ಹಣ ಇಲ್ಲದ್ದರಿಂದ ಚಿಕಿತ್ಸೆ ನಿರಾಕರಿಸುವುದು, ತುರ್ತು ಪ್ರಕರಣದಲ್ಲಿ ನೋಂದಣಿ, slip, fee ಕಾಯಿಸುವುದು, ಡಾಕ್ಟರ್ ಇಲ್ಲ ಎಂದು ಹೇಳುವುದು ಮಾಡಿದ್ದಲ್ಲಿ ಸಂಭದಿತ ವೈದ್ಯಾಧಿಕಾರಿ ಅಥವಾ ಸಂಸ್ಥೆಯ ಮುಖ್ಯಸ್ಥರಿಗೆ ಎರಡು ವರ್ಷದ ವರೆಗೆ ಜೈಲು ಶಿಕ್ಶೆಯನ್ನು ವಿಧಿಸಲಾಗುವುದು.

ಇದನ್ನೂ ಓದಿ: PUC Scholarship-ಧಾರ್ಮಿಕ ದತ್ತಿ ಇಲಾಖೆಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ₹5,000/- ಪ್ರೋತ್ಸಾಹಧನ!

What is the reason for implementing this order-ಈ ಆದೇಶವನ್ನು ಜಾರಿಗೆ ತರಲು ಕಾರಣವೇನು?

ನಮ್ಮ ದೇಶದಲ್ಲಿ ಕಳೆದ ಸುಮಾರು ವರ್ಷಗಳಿಂದ ರೇಬೀಸ್ ಕಾಯಿಲೆಯಿಂದ ಸಾವನ್ನಪ್ಪುವರ ಸಂಖ್ಯೆ ಹೆಚ್ಚುತ್ತಲೆ ಇದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವರ್ಷಕ್ಕೆ ಸುಮಾರು 20,000 ಜನರು ಸಾವನ್ನಪ್ಪಿದ್ದಾರೆ. ಇದೆಲ್ಲವೂ ಬಡತನ, ಅತೀಯಾದ ಬಿಲ್ ಪಾವತಿ, ಅರಿವಿನ ಕೊರತೆ, 24 ಗಂಟೆಯ ಒಳಗೆ ಚಿಕಿತ್ಸೆಯನ್ನು ಪಡೆಯದೆ ಇರುವುದು ಸಾವಿಗೆ ಕಾರಣವಾಗುತ್ತಿದ್ದು, ಈ ಎಲ್ಲ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್!

dog bite

ಇದನ್ನೂ ಓದಿ: Nirani Sugars-ನಿರಾಣಿ ಶುಗರ್ಸ್ ವತಿಯಿಂದ ಕಬ್ಬಿನ ದರ ನಿಗದಿ ಕುರಿತು ಅಧಿಕೃತ ಆದೇಶ ಪ್ರಕಟ!

The objective of the government for medical assistance-ವೈದ್ಯಕೀಯ ಸಹಾಯ ಹಾಗೂ ಪರಿಹಾರ ಸರ್ಕಾರದ ಮುಖ್ಯ ಉದ್ದೇಶ:

ಬೆಂಗಳೂರು ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಅಥವಾ ಸಾವನ್ನಪ್ಪಿದವರಿಗೆ ನೀಡುವ ಪರಿಹಾರ ಮಾರ್ಗಸೂಚಿಗಳನ್ನು ಕರ್ನಾಟಕ ಸರ್ಕಾರ ಪರಿಷ್ಕರಿಸಿದೆ. ನಾಯಿ ಕಚ್ಚಿದ ಗಾಯ, ಮೂಗೇಟು, ರಕ್ತಸ್ರಾವ ಮುಂತಾದ ಸಮಸ್ಯೆಗಳಿಗೆ ₹5,000 ಪರಿಹಾರ ನೀಡಲಾಗುತ್ತದೆ. ಇದರಲ್ಲಿ ₹3,500 ನಗರಾಭಿವೃದ್ಧಿ ಇಲಾಖೆ ಮತ್ತು ₹1,500 ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ವಹಿಸಲಾಗುತ್ತದೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ತಕ್ಷಣ ಚಿಕಿತ್ಸೆ ಸಿಗುವಂತೆ ಸರ್ಕಾರ ವಿಶೇಷ ನಿಧಿಯನ್ನು ಮುಂದುವರಿಸಿದೆ. ಹಣ ಮುಂಗಡವಾಗಿ ಪಾವತಿಸಲು ಸಾಧ್ಯವಿಲ್ಲದವರಿಗೆ ಸರ್ಕಾರವೇ ಆರಂಭಿಕ ಚಿಕಿತ್ಸಾ ವೆಚ್ಚವನ್ನು ಭರಿಸುವ ವ್ಯವಸ್ಥೆಯೂ ಇದೆ.

ಬೀದಿ ನಾಯಿ ದಾಳಿ ಅಥವಾ ರೇಬೀಸ್‌ನಿಂದ ಸಾವಾದಲ್ಲಿ, ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಹೆಚ್ಚುತ್ತಿರುವ ದಾಳಿಗಳ ಹಿನ್ನೆಲೆ, ತಕ್ಷಣ ಚಿಕಿತ್ಸೆ ಮತ್ತು ಆರ್ಥಿಕ ಭದ್ರತೆ ನೀಡುವುದೇ ಈ ಹೊಸ ಮಾರ್ಗಸೂಚಿಯ ಉದ್ದೇಶ.

ಇದನ್ನೂ ಓದಿ: PM Kisan Status-ಇಂದು ರೈತರ ಖಾತೆಗೆ ಪಿಎಂ ಕಿಸಾನ್ ಹಣ ಬಿಡುಗಡೆ! ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ!

ಈ ಆದೇಶ ಜಾರಿಗೆ ಬಂದ ಮೇಲೆ ಜನರು ಏನು ಮಾಡಬೇಕು?

ನಾಯಿ, ಬೆಕ್ಕು, ಕೋತಿ, ಹಾವು, ಇಲಿ ಯಾವುದೇ ಪ್ರಾಣಿಯ ಕಚ್ಚಿದಾಗ ತಕ್ಷಣವೇ ನಿಮ್ಮ ಸಮೀಪದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಬೇಕು.

ಒಂದು ವೇಳೆ ಯಾವುದೇ ಆಸ್ಪತ್ರೆ ಹಣ ಕೇಳಿದರೆ ಅಥವಾ ನಿರಾಕರಿಸಿದರೆ ತಕ್ಷಣ ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ 104 ಹೆಲ್ಪ್‌ಲೈನ್‌ಗೆ ದೂರನ್ನು ನೀಡಬಹುದು.

ಮೊದಲ 24 ಗಂಟೆಯೊಳಗೆ ಮೊದಲ ಡೋಸ್ ಹಾಕಿಸಿಕೊಳ್ಳುವುದರಿಂದ ರೋಗಿಯ ಜೀವವನ್ನು ಉಳಿಸಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: