Ganga Kalyana-2026: ಗಂಗಾ ಕಲ್ಯಾಣ ಯೋಜನೆ ಬಜೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ!

March 7, 2026 | Siddesh
Ganga Kalyana-2026: ಗಂಗಾ ಕಲ್ಯಾಣ ಯೋಜನೆ ಬಜೆಟ್‌ನಲ್ಲಿ ಸಬ್ಸಿಡಿ ಹೆಚ್ಚಳ!
Share Now:

ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಪಾಲಿನ ಆಶಾಕಿರಣವಾಗಿರುವ 'ಗಂಗಾ ಕಲ್ಯಾಣ ಯೋಜನೆ'ಗೆ(Ganga Kalyana Yojane) ಈ ಬಾರಿಯ 2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ಈ ಯೋಜನೆಯಲ್ಲಿ ಹಣಕಾಸಿನ ನೆರವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ರೈತ ಸಮುದಾಯದ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ವಿಶೇಷವಾಗಿ ಕೊಳವೆಬಾವಿಗಳ ವಿದ್ಯುದೀಕರಣಕ್ಕಾಗಿ ನೀಡಲಾಗುತ್ತಿದ್ದ ಮೊತ್ತವನ್ನು ದುಪ್ಪಟ್ಟುಗೊಳಿಸಿರುವುದು ಈ ಬಾರಿಯ ಬಜೆಟ್‌ನ ಹೈಲೈಟ್.

ರಾಜ್ಯ ಸರಕಾರದಿಂದ ಈ ಬಾರಿಯ ಬಜೆಟ್ ನಲ್ಲಿ ಈ ಹಿಂದೆ ಗಂಗಾ ಕಲ್ಯಾಣ ಯೋಜನೆಯಡಿ(Ganga Kalyana Scheme) ವಿದ್ಯುದೀಕರಣಕ್ಕಾಗಿ ಸರಕಾರದಿಂದ ಪಾವತಿ ಮಾಡುತ್ತಿದ್ದ ಮೊತ್ತವನ್ನು ಏರಿಕೆ ಮಾಡಲು ಬಜೆಟ್ ನಲ್ಲಿ ಅನುದಾನ ಮೀಸಲಿಡಲಾಗಿದ್ದು ಇಂದಿನ ಲೇಖನದಲ್ಲಿ ಯೋಜನೆಯ ಕುರಿತು ಪ್ರಸ್ತುತ ಚಾಲ್ತಿಯಲ್ಲಿರುವ ಮಾಹಿತಿಯನ್ನು ವಿವರಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಇತರರಿಗೂ ಮಾಹಿತಿ ತಿಳಿಸಲು ಸಹಕರಿಸಿ.

ಇದನ್ನೂ ಓದಿ: Karnataka Budget 2026-ರಾಜ್ಯ ಬಜೆಟ್ 2026-27: ಕೃಷಿ ಮತ್ತು ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ; ಜಿಲ್ಲಾವಾರು ಹಂಚಿಕೆಯ ಸಮಗ್ರ ವಿವರ!

ಈ ಲೇಖನದಲ್ಲಿ ಈ ಬಜೆಟ್‌ನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ(Ganga Kalyana) ಆದ ಬದಲಾವಣೆಗಳೇನು? ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಎಷ್ಟು ಸಹಾಯಧನ ನೀಡಲಾಗುತ್ತದೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಯಾವೆಲ್ಲ ನಿಗಮಗಳಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ? ಪ್ರತಿ ವರ್ಷ ಯಾವ ಸಮಯದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ? ಎನ್ನುವ ಮಾಹಿತಿಯನ್ನು ತಿಳಿಸಲಾಗಿದೆ.

Ganga Kalyana Subsidy-ಈ ಬಜೆಟ್‌ನಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಆದ ಬದಲಾವಣೆಗಳೇನು?

ಗಂಗಾ ಕಲ್ಯಾಣ ಯೋಜನೆಯಡಿ ಈವರೆಗೆ ರೈತರು ಕೊಳವೆಬಾವಿ ಕೊರೆಸಿದ ನಂತರ ಅದಕ್ಕೆ ವಿದ್ಯುತ್ ಸಂಪರ್ಕ ಪಡೆಯಲು (Electrification) ಸರ್ಕಾರದಿಂದ ಎಸ್ಕಾಂಗಳಿಗೆ (ESCOMs) 75,000 ರೂ. ಗಳನ್ನು ಪಾವತಿಸಲಾಗುತ್ತಿತ್ತು. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ವಿದ್ಯುತ್ ಸಾಮಗ್ರಿಗಳ ಬೆಲೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ, ಈ ಮೊತ್ತವನ್ನು ಈಗ 1,50,000 ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ.

ಈ ಬದಲಾವಣೆಯಿಂದಾಗಿ ಬಾಕಿ ಉಳಿದಿರುವ ಸಾವಿರಾರು ಕೊಳವೆಬಾವಿಗಳಿಗೆ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿದೆ. ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದ್ದ ವಿದ್ಯುದೀಕರಣ ಪ್ರಕ್ರಿಯೆಗೆ ಈ ಬಜೆಟ್ ಘೋಷಣೆ ಹೊಸ ವೇಗ ನೀಡಲಿದೆ.

ಇದನ್ನೂ ಓದಿ: Journalists Training-ಮಹಿಳಾ ಪತ್ರಕರ್ತೆಯರಿಗೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಹೈಟೆಕ್ ತರಬೇತಿಗೆ ಅರ್ಜಿ ಆಹ್ವಾನ!

Ganga Kalyana Application-ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಯೋಜನೆಯ ಪ್ರಯೋಜನ ಪಡೆಯಲು ಅರ್ಹರಿರುವ ಕೃಷಿಕರು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ ಸಮಯದಲ್ಲಿ ಆಯಾ ನಿಗಮಗಳ ಅಧಿಕೃತ ವೆಬ್‌ಸೈಟ್ ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಜಿಲ್ಲಾ ಕೇಂದ್ರಗಳಲ್ಲಿರುವ ಸಂಬಂಧಪಟ್ಟ ಅಭಿವೃದ್ಧಿ ನಿಗಮಗಳ ಕಚೇರಿಗಳಲ್ಲಿ ವಿಚಾರಿಸಿ ಅರ್ಜಿ ಸಲ್ಲಿಸಬಹುದಾಗಿದೆ.

Ganga Kalyana Subsidy Amount-ಎಷ್ಟು ಸಹಾಯಧನ ನೀಡಲಾಗುತ್ತದೆ?

ಗಂಗಾ ಕಲ್ಯಾಣ ಯೋಜನೆಯಡಿ ನೀಡಲಾಗುವ ಒಟ್ಟು ಮೊತ್ತವು ಜಿಲ್ಲೆ ಮತ್ತು ಫಲಾನುಭವಿಗಳ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ:

ವಿದ್ಯುದೀಕರಣ ವೆಚ್ಚ: ಈಗ 75,000 ರೂ. ನಿಂದ 1,50,000 ರೂ. ಗೆ ಏರಿಕೆ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಂತಹ ಅಂತರ್ಜಲ ಮಟ್ಟ ಕಡಿಮೆ ಇರುವ ಜಿಲ್ಲೆಗಳಲ್ಲಿ ಘಟಕ ವೆಚ್ಚ ಸುಮಾರು 4 ಲಕ್ಷ ರೂ. ಗಳವರೆಗೆ ಇರುತ್ತದೆ (ಇದರಲ್ಲಿ ಹೆಚ್ಚಿನ ಭಾಗ ಸಬ್ಸಿಡಿ ಇರುತ್ತದೆ). ಇತರೆ ಜಿಲ್ಲೆಗಳಲ್ಲಿ ಸರಿಸುಮಾರು 3.50 ಲಕ್ಷ ರೂ. ಗಳವರೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಉಚಿತವಾಗಿ ಕೊಳವೆಬಾವಿ ಕೊರೆಯುವುದು, ಪಂಪ್‌ಸೆಟ್ ಅಳವಡಿಕೆ ಮತ್ತು ಈಗ ಹೆಚ್ಚಳ ಮಾಡಲಾದ ವಿದ್ಯುದೀಕರಣ ಸೌಲಭ್ಯವೂ ಒಳಗೊಂಡಿರುತ್ತದೆ.

ಇದನ್ನೂ ಓದಿ: Shop Insurance-ಅತೀ ಕಡಿಮೆ ಪ್ರೀಮಿಯಂ ನಲ್ಲಿ ಅಂಗಡಿ ಮಾಲೀಕರಿಗೆ ವಿಮೆ!

Ganga Kalyana-2026

Required Documents For Ganga Kalyana Scheme-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು?

ಕೃಷಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ:

  • ಆಧಾರ್ ಕಾರ್ಡ್ ಪ್ರತಿ.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಸಕ್ಷಮ ಪ್ರಾಧಿಕಾರದಿಂದ ಪಡೆದದ್ದು).
  • ಜಮೀನಿನ ದಾಖಲೆಗಳು: ಆರ್‌ಟಿಸಿ (RTC/Pahani) ಪ್ರತಿ.
  • ಸಣ್ಣ/ಅತಿ ಸಣ್ಣ ರೈತ ದೃಢೀಕರಣ ಪತ್ರ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಅರ್ಜಿದಾರರ ಭಾವಚಿತ್ರ.
  • ಬಿಪಿಎಲ್ (BPL) ಕಾರ್ಡ್ ಪ್ರತಿ.

ಇದನ್ನೂ ಓದಿ: Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

Ganga Kalyana Yojana-ಯಾವೆಲ್ಲ ನಿಗಮಗಳಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ?

ಗಂಗಾ ಕಲ್ಯಾಣ ಯೋಜನೆಯನ್ನು ರಾಜ್ಯದ ವಿವಿಧ ನಿಗಮಗಳ ಮೂಲಕ ಅವರವರ ಸಮುದಾಯದ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ:

  • ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ (SC ವರ್ಗಕ್ಕೆ).
  • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ (ST ವರ್ಗಕ್ಕೆ).
  • ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (OBC ವರ್ಗಕ್ಕೆ).
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (KMDC).
  • ಲಿಂಗಾಯತ, ಒಕ್ಕಲಿಗ ಮತ್ತು ಇತರೆ ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮಗಳು.

ಇದನ್ನೂ ಓದಿ: Gas Level Check-ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

Ganga Kalyana Arji-ಪ್ರತಿ ವರ್ಷ ಯಾವ ಸಮಯದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ?

ಸಾಮಾನ್ಯವಾಗಿ ಪ್ರತಿ ವರ್ಷದ ಬಜೆಟ್ ಘೋಷಣೆಯಾದ ನಂತರ, ಅಂದರೆ ಜೂನ್ ನಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ. ನಿಗಮಗಳು ತಮ್ಮ ಗುರಿ ಮತ್ತು ಅನುದಾನದ ಲಭ್ಯತೆಗೆ ಅನುಗುಣವಾಗಿ ಅರ್ಜಿ ಕರೆಯುತ್ತವೆ. ಆಸಕ್ತರು ಪತ್ರಿಕಾ ಪ್ರಕಟಣೆ ಅಥವಾ ಅಧಿಕೃತ ವೆಬ್‌ಸೈಟ್‌ಗಳನ್ನು ನಿಯಮಿತವಾಗಿ ಗಮನಿಸುತ್ತಿರಬೇಕು.

ರಾಜ್ಯ ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಕೃಷಿ ನಂಬಿದ ಬಡ ರೈತರಿಗೆ ನೀರಾವರಿ ಸೌಲಭ್ಯ ಪಡೆಯುವುದು ಸುಲಭವಾಗಲಿದೆ. ವಿದ್ಯುದೀಕರಣದ ಸಬ್ಸಿಡಿ ಮೊತ್ತವನ್ನು 1.50 ಲಕ್ಷಕ್ಕೆ ಹೆಚ್ಚಿಸಿರುವುದು ಗ್ರಾಮೀಣ ಆರ್ಥಿಕತೆಯ ಬಲವರ್ಧನೆಗೆ ಪೂರಕವಾಗಲಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: