HomeNew postsGas Authority jobs-ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ!

Gas Authority jobs-ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗ!

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ 10ನೇ ತರಗತಿಯವರಿಂದ ಹಿಡಿದು ಪದವಿ ಮುಗಿಸಿದ ಎಲ್ಲಾ ಹಂತದ ಅರ್ಹ ಅಭ್ಯರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳು ಲಭ್ಯವಿದ್ದು, ನೇಮಕಾತಿ(Gas Authority of India Limited Recruitment) ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆಯಾಗಿದೆ.

ಆಯ್ಕೆಯಾದವರಿಗೆ ಉತ್ತಮ ಸಂಬಳದ ಜೊತೆಗೆ ವಿವಿಧ ಆಕರ್ಷಕ ಸೌಲಭ್ಯಗಳಿದ್ದು, ನೌಕರರಿಗೆ ಉತ್ತಮ ಕೆಲಸದ ವಾತಾವರಣ ಕಲ್ಪಿಸಿಕೊಡುವ ಭರವಸೆಯೊಂದಿಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.

Gas Authority of India Limited Recruitment 2024 – ಖಾಲಿ ಇರುವ ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಶೈಕ್ಷಣಿಕ ಹಾಗೂ ವಯೋಮಿತಿ ಅರ್ಹತೆಗಳು, ಅರ್ಜಿ ಸಲ್ಲಿಸಲ ನಿಗದಿಸಿದ ಅರ್ಜಿ ಶುಲ್ಕ ಹಾಗೂ ನೇಮಕಾತಿಯ ಇತರೆ ಅಗತ್ಯ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: swavalambi sarathi-2024: ಗೂಡ್ಸ್ ಗಾಡಿ, ಟ್ಯಾಕ್ಸಿ, ಆಟೋ ರಿಕ್ಷಾ ಖರೀದಿಗೆ 3 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

 job details-ಹುದ್ದೆಗಳ ವಿವರ: 

 ನೇಮಕಾತಿಯಲ್ಲಿ ಒಟ್ಟು 391 ಹುದ್ದೆಗಳು ಖಾಲಿ ಇವೆ.
 ಅವುಗಳಲ್ಲಿ ವಿವಿಧ ವಿಭಾಗಗಳ ಕೆಳಗಿನ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
• ಜೂನಿಯರ್ ಇಂಜಿನಿಯರ್ 
• ಫೋರ್ ಮನ್ 
• ಆಪರೇಟರ್ 
• ಟೆಕ್ನಿಷಿಯನ್ 

Education Qualification-ಶೈಕ್ಷಣಿಕ ವಿದ್ಯಾರ್ಹತೆಯ ವಿವರ : 

ಮೊದಲೇ ತಿಳಿಸಿದ ಹಾಗೆ ಈ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ, ಐಟಿಐ ಅಥವಾ ಪದವಿ ಶಿಕ್ಷಣ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

Age limit- 18 ರಿಂದ 45 ವರ್ಷದ ವಯೋಮಿತಿಯಲ್ಲಿರುವವರು ಅರ್ಜಿ ಸಲ್ಲಿಸಬಹುದು.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಿಗುವ ವೇತನ- ₹24,500 ರೂ. ಯಿಂದ ₹1,38,000 ರೂ. ವರೆಗೆ.

ಇದನ್ನೂ ಓದಿ: Grama panchayath helpline- ಗ್ರಾಮ ಪಂಚಾಯತಿಯ ಎಲ್ಲಾ ಸೌಲಭ್ಯದ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಿ!

 Application fee-ಅರ್ಜಿ ಶುಲ್ಕ – Gas Authority of India Limited Recruitment 2024 : 

• ಅಂಗವಿಕಲ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
• ಇನ್ನುಳಿದ ವರ್ಗದ ಅಭ್ಯರ್ಥಿಗಳು ರೂ.50 ಅರ್ಜಿ ಶುಲ್ಕ.

Important dates-ನೇಮಕಾತಿಯ ಪ್ರಮುಖ ದಿನಾಂಕಗಳು : 

ಈ ನೇಮಕಾತಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆಗಸ್ಟ್ 8, 2024 ರಿಂದ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಪ್ಟೆಂಬರ್ 7,  2024. ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಈ ನಿಗದಿತ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Nigama subsidy yojane-ಉಚಿತ ಹೊಲಿಗೆ ಯಂತ್ರ ಸೇರಿದಂತೆ 10 ಸಬ್ಸಿಡಿ ಯೋಜನೆಗಳ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Website links-ನೇಮಕಾತಿಯ ಪ್ರಮುಖ ಲಿಂಕುಗಳು : 

• ಅಧಿಸೂಚನೆ – Download Now
• ಅರ್ಜಿ ಸಲ್ಲಿಸಲು ಲಿಂಕ್ – Click here

Most Popular

Latest Articles

Related Articles