Gram Sumangal Scheme-ಪ್ರತಿ ತಿಂಗಳು 95 ಪಾವತಿಸಿದರೆ, 14 ಲಕ್ಷ ರೂಪಾಯಿ ಪಡೆಯಿರಿ!

October 17, 2025 | Siddesh
Gram Sumangal Scheme-ಪ್ರತಿ ತಿಂಗಳು 95 ಪಾವತಿಸಿದರೆ, 14 ಲಕ್ಷ ರೂಪಾಯಿ ಪಡೆಯಿರಿ!
Share Now:

ಭಾರತೀಯ ಅಂಚೆ ಕಚೇರಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ನಾಗರಿಕರಿಗೆ ಅನೇಕ ಜನಸ್ನೇಹಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು ಇದೇ ಮಾದರಿಯಲ್ಲಿ ಹಣ ಉಳಿತಾಯ ಮತ್ತು ಆರ್ಥಿಕ ಭದ್ರತೆಗಾಗಿ(Best Life Insurance)"ಗ್ರಾಮ ಸುಮಂಗಲ್ ಯೋಜನೆ" ಚಾಲ್ತಿಯಲ್ಲಿದ್ದು ಇಂದಿನ ಅಂಕಣದಲ್ಲಿ ಇದರ ಕುರಿತು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಗ್ರಾಮ ಸುಮಂಗಲ್ ಯೋಜನೆ (Gram sumangal Yojana) ಭಾರತ ಸರ್ಕಾರದ ಅಂಚೆ ಇಲಾಖೆಯ ಗ್ರಾಮ ಸುಮಂಗಲ್ ಯೋಜನೆಯು ಗ್ರಾಮೀಣ ಭಾರತದ ಸಾಮಾನ್ಯ ಜನರಿಗೆ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಮತ್ತು ರೈತರು ಅಥವಾ ಸ್ವಯಂ ಉದ್ಯೋಗಿಗಳ ಜೀವನವನ್ನು ಆರ್ಥಿಕವಾಗಿ ಸುರಕ್ಷಿತ ಮುನ್ನಡೆಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Land Owners Details-ಉಚಿತವಾಗಿ ಜಮೀನಿನ ಮಾಲೀಕರ ವಿವರವನ್ನು ಚೆಕ್ ಮಾಡಲು ವೆಬ್ಸೈಟ್ ಬಿಡುಗಡೆ!

ಹೌದು ಸ್ನೇಹಿತರೆ ಈ ಯೋಜನೆಯು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ಮುನ್ನಡೆಸಲು ಸಹಾಯ ಮಾಡುತ್ತದೆ. ನೀವು ಪ್ರತಿ ತಿಂಗಳು ಕೇವಲ 95 ರೂಪಾಯಿ ಪಾವತಿ ಮಾಡಿದರೆ ಸಾಕು ನಿಮಗೆ ಭವಿಷ್ಯದಲ್ಲಿ 14 ಲಕ್ಷ ರೂಪಾಯಿ ಪಡೆಯಲು ಸಾಧ್ಯವಾಗುತ್ತದೆ. ಗ್ರಾಮ ಸುಮಂಗಲ್ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿರಿ.

What is Gram sumangal scheme - ಗ್ರಾಮ ಸುಮಂಗಳಿ ಯೋಜನೆ ಎಂದರೇನು?

ಗ್ರಾಮ ಸುಮಂಗಲ್ ಯೋಜನೆಯು ಭಾರತೀಯ ಅಂಚೆ ಇಲಾಖೆಯ “ ಗ್ರಾಮೀಣ ಅಂಚೆ ಜೀವನ್ ವಿಮಾ ” ಅಥವಾ (Rural postal Life Insurance ) ಯೋಜನೆ ಎಂದು ಕರೆಯುತ್ತಾರೆ. ಹೆಚ್ಚಾಗಿ ಜನರು ಹಣ ಹಿಂತಿರುಗಿಸುವ ಯೋಜನೆ (Money Back ) ಎಂದು ಕರೆಯುತ್ತಾರೆ. ಗ್ರಾಮ ಸುಮಂಗಲ್ ಯೋಜನೆಯ ಪ್ರಮುಖ ವಿಷಯವನ್ನು ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: B-Khata to A-Khata-ರಾಜ್ಯ ಸರಕಾರದಿಂದ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಆನ್‍ಲೈನ್ ವ್ಯವಸ್ಥೆ!

More information about Gram sumangal scheme - ಗ್ರಾಮ ಸುಮಂಗಲ್ ಯೋಜನೆಯ ಹೆಚ್ಚಿನ ಮಾಹಿತಿ

ಗ್ರಾಮ ಸುಮಂಗಲ್ ಯೋಜನೆ ಉದ್ದೇಶವೇನೆಂದರೆ, ಸಾಮಾನ್ಯ ಜನರ ಹಣವನ್ನು ದುಪ್ಪಟ್ಟು ಮಾಡಲು ಹೆಸರುವಾಸಿಯಾಗಿದೆ. ಈ ಯೋಜನೆಗೆ ಖಾತೆ ತೆರೆಯಲು ನಿಮಗೆ ಕನಿಷ್ಠ 19 ವರ್ಷದಿಂದ 45 ವರ್ಷಗಳ ಒಳಗೆ ಇರಬೇಕು. ಹಾಗೂ ಈ ಯೋಜನೆಯ ಪಾಲಿಸಿ ಅವಧಿಯು 15 ವರ್ಷ ಅಥವಾ 20 ವರ್ಷಗಳ ತನಕ ಇರುತ್ತದೆ. ನೀವು ಖಂಡಿತವಾಗಿಯೂ 15 ವರ್ಷದಿಂದ 20 ವರ್ಷಗಳ ಒಳಗೆ ಹೂಡಿಕೆ ಮಾಡುತ್ತಾ ಬರಬೇಕು.

ಪಾಲಿಸಿ ವಿಮಾ ಮುತ್ತ ನೋಡುವುದಾದರೆ ಕನಿಷ್ಠ 10 ಸಾವಿರ ರೂಪಾಯಿಯಿಂದ ಗರಿಷ್ಠ 50 ಲಕ್ಷದವರೆಗೆ ನೀವು ಹೂಡಿಕೆ ಪ್ರಾರಂಭಿಸಬಹುದು. ಪ್ರೀಮಿಯಂ ಪಾವತಿಯು ಅರ್ಧ ವಾರ್ಷಿಕ, ವಾರ್ಷಿಕ, ತಿಂಗಳಿಗೆ, ಅಥವಾ ಮೂರು ತಿಂಗಳಿಗೆ, ಇದಿಷ್ಟರಲ್ಲಿ ಯಾವುದಾದರೂ ಒಂದು ಆಯ್ಕೆ ಮಾಡಿಕೊಂಡು ಗ್ರಾಮ ಸುಮಂಗಲ್ ಯೋಜನೆ ಅಡಿಯಲ್ಲಿ ಹೂಡಿಕೆ ಪಾವತಿಸಬಹುದು. ಗ್ರಾಮ ಸುಮಂಗಲ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದ ತಿಂಗಳ ಹಣ ಬಿಡುಗಡೆ!

Best Life Insurance

How to apply for Gram sumangal scheme - ಗ್ರಾಮ ಸುಮಂಗಲ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಗ್ರಾಮ ಸುಮಂಗಲ್ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಕೆಳಗಿನ ಲೇಖನವನ್ನು ಅನುಸರಿಸಿ.

Step-1: ಮೊದಲು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕು
Step-2: ನಂತರ ಅಗತ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ. ಅರ್ಜಿಗೆ ಬೇಕಾಗುವಂತ ಅಗತ್ಯ ದಾಖಲೆಗಳು ಕೆಳಗೆ ನೀಡಲಾಗಿದೆ.
Step-3: ನಂತರ ನಿಮ್ಮ ಪಾಲಿಸಿಯ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ ಉದಾಹರಣೆ 15 ವರ್ಷ ಅಥವಾ 20 ವರ್ಷ.
Step-4: ಆಯ್ಕೆ ಮಾಡಿದ ಪ್ರೀಮಿಮ್ ಪಾವತಿ ಪದ್ಧತಿಯಂತೆ ಮೊದಲನೆಯ ಪ್ರೀಮಿಯಂ ಪಾವತಿಸಿ.
Step-5: ಪ್ರಾರಂಭವಾದ ಬಳಿಕ ನೀವು ನಿಮ್ಮ ನಿಗದಿತ ವರ್ಷಗಳಲ್ಲಿ ಹಣ ಹಿಂತಿರುಗುವಿಕೆಯನ್ನು ಪಡೆಯಲು ಆರಂಭವಾಗುತ್ತದೆ.

ಇದನ್ನೂ ಓದಿ: Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

Important documents for Gram sumangal scheme - ಗ್ರಾಮ ಸುಮಂಗಲ್ ಯೋಜನೆಗೆ ಬೇಕಾಗುವಂತಹ ಅಗತ್ಯ ದಾಖಲೆಗಳು?

ಗ್ರಾಮ ಸುಮಂಗಲ್ ಯೋಜನೆ ಪ್ರಾರಂಭಿಸಲು ಕೆಳಗೆ ನೀಡಿರುವ ಎಲ್ಲಾ ದಾಖಲೆಗಳನ್ನು ಅಗತ್ಯವಾಗಿ ಕೇಳಲಾಗುತ್ತದೆ. ಅರ್ಜಿದಾರರ ಆಧಾರ್ ಕಾರ್ಡ್, ಪಾನ್ ಕಾರ್ಡ್, 4 ಪಾಸ್ಪೋರ್ಟ್ ಸೈಜ್ ಫೋಟೋ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಇದಿಷ್ಟು ದಾಖಲೆಗಳು ಅಗತ್ಯವಾಗಿ ಕೇಳಲಾಗುತ್ತದೆ.

Benefits of Gram sumangal scheme - ಗ್ರಾಮ ಸಮಂಗಲ್ ಯೋಜನೆಯ ಮುಖ್ಯ ಪ್ರಯೋಜನಗಳು?

ನೀವೇನಾದರೂ ಗ್ರಾಮಸಮಂಗಲ್ ಯೋಜನೆಯಲ್ಲಿ ಹೂಡಿಕೆ ಪ್ರಾರಂಭಿಸಿದರೆ ನಿಮಗೆ ಬಹಳಷ್ಟು ಯೋಜನೆಗಳು ಅನುಕೂಲವಾಗುತ್ತದೆ. ನಿಮ್ಮ ಪಾಲಿಸಿ ಅವಧಿಯಲ್ಲಿ ನಿಗದಿತ ಹಂತದಲ್ಲಿ ಹಣ ಹಿಂತಿರುಗುತ್ತದೆ. ಮತ್ತು ಈ ಯೋಜನೆಯೆಲ್ಲಿ ನಿಮ್ಮ ಜೀವನಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ.

ವಾರ್ಷಿಕ ಬೋನಸ್ ಮೂಲಕ ಹೆಚ್ಚುವರಿ ಲಾಭವನ್ನು ಪಡೆಯುತ್ತೀರಿ. ಹುಡುಕಿದಾರರು ಮರಣ ಹೊಂದಿದರೆ ಕುಟುಂಬದ ಸಂಪೂರ್ಣ ಆರ್ಥಿಕ ಸುರಕ್ಷತೆಯನ್ನು ಈ ಯೋಜನೆ ನೋಡಿಕೊಳ್ಳುತ್ತದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ರೈತರಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ರಚನೆ ಮಾಡಿದ್ದಾರೆ.

ಇದನ್ನೂ ಓದಿ: Reels Competition-ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿ 50,000/- ಬಹುಮಾನ ಗೆಲ್ಲಿ!

ಗ್ರಾಮ ಸಮಂಗಲ್ ಯೋಜನೆಯು ಕೇವಲ ಒಂದು ಉಳಿತಾಯದ ಮೂಲವಲ್ಲ. ಇದು ನಿಮ್ಮ ಭವಿಷ್ಯದ ದಾರಿದೀಪವಾಗುತ್ತದೆ. ಸರ್ಕಾರಿ ಅಂಚೆ ಇಲಾಖೆಯು ಹೇಳಿದಂತೆ ಇದು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹಾಗೂ ರೈತರಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ ಬಹಳ ಉಪಯೋಗವಾಗುತ್ತದೆ ಎಂದು ಸೂಚಿಸಿದ್ದಾರೆ.

ಗ್ರಾಮ ಸುಮಂಗಲ್ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಸರ್ಕಾರದ ಅಧಿಕೃತ ವೆಬ್ಸೈಟ್ ಕೆಳಗೆ ಲಿಂಕಿನಲ್ಲಿ ನೀಡಲಾಗಿದೆ.

Gram sumangal scheme apply link - ಗ್ರಾಮ ಸುಮಂಗಲ ಯೋಜನೆಗೆ ಲಿಂಕ್ :- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: