Gruhalakshmi Amount-ಗೃಹಲಕ್ಷ್ಮಿ 2 ತಿಂಗಳ ಬಾಕಿ ಹಣ ಬಿಡುಗಡೆ ನೂತನ ಮಾಹಿತಿ ಪ್ರಕಟ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

January 10, 2026 | Siddesh
Gruhalakshmi Amount-ಗೃಹಲಕ್ಷ್ಮಿ 2 ತಿಂಗಳ ಬಾಕಿ ಹಣ ಬಿಡುಗಡೆ ನೂತನ ಮಾಹಿತಿ ಪ್ರಕಟ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Share Now:

ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಇನ್ನು 2 ತಿಂಗಳ ಬಾಕಿ ಹಣ(Gruhalakshmi Pending Amount) ಬಿಡುಗಡೆ ವರ್ಗಾವಣೆ ಅಗಿಲ್ಲದಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು ಈ ನಿಟ್ಟಿನಲ್ಲಿ ಎಚ್ಚೆತ್ತುಗೊಂಡಿರುವ ರಾಜ್ಯ ಸರ್ಕಾರವು ತ್ವರಿತವಾಗಿ ಬಾಕಿ ಹಣ ಬಿಡುಗಡೆಗೆ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಿದ್ದು ಇದರ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಹಂಚಿಕೊಂಡಿರುವ ನೂತನ ಪತ್ರಿಕಾ ಪ್ರಕಟಣೆ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಗೃಹಲಕ್ಷ್ಮಿ ಯೋಜನೆಯ(Gruhalakshmi Yojana)ಪ್ರಾರಂಭವಾದ ಸಮಯದಲ್ಲಿ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸರಿಯಾಗಿ ಫಲಾನುಭವಿಗೆ ನೇರ ನಗದು ವರ್ಗಾವಣೆ ಮೂಲಕ ರೂ 2,000/- ಆರ್ಥಿಕ ನೆರವು ಬ್ಯಾಂಕ್ ಖಾತೆಗೆ ವರ್ಗಾವಣೆ ಅಗುತ್ತಿತ್ತು ಆದರೆ ಪ್ರಸ್ತುತ ದಿನಗಳಲ್ಲಿ ಸಮರ್ಪಕವಾಗಿ ಈ ಯೋಜನೆಯ ಹಣ ಜಮಾ ಅಗುತ್ತಿಲ್ಲ ಎನ್ನುವ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಇದಕ್ಕೆ ಸೂಕ್ತ ಪರಿಹಾರ ಕ್ರಮವನ್ನು ಅನುಸರಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ: Sheep Farming Scheme-ಕುರಿ ಮೇಕೆ ಸಾಕಾಣಿಗೆಕೆ 43,750 ರೂ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

ಗೃಹಲಕ್ಷ್ಮಿ ಯೋಜನೆಯ(Gruhalakshmi) ಬಾಕಿ ಹಣ ಬಿಡುಗಡೆ ಬಗ್ಗೆ ಮತ್ತು ರದ್ದಾದ ರೇಷನ್ ಕಾರ್ಡದಾರರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿ ಹಾಗೂ ಗೃಹಲಕ್ಷ್ಮಿ ಸಂಘದ ಮೂಲಕ ಮಹಿಳೆಯರು ಪಡೆಯಬಹುದಾದ ಸೌಲಭ್ಯದ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಸೇರಿದಂತೆ ಇನ್ನಿತರೆ ಪ್ರಮುಖ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Gruhalakshmi Pending Amount-ಗೃಹಲಕ್ಷ್ಮಿ ಯೋಜನೆಯ 2 ತಿಂಗಳ ಬಾಕಿ ಹಣ ಬಿಡುಗಡೆ ಯಾವಾಗ?

ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ರೂ 2,000/- ಆರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳಿಗೆ 2025 ನೇ ವರ್ಷದಲ್ಲಿ ಒಟ್ಟು 2 ತಿಂಗಳ ಹಣವನ್ನು ವರ್ಗಾವಣೆ ಮಾಡುವುದು ರಾಜ್ಯ ಸರ್ಕಾರದಿಂದ ಬಾಕಿ ಉಳಿದಿದ್ದು ಈ ಆರ್ಥಿಕ ನೆರವು ವರ್ಗಾವಣೆ ಯಾವಾದ ಅಗಲಿದೆ? ಎನ್ನುವ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಹಂಚಿಕೊಂಡಿರುವ ಉತ್ತರ ಹೀಗಿದೆ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದು.

ಗೃಹಲಕ್ಷ್ಮಿ ಯೋಜನೆಯ ಬಾಕಿಯಿರುವ ಎರಡು ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲು ಈಗಾಗಲೇ ಅನುಮೋದನೆಯನ್ನು ಪಡೆಯಲು ಅಗತ್ಯವಿವರವನ್ನು ಸಲ್ಲಿಸಲಾಗಿದ್ದು ಶೀಘ್ರದಲ್ಲೇ ಅನುಮೋದನೆ ದೊರೆಯಲ್ಲಿದ್ದು ಅನುಮೋದನೆ ಸಿಕ್ಕ ತಕ್ಷಣ ಎಲ್ಲಾ ಅರ್ಹ ಫಲಾನುಭವಿಗಳಿಗೆ ಬಾಕಿ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: A-Khata-ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆಗೆ ಸಚಿವ ಸಂಪುಟದಲ್ಲಿ ನಿರ್ಣಯ!

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು.
ಅನರ್ಹ ರೇಷನ್‌ ಕಾರ್ಡ್ ರದ್ದಾಗಿರುವ ಕಾರಣ ಕೆಲವರಿಗೆ ಹಣ ಸಂದಾಯವಾಗಿಲ್ಲ. ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ತಕ್ಷಣ ಅವರಿಗೂ ದುಡ್ಡು ರಿಲೀಸ್ ಆಗಲಿದೆ. ರೇಷನ್ ಕಾರ್ಡ್ ಆಧರಿಸಿ ನಾವು ಗೃಹಲಕ್ಷ್ಮಿ ‌ಫಲಾನುಭವಿಗಳಿಗೆ ದುಡ್ಡು ಹಾಕುತ್ತಿದ್ದೇವೆ. ಕೆಲ ರೇಷನ್ ಕಾರ್ಡ್ ರದ್ದಾದಾಗ ದುಡ್ಡು ಹೋಲ್ಡ್ ಆಗಿರಬಹುದು. ಆದರೆ ಅವರು ತೆರಿಗೆ ಪಾವತಿದಾರರಲ್ಲದಿದ್ದಲ್ಲಿ ಹಣ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇದಲ್ಲದೇ ಅನರ್ಹ ರೇಷನ್‌ ಕಾರ್ಡ್‌ ರದ್ದಾದ ಕಾರಣ ಕೆಲವರಿಗೆ ಹಣ ಸಂದಾಯವಾಗಿಲ್ಲ. ಆಹಾರ ಇಲಾಖೆಯಿಂದ ಹೊಸ ದತ್ತಾಂಶ ಬಂದ ತಕ್ಷಣ ಮಾರ್ಗಸೂಚಿ ಪ್ರಕಾರ ಅರ್ಹರಿಗ ಅರ್ಜಿದಾರರಿಗೆ ಗೃಹಲಕ್ಷ್ಮಿ ಯೋಜನೆಯ ಆರ್ಥಿಕ ನೆರವನ್ನು ಸಹ ಇಂತವರಿಗೂ ಸಹ ಹಣ ಬಿಡುಗಡೆ ಆಗಲಿದೆ ಎಂದರು.

ಇದನ್ನೂ ಓದಿ: SIM Card-ಹೊಸ ಸಿಮ್ ಕಾರ್ಡ ಖರೀದಿಗೆ ಈ ನಿಯಮ ಪಾಲಿಸುವುದು ಕಡ್ದಾಯ!

Gruhalakshmi Society-ಗೃಹಲಕ್ಷ್ಮಿ ಸಂಘಕ್ಕೆ ಪ್ರತಿ ತಿಂಗಳು 200 ರೂಪಾಯಿ ಹಣ:

ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರಾದವರು ಪ್ರತಿ ತಿಂಗಳು 200 ರೂಪಾಯಿ ಹಣ ಕಟ್ಟಿಕೊಂಡು ಹೋಗಬೇಕು, 6 ತಿಂಗಳು ಆದ ಬಳಿಕ ಸಾಲ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇದ್ದು, ಹೆಚ್ಚು ಕಂಡೀಷನ್‌ಗಳನ್ನು ಹಾಕದೇ ಅರ್ಹರನ್ನು ಗುರುತಿಸಿ ಸಾಲ ನೀಡಲಾಗುವುದು. ಜೊತೆಗೆ ಆರೋಗ್ಯ ವಿಮೆಯನ್ನು ನೀಡುವ ಯೋಚನೆ ಇದೆ ಎಂದು ಸಚಿವರು ಹೇಳಿದರು.

Gruhalakshmi Amount

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

Gruhalakshmi Society Member-ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರಾದವರು ಹೇಗೆ?

ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ನೋಂದಾಯಿತರಾಗಿರುವ ನೀವು ನಿಮ್ಮ ಹಳ್ಳಿಯ ಅಂಗನವಾಡಿಯನ್ನು ಭೇಟಿ ಮಾಡಿ ಅಥವಾ ನಿಮ್ಮ ತಾಲ್ಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ(CDPO) ಕಚೇರಿಯನ್ನು ಭೇಟಿ ಮಾಡಿ ನಿಗದಿತ ಅರ್ಜಿ ನಮೂನೆಯನ್ನು ₹1,000 ಷೇರು ಹಣ ಪಾವತಿಸಿ ಸದಸ್ಯತ್ವ ಪಡೆಯಬೇಕು.

Gruhalakshmi Society Benefits-ಗೃಹಲಕ್ಷ್ಮಿ ಸಹಕಾರ ಸಂಘ ಹೇಗೆ ಕಾರ್ಯನಿರ್ವಹಿಸುತ್ತದೆ ಇದರಿಂದಾಗುವ ಪ್ರಯೋಜನಗಳೇನು?

ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರಾಗಲು, ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರಬೇಕು, ₹1,000 ಷೇರು ಹಣ ಪಾವತಿಸಿ ಸದಸ್ಯತ್ವ ಪಡೆಯಬೇಕು, ಪ್ರತಿ ತಿಂಗಳು ಕನಿಷ್ಠ ₹200 ಉಳಿತಾಯ ಮಾಡಬೇಕು, ಮತ್ತು ಸತತ 6 ತಿಂಗಳು ಉಳಿತಾಯ ಮಾಡಿದ ನಂತರ ₹30,000 ರಿಂದ ₹3 ಲಕ್ಷದವರೆಗೆ ಸಾಲ ಪಡೆಯಲು ಅರ್ಹರಾಗುತ್ತೀರಿ.

ಇದನ್ನೂ ಓದಿ: Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!

Gruhalakshmi Society Eligibility-ಸದಸ್ಯರಾಗಲು ಬೇಕಾದ ಪ್ರಮುಖ ಅಂಶಗಳು:

ಅರ್ಹತೆ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಿರುವ ಮಹಿಳೆಯರು ಮಾತ್ರ ಸದಸ್ಯರಾಗಬಹುದು.

ಷೇರು ಹಣ: ಸಂಘಕ್ಕೆ ಸೇರಲು ಒಮ್ಮೆ ₹1,000 ಷೇರು ಹಣ ಪಾವತಿಸಬೇಕು (ಇದು ₹1,250 ಒಟ್ಟು ಶುಲ್ಕದಲ್ಲಿ ಸೇರಿದೆ).

ಮಾಸಿಕ ಉಳಿತಾಯ: ಸದಸ್ಯತ್ವ ಪಡೆದ ನಂತರ ಪ್ರತಿ ತಿಂಗಳು ಕನಿಷ್ಠ ₹200 ಜಮಾ ಮಾಡಬೇಕು.

ಸಾಲದ ಅರ್ಹತೆ: ಸತತ 6 ತಿಂಗಳು ಉಳಿತಾಯ ಮಾಡಿದ ನಂತರ ₹30,000 ರಿಂದ ₹3 ಲಕ್ಷದವರೆಗೆ ಸಾಲ ಪಡೆಯಲು ಅರ್ಹರಾಗುತ್ತೀರಿ.

ವ್ಯವಹಾರ: ಸಂಘದಲ್ಲಿ ಸಂಪೂರ್ಣ ಕ್ಯಾಶ್‌ಲೆಸ್ ವ್ಯವಹಾರ ನಡೆಯಲಿದೆ ಮತ್ತು ಸಾಲಕ್ಕೆ ಯಾವುದೇ ಜಾಮೀನು ಅಥವಾ ಷೂರಿಟಿ ಅಗತ್ಯವಿಲ್ಲ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: