HomeNew postsGruhalakhsmi-2023: ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣವೇನು? ಇವರಿಗೆ ಹಣ ಯಾವಾಗ ಜಮಾ...

Gruhalakhsmi-2023: ಅರ್ಜಿ ಸಲ್ಲಿಸಿದರು ಗೃಹಲಕ್ಷ್ಮಿ ಹಣ ಜಮಾ ಅಗದಿರಲು ಕಾರಣವೇನು? ಇವರಿಗೆ ಹಣ ಯಾವಾಗ ಜಮಾ ಅಗಲಿದೆ!

ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತನ್ನು ಹಾಕಿ ಮೂರು ವಾರಗಳು ಕಳೆದರು ಅರ್ಜಿ ಸಲ್ಲಿಸಿದ 1.28 ಕೋಟಿ ಜನರಲ್ಲಿ 82 ಲಕ್ಷ ಜನರಿಗೆ ಮಾತ್ರ ಮೊದಲ ಕಂತಿನ ಹಣ ವರ್ಗಾವಣೆ ಅಗಿದೆ ಇನ್ನುಳಿದ 20% ಗೂ ಹೆಚ್ಚಿನ ಅರ್ಹ ಫಲಾನುಭವಿಗಳಿಗೆ ಇನ್ನು ಮೊದಲ ಕಂತಿನ ಹಣ(Gruhalakshmi scheme amount) ಜಮಾ ಅಗಿರುವುದಿಲ್ಲ.

ಈ ಯೋಜನೆ ಅನುಷ್ಥಾನ ಇಲಾಖೆಯ ಮಾಹಿತಿಯ ಪ್ರಕಾರ ಕೆಲವು ತಾಂತ್ರಿಕ ಸಮಸ್ಯೆಯಿಂದ ಉಳಿದ ಫಲಾನುಭವಿಗಳಿಗೆ ಹಣ ವರ್ಗಾವಣೆ ಅಗಿರುವುದಿಲ್ಲ ಎಂದು ತಿಳಿಸಲಾಗಿದೆ. ಹಣ ಜಮಾ ಅಗದಿರಲು ಕಾರಣಗಳೇನು? ಇವರಿಗೆ ಮೊದಲನೆ ಕಂತಿನ ಹಣ ಯಾವಾಗ ಬರುತ್ತದೆ? ಈ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಕಳೆದ ಆಗಸ್ಟ್ ತಿಂಗಳ ಕೊನೆಯವಾರ ಏಕ ಕಾಲಕ್ಕೆ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ಖಾತೆಗೆ ಹಣವನ್ನು ಡಿಬಿಟಿ ಮೂಲಕ ವರ್ಗಾಹಿಸಿದೆ. ಆದರೂ ಸಹ ಕೆಲವು ಅರ್ಹ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮಿ ಸಂದೇಶ ಬಂದಿದ್ದರೂ ಸಹ ಹಣ ಏಕೆ ಖಾತೆಗೆ ಬಂದಿಲ್ಲ ಅಂತಾ ಸಾಕಷ್ಟು ಮಂದಿ ಗೊಂದಲ ಉಂಟಾಗಿದೆ.

ಅರ್ಜಿ ಸಲ್ಲಿಸಿ ಎಲ್ಲಾ ಮಾಹಿತಿ ಸರಿಯಾಗಿದ್ದು ಅರ್ಹರಿರುವವರಿಗೂ ಬ್ಯಾಂಕ್ ಖಾತೆಗೆ Gruhalakshmi ಹಣ ಜಮೆ ಅಗಿರುವುದಿಲ್ಲ. ಇನ್ನು ಕೂಡ 20% ರಷ್ಟು ಮಂದಿಗೆ ಹಣ ಜಮೆ ಆಗುವುದು ಬಾಕಿಯಿದೆ. 

ಒಂದೇ ಭಾರಿಗೆ ದೊಡ್ಡ ಸಂಖ್ಯೆಯಲ್ಲಿ DBT ಮೂಲಕ ಹಣ ವರ್ಗಾವಣೆ ಮಾಡಿದ್ದರಿಂದ ಹಣ ಎಲ್ಲಾ ಫಲಾನುಭವಿಗಳ ಖಾತೆಗೆ ಹೊಗಿರುವುದಿಲ್ಲ ಒಂದು ದಿನಕ್ಕೆ ಇಂತಿಷ್ಟಿ ಲಿಮಿಟ್ ಇರುತ್ತದೆ ಅದನ್ನು ಮೀರಿದ ಬಳಿಕ ಉಳಿದುಕೊಂಡಿರುವ ಅರ್ಹರಿಗೆ ಹಂತ ಹಂತವಾಗಿ ಪ್ರತಿ ದಿನ ಫಲಾನುಭವಿಗಳ ಅರ್ಜಿ ಚೆಕ್ ಮಾಡಿ ಒಂದಿಷ್ಟು ಜನರಿಗೆ ಮೊದಲನೆ ಕಂತಿನ ಹಣ ವರ್ಗಾವಣೆ ಮಾಡಲಾಗಿತ್ತಿದೆ ಇನ್ನೂ 8 ರಿಂದ 10 ದಿನಗಳಲ್ಲಿ ಇನ್ನುಳಿದ ಎಲ್ಲಾ ಫಲಾನುಭವಿಗಳಿಗೂ ಹಣ ಸಂದಾಯವಾಗಲಿದೆ. ಅಂದರೆ ಈ ತಿಂಗಳ ಅಂತ್ಯದ ವೇಳೆಗೆ ಗೃಹಲಕ್ಷ್ಮಿ ಯೋಜನೆಯಡಿ ಆಯ್ಕೆಯಾದ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ.

ಇದನ್ನೂ ಓದಿ: ಪಡಿತರ ಚೀಟಿಯಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಯಾವೆಲ್ಲ ನಿಯಮ ಪಾಲಿಸಬೇಕು ಎಂದು ಮಾರ್ಗಸೂಚಿ ಬಿಡುಗಡೆ!

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬಾಳ್ಕರ್  ಗೃಹಲಕ್ಷ್ಮಿ ಹಣ ಇದೇ ತಿಂಗಳು ಎಲ್ಲಾ ಫಲಾನುಭವಿಗಳ ಖಾತೆಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಗೃಹಲಕ್ಷ್ಮಿ ಯೋಜನೆಗೆ(Gruhalakshmi Yojane) ಒಂದು ಕೋಟಿ 28 ಲಕ್ಷ ಮಂದಿಯಷ್ಟು ಫಲಾನುಭವಿಗಳು ನೋಂದಣೆ ಮಾಡಿಕೊಂಡಿದ್ದಾರೆ. ಇಲ್ಲಿಯವರೆಗೂ ಒಂದು ಕೋಟಿ 10 ಲಕ್ಷ ಜನರನ್ನು ಅರ್ಹ ಫಲಾನುಭವಿಗಲಾಗಿದ್ದು. ಇದರಲ್ಲಿ 82 ಲಕ್ಷ ಜನರ ಬ್ಯಾಂಕ್‌ ಖಾತೆಗೆ 2 ಸಾವಿರ ರೂಪಾಯಿ ಹಣ ಜಮಾ ಆಗಿದೆ ಈ ಯೋಜನೆಗೆ  ಪ್ರತಿ ತಿಂಗಳು 2,100 ಕೋಟಿ ರೂ ವೆಚ್ಚವಾಗಲಿದೆ. ಎಂದು ಮಾಹಿತಿ ಹಂಚಿಕೊಂಡಿದ್ದಾರೆ. 

Gruhalakshmi Status check- ಅರ್ಜಿ ಸಲ್ಲಿಸಿದ ಫಲಾನುಭವಿಗಳ ಮಾಹಿತಿಯಲ್ಲಿಯೂ ತೊಡಕು:

ಇಲ್ಲಿಯವರೆಗೆ ತನಕ 28 ಲಕ್ಷ ಮಂದಿಗೆ ಇನ್ನು ಕೂಡ 2 ಸಾವಿರ ರೂಪಾಯಿ ಹಣ ಬಂದಿಲ್ಲ ಎನ್ನಲಾಗಿದೆ. ಇದರಲ್ಲಿ ಅನೇಕ ಮಂದಿಯ ಬ್ಯಾಂಕ್‌ ಖಾತೆಗಳು ನಿಷ್ಕ್ರೀಯವಾಗಿರುವುದು ಸಮಸ್ಯೆಯಾಗಿದೆ. ಇನ್ನು ಕೆಲವರ ಖಾತೆಗಳಿಗೆ ಆಧಾರ್‌ ಜೋಡಣೆಯಾಗಿಲ್ಲದಿರುವುದು. ಇದಲ್ಲದೆ ಡಿಬಿಟಿ ವ್ಯವಸ್ಥೆಯಡಿಯಲ್ಲಿ RBI ನಿಯಮಗಳ ಅನ್ವಯ ಹಣ ಹಾಕಬೇಕಾಗಿರುವುರಿಂದ ಹಣ ಜಮೆ ಆಗುವುದು ಕೂಡ ತಡವಾಗುತ್ತಿದೆ ಎನ್ನುವ ಮಾಹಿತಿ ಹೊರಬಂದಿದೆ.

Gruhalakshmi Amount- ಒಮ್ಮೆ ಒಂದು ತಿಂಗಳ ಹಣ ಬಂದರೆ ಮುಂದೆ ಫಲಾನುಭವಿಗೆ ಹಣ ವರ್ಗಾವಣೆ ಹಾದಿ ಸುಗಮ:

ಅರ್ಜಿ ಸಲ್ಲಿಸಿದ ಫಲಾನುಭವಿಗೆ DBT ಮೂಲಕ ಹಣವನ್ನು ವರ್ಗಾಹಿಸುವ ಸಂದರ್ಭದಲ್ಲಿ, ಪ್ರತಿಯೊಂದು ಅರ್ಜಿಯ ದಾಖಲೆಗಳನ್ನು ಪರಿಶೀಲನೆ ಮಾಡಬೇಕಿದೆ. ಇದರಿಂದ ತಡವಾಗಲಿದ್ದು, ಒಮ್ಮೆ ಹಣ ಜಮೆ ಆದರೆ ಮುಂದಿನ ತಿಂಗಳುಗಳಿಂದ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಲಾಗುತ್ತಿದ್ದು. ಇನ್ನು ಫಲಾನುಭವಿಗಳಲ್ಲಿ 41 ಸಾವಿರ ಮನೆಯೊಡತಿಯರ ಹೆಸರಿನ ಇನ್ಶಿಯಲ್ ಸಮಸ್ಯೆ ಅಂದರೆ ಆಧಾರ್ ನಲ್ಲಿರು ಹೆಸರು ಒಂದು ರೀತಿ ಇಂಗ್ಲೀಷ್ ಅಕ್ಷರ ಬ್ಯಾಂಕ್ ಪಾಸ್ ಬುಕ್ ನಲ್ಲಿ ಅಥವಾ ರೇಷನ್​ ಕಾರ್ಡ್​​ನಲ್ಲಿ  ಇದೇ ರೀತಿ ಇಲ್ಲದಿರುವುದು ಇದು ಕೂಡ ಹಣ ಜಮಾವಣೆ ಆಗದಿರುವುದಕ್ಕೆ ಒಂದು ಕಾರಣವಾಗಿದೆ. 

ಇದನ್ನೂ ಓದಿ: ಆಹಾರ ಇಲಾಖೆಯಿಂದ ರದ್ದಾದ ರೇಷನ್  ಕಾರ್ಡ ಪಟ್ಟಿ ಬಿಡುಗಡೆ 

ಇಲ್ಲಿಯವರೆಗೆ ಹಣ ಜಮಾ ಅಗದ ಫಲಾನುಭವಿಗಳು ಒಮ್ಮೆ ನಿಮ್ಮ ಆಧಾರ್ ಕಾರ್ಡ ನಲ್ಲಿರುವಂತೆಯೇ ಯಥವತಾಗಿ ರೇಷನ್ ಕಾರ್ಡ ನಲ್ಲಿ ಹೆಸರು ಇದಿಯೇ ಚೆಕ್ ಮಾಡಿ ನಂತರ ನಿಮ್ಮ ಬ್ಯಾಂಕ್ ಅಕೌಂಟ್ NPCI ಲಿಂಕ್ ಅಗಿದಿಯೋ ಇಲ್ಲವೋ ಚೆಕ್ ಮಾಡಿ. 

ನಿಮ್ಮ ಮೊಬೈಲ್ ನಲೇ ಬ್ಯಾಂಕ್ ಖಾತೆಗೆ NPCI ಲಿಂಕ್ ಚೆಕ್ ಮಾಡುವ ವಿಧಾನ:

ಈ ಯೋಜನೆಗೆ ಅರ್ಜಿ ಸಲ್ಲಿಸಿಯು ಹಣ ಜಮಾ ಅಗದವರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI link) ಇರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮೊಬೈಲ್ ಬಳಕೆ ಮಾಡಿ ಈ ಮಾಹಿತಿಯನ್ನು ತಿಳಿದುಕೊಳ್ಳಬವುದು ಈ aadhaar and bank account link status check  ಲಿಂಕ್ ಮೇಲೆ ಕ್ಲಿಕ್ ಮಾಡಿ ಅ ಅಂಕಣದ ವಿವರಿಸಿರುವ ವಿಧಾನವನ್ನ್ಉ ಅನುಸರಿಸಿ ಆಧಾರ್ ಲಿಂಕ್ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದಾಗಿದೆ.

Most Popular

Latest Articles

Related Articles