HomeGovt SchemesGruhalakshmi status-2024: ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಿರುವುದನ್ನು ತಿಳಿಯುವುದು ಭಾರೀ...

Gruhalakshmi status-2024: ಇನ್ನು ಮುಂದೆ ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಿರುವುದನ್ನು ತಿಳಿಯುವುದು ಭಾರೀ ಸುಲಭ!

ಪಡಿತರ ಚೀಟಿಯ ಮುಖ್ಯಸ್ಥರಿಗೆ ಪ್ರತಿ ತಿಂಗಳು ರಾಜ್ಯ ಸರಕಾರದಿಂದ ಬಿಡುಗಡೆ ಮಾಡುವ ಗೃಹಲಕ್ಷ್ಮಿ ಯೋಜನೆಯ(Gruhalakshmi yojana) ರೂ 2,000 ವನ್ನು ಫಲಾನುಭವಿಗಳು ಸುಲಭ ವಿಧಾನ ಅನುಸರಿಸಿ ಹೇಗೆ ಪ್ರತಿ ತಿಂಗಳು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಗೃಹಲಕ್ಷ್ಮಿ(Gruhalakshmi) ಯೋಜನೆಯಡಿ ಪ್ರತಿ ತಿಂಗಳು ಬಿಡುಗಡೆ ಮಾಡುವ ಅರ್ಥಿಕ ನೆರವನ್ನು ಸರಕಾರದಿಂದ ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆ ಮಾಡಲಾಗುತ್ತಿದ್ದು, ಕುಟುಂಬದ ಯಜಮಾನಿಯ ಖಾತೆಗೆ ಈ ಹಣ ಜಮಾ ಅಗಿದಿಯೋ? ಇಲ್ಲವೋ ಎಂದು ಪ್ರತಿ ತಿಂಗಳು ಬ್ಯಾಂಕ್ ಹೋಗದೆ ನಿಮ್ಮ ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಇ-ಆಡಳಿತ ಇಲಾಖೆಯಿಂದ ಅಭಿವೃದ್ದಿಪಡಿಸಿರುವ ಡಿಬಿಟಿ ಕರ್ನಾಟಕ(DBT Karnataka) ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡಿಕೊಂಡು ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಫಲಾನುಭವಿ ಬ್ಯಾಂಕ್ ಖಾತೆಗೆ ವರ್ಗಾವಣೆ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Bara parihara Status check-2024: ಬರ ಪರಿಹಾರ ಎಷ್ಟು ಜಮಾ ಅಗಿದೆ? ಯಾವ ಬ್ಯಾಂಕ್ ಖಾತೆಗೆ? ಸಂಪೂರ್ಣ ಮಾಹಿತಿ ಪಡೆಯಲು ಅಪ್ಲಿಕೇಶನ್ ಬಿಡುಗಡೆ!

Gruhalakshmi status-2024: ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಜಮಾ ಆಗಿರುವುದನ್ನು ತಿಳಿಯುವ ಸುಲಭ ವಿಧಾನ:

Step-1: ಮೊದಲು ಈ ಲಿಂಕ್ ಮೇಲೆ Download Now ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಬೇಕು ಬಳಿಕ ಇಲ್ಲಿ ಅಧಿಕೃತ DBT Karnataka mobile app ಅನ್ನು ಡೌನ್ಲೋಡ್ ಮಾಡಲು Install ಬಟನ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ತದನಂತರ ಅರ್ಜಿದಾರರು ತಮ್ಮ 12 ಅಂಕಿಯ ಆಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ನಿಮ್ಮ ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು. 

Step-3: ಮೇಲಿನ ಹಂತವನ್ನು ಅನುಸರಿಸಿ ಒಟಿಪಿ ಅನ್ನು ನಮೂದಿಸಿದ ಬಳಿಕ ನಿಮಗೆ ಸದಾ ನೆನಪಿನಲ್ಲಿ ಇರುವಂತಹ ನಾಲ್ಕು(4) ಅಂಕಿಯ ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕು. ನಂತರ ಇಲ್ಲಿ ಅರ್ಜಿದಾರರ ಅಂದರೆ ನಿಮ್ಮ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯ ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ “ಸರಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Land survey chian- ನಿಮ್ಮ ಜಮೀನಿನ ಸರ್ವೆ ಮಾಡಲು ಬಳಕೆ ಮಾಡುವ ಚೈನಿನ ಕುರಿತು ಈ ಮಾಹಿತಿ ನಿಮಗೆ ಗೊತ್ತೇ?

Step-4: ನಂತರ “ಲಾಗಿನ್/Login” ಬಟನ್ ಮೇಲೆ ಕ್ಲಿಕ್ ಮಾಡಿ ಈಗಾಗಲೇ ರಚನೆ ಮಾಡಿಕೊಂಡಿರುವ ಪಾಸ್ವರ್ಡ ಅನ್ನು ಹಾಕಿ ಲಾಗಿನ್  ಅಗಿ ಇಲ್ಲಿ “ಪಾವತಿ ಸ್ಥಿತಿ/Payment status” ಬಟನ್ ಮೇಲೆ ಕ್ಲಿಕ್ ಮಾಡಿ “ಗೃಹಲಕ್ಷ್ಮಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯಡಿ ಪ್ರತಿ ತಿಂಗಳು ಯಾವ ಯಾವ ದಿನಾಂಕ ದಂದು ಹಣ ಜಮಾ ಅಗಿದೆ? ಯು.ಟಿ.ಆರ್ ನಂಬರ್, ಬ್ಯಾಂಕಿನ ಹೆಸರು, ಬ್ಯಾಂಕ್ ಅಕೌಂಟಿನ ಕೊನೆಯ ನಾಲ್ಕು ಸಂಖ್ಯೆ, ಬ್ಯಾಂಕ್ ಖಾತೆದಾರರ ಹೆಸರು, ಜಮಾ ಅದ ದಿನಾಂಕದ ವಿವರ ತೋರಿಸುತ್ತದೆ.

ಇದನ್ನೂ ಓದಿ: Parihara Payment Failed Cases-ರೈತರ ಖಾತೆಗೆ ಬರ ಪರಿಹಾರ ಜಮಾ ಅಗದಿರಲು ಕಾರಣಗಳ ಪಟ್ಟಿ ಬಿಡುಗಡೆ!  

Most Popular

Latest Articles

Related Articles