Hero Scholarship-ಹೀರೋ ಕಂಪನಿ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

August 16, 2025 | Siddesh
Hero Scholarship-ಹೀರೋ ಕಂಪನಿ ವತಿಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

ನಮ್ಮ ದೇಶದಲ್ಲಿನ ಜನಪ್ರಿಯ ಬೈಕ್ ತಯಾರಕ ಕಂಪನಿಯಲ್ಲಿ ಒಂದಾಗಿರುವ ಹೀರೋ ಗ್ರೂಪ್(Hero) ವತಿಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೆರವನ್ನು ಒದಗಿಸಲು ಸ್ಕಾಲರ್ ಶಿಪ್(Hero Scholarship) ಅನ್ನು ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹೀರೋ ಗ್ರೂಪ್(Hero Groups) ಸಂಸ್ಥೆಯು ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್‌(Raman Kant Munjal Scholarships 2025-26) ಮೂಲಕ ಪ್ರತಿ ವರ್ಷವು ಸಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ, ಇದೆ ಮಾದರಿಯಲ್ಲಿ 2025-26 ನೇ ಶೈಕ್ಷಣಿಕ ಸಾಲಿನಲ್ಲಿಯು ಸಹ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Free Phenyl Soap Making Training-ಉಚಿತ ಫಿನಾಯಿಲ್,ಸೋಪ್ ಗೃಹ ಬಳಕೆ ವಸ್ತು ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!

ಈ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ(Hero Scholarship Application) ಸಲ್ಲಿಸಬಹುದು? ಆನ್ಲೈನ್ ಮೂಲಕ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಯಾವುವು? ಈ ಯೋಜನೆಯಡಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ? ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Hero Scholarship Eligibility-ಹೀರೋ ಕಂಪನಿಯ ವಿದ್ಯಾರ್ಥಿವೇತನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಹೀರೋ ಗ್ರೂಪ್ ಸಂಸ್ಥೆಯ "ರಾಮನ್ ಕಾಂತ್ ಮುಂಜಾಲ್ ಫೌಂಡೇಶನ್‌" ವತಿಯಿಂದ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ಅರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

ಅರ್ಜಿದಾರ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರು 10 ಮತ್ತು 12 ನೇ ತರಗತಿಗಳಲ್ಲಿ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
ಅಂಗವಿಕಲ ವಿದ್ಯಾರ್ಥಿಗಳು 10 ಮತ್ತು 12 ನೇ ತರಗತಿಗಳಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷದ ಒಳಗಿರಬೇಕು.
ಪ್ರಸ್ತುತ ವರ್ಷದಲ್ಲಿ ಬಿಬಿಎ, ಬಿಎಫ್‌ಐಎ, ಬಿ.ಕಾಂ. (ಎಚ್, ಇ), ಬ್ಯಾಚುಲರ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಎಂಎಸ್), ಇಂಟಿಗ್ರೇಟೆಡ್ ಪ್ರೋಗ್ರಾಂ ಇನ್ ಮ್ಯಾನೇಜ್‌ಮೆಂಟ್ (ಐಪಿಎಂ), ಬಿಎ (ಅರ್ಥಶಾಸ್ತ್ರ), ಬ್ಯಾಚುಲರ್ ಇನ್ ಬಿಸಿನೆಸ್ ಸ್ಟಡೀಸ್ (ಬಿಬಿಎಸ್) ಅಥವಾ ಯಾವುದೇ ಇತರ ಹಣಕಾಸು ಸಂಬಂಧಿತ ಪದವಿ ಕೋರ್ಸ್‌ಗಳ ಮೊದಲ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Best Farmer Award-ಕೃಷಿ ಇಲಾಖೆಯಿಂದ ಕೃಷಿ ಪ್ರಶಸ್ತಿ ವಿತರಣೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Hero Scholarship Amount-ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೂಲಕ ಪದವಿ ಶಿಕ್ಷಣ ಪೂರ್ಣಗೊಳಿಸುವುದರ ಮೂರು ವರ್ಷ ಅವದಿಗೆ ₹40,000 ದಿಂದ ₹5,50,000 ಲಕ್ಷದ ವರೆಗೆ ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ.

Hero Scholarship Online Application Last Date- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31 ಆಗಸ್ಟ್ 2025

Online Apply Method-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಕೆಳಗಿನ ಹಂತಗಳನ್ನು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.

Step-1: ಈ ಲಿಂಕ್ "Hero Scholarship Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Business Loan-ರಾಜ್ಯದ SC ST ಸಮುದಾಯದವರಿಗೆ ಗುಡ್ ನ್ಯೂಸ್! ಸ್ವಂತ ಉದ್ದಿಮೆಗೆ ₹2.0 ಲಕ್ಷ ಸಬ್ಸಿಡಿ!

Hero Scholarship

Step-2: ಬಳಿಕ Buddy4Study ವೆಬ್ಸೈಟ್ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ ಬಲಬದಿಯಲ್ಲಿ ಕಾಣುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ಹಾಕಿ "Login" ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅಗಬೇಕು. ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳದವರು ಈ ಪೇಜ್ ನಲ್ಲಿ ಕೆಳಗೆ ಕಾಣುವ "Create an account" ಬಟನ್ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Mobile Canteen Subsidy-ಮೊಬೈಲ್ ಕ್ಯಾಂಟಿನ್ ಸ್ಥಾಪನೆಗೆ ₹4.0 ಲಕ್ಷ ಸಹಾಯಧನ ಪಡೆಯಲು ಅರ್ಜಿ!

Documents For Hero Scholarship-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಹ ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

  • ಅರ್ಜಿದಾರ ವಿದ್ಯಾರ್ಥಿಯ ಆಧಾರ್ ಕಾರ್ಡ
  • ವಿದ್ಯಾರ್ಥಿಯ ಪೋಟೋ
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಅಂಕಪಟ್ಟಿ
  • ಪಾನ್ ಕಾರ್ಡ್
  • ಕಾಲೇಜು ಪ್ರವೇಶ ಪತ್ರ

Helpline-ಹೆಚ್ಚಿನ ಮಾಹಿತಿ ಪಡೆಯಲು:

ಸಹಾಯವಾಣಿ-011-430-92248 (Ext-326) (Monday to Friday - 10:00AM to 06:00 PM (IST))
ಮೇಲ್[email protected]

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: