Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!

March 12, 2026 | Siddesh
Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!
Share Now:

ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ಆಸಕ್ತಿಯಿರುವ ಯುವಕರಿಗೆ ತೋಟಗಾರಿಕೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ತೋಟಗಾರಿಕೆ ಇಲಾಖೆಯ(Karnataka Horticulture Department) ವಿಸ್ತರಣೆ ಯೋಜನೆಯಡಿ 2026-27ನೇ ಸಾಲಿನಲ್ಲಿ 10 ತಿಂಗಳ ಉಚಿತ ವಸತಿ ಸಹಿತ ತೋಟಗಾರಿಕೆ ತರಬೇತಿಯನ್ನು(Horticulture training application) ಆಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಧುನಿಕ ಬೇಸಾಯ ಕ್ರಮಗಳನ್ನು ಕಲಿಯುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಬಯಸುವ ಗ್ರಾಮೀಣ ಭಾಗದ ಯುವಕರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.

ತೋಟಗಾರಿಕೆ ಕ್ಷೇತ್ರದಲ್ಲಿ ವೈಜ್ಞಾನಿಕ ಬೇಸಾಯ ಕ್ರಮಗಳನ್ನು(Horticulture Training) ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಮತ್ತು ಸರಕಾರಿ ಹುದ್ದೆಯನ್ನು ಪಡೆಯಲು ಅರ್ಹತೆಯನ್ನು ಪಡೆಯಲು ಈ ಕೋರ್ಸ್ ಸಹಕಾರಿಯಾಗಿದೆ. ನರ್ಸರಿ ನಿರ್ವಹಣೆ, ಕಸಿ ಮಾಡುವುದು ಮತ್ತು ಆಧುನಿಕ ಬೆಳೆ ಪದ್ಧತಿಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ ಈ ಉಚಿತ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: PM Kisan 22th Installment-ಪಿಎಂ ಕಿಸಾನ್ 22ನೇ ಕಂತಿನ ಹಣ ರೈತರ ಖಾತೆಗೆ!

ಇಂದಿನ ಲೇಖನದಲ್ಲಿ 10 ತಿಂಗಳ ತೋಟಗಾರಿಕೆ ತರಬೇತಿ(Horticulture Training Application) ಯಾವ ತಿಂಗಳಿನಿಂದ ಅರಂಭವಾಗುತ್ತದೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಿ.

Horticulture Training Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

10 ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ಹೊಂದಿರುವುದು ಕಡ್ಡಾಯವಾಗಿದೆ.

ಕೇವಲ ರೈತರ ಮಕ್ಕಳಿಗೆ ಮಾತ್ರ ಈ ತರಬೇತಿಯಲ್ಲಿ ಅವಕಾಶ ನೀಡಲಾಗಿದೆ.

ಅಭ್ಯರ್ಥಿಯು ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರಬೇಕು.

ಅರ್ಜಿದಾರ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.

ಇದನ್ನೂ ಓದಿ: Bele Vime Amount-2026: ಈ ಜಿಲ್ಲೆಯ ರೈತರ ಖಾತೆಗೆ 243.5 ಕೋಟಿ ಮಧ್ಯಂತರ ಬೆಳೆ ವಿಮೆ ಬಿಡುಗಡೆ!

Horticulture training

ಇದನ್ನೂ ಓದಿ: Education Assistance-ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ!

10 Months Horticulture Course- ತರಬೇತಿ ನಡೆಯುವ ಅವಧಿ:

  • ಒಟ್ಟು 10 ತಿಂಗಳ ಕಾಲ ತರಬೇತಿ ನಡೆಯಲಿದೆ.
  • ದಿನಾಂಕ: 02-05-2026 ರಿಂದ 28-02-2027 ರವರೆಗೆ.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಆಸಕ್ತ ಅಭ್ಯರ್ಥಿಗಳು 15 ಏಪ್ರಿಲ್ 2026 ರೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ.

Horticulture Training Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ತಿಂಗಳ ತೋಟಗಾರಿಕೆ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಹತ್ತಿರದ ತರಬೇತಿ ಕೇಂದ್ರದ ವಿಳಾಸವನ್ನು ಪಡೆದು ಅರ್ಜಿ ನಮೂನೆಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Toll Plaza-ವಾಹನ ಸವಾರರೇ ಗಮನಿಸಿ: ಏಪ್ರಿಲ್ 1 ರಿಂದ ಬದಲಾಗಲಿವೆ ಟೋಲ್ ನಿಯಮಗಳು!

Horticulture Training Center-ತರಬೇತಿಯಲ್ಲಿ ನೀಡಲಾಗುವ ಸೌಲಭ್ಯಗಳು:

  • 10 ತಿಂಗಳ ಕಾಲ ಸಂಪೂರ್ಣ ಉಚಿತ ತರಬೇತಿ.
  • ಅಭ್ಯರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ.
  • ಪ್ರತಿ ತಿಂಗಳು ನುರಿತ ತಜ್ಞರಿಂದ ಪ್ರಾಯೋಗಿಕ ತರಬೇತಿ.
  • 5 ದಿನಗಳ ಕಾಲ ಶೈಕ್ಷಣಿಕ ಕರ್ನಾಟಕ ಪ್ರವಾಸದ ಸೌಲಭ್ಯ.
  • ವಿವಿಧ ಕೇಂದ್ರಗಳಲ್ಲಿ ಪೂರಕ ತರಬೇತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Diploma Scholarship-ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹50,000 ವಿದ್ಯಾರ್ಥಿ ವೇತನ!

Horticulture Training Benefits-ತರಬೇತಿ ಪಡೆಯುವುದರಿಂದ ಆಗುವ ಲಾಭಗಳು:

ತೋಟಗಾರಿಕೆ ಇಲಾಖೆಯ 'ಗಾರ್ಡನರ್' ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆಯಾಗುವ ಅವಕಾಶವಿರುತ್ತದೆ.

ಸ್ವಂತ ಜಮೀನಿನಲ್ಲಿ ಆಧುನಿಕ ಬೇಸಾಯ, ಕಸಿ ಕಟ್ಟುವುದು, ಕಟಿಂಗ್ಸ್ ಮತ್ತು ಗೂಟಿ ವಿಧಾನಗಳ ಮೂಲಕ ಖಾಸಗಿ ನರ್ಸರಿ ಪ್ರಾರಂಭಿಸಬಹುದು.

ಬೇರೆ ಬೇರೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಅವಕಾಶವಿದೆ.

ಖಾಸಗಿ ನರ್ಸರಿ ಎಸ್ಟೇಟ್ ಹಾಗೂ ತೋಟಗಳಲ್ಲಿ ಮೇಲ್ವಿಚಾರಕರ (Supervisor) ಹುದ್ದೆಗಳನ್ನು ಪಡೆಯಬಹುದು.

  • ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್/Website- Click Here
  • Helpline-ಸಹಾಯವಾಣಿ-1902

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: