Kharif Bele Parihara-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ!

December 24, 2024 | Siddesh
Kharif Bele Parihara-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ!
Share Now:

ಅತೀಯಾದ ಮಳೆಯಿಂದ ಹಾನಿಯಾದ ಬೆಳೆಗೆ ನಷ್ಟ ಪರಿಹಾರವನ್ನು ಒದಗಿಸಲು ಈ ವರ್ಷ ಅಂದರೆ 2024 ರ ಮುಂಗಾರು ಹಂಗಾಮಿನಲ್ಲಿ ರೈತರ ಖಾತೆಗೆ ಹಣ ಜಮಾ(Bele Parihara Status Check) ಮಾಡಿದ ಅರ್ಹರರ ಪಟ್ಟಿಯನ್ನು ಅಧಿಕೃತ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.

ಕಂದಾಯ ಇಲಾಖೆಯಿಂದ ಬೆಳೆ ಹಾನಿಯಾದ(Bele Parihara amount) ಅರ್ಹ ರೈತರಿಂದ ಅರ್ಜಿಯನ್ನು ಸಂಗ್ರಹಿಸಿ ಈ ಅರ್ಜಿಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ ಬೆಳೆ ಹಾನಿ ಪರಿಹಾರವನ್ನು ಜಮಾ ಮಾಡಲಾಗಿದ್ದು ಮುಂಗಾರು ಹಂಗಾಮಿನಲ್ಲಿ 77,339 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾದ ಬೆಳೆಗೆ ಪರಿಹಾರವನ್ನು ಒದಗಿಸಲಾಗಿರುತ್ತದೆ.

ಇದನ್ನೂ ಓದಿ: Drip Irrigation-ರಾಜ್ಯ ಸರಕಾರದಿಂದ ಹನಿ ಮತ್ತು ತುಂತುರು ನೀರಾವರಿ ಘಟಕಕ್ಕೆ ₹255 ಕೋಟಿ ಅನುದಾನ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

ರೈತರು ಬೆಳೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದರೆ ತಮಗೆ ಹಣ ಜಮಾ ಅಗಿದಿಯೋ ಇಲ್ಲವೋ? ಒಂದೊಮ್ಮೆ ಹಣ ಜಮಾ ಅಗಿದ್ದರೆ ಎಷ್ಟು ಹಣ ಜಮಾ ಅಗಿದೆ ಎಂದು ಕಂದಾಯ ಇಲಾಖೆಯ Parihara ವೆಬ್ಸೈಟ್ ಅನ್ನು ಭೇಟಿ ಮಾಡಿ ಚೆಕ್(How to Check Bele Parihara Status) ಮಾಡಿಕೊಳ್ಳಬಹುದಾಗಿದ್ದು ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ:

Kharif Crop Loss Amount-ರೂ ₹ 95 ಕೋಟಿ ಬೆಳೆ ಪರಿಹಾರ ರೈತರ ಖಾತೆಗೆ:

ರಾಜ್ಯ ಸರಕಾರದಿಂದ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗೆ ರೈತರಿಗೆ ಅರ್ಥಿಕ ನೆರವು ನೀಡಲು ಅರ್ಹ ಫಲಾನುಭವಿಗಳಿಗೆ ಪರಿಹಾರವನ್ನು ಒದಗಿಸಲು SDRF ಮಾರ್ಗಸೂಚಿಯ ಪ್ರಕಾರ ಒಟ್ಟು ₹ 95 ಕೋಟಿ(Parihara amount) ವೆಚ್ಚವನ್ನು ಮಾಡಲಾಗಿದ್ದು ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆಈ ಹಣವನ್ನು ನೇರವಾಗಿ ಜಮಾ ಮಾಡಲಾಗಿದೆ.

ಇದನ್ನೂ ಓದಿ: PMAY 2.0 Yojana-2024: ಸ್ವಂತ ಮನೆ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! PMAY 2.0 ಯೋಜನೆಯಡಿ ₹ 2.50 ಲಕ್ಷ ಸಬ್ಸಿಡಿ!

Bele parihara amount-ಪರಿಹಾರದ ಹಣ ಜಮಾ ಮಾಡುವ ವಿಧಾನ:

ಅಕಾಲಿಕ ಮಳೆ ಅಥವಾ ಇನ್ನಿತರೆ ಪ್ರಕೃತಿ ವಿಕೋಪ ಕಾರಣಗಳಿಂದ ರೈತರು ಬೆಳೆದ ಬೆಳೆ ಹಾನಿಯಾದ ಸಮಯದಲ್ಲಿ ಪರಿಹಾರವನ್ನು ಪಡೆಯಲು ರೈತರು ತಮ್ಮ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿಯನ್ನು ತೆಗೆದುಕೊಂಡು ತಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಿದ ಬಳಿಕ ಇಲಾಖೆ ಅಧಿಕಾರಿಗಳು ಸ್ಥಳ ಭೇಟಿ ಮಾಡಿ ಸಮೀಕ್ಷೆಯನ್ನು ನಡೆಸಿ ಅರ್ಹ ರೈತರನ್ನು ಗುರುತಿಸಿ ಅರ್ಜಿಯನ್ನು Parihara ತಂತ್ರಾಂಶದಲ್ಲಿ ದಾಖಲೆ ಮಾಡುತ್ತಾರೆ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆ ಅದ ನಂತರ ಇಲ್ಲಿ ಅಂದರೆ ಪರಿಹಾರ ವೆಬ್ಸಟ್ ನಲ್ಲಿ ದಾಖಲಾದ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಹಣವನ್ನು ರೈತರ ಬ್ಯಾಂಕ್ ಅಕೌಂಟ್ ಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಓದಿ: Sprinkler set Subsidy- ರೈತರಿಗೆ ಭರ್ಜರಿ ಗುಡ್ ನ್ಯೂಸ್: ಅತೀ ಕಡಿಮೆ ದರದಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ!

Kharif Bele Parihara farmers list-ಮುಂಗಾರು ಹಂಗಾಮಿನಿ ಬೆಳೆ ಪರಿಹಾರ ಹಣ ಜಮಾ ಅದ ರೈತರ ಪಟ್ಟಿ ಬಿಡುಗಡೆ:

ಮುಂಗಾರು ಹಂಗಾಮಿಯಲ್ಲಿ ಹಳ್ಳಿವಾರು ಯಾವೆಲ್ಲ ರೈತರಿಗೆ ಬೆಳೆ ಪರಿಹಾರದ ಹಣ ಜಮಾ ಮಾಡಲಾಗಿದೆ ಎನ್ನುವ ರೈತರ ಪಟ್ಟಿ ವಿವರವನ್ನು ಪರಿಹಾರ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು ರೈತರು ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Step-1: ಇಲ್ಲಿ ಕ್ಲಿಕ್ Kharif Bele Parihara farmers list ಮಾಡಿ ಅಧಿಕೃತ ಕಂದಾಯ ಇಲಾಖೆಯ ಪರಿಹಾರ ಜಾಲತಾಣವನ್ನು ಪ್ರವೇಶ ಮಾಡಬೇಕು.

Bele Parihara amount

Step-2: ನಂತರ ಇಲ್ಲಿ ಮುಖಪುಟದ ಎಡ ಬದಿಯಲ್ಲಿ ಕೆಳಗೆ ಕಾಣುವ "Village Wise List" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!

Step-3: "Village Wise List" ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ "ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report" ಪುಟ ತೆರೆದುಕೊಳ್ಳುತ್ತದೆ ಇಲ್ಲಿ ವರ್ಷ, ಋತು, ವಿಪತ್ತಿನ ವಿಧ, ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು "Get Report/ವರದಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Bele Parihara Status Check

Step-4: "Get Report/ವರದಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ "ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Payment Details" ಕಾಲಂ ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಪಟ್ಟಿ ಒಪನ್ ಅಗುತ್ತದೆ.

Bele Parihara Status

ಈ ಪಟ್ಟಿಯಲ್ಲಿ ರೈತರ ಹೆಸರು, ಹಾನಿಯಾದ ಜಮೀನಿನ ವಿವರ, ಪರಿಹಾರ ಜಮಾ ಅದ ದಿನಾಂಕ, ಎಷ್ಟು ಹಣ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರ ತೋರಿಸುತ್ತದೆ.

WhatsApp Group Join Now
Telegram Group Join Now
Share Now: