KMF New Products-ಕೆಎಂಎಫ್‌ನಿಂದ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳ ಬಿಡುಗಡೆ!

January 26, 2026 | Siddesh
KMF New Products-ಕೆಎಂಎಫ್‌ನಿಂದ ನಂದಿನಿ ಬ್ರ್ಯಾಂಡ್‌ನ ಹೊಸ ಉತ್ಪನ್ನಗಳ ಬಿಡುಗಡೆ!
Share Now:

ರಾಜ್ಯದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಂದಲೇ ಆರಂಭಿತವಾದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF)ದ ನಂದಿನಿ ಬ್ರ್ಯಾಂಡ್(Nandini New Products) ಮೂಲಕ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಕರ್ನಾಟಕದ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF), ತನ್ನ ಜನಪ್ರಿಯ 'ನಂದಿನಿ' ಬ್ರ್ಯಾಂಡ್ ಅಡಿಯಲ್ಲಿ(Nandini)ಹತ್ತಾರು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಬದಲಾಗುತ್ತಿರುವ ಗ್ರಾಹಕರ ಜೀವನಶೈಲಿ ಮತ್ತು ಆರೋಗ್ಯದ ಕಡೆಗಿನ ಹೆಚ್ಚಿನ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ಹೆಜ್ಜೆಯನ್ನು ಇಡಲಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು.

ಇದನ್ನೂ ಓದಿ: LPG Cylinder Subsidy-ಗ್ಯಾಸ್ ಸಿಲಿಂಡರ್ 300 ರೂ. ಸಬ್ಸಿಡಿ ನಿಮಗೆ ಬರುತ್ತಿದೆಯೇ? ಚೆಕ್ ಮಾಡುವುದು ಹೇಗೆ?

ನಂದಿನಿ ಉತ್ಪನ್ನಗಳು ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೇ ನಮ್ಮ ದೇಶದ ಸೇನೆ ಸೇರಿದಂತೆ ಇತರೆ ರಾಜ್ಯಗಳಲ್ಲಿಯು ಸಹ ಪ್ರಸಿದ್ದಿಯನ್ನು ಪಡೆದಿದ್ದು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF Milk Union)ದ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಪ್ರಸ್ತುತ ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ.

KMF Nandini-ಐದು ದಶಕಗಳ ನಂಬಿಕೆ: ಗೋಪಿನಿಂದ ಗ್ರಾಹಕರವರೆಗೆ:

ಕಳೆದ ಐದು ದಶಕಗಳಿಂದ ಕರ್ನಾಟಕದ ಮನೆಮಾತಾಗಿರುವ ಕೆಎಂಎಫ್, 'ಗೋಪಿನಿಂದ ಗ್ರಾಹಕರವರೆಗೆ' ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 175ಕ್ಕೂ ಹೆಚ್ಚು ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುತ್ತಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯ ಹಾಗೂ ಹೊರದೇಶಗಳಲ್ಲೂ ನಂದಿನಿ ತನ್ನದೇ ಆದ ಛಾಪು ಮೂಡಿಸಿದೆ.

ಇದನ್ನೂ ಓದಿ: Property Registration Rules-ಆಸ್ತಿ ನೋಂದಣಿಗೆ ಹೊಸ ನಿಯಮ ತಪ್ಪದೇ ಈ ಮಾಹಿತಿ ತಿಳಿಯಿರಿ!

KMF Nandini New Products-ಹೊಸದಾಗಿ ಬಿಡುಗಡೆಯಾದ ಉತ್ಪನ್ನಗಳು ಯಾವುವು?

ಕೆಎಂಎಫ್ ಈ ಬಾರಿ ತಂತ್ರಜ್ಞಾನ ಮತ್ತು ಆರೋಗ್ಯ ಎರಡಕ್ಕೂ ಆದ್ಯತೆ ನೀಡಿದೆ. ಬಿಡುಗಡೆಯಾದ ಪ್ರಮುಖ ಉತ್ಪನ್ನಗಳ ವಿವರ ಇಲ್ಲಿದೆ:

ಕ್ಯೂಆರ್ ಕೋಡ್ ಭದ್ರತೆಯೊಂದಿಗೆ ತುಪ್ಪ: ನಂದಿನಿ ಬ್ರ್ಯಾಂಡ್‌ನ ಗುಡ್ ಲೈಫ್ ಉಪಬ್ರ್ಯಾಂಡ್ ಅಡಿಯಲ್ಲಿ ಈಗ 'ಆರೋಮಾ ತುಪ್ಪ' ಲಭ್ಯವಿದೆ. ಕಲಬೆರಕೆ ತಡೆಯಲು ಮತ್ತು ಗುಣಮಟ್ಟ ಖಚಿತಪಡಿಸಿಕೊಳ್ಳಲು ಈ ಪ್ಯಾಕ್‌ಗಳ ಮೇಲೆ ಕ್ಯೂಆರ್ ಕೋಡ್ (QR Code) ನೀಡಲಾಗಿದೆ.

ನಂದಿನಿ ಶುದ್ಧ ತುಪ್ಪ (ಪೆಟ್ ಜಾರ್‌ಗಳಲ್ಲಿ): ಗ್ರಾಹಕರ ಅನುಕೂಲಕ್ಕಾಗಿ ಈಗ ನಂದಿನಿ ತುಪ್ಪ ಆಕರ್ಷಕ ಪೆಟ್ ಜಾರ್‌ಗಳಲ್ಲಿ ದೊರೆಯಲಿದೆ.

ಹೆಚ್ಚಿನ ಪ್ರೋಟೀನ್ ಉತ್ಪನ್ನಗಳು: ಆರೋಗ್ಯ ಪ್ರೇಮಿಗಳಿಗಾಗಿ 'ಎನ್-ಪ್ರೋಟೀನ್ ಮಿಲ್ಕ್' (N-Protein Milk) ಅನ್ನು ಪರಿಚಯಿಸಲಾಗಿದೆ.

ಪ್ರೋಬಯಾಟಿಕ್ ಸರಣಿ: ಜೀರ್ಣಕ್ರಿಯೆಗೆ ಪೂರಕವಾದ ಪ್ರೋಬಯಾಟಿಕ್ ಮೊಸರು, ಪ್ರೋಬಯಾಟಿಕ್ ಮಾವಿನ ಲಸ್ಸಿ ಮತ್ತು ಸ್ಟ್ರಾಬೆರಿ ಲಸ್ಸಿಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ.

ಇತರ ಉತ್ಪನ್ನಗಳು: ಮೀಡಿಯಂ ಫ್ಯಾಟ್ ಪನೀರ್, ಡೇರಿ ವೈಟ್ನರ್ ಹಾಗೂ ಗ್ರಾಹಕರ ಅತಿ ಹೆಚ್ಚಿನ ಬೇಡಿಕೆಯ ಮೇರೆಗೆ ಕೇವಲ 10 ರೂಪಾಯಿ ದರದಲ್ಲಿ ಹಸುವಿನ ಹಾಲು ಮತ್ತು ಮೊಸರಿನ ಸಣ್ಣ ಪ್ಯಾಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: SSLC Prize Money-ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ಭರ್ಜರಿ ಕೊಡುಗೆ: ಲ್ಯಾಪ್‌ಟಾಪ್ ಬದಲು ₹50,000 ನಗದು ಬಹುಮಾನ!

KMF New Products

ಇದನ್ನೂ ಓದಿ: MGNREGA Scheme-ನರೇಗಾ ಯೋಜನೆಯಲ್ಲಿ ಏನಿಲ್ಲ ಬದಲಾವಣೆ ಮಾಡಲಾಗುತ್ತಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

KMF Milk Dairy In Karnataka-ಮುಖ್ಯಮಂತ್ರಿಗಳಿಂದ ಚಾಲನೆ: ಗಣ್ಯರ ಉಪಸ್ಥಿತಿ

ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಕೆಎಂಎಫ್ ಪ್ರಯತ್ನವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕೆ.ವೈ. ನಂಜೇಗೌಡ (ಶಾಸಕರು ಹಾಗೂ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರು), ಅಶೋಕ್ ಕುಮಾರ್ ರೈ (ಪುತ್ತೂರು ಶಾಸಕರು) ಉಪಸ್ಥಿತರಿದ್ದರು.

ಆಡಳಿತಾತ್ಮಕವಾಗಿ ಮುಖ್ಯಮಂತ್ರಿಗಳ ಅಪರ ಕಾರ್ಯದರ್ಶಿ ಎಸ್. ಜಿಯಾವುತ್ತಾ , ಕೆಎಂಎಫ್ ಆಡಳಿತಾಧಿಕಾರಿ ಟಿ.ಎಚ್.ಎಂ. ಕುಮಾರ್, ಮಾಧ್ಯಮ ಸಲಹೆಗಾರ ಕೆ.ಪಿ. ಪ್ರಭಾಕರ್ ಮತ್ತು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಭಾಗವಹಿಸಿದ್ದರು.

ಇದನ್ನೂ ಓದಿ: Senior Citizen Card-ಹಿರಿಯ ನಾಗರಿಕರ ಕಾರ್ಡ್ ಪಡೆಯುವುದು ಹೇಗೆ? ಈ ಕಾರ್ಡನಿಂದ ಯಾವೆಲ್ಲ ಪ್ರಯೋಜನಗಳಿವೆ?

KMF-ಗ್ರಾಹಕ ಸ್ನೇಹಿ ಕೆಎಂಎಫ್:

ಬದಲಾಗುತ್ತಿರುವ ಆಹಾರ ಅಭಿರುಚಿಗೆ ತಕ್ಕಂತೆ ನಂದಿನಿ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿದೆ. ವಿಶೇಷವಾಗಿ 10 ರೂಪಾಯಿಯ ಸಣ್ಣ ಪ್ಯಾಕೆಟ್‌ಗಳು ಸಾಮಾನ್ಯ ಜನರಿಗೂ ಗುಣಮಟ್ಟದ ಡೈರಿ ಉತ್ಪನ್ನಗಳನ್ನು ತಲುಪಿಸುವಲ್ಲಿ ಸಹಕಾರಿಯಾಗಲಿವೆ. ಕ್ಯೂಆರ್ ಕೋಡ್ ತಂತ್ರಜ್ಞಾನವು ಗ್ರಾಹಕರಲ್ಲಿ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ.

ಒಟ್ಟಾರೆಯಾಗಿ, ಕೆಎಂಎಫ್ ಸಂಸ್ಥೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಗ್ರಾಹಕರಿಗೆ ವೈವಿಧ್ಯಮಯ ಮತ್ತು ಪೌಷ್ಟಿಕಾಂಶಯುಕ್ತ ಆಯ್ಕೆಗಳನ್ನು ನೀಡುತ್ತಿದೆ. ನಂದಿನಿ ಬ್ರ್ಯಾಂಡ್‌ನ ಈ ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವುದು ಖಚಿತ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: