HomeAgricultureLand records info- ಜಮೀನನ್ನು ಮಾರಾಟ ಮತ್ತು ಖರೀದಿ ಮಾಡಲು ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

Land records info- ಜಮೀನನ್ನು ಮಾರಾಟ ಮತ್ತು ಖರೀದಿ ಮಾಡಲು ಈ ದಾಖಲೆಗಳು ಸರಿಯಾಗಿರುವುದು ಕಡ್ಡಾಯ!

ನೀವೇನಾದರು ಜಮೀನನ್ನು ಮಾರಾಟ ಮತ್ತು ಖರೀದಿ ಮಾಡುವ ಪ್ಲಾನ್ ಅನ್ನು ಹೊಂದಿದ್ದಾರೆ ತಪ್ಪದೇ ಈ ಅಂಕಣದಲ್ಲಿ ವಿವರಿಸಿರುವ ಉಪಯುಕ್ತ ಮಾಹಿತಿಯನ್ನು(Land records information) ತಪ್ಪದೇ ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ.

ಸಾರ್ವಜನಿಕರು ಒಂದು ಅಸ್ತಿಯನ್ನು ಮಾರಾಟ ಮತ್ತು ಖರೀದಿ ಮಾಡುವ ಸಮಯದಲ್ಲಿ ಯಾವೆಲ್ಲ ದಾಖಲೆಗಳನ್ನು(Land documents)ಮರೆಯದೆ ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಈ ಕುರಿತು ಒಂದಿಷ್ಟು ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: SSP Date Extended- ಎಲ್ಲಾ ರೀತಿಯ ವಿದ್ಯಾರ್ಥಿವೇತನಕ್ಕೆ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ!

ನೀವು ಒಂದೊಮ್ಮೆ ಜಮೀನಿನ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ  ಹಣ ಕಟ್ಟಿ ಜಮೀನನ್ನು ಖರೀದಿ ಮಾಡಿದಲ್ಲಿ ದೊಡ್ಡ ಮಟ್ಟದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಆದ್ದರಿಂದ ಒಮ್ಮೆ ಜಮೀನಿನ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸುವುದು ಅತ್ಯಗತ್ಯ ನಿಮಗೆ ದಾಖಲೆಗಳ ಪರಿಶೀಲನೆ ಕುರಿತು ಮಾಹಿತಿ  ಇಲ್ಲದಿದ್ದರೆ ನಿಮ್ಮ ಹತ್ತಿರದಲ್ಲಿ ಯಾವುದಾದರು ಉತ್ತಮ ಲಾಯರ್ ಆಫೀಸ್ ಅನ್ನು ಭೇಟಿ ಮಾಡಿ ಆ ಜಮೀನಿನ ದಾಖಲೆಗಳನ್ನು ಪರಿಶೀಲಿಸಿ.

ಜಮೀನನ್ನು ಖರೀದಿ ಮಾಡುವ ಮುನ್ನ ಈ ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ:

1) ಹಕ್ಕು ಪತ್ರ(Hakkupatra)

2) ಆಕಾರ ಬಂದ್(akara band)

3) ಪಹಣಿ(RTC)

4) ಇಸಿ(EC)

5) ಮ್ಯುಟೇಶನ್ ರಿಪೋರ್ಟ್(MR) 

6) ಖರೀದಿ ಪತ್ರ(Sale deed) 

7) 11 ಇ ಸ್ಕೇಚ್(11 E sketch)

8) ಸರ್ವೇ ಸ್ಕೆಚ್(survey sketch)

9) ಫಾರ್ಮ 10(Form 10)

10) ಸಾಗುವಳಿ ಚೀಟಿ(Saguvali cheeti)

ಇದನ್ನೂ ಓದಿ: Diesel pumpset subsidy- ಶೇ 90% ಸಬ್ಸಿಡಿಯಲ್ಲಿ ಡೀಸೆಲ್ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

1) ಹಕ್ಕು ಪತ್ರ(Hakkupatra):

ಈ ದಾಖಲೆಯು ಆ ಜಮೀನಿನ ಮಾಲೀಕತ್ವವನ್ನು  ಗುರುತಿಸುತ್ತದೆ. ಖರೀದಿ ಮಾಡುವ ಮುನ್ನ ಈ ದಾಖಲೆಯನ್ನು ಚೆಕ್ ಮಾಡಿಕೊಳ್ಳುವುದು ಮುಖ್ಯ.

2) ಆಕಾರ ಬಂದ್(akara band):

ಒಂದು ಜಮೀನಿನ ಪಹಣಿಗಿಂತಲೂ ಅತೀ ಮುಖ್ಯವಾದ ದಾಖಲೆ ಇದಾಗಿರುತ್ತದೆ ಆ ಜಮೀನಿನ ಒಟ್ಟು ವಿಸ್ತೀರ್ಣದ ಮಾಹಿತಿಯನ್ನು ಸೂಚಿಸುತ್ತದೆ ಒಂದೊಮ್ಮೆ ಪಹಣಿಯಲ್ಲಿ ಜಮೀನಿನ ವಿಸ್ತೀರ್ಣ ತಪ್ಪಾಗಿದ್ದರೆ ಈ ದಾಖಲೆಯಲ್ಲಿ ಸರಿಯಾಗಿ ನಮೂದಿಸಲಾಗಿರುತ್ತದೆ. ಆದ್ದರಿಂದ ಜಮೀನಿನ ವಿಸ್ತೀರ್ಣ ಮಾಹಿತಿಯನ್ನು ಪಕ್ಕ ತಿಳಿಯಲು ಆಕಾರ ಬಂದ್ ದಾಖಲೆಯನ್ನು ತಪ್ಪದೇ ಪರಿಶೀಲಿಸಿ.

3) ಪಹಣಿ(RTC):

ಸಾಮಾನ್ಯವಾಗಿ ಬಹುತೇಕ ಜನರಿಗೆ ಪಹಣಿ ದಾಖಲೆ ತಿಳಿದಿರುತ್ತದೆ ಈ ದಾಖಲೆಯೂ ಆ ಜಮೀನಿನ ಎಲ್ಲಾ ಮಾಹಿತಿಯನ್ನು  ಸೂಚಿಸುತ್ತದೆ ಆ ಜಮೀನ ಮಾಲೀಕರ ಹೆಸರು, ಜಂಟಿ ಮಾಲೀಕರ ಹೆಸರು, ಆ ಜಮೀನಿನ ವಿಸ್ತೀರ್ಣ, ಅಸ್ತಿ ವರ್ಗಾವಣೆ ವಿವರ, ಆ ಜಮೀನಿನ ಮೇಲಿರುವ ಸಾಲದ ಮಾಹಿತಿಯನ್ನು ತಿಳಿಯಬಹುದು.

ಇದನ್ನೂ ಓದಿ: Sukanya samriddhi- ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರದಿಂದ ಭರ್ಜರಿ ಸಿಹಿ ಸುದ್ದಿ!

4) ಇಸಿ(EC):

ಈ ದಾಖಲೆಯು ಜಮೀನಿನ ಮೇಲೆ ಎಷ್ಟು ಸಾಲವಿದೆ ಎನ್ನುವ ನಿಖರ ಮಾಹಿತಿಯನ್ನು ಸೂಚಿಸುತ್ತದೆ ಈ ದಾಖಲೆಯನ್ನು ನಿಗದಿತ ಶುಲ್ಕ ಪಾವತಿ ಮಾಡಿ ನಿಮ್ಮ ತಾಲ್ಲೂಕಿನ ಉಪನೋಂದಣಿ ಕಚೇರಿಯಲ್ಲಿ ಪಡೆಯಬಹುದು.

5) ಮ್ಯುಟೇಶನ್ ರಿಪೋರ್ಟ್(MR):

ಜಮೀನು ಮೊದಲಿನಿಂದ ಹಿಡಿದು ಇಲ್ಲಿಯವರೆಗೂ ಜಮೀನು ಯಾರಿಂದ ಯಾರಿಗೆ ಹೋಗಿದೆ ಮತ್ತು ಜಮೀನು ಯಾವ ಯಾವ ರೂಪದಲ್ಲಿ ದಾನ, ಕ್ರಯ, ವಿಭಾಗ, ಹೀಗೆ ಎಲ್ಲಾನು ಕೂಡ ಈ ಜಮೀನು ಪ್ರತಿಯೊಂದು ಹಂತದಲ್ಲಿ ಏನೇನು ಆಗಿದೆ ಎಂದು ಮ್ಯುಟೇಶನ್ ರಿಪೋರ್ಟ್ ನಲ್ಲಿ ತಿಳಿಯಬಹುದಾಗಿದೆ. ಈ ಮಾಹಿತಿಯನ್ನು  ಭೂಮಿ ವೆಬ್ಸೈಟ್ ನಲ್ಲಿ ಅಥವಾ ನೆಮ್ಮದಿ ಕೇಂದ್ರದ ಮೂಲಕ ಪಡೆಯಬಹುದು.

6) ಖರೀದಿ ಪತ್ರ(Sale deed):

ಈ ದಾಖಲೆಯು ಆ ಜಮೀನನ್ನು ಖರೀದಿ ಮಾಡಿದ್ದಾರೆ ಅದರ ಸಂಪೂರ್ಣ ವಿವರವನ್ನು ಇಲ್ಲಿ ನೋಡಬಹುದು.

7) 11 ಇ ಸ್ಕೇಚ್(11 E sketch):

ಒಂದು ಪೂರ್ಣ ಜಮೀನನ್ನು ವಿಂಗಡಣೆ ಮಾಡಿ ಮಾರುತ್ತಿದ್ದರೆ ಆ ಒಂದು ಪೂರ್ಣ ಜಮೀನಿನಲ್ಲಿ ಪ್ರತ್ಯೇಕಗೊಂಡ ಜಮೀನಿಗೆ 11 ಇ ಸ್ಕೇಚ್ ಬೇಕಾಗುತ್ತದೆ ಇಂತಹ ಜಮೀನು ಕೊಂಡುಕೊಳ್ಳುವಾಗ 11 ಇ ಸ್ಕೇಚ್ ಬೇಕಾಗುತ್ತದೆ.

8) ಸರ್ವೇ ಸ್ಕೆಚ್(survey sketch):

ಜಮೀನ ಸಂಪೂರ್ಣ ಮಾಹಿತಿಯು ನಕ್ಷೆ ರೂಪದಲ್ಲಿ ಪಡೆಯುವುದಕ್ಕೆ ಸರ್ವೇ ಸ್ಕೆಚ್ ಎಂದು ಕರೆಯುತ್ತಾರೆ. ಬಿಳಿ ಹಾಳೆಯ ಮೇಲೆ ಚಿತ್ರ ಸಹಿತ ಅಂಕಿ ಸಂಖ್ಯೆ ಬಂಡಿದಾರಿ ಕಾಲುದಾರಿ ಇತ್ಯಾದಿ ಮಾಹಿತಿ ನಿಮಗೆ ಈ ಸರ್ವೇ ಸ್ಕೆಚ್ ನಲ್ಲಿ ಸಿಗುತ್ತದೆ. ಜಮೀನು ಖರೀದಿ ಮಾಡುವುದಕ್ಕಿಂತ ಮುಂಚೆ ಖರೀದಿ ಮಾಡುತ್ತಿರುವ ಜಮೀನು ಒಂದು ಬಾರಿ ಸರ್ವೇ ಮಾಡಿದರೆ ಒಳ್ಳೆಯದು

ಏಕೆಂದರೆ ಒಂದೊಮ್ಮೆ ಜಮೀನು ವಾಸ್ತವಿಕವಾಗಿ ಅಳತೆಯಲ್ಲಿ ಕಡಿಮೆ ಇದ್ದರೂ ಇರಬಹುದು ಮತ್ತು ಅಳತೆಯಲ್ಲಿ ವ್ಯತ್ಯಾಸ ಆದಾಗ ಖರೀದಿ ಮಾಡುತ್ತಿರುವ ಜಮೀನಿನ ಸುತ್ತಮುತ್ತ ಮಾಲೀಕನ ಜೊತೆಗೆ ಜಗಳ ಆಗುವ ಸಂಬವ ಬಂದರು ಬರಬಹುದು. ಆದ್ದರಿಂದ ಜಮೀನು ಸರ್ವೆ ಮಾಡಿಸುವುದು ಒಳ್ಳೆಯದು ಸರ್ಕಾರದ ಪರವಾನಿಗೆ ಪಡೆದ ಭೂಮಾಪಕರಿಂದ ಸರ್ವೇ ಮಾಡುವವರಿಂದ ಬೇಗ ಸರ್ವೇ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ.

Most Popular

Latest Articles

Related Articles