HomeNew postsLIC jobs-2024: ಎಲ್ಐಸಿಯಿಂದ 200 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ!

LIC jobs-2024: ಎಲ್ಐಸಿಯಿಂದ 200 ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿ!

ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ಕರ್ನಾಟಕ ರಾಜ್ಯ ಸೇರಿ ವಿವಿಧ ರಾಜ್ಯಗಳಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಹುದ್ದೆಗಳನ್ನು ನೇಮಕಾತಿ(LIC Junior Assistant Recruitment 2024) ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

ಲೈಫ್ ಇನ್ಶೂರೆನ್ಸ್  ಕಾರ್ಪೊರೇಷನ್ ಆಫ್ ಇಂಡಿಯಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಜೂನಿಯರ್ ಅಸಿಸ್ಟೆಂಟ್ / ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಸಿರುವ ಅರ್ಹತೆಗಳು ಹಾಗೂ ಇತರೆ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ನೇಮಕಾತಿಗೆ LIC ನಿಗದಿಪಡಿಸಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅಗಸ್ಟ್ 14, 2024ರ ಒಳಗಾಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Vasati Yojane application-2024: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳಿಗೆ ನೆರವು!

ಈ ಲೇಖನದಲ್ಲಿ ನೇಮಕಾತಿಯ ವಿವರಣೆ, ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿ, ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಮತ್ತು ಅರ್ಜಿ ಸಲ್ಲಿಕೆ ಪ್ರಮುಖ ದಿನಾಂಕಗಳ ವಿವರ ಸೇರಿದಂತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: PM Usha Scholarship 2024: PUC ಪಾಸಾದವರಿಗೆ ಕೇಂದ್ರದಿಂದ 20 ಸಾವಿರ ವಿದ್ಯಾರ್ಥಿವೇತನ!

Job details-ನೇಮಕಾತಿ ವಿವರ : 

• ನೇಮಕಾತಿ ಸಂಸ್ಥೆ : ಲೈಫ್ ಇನ್ಶೂರೆನ್ಸ್  ಕಾರ್ಪೊರೇಷನ್ ಆಫ್ ಇಂಡಿಯಾ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL)
• ಹುದ್ದೆಗಳ ಸಂಖ್ಯೆ : 200
• ಅರ್ಜಿ ಸಲ್ಲಿಕೆ : ಆನ್ಲೈನ್ ಮುಕಾಂತರ 

Education-ಶೈಕ್ಷಣಿಕ ಅರ್ಹತೆಗಳು : 

LIC HFL Recruitment – ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು.

ಇದನ್ನೂ ಓದಿ: Parihara amount-2024: ಮಳೆಯಿಂದ ಉಂಟಾದ ನಷ್ಟಕ್ಕೆ ರಾಜ್ಯ ಸರಕಾರದಿಂದ 775 ಕೋಟಿ ಅನುದಾನ!ಯಾರಿಗೆಲ್ಲ ಸಿಗಲಿದೆ ಪರಿಹಾರದ ಹಣ!

Age-ವಯೋಮಿತಿ : 

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಟ 21 ವರ್ಷದಿಂದ ಗರಿಷ್ಟ 28 ವರ್ಷದ ಒಳಗಿರಬೇಕು.

ಆಯ್ಕೆಯಾದವರಿಗೆ ಸಿಗುವ ವೇತನ : ಈ ನೇಮಕಾತಿಯಲ್ಲಿ ಕಿರಿಯ ಸಹಾಯಕ ಆಗಿ ಆಯ್ಕೆ ಆದವರಿಗೆ ಮಾಸಿಕ ₹32,000/- ದಿಂದ ₹35,200/- ರವರೆಗೆ ವೇತನ ಸಿಗಲಿದೆ.

ಇದನ್ನೂ ಓದಿ: Krishi mela dharwad-2024: ಧಾರವಾಡ ಕೃಷಿ ಮೇಳಕ್ಕೆ ದಿನಾಂಕ ನಿಗದಿ! ಇಲ್ಲಿದೆ ಮೇಳದ ಸಂಪೂರ್ಣ ಮಾಹಿತಿ!

Selection Procedure -ಆಯ್ಕೆ ಪ್ರಕ್ರಿಯೆ ಹೇಗಿರಲಿದೆ? 

ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

Fee-ಅರ್ಜಿ ಶುಲ್ಕ: 

ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳು ₹800/- ರೂ. ಅರ್ಜಿ ಶುಲ್ಕ ಪಾವತಿಸಬೇಕು. 

Last date for application-ಪ್ರಮುಖ ದಿನಾಂಕಗಳು: 

• ಆನ್ಲೈನ್ ಅರ್ಜಿ ನೋಂದಣಿ ಪ್ರಾರಂಭ ದಿನಾಂಕ – 25 ಜುಲೈ 2024
• ಆನ್ಲೈನ್ ಅರ್ಜಿ ನೋಂದಣಿಗೆ ಕೊನೆಯ ದಿನಾಂಕ – 14 ಆಗಸ್ಟ್ 2024
• ಆನ್ಲೈನ್ ಪರೀಕ್ಷೆ ನಡೆಸುವ ಸಂಭಾವ್ಯ ದಿನಾಂಕ – ಸೆಪ್ಟೆಂಬರ್ 2024

Online application link–ಪ್ರಮುಖ ಲಿಂಕ್ ಗಳು: 

ಅರ್ಜಿ ಸಲ್ಲಿಸಲು ಲಿಂಕ್ : Apply Now
• ಅಧಿಸೂಚನೆ : Download Now

Most Popular

Latest Articles

Related Articles