LIC Scholarship- ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ!ಎಲ್ಐಸಿಯಿಂದ ₹ 40,000 ವಿದ್ಯಾರ್ಥಿವೇತನ!

September 3, 2025 | Siddesh
LIC Scholarship- ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ!ಎಲ್ಐಸಿಯಿಂದ ₹ 40,000 ವಿದ್ಯಾರ್ಥಿವೇತನ!
Share Now:

ವಿದ್ಯಾರ್ಥಿನಿಯರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವಾಗಲು ಭಾರತೀಯ ಜೀವ ವಿಮಾ ನಿಗಮದಿಂದ ಆರ್ಥಿಕವಾಗಿ ನೆರವು ನೀಡಲು ವಿದ್ಯಾರ್ಥಿವೇತನ(LIC Scholarship) ಯೋಜನೆಯಡಿ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಥಿವೇತನ ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು(LIC Scholarship Application) ಅವಶ್ಯಕ ದಾಖಲೆಗಳೇನು? ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸ ಎಲ್ಐಸಿಯಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡ ಸೇರಿದಂತೆ ಇತ್ಯಾದಿ ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Godown Subsidy-ಹಳ್ಳಿಯಲ್ಲಿ ಗೋಡೌನ್ ನಿರ್ಮಾಣಕ್ಕೆ ಶೇ 33% ಸಬ್ಸಿಡಿ ಪಡೆಯಲು ಅವಕಾಶ!

ನಮ್ಮ ಪುಟದಿಂದ ಕಾಲಕಾಲಕ್ಕೆ ವಿವಿಧ ಸರಕಾರಿ ಮತ್ತು ಖಾಸಗಿ ಕಂಪನಿ ವತಿಯಿಂದ ಜಾರಿಯಲ್ಲಿರುವ ವಿದ್ಯಾರ್ಥಿವೇತನ(LIC Scholarship Online Application) ಯೋಜನೆಗಳ ಕುರಿತು ಮಾಹಿತಿಯನ್ನು ಹಂಚಿಕೊಂಡು ಬರುತ್ತಿದ್ದು ಇದೇ ಮಾದರಿಯಲ್ಲಿ ಇಂದಿನ ಅಂಕಣದಲ್ಲಿ ಭಾರತೀಯ ಜೀವ ವಿಮಾ ನಿಗಮದ ವಿದ್ಯಾರ್ಥಿವೇತನ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

How To Apply For LIC scholarship-ಎಲ್ಐಸಿಯಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಭಾರತೀಯ ಜೀವ ವಿಮಾ ನಿಗಮದಿಂದ ಒಟ್ಟು ಎರಡು ಯೋಜನೆಯಡಿ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿದ್ದು ಹೆಣ್ಣು ಮಕ್ಕಳಿಗೆ ಪ್ರತೇಕವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

  • ಅರ್ಜಿದಾರ ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು.
  • ವಿದ್ಯಾರ್ಥಿನಿಯರು 10ನೇ ತರಗತಿ ಪ್ರವೇಶವನ್ನು ಪಡೆದಿರಬೇಕು.
  • ಪದವಿ,ಡಿಪ್ಲೋಮಾ,ವೈದ್ಯಕೀಯ,ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹4.5 ಲಕ್ಷದ ಒಳಗಿರಬೇಕು.
  • ಕಳೆದ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 60% ಅಂಕವನ್ನು ಪಡೆದಿರಬೇಕು.

ಇದನ್ನೂ ಓದಿ: Pearl Farming-ಕೃಷಿ ವಿಶ್ವವಿದ್ಯಾಲಯದಿಂದ ಮುತ್ತು ಕೃಷಿ ತರಬೇತಿಗೆ ಅರ್ಜಿ ಆಹ್ವಾನ!

LIC scholarship Amount-ವಿದ್ಯಾರ್ಥಿವೇತನದ ಮೊತ್ತ ಎಷ್ಟು?

  • ವೈದ್ಯಕೀಯ ವಿದ್ಯಾರ್ಥಿಗಳಿಗೆ-ಒಂದು ವರ್ಷಕ್ಕೆ ಎರಡು ಕಂತು ಗಳಲ್ಲಿ ತಲಾ 20,000/- ರಂತೆ ಒಟ್ಟು 40,000/- ರೂ
  • ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ- ಒಂದು ವರ್ಷಕ್ಕೆ ಎರಡು ಕಂತು ಗಳಲ್ಲಿ ತಲಾ 15,000/- ರಂತೆ ಒಟ್ಟು 30,000/- ರೂ
  • ಡಿಪ್ಲೋಮಾ,ಪದವಿ,ಐಟಿಐ, ವೃತ್ತಿಪರ ಕೋರ್ಸ್ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ- ಒಂದು ವರ್ಷಕ್ಕೆ ಎರಡು ಕಂತು ಗಳಲ್ಲಿ ತಲಾ 10,000/- ರಂತೆ ಒಟ್ಟು 20,000/- ರೂ
  • ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ- ಒಂದು ವರ್ಷಕ್ಕೆ ಎರಡು ಕಂತು ಗಳಲ್ಲಿ ತಲಾ 7,500/- ರಂತೆ ಒಟ್ಟು 15,000/- ರೂ
LIC scholarship

ಇದನ್ನೂ ಓದಿ: Computer Training-ಕೆನರಾ ಬ್ಯಾಂಕ್ ವತಿಯಿಂದ 3 ತಿಂಗಳ ಉಚಿತ ಕಂಪ್ಯೂಟರ್ ಶಿಕ್ಷಣ ತರಬೇತಿ!

LIC scholarship Important Dates-ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ- 28 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 22 ಸೆಪ್ಟೆಂಬರ್ 2025

Online LIC scholarship Application-ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಿ:

ಅರ್ಹ ವಿದ್ಯಾರ್ಥಿಗಳು ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ವಿದ್ಯಾರ್ಥಿವೇತನ ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಹಂತ-1: ವಿದ್ಯಾರ್ಥಿಗಳು ಮೊದಲಿಗೆ "LIC Scholarship Online Application" ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಅರ್ಜಿ ಸಲ್ಲಿಕೆ ಜಾಲತಾಣವನ್ನು ಪ್ರವೇಶ ಮಾಡಬೇಕು.

ಹಂತ-2: ನಂತರ ಇಲ್ಲಿ ರಾಜ್ಯ,ಜಿಲ್ಲೆ, ನಿಮ್ಮ ಹೆಸರು ಇನ್ನಿತರೆ ಅಗತ್ಯ ವಿವರವನ್ನು ಭರ್ತಿ ಮಾಡಿ ಅಗತ್ಯ ವಿವರ ದಾಖಲೆಗಳನ್ನು "Choose File" ಬಟನ್ ಮೇಲೆ ಕ್ಲಿಕ್ ಮಾಡಿ ಪೈಲ್ ಅನ್ನು ಸೆಲೆಕ್ಟ್ ಮಾಡಿಕೊಂಡು ದಾಖಲೆಯನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ಕಾಣುವ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: CET Result-2025: ಸಿಇಟಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟ!

Documents For LIC scholarship-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

  • ವಿದ್ಯಾರ್ಥಿಯ ಆಧಾರ್ ಕಾರ್ಡ.
  • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ವಿದ್ಯಾರ್ಥಿಯ ಪೋಟೋ.
  • ವಿದ್ಯಾರ್ಥಿಯ ಅಂಕಪಟ್ಟಿ.
  • ವಿದ್ಯಾರ್ಥಿಯ ಶಾಲಾ ಪ್ರವೇಶ ಪತ್ರ.
  • ವಿದ್ಯಾರ್ಥಿ ಕುಟುಂಬದ ಆದಾಯ ಪ್ರಮಾಣ ಪತ್ರ.

LIC scholarship Application Link-ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್- Apply Now

LIC scholarship Guidelines-ಎಲ್ಐಸಿ ಗೋಲ್ಡನ್ ಜುಬಿಲಿ ವಿದ್ಯಾರ್ಥಿವೇತನ ಯೋಜನೆಯ ಅಧಿಕೃತ ಅಧಿಸೂಚನೆ ಪ್ರತಿ ಡೌನ್ಲೋಡ್ ಲಿಂಕ್-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: