lost property documents-ಆಸ್ತಿ ಪತ್ರ ಕಳೆದುಹೋಗಿದೆಯೇ? ಮರಳಿ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ!

February 17, 2026 | Siddesh
lost property documents-ಆಸ್ತಿ ಪತ್ರ ಕಳೆದುಹೋಗಿದೆಯೇ? ಮರಳಿ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ!
Share Now:

ಇಂದಿನ ಡಿಜಿಟಲ್ ಯುಗದಲ್ಲಿ ದಾಖಲೆಗಳನ್ನು ಸುರಕ್ಷಿತವಾಗಿ ಸಂಗ್ರಹ ಮಾಡಲು ಸುಲಭವಾಗಿದೆ ಆದರೆ(lost property documents) ಅನೇಕರು ಇನ್ನೂ ಹಿಂದಿನ ಕಾಲದ ಕಾಗದದ ದಾಖಲೆಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ಇದರಿಂದ ಆಸ್ತಿ ದಾಖಲೆಗಳು ಕಳೆದು ಹೋಗುವ ಸಾಧ್ಯತೆ ಅತೀ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ ಸರ್ಕಾರವು ದಾಖಲೆಗಳನ್ನು ಮರುಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಒಬ್ಬ ವ್ಯಕ್ರಿಯ ಜೀವಿತಾವಧಿಯ ಕಠಿಣ ಪರಿಶ್ರಮ ಹಾಗೂ ಕನಸಿನ ಒಂದು ಪ್ರತಿರೂಪವೇ ಆಸ್ತಿ. ಇದು ಸಣ್ಣ(digital signed copy) ನಿವೇಶನವಿರಲಿ ಅಥವಾ ವಿಶಾಲವಾದ ಕೃಷಿ ಭೂಮಿಯೇ ಇರಲಿ, ಅದರ ಮಾಲೀಕತ್ವವನ್ನು ಜಗತ್ತಿಗೆ ಸಾಬೀತುಪಡಿಸುವ ಏಕೈಕ ಕಾನೂನುಬದ್ಧ ಆಧಾರವೆಂದರೆ 'ಮೂಲ ಆಸ್ತಿ ಪತ್ರ' ಅಥವಾ ಸೇಲ್ ಡೀಡ್.

ಇದನ್ನೂ ಓದಿ: Agriculture Land Sketch-ರೈತರಿಗೊಂದು ಸಿಹಿಸುದ್ದಿ: ನಿಮ್ಮ ಜಮೀನಿನ ‘ಇ-ಸ್ಕೆಚ್’ ಈಗ ಮೊಬೈಲ್‌ನಲ್ಲೇ ಲಭ್ಯ!

ಈ ದಾಖಲೆಯು ಕೇವಲ ಕಾಗದದ ತುಣುಕಲ್ಲ; ಅದು ಆಸ್ತಿಯ ಮೇಲಿನ ನಿಮ್ಮ ಹಕ್ಕು, ಪರಂಪರೆ ಮತ್ತು ಆರ್ಥಿಕ ಭದ್ರತೆಯ(Karnataka land records) ಸಂಕೇತವಾಗಿದೆ. ಅಂತಹ ಅಮೂಲ್ಯವಾದ ದಾಖಲೆಗಳು ಅನಿರೀಕ್ಷಿತವಾಗಿ ಕಳೆದುಹೋದಾಗ ಅಥವಾ ಯಾವುದೋ ಅಪಘಾತದಲ್ಲಿ ನಾಶವಾಗುವುದು ಸಹಜ ಬ್ಯಾಂಕ್ ಸಾಲ ಪಡೆಯಲಾಗದ ಅಥವಾ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗದ ಆತಂಕವು ವ್ಯಕ್ತಿಯನ್ನು ದೃತಿಗೆಡಿಸುತ್ತದೆ.

ಪ್ರಸ್ತುತ ಈ ಲೇಖನದಲ್ಲಿ ನಿಮ್ಮ ಆಸ್ತಿ ಪತ್ರ ಕಳೆದುಹೋದ ತಕ್ಷಣ ನೀವು ಮಾಡಬೇಕಾದ ತುರ್ತು ಕ್ರಮಗಳಿಂದ ಹಿಡಿದು, ಆನ್‌ಲೈನ್‌ನಲ್ಲಿ ದೃಢೀಕೃತ ನಕಲನ್ನು ಪಡೆಯುವುದು ಹೇಗೆ? ದಾಖಲೆಗಳು ಕಳೆದು ಹೋದ ತಕ್ಷಣ ಏನು ಮಾಡಬೇಕು? ಮರು ಪಡೆಯಲು ಹೇಗೆ ಅರ್ಜಿಯನ್ನು ಸಲ್ಲಿಸಬೇಕು? ಇತರ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Toilet Room Subsidy-ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!

ಆಸ್ತಿ ಪತ್ರ ಕಳೆದು ಹೋದಾಗ ಮೊದಲಿಗೆ ಏನು ಮಾಡಬೇಕು?

1) ಪೊಲೀಸರಿಗೆ ದೂರನ್ನು ದಾಖಲೆ ಮಾಡಬೇಕು(FIR ಅಥವಾ Lost Report):

ನಿಮ್ಮ ವ್ಯಾಪ್ತಿಯ ಬಳಿ ಇರುವ ಪೊಲೀಸ್ ಠಾಣೆಗೆ ಭೇಟಿ ನೀಡಿ ಆಸ್ತಿಗೆ ಸಂಬಂದಿಸಿದ ದಾಖಲೆಗಳು ಎಲ್ಲಿ ಕಳೆದಿರಬಹುದು ಎಂಬ ಎಲ್ಲಾ ವಿವರಗಳೊಂದಿಗೆ ದೂರು ನೀಡಿ.

ಒಂದು ವೇಳೆ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್ಲೈನ್ ನಲ್ಲಿ 'Lost Report' ದಾಖಲಿಸಬಹುದು.

ಆಸ್ತಿಗೆ ಸಂಬಂದಿಸಿದ ಸರ್ವೇ ನಂಬರ್, ನೋಂದಣಿ ಸಂಖ್ಯೆ, ಮಾಲೀಕರ ಹೆಸರು ಮತ್ತು ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿ. ಈ ದೂರಿನ ಪ್ರತಿಯು ಮುಂದೆ ಸಬ್-ರಿಜಿಸ್ಟ್ರಾರ್ ಕಚೇರಿಗೆ ಸಲ್ಲಿಸಬೇಕು.

ಇದನ್ನೂ ಓದಿ: Mudra Loan-ಮುದ್ರಾ ಯೋಜನೆಯಡಿ ಸ್ವಂತ ಉದ್ದಿಮೆಗೆ ಸಾಲ ಪಡೆಯುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

2) ನೋಟರೈಸ್ಡ್ ಅಫಿಡವಿಟ್ (Affidavit) ತಯಾರಿಕೆ:

ಅಫಿಡವಿಟ್ ಪತ್ರದಲ್ಲಿ ಆಸ್ತಿಯ ವಿವರ, ದಾಖಲೆ ಕಳೆದುಹೋದ ಸಂದರ್ಭ, ಪೊಲೀಸ್ ದೂರಿನ ವಿವರ ಮತ್ತು ಭವಿಷ್ಯದಲ್ಲಿ ಮೂಲ ಪತ್ರ ಸಿಕ್ಕರೆ ಅದನ್ನು ಸರ್ಕಾರಕ್ಕೆ ಒಪ್ಪಿಸುವುದಾಗಿ ಘೋಷಣೆ ಮಾಡಬೇಕು.

ಅಫಿಡವಿಟ್‌ಗೆ ನೋಟರಿ ಅಧಿಕಾರಿಯಿಂದ ಸಹಿ ಮತ್ತು ಸೀಲು ಹಾಕಿಸುವುದು ಕಡ್ಡಾಯವಾಗಿದೆ.

3) ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ (Public Notice):

ಕನಿಷ್ಠ ಎರಡು ಪ್ರಮುಖ ದಿನಪತ್ರಿಕೆಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ "ದಾಖಲೆ ಕಳೆದುಹೋಗಿರುವ ಬಗ್ಗೆ" ಸಾರ್ವಜನಿಕರಲ್ಲಿ ಪ್ರಕಟಣೆ ನೀಡಬೇಕು.

ಈ ಪ್ರಕಟಣೆಯಲ್ಲಿ ಆಸ್ತಿಯ ಪೂರ್ಣ ವಿವರ, ಕಳೆದುಹೋದ ಪತ್ರದ ವಿಧ ಅಂದರೆ ಸೇಲ್ ಡೀಡ್/ಗಿಫ್ಟ್ ಡೀಡ್ ಹಾಗೂ ಯಾರಾದರೂ ಈ ಪತ್ರವನ್ನು ಕಂಡುಕೊಂಡರೆ ತಿಳಿಸಲು 15 ದಿನಗಳ ಕಾಲಾವಕಾಶ ನೀಡಬೇಕು.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

property documents

4) ದೃಢೀಕೃತ ನಕಲು ಪಡೆಯುವುದು(Certified Copy):

ಅರ್ಜಿ ಸಲ್ಲಿಸಿದ ನಂತರ ಎಲ್ಲಾ ದಾಖಲೆಗಳು ಸರಿ ಇದ್ದರೆ 3 ರಿಂದ 10 ಕೆಲಸದ ದಿನಗಳ ಒಳಗೆ ನಿಮ್ಮ ಲಾಗಿನ್ ಐಡಿಗೆ ಡಿಜಿಟಲ್ ಸಹಿ ಮಾಡಿದ ಆಸ್ತಿ ಪತ್ರದ ನಕಲು ಬರುತ್ತದೆ. ಅದನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬೇಕು.

Kaveri 2.0 ಮೂಲಕ ಪಡೆಯುವ ಡಿಜಿಟಲ್ ಸಹಿಯುಳ್ಳ ಪ್ರತಿಗೆ ಮೂಲ ದಾಖಲೆಯಷ್ಟೇ ಕಾನೂನು ಮಾನ್ಯತೆ ಇರುತ್ತದೆ. ಇದನ್ನು ಬ್ಯಾಂಕ್ ಸಾಲ ಪಡೆಯಲು ಅಥವಾ ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ವಿಶ್ವಾಸಾರ್ಹವಾಗಿ ಬಳಸಬಹುದು.

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಜಮಾ ವಿವರವನ್ನು ತಿಳಿಯುವುದು ಹೇಗೆ?

ದಾಖಲೆ ಮರುಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?

Step-1: ಮೊದಲಿಗೆ ಈ ಲಿಂಕ್ "Click Here" ಮೇಲೆ ಕ್ಲಿಕ್ ಮಾಡಿ ಕಾವೇರಿ 2.0 ಪೋರ್ಟಲ್ ಅನ್ನು ಭೇಟಿ ಮಾಡಿ ಬಳಕೆದಾರರ ಖಾತೆಗೆ ಲಾಗಿನ್ ಆಗಬೇಕು.

Step-2: ಲಾಗಿನ್ ಆದ ನಂತರ 'Certified Copy' ಅಥವಾ 'Online CC' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.

Step-3: ತದನಂತರ ನೀವು ಮೊದಲೇ ಸಿದ್ಧಪಡಿಸಿಕೊಂಡ ಪೊಲೀಸ್ ದೂರು (FIR), ಪತ್ರಿಕಾ ಜಾಹೀರಾತಿನ ಪತ್ರ ಹಾಗೂ ಅಫಿಡವಿಟ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ ಮಾಡಬೇಕು.

Step-4: ಬಳಿಕ ಸರ್ಕಾರವು ನಿಗದಿಪಡಿಸಿರುವ ಶುಲ್ಕವನ್ನು ಪಾವತಿ ಮಾಡಿ ನಿಮ್ಮ ಆಧಾರ್ ಸಂಖ್ಯೆಯ ಸಹಾಯದಿಂದ ಅರ್ಜಿಗೆ ಡಿಜಿಟಲ್ ಸಹಿ ಅನ್ನು ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Free Skill Training-31 ದಿನದ ಉಚಿತ ಎಂಬ್ರಾಯಡರಿ ತರಬೇತಿ ಪಡೆಯಲು ಅರ್ಜಿ ಆಹ್ವಾನ!

lost property documents

ಇದನ್ನೂ ಓದಿ: Shakti Yojane Smart Card-ಇನ್ಮುಂದೆ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಬದಲು ಸ್ಮಾರ್ಟ್ ಕಾರ್ಡ್!

ಅರ್ಜಿ ಸಲ್ಲಿಸಿದ ನಂತರ ಎಷ್ಟು ಸಮಯ ಬೇಕಾಗುತ್ತದೆ?

Certified copy ಪಡೆಯಲು 3 ರಿಂದ 7 ದಿನ ಸಮಯ ಬೇಕಾಗುತ್ತದೆ.
ಸಂಪೂರ್ಣ ಪ್ರಕ್ರಿಯೆ – 2 ರಿಂದ 4 ವಾರಗಳು

ದಾಖಲೆ ಮರುಪಡೆಯಲು ಬೇಕಾಗುವ ದಾಖಲೆಗಳಾವುವು?

ಪೊಲೀಸ್ ದೂರು/acknowledgement
Non-traceable certificate
ಶಪಥ ಪತ್ರ/Affidavit
ಪತ್ರಿಕೆ ಪ್ರಕಟಣೆ ಪ್ರತಿಗಳು
ಗುರುತಿನ ಚೀಟಿ
ಆಸ್ತಿ ವಿವರಗಳು
EC ಪ್ರತಿಗಳು

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: