Janaganati-2027: ಎಪ್ರಿಲ್ 1ರಿಂದ ಡಿಜಿಟಲ್ ಜನಗಣತಿ! ನಿಮ್ಮ ಮೊಬೈಲ್‌ನಲ್ಲೇ ಮಾಹಿತಿ ದಾಖಲಿಸಲು ಸುವರ್ಣಾವಕಾಶ!

March 30, 2026 | Siddesh
Janaganati-2027: ಎಪ್ರಿಲ್ 1ರಿಂದ ಡಿಜಿಟಲ್ ಜನಗಣತಿ! ನಿಮ್ಮ ಮೊಬೈಲ್‌ನಲ್ಲೇ ಮಾಹಿತಿ ದಾಖಲಿಸಲು ಸುವರ್ಣಾವಕಾಶ!
Share Now:

ಬೆಂಗಳೂರು: ದೇಶದ ಭವಿಷ್ಯದ ಅಭಿವೃದ್ಧಿಯ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ 'ಜನಗಣತಿ-2027(Janaganati)' ಪ್ರಕ್ರಿಯೆಗೆ ಈಗ ಚಾಲನೆ ಸಿಕ್ಕಿದೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಪ್ರಕಟಣೆಯಂತೆ, ಎಪ್ರಿಲ್ 1 ರಿಂದ 15ರ ವರೆಗೆ ಸಾರ್ವಜನಿಕರು ವೆಬ್ ಪೋರ್ಟಲ್ ಮೂಲಕ ತಾವಾಗಿಯೇ (Self-Enumeration) ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ತಂತ್ರಜ್ಞಾನದ ಬಳಕೆಯೊಂದಿಗೆ ಈ ಬಾರಿ ಜನಗಣತಿಯು ಹೈಟೆಕ್ ರೂಪ ಪಡೆದಿದ್ದು, ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಮನೆಗೆ ಬರುವ ಗಣತಿದಾರರಿಗಾಗಿ ಕಾಯುವ ಅನಿವಾರ್ಯತೆ ಇಲ್ಲದೆ ಸುಲಭವಾಗಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.

ಎಪ್ರಿಲ್ 16ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡುವ ಕಾರ್ಯ ಆರಂಭವಾಗಲಿದ್ದು, ಅದಕ್ಕೂ ಮುನ್ನ ಅಂದರೆ ಎಪ್ರಿಲ್ 1 ರಿಂದ 15ರ ವರೆಗೆ ವೆಬ್ ಪೋರ್ಟಲ್(Janaganati Online Application) ತೆರೆದಿರುತ್ತದೆ. ಸಾರ್ವಜನಿಕರು ತಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಮೂಲಕ https://se.census.gov.in ಪೋರ್ಟಲ್‌ಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಹೆಸರು, ಲಿಂಗ, ವಯಸ್ಸು ಮತ್ತು ವಿಳಾಸದಂತಹ ಮೂಲಭೂತ ಮಾಹಿತಿಗಳನ್ನು ದಾಖಲಿಸಬೇಕು. ಒಮ್ಮೆ ಮಾಹಿತಿ ಸಲ್ಲಿಸಿದ ನಂತರ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ವಿಶಿಷ್ಟ ಗುರುತಿನ ಸಂಖ್ಯೆ (Self-Enumeration ID) ಬರಲಿದ್ದು, ಅದನ್ನು ಗಣತಿದಾರರು ಮನೆಗೆ ಬಂದಾಗ ತೋರಿಸಿದರೆ ಸಾಕು.

ಇದನ್ನೂ ಓದಿ: CCTV Installation Training-ಉಚಿತ ಸಿಸಿಟಿವಿ ತರಬೇತಿಗೆ ಅರ್ಜಿ ಆಹ್ವಾನ!ಇಂದೇ ಅರ್ಜಿ ಸಲ್ಲಿಸಿ!

ಈ ಡಿಜಿಟಲ್ ಗಣತಿಯು ಕೇವಲ ಸಮಯ ಉಳಿತಾಯ ಮಾಡುವುದಲ್ಲದೆ, ದತ್ತಾಂಶದ ನಿಖರತೆಯನ್ನು ಹೆಚ್ಚಿಸುತ್ತದೆ. ಡಿಜಿಟಲ್ ಮ್ಯಾಪ್ ಮತ್ತು ಪಿನ್ ಕೋಡ್‌ಗಳ ಸಹಾಯದಿಂದ ನಿಖರವಾದ ಸ್ಥಳ ಗುರುತಿಸುವ ವ್ಯವಸ್ಥೆಯನ್ನು ಮಾಡಲಾಗಿದ್ದು, ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರದ ಯೋಜನಾ ರಚನೆಯಲ್ಲಿ ಅಡಿಪಾಯವಾಗಬೇಕು ಎಂದು ಆಡಳಿತ ಮಂಡಳಿ ವಿನಂತಿಸಿದೆ. ಒಂದು ವೇಳೆ ಸ್ವಯಂ ಗಣತಿ(Online Janagati)ಪೂರ್ಣಗೊಳಿಸದಿದ್ದಲ್ಲಿ, ಗಣತಿದಾರರು ಖುದ್ದಾಗಿ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

Janaganati Website 2027-ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಜನಗಣತಿಯಲ್ಲಿ ಭಾಗವಹಿಸುವುದು ಹೇಗೆ?

ಸಾರ್ವಜನಿಕರು ಎಪ್ರಿಲ್ 01 ರ ನಂತರ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ಜನಗಣತಿ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ಮೂಲಕವೇ ಗಣತಿಯನ್ನು ಮಾಡಬಹುದು.

Step-1: ಸಾರ್ವಜನಿಕರು ಮೊದಲಿಗೆ ಈ Register Now ವೆಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಜನಗಣತಿಯ ಅಧಿಕೃತ ವೆಬ್ ಪೋರ್ಟಲ್ https://se.census.gov.in ಗೆ ಭೇಟಿ ಮಾಡಬೇಕು.

ಇದನ್ನೂ ಓದಿ: Government Holiday-ಸರಕಾರಿ ರಜಾ ದಿನದಲ್ಲಿ ಮಹತ್ವದ ಬದಲಾವಣೆ! ತಪ್ಪದೇ ಈ ಸುದ್ದಿ ನೋಡಿ!

Step-2: ಇದಾದ ಬಳಿಕ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿ ಲಾಗಿನ್ ಆಗಿಬೇಕು.

Step-3: ಇದಾದ ನಂತರ ಈ ಪೇಜ್ ನಲ್ಲಿ ಕುಟುಂಬದ ಸದಸ್ಯರ ವಿವರಗಳು, ವಾಸದ ಸ್ಥಳ ಮತ್ತು ಇತರೆ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ.

Step-4: ತದನಂತರ ಲಭಿಸುವ 'ರೆಫರೆನ್ಸ್ ಐಡಿ'ಯನ್ನು ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಪಡೆದು ಸುರಕ್ಷಿತವಾಗಿಟ್ಟುಕೊಳ್ಳಿ. ಗಣತಿದಾರರು ಮನೆಗೆ ಬಂದಾಗ ಈ ಐಡಿ ನೀಡಿದರೆ ನಿಮ್ಮ ಕೆಲಸ ಮುಗಿಯಿತು.

ಇದನ್ನೂ ಓದಿ: 1st Standard Admission Age-1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ!

Janaganati-2027

ಇದನ್ನೂ ಓದಿ: SSLC Exam 2026-10ನೇ ತರಗತಿ ಅಂತಿಮ ಪರೀಕ್ಷೆ ತೃತೀಯ ಭಾಷೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿ!

Janaganati Importance-ಜನಗಣತಿ ಏಕೆ ಮಾಡಲಾಗುತ್ತದೆ?

ಜನಗಣತಿಯು ಕೇವಲ ತಲೆ ಎಣಿಕೆಯಲ್ಲ; ಇದು ದೇಶದ ಜನಸಂಖ್ಯಾಶಾಸ್ತ್ರ, ಆರ್ಥಿಕ ಸ್ಥಿತಿ, ಸಾಕ್ಷರತೆ ಮತ್ತು ಸೌಲಭ್ಯಗಳ ಬಗ್ಗೆ ನಿಖರವಾದ ಅಂಕಿ-ಅಂಶಗಳನ್ನು ನೀಡುವ ಪ್ರಕ್ರಿಯೆ. ಸರ್ಕಾರದ ಮುಂದಿನ 10 ವರ್ಷಗಳ ಯೋಜನೆಗಳನ್ನು ರೂಪಿಸಲು ಇದು ಆಧಾರವಾಗಿರುತ್ತದೆ.

Why Is It important To Participate In Census-ಜನಗಣತಿಯಲ್ಲಿ ಭಾಗವಹಿಸುವುದು ಏಕೆ ಮುಖ್ಯ?

ಪ್ರತಿಯೊಬ್ಬ ನಾಗರಿಕನ ಮಾಹಿತಿಯೂ ಮುಖ್ಯ. ಸರಿಯಾದ ಅಂಕಿ-ಅಂಶಗಳಿಲ್ಲದಿದ್ದರೆ ಸರ್ಕಾರಕ್ಕೆ ಸರಿಯಾದ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಒಂದು ಸಣ್ಣ ಮಾಹಿತಿ ದೇಶದ ಸಮಗ್ರ ಅಭಿವೃದ್ಧಿಯ ನಕಾಶೆಯನ್ನು ಬದಲಿಸಬಲ್ಲದು.

ಇದನ್ನೂ ಓದಿ: Labour Card-ಕಾರ್ಮಿಕ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?

Census Benefits-ಜನಗಣತಿಯಿಂದ ಸಾರ್ವಜನಿಕರಿಗೆ ಆಗುವ ಪ್ರಯೋಜನಗಳೇನು?

ಯೋಜನೆಗಳ ಲಾಭ: ಶಾಲೆಗಳು, ಆಸ್ಪತ್ರೆಗಳು ಮತ್ತು ರಸ್ತೆಗಳಂತಹ ಮೂಲಸೌಕರ್ಯಗಳನ್ನು ಎಲ್ಲಿ ನಿರ್ಮಿಸಬೇಕು ಎಂಬ ನಿರ್ಧಾರ ಜನಗಣತಿಯ ಆಧಾರದ ಮೇಲೆ ನಡೆಯುತ್ತದೆ.

ಸೌಲಭ್ಯಗಳ ಹಂಚಿಕೆ: ಪಡಿತರ ವ್ಯವಸ್ಥೆ, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಉದ್ಯೋಗಾವಕಾಶಗಳ ಹಂಚಿಕೆಗೆ ಇದು ಸಹಾಯಕಾರಿ.

ನಿಖರ ದತ್ತಾಂಶ: ಸಾರ್ವಜನಿಕರಿಗೆ ಸಂಬಂಧಿಸಿದ ನೀತಿ ರೂಪಿಸುವಾಗ ನಿಮ್ಮ ವರ್ಗ ಅಥವಾ ಪ್ರದೇಶಕ್ಕೆ ಸಿಗಬೇಕಾದ ನ್ಯಾಯಯುತ ಪಾಲು ದೊರೆಯಲು ಇದು ಸಹಕಾರಿ.

ಗಮನಿಸಿ: ಮಾಹಿತಿಯನ್ನು ದಾಖಲಿಸುವಾಗ ಪಿನ್ ಕೋಡ್ ಮತ್ತು ಸ್ಥಳದ ವಿವರಗಳನ್ನು ನಿಖರವಾಗಿ ನಮೂದಿಸಿ ಮತ್ತು ಈ ಮೇಲೆ ತಿಳಿಸಿರುವ ವೆಬ್ಸೈಟ್ ಎಪ್ರಿಲ್ 01 ರ ನಂತರ ತೆರೆದುಕೊಳ್ಳಲಿದ್ದು ಪ್ರಸ್ತುತ ನಿಷ್ಕ್ರಿಯ ಹಂತದಲ್ಲಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: