LPG Cylinder Subsidy-ಗ್ಯಾಸ್ ಸಿಲಿಂಡರ್ 300 ರೂ. ಸಬ್ಸಿಡಿ ನಿಮಗೆ ಬರುತ್ತಿದೆಯೇ? ಚೆಕ್ ಮಾಡುವುದು ಹೇಗೆ?

January 26, 2026 | Siddesh
LPG Cylinder Subsidy-ಗ್ಯಾಸ್ ಸಿಲಿಂಡರ್ 300 ರೂ. ಸಬ್ಸಿಡಿ ನಿಮಗೆ ಬರುತ್ತಿದೆಯೇ? ಚೆಕ್ ಮಾಡುವುದು ಹೇಗೆ?
Share Now:

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ದಿನ ಬಳಕೆ ವಸ್ತುಗಳ ಬೆಲೆಗೆ ಅನುಸಾರವಾಗಿ ಸಾಮಾನ್ಯ ಜನರ ಬಜೆಟ್‌ನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಪ್ರಮುಖ ಪಾತ್ರ ವಹಿಸುತ್ತದೆ. ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ಉಜ್ವಲ ಯೋಜನೆ' (PMUY) ಅಡಿಯಲ್ಲಿ ಸಿಲಿಂಡರ್ ಪಡೆಯುವ ಗ್ರಾಹಕರಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ಘೋಷಿಸಿದೆ. ಆದರೆ, ಅನೇಕರಿಗೆ ಈ ಹಣ ತಮ್ಮ ಖಾತೆಗೆ ಜಮೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಗೊಂದಲವಿರುತ್ತದೆ. ಈ ಲೇಖನದಲ್ಲಿ ಸಬ್ಸಿಡಿ ಜಮಾ ಅಗಿರುವ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ? ಪ್ರಸ್ತುತ ಸಿಲಿಂಡರ್ ದರ ಮತ್ತು ಸಬ್ಸಿಡಿ ಬರದಿದ್ದರೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ(Ujjwala Yojane) ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಪಡೆದಿರುವ ಅರ್ಹ ಫಲಾನುಭವಿಗಳಿಗೆ 14.2 ಕೆಜಿ ತೂಕದ ಪ್ರತಿ ಗ್ಯಾಸ್ ಸಿಲಿಂಡರ್ ಗೆ ಕೇಂದ್ರ ಸರಕಾರದಿಂದ ₹300 ರೂ ಸಬ್ಸಿಡಿಯನ್ನು(LPG Cylinder Subsidy) ನೇರ ನಗರು ವರ್ಗಾವಣೆ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: Property Registration Rules-ಆಸ್ತಿ ನೋಂದಣಿಗೆ ಹೊಸ ನಿಯಮ ತಪ್ಪದೇ ಈ ಮಾಹಿತಿ ತಿಳಿಯಿರಿ!

LPG Cylinder Subsidy Eligibility Criteria-ಈ ಯೋಜನೆಯಡಿ ಸಬ್ಸಿಡಿ ಯಾರಿಗೆ ಸಿಗುತ್ತದೆ?

ಕೇವಲ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಂಪರ್ಕ ಪಡೆದ ಬಡ ಕುಟುಂಬಗಳಿಗೆ ಮಾತ್ರ ಪ್ರತಿ ಸಿಲಿಂಡರ್‌ಗೆ 300 ರೂಪಾಯಿ ಸಬ್ಸಿಡಿ ಸಿಗುತ್ತದೆ.

ವರ್ಷಕ್ಕೆ ಗರಿಷ್ಠ 12 ಸಿಲಿಂಡರ್‌ಗಳವರೆಗೆ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ.

ಬಿಪಿಎಲ್ ರೇಶನ್ ಕಾರ್ಡ ಅನ್ನು ಹೊಂದಿರುವವರು ಮಾತ್ರ ಸಬ್ಸಿಡಿ ಪಡೆಯಲು ಅರ್ಹರು.

ಉಜ್ವಲ ಯೋಜನೆಯಡಿ ನೂತನ ಸಂಪರ್ಕವನ್ನು ಪಡೆಯಲು ಬಿಪಿಎಲ್ ಕಾರ್ಡ್ ನಲ್ಲಿರುವ ಸದಸ್ಯರ ಹೆಸರಿಗೆ ಈಗಾಗಲೇ ಗ್ಯಾಸ್ ಸಂಪರ್ಕ ಹೊಂದಿರಬಾರದು.

ಇದನ್ನೂ ಓದಿ: SSLC Prize Money-ಎಸ್ಸೆಸ್ಸೆಲ್ಸಿ ಟಾಪರ್‌ಗಳಿಗೆ ಭರ್ಜರಿ ಕೊಡುಗೆ: ಲ್ಯಾಪ್‌ಟಾಪ್ ಬದಲು ₹50,000 ನಗದು ಬಹುಮಾನ!

LPG Cylinder Subsidy Status-ಸಬ್ಸಿಡಿ ಜಮಾ ವಿವರವನ್ನು ತಿಳಿಯುವುದು ಹೇಗೆ?

ಗ್ರಾಹಕರು ಎರಡು ವಿಧಾನವನ್ನು ಅನುಸರಿಸಿ ಗ್ಯಾಸ್ ಸಿಲಿಂಡರ್ ಸಬ್ಸಿಡಿ ವಿವರವನ್ನು ತಿಳಿಯಲು ಅವಕಾಶವಿದ್ದು ಆಧಾರ್ ಕಾರ್ಡ ಲಿಂಕ್ ಇರುವ ಬ್ಯಾಂಕ್ ಖಾತೆಯ ಪಾಸ್ ಬುಕ್ ಅನ್ನು ಪ್ರಿಂಟ್ ಮಾಡಿ ಚೆಕ್ ಮಾಡಿಕೊಳ್ಳಬಹುದು ಅಥವಾ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ನಲ್ಲೇ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು.

LPG Cylinder Subsidy Status Check-ಗ್ಯಾಸ್ ಸಬ್ಸಿಡಿ 300 ರೂ. ಬರುತ್ತಿದೆಯೇ ಎಂದು ಚೆಕ್ ಮಾಡುವುದು ಹೇಗೆ?

ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಬರುತ್ತಿದೆಯೇ ಎಂದು ತಿಳಿಯಲು ನೀವು ಗ್ಯಾಸ್ ಏಜೆನ್ಸಿಗೆ ಅಲೆಯುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ಮೂಲಕವೇ ಈ ಕೆಳಗಿನ ಹಂತಗಳನ್ನು ಅನುಸರಿಸಿ ಪರಿಶೀಲಿಸಬಹುದು:

Step-1: ಮೊದಲು ಸಾರ್ವಜನಿಕರು ಈ "LPG Cylinder Subsidy Status Check" ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್ www.mylpg.in ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Senior Citizen Card-ಹಿರಿಯ ನಾಗರಿಕರ ಕಾರ್ಡ್ ಪಡೆಯುವುದು ಹೇಗೆ? ಈ ಕಾರ್ಡನಿಂದ ಯಾವೆಲ್ಲ ಪ್ರಯೋಜನಗಳಿವೆ?

LPG Cylinder Subsidy Status Check

Step-2: ಈ ಪೇಜ್ ನಲ್ಲಿ ಅಲ್ಲಿ ನಿಮಗೆ ಮೂರು ಗ್ಯಾಸ್ ಕಂಪನಿಗಳ (Bharat Gas, HP Gas, Indane) ಚಿತ್ರಗಳು ಕಾಣಿಸುತ್ತವೆ. ನಿಮ್ಮ ಗ್ಯಾಸ್ ಕಂಪನಿಯನ್ನು ಆಯ್ಕೆ ಮಾಡಿ.

Step-3: ನಂತರ 'Give your feedback online' ಅಥವಾ 'Subsidy Check' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Step-4: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ 17 ಅಂಕಿಯ LPG ID ಯನ್ನು ನಮೂದಿಸಿ.

Step-5: ಈಗ ನಿಮ್ಮ ಸ್ಕ್ರೀನ್ ಮೇಲೆ ನಿಮ್ಮ ಗ್ಯಾಸ್ ಬುಕ್ಕಿಂಗ್ ಇತಿಹಾಸ ಮತ್ತು ಯಾವ ದಿನಾಂಕದಂದು ಎಷ್ಟು ಸಬ್ಸಿಡಿ ಹಣ ಜಮೆಯಾಗಿದೆ ಎಂಬ ಸಂಪೂರ್ಣ ವಿವರ ಕಾಣಿಸುತ್ತದೆ.

ಇದನ್ನೂ ಓದಿ: MGNREGA Scheme-ನರೇಗಾ ಯೋಜನೆಯಲ್ಲಿ ಏನಿಲ್ಲ ಬದಲಾವಣೆ ಮಾಡಲಾಗುತ್ತಿದೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

LPG Cylinder Price-ಪ್ರಸ್ತುತ ಗ್ಯಾಸ್ ಸಿಲಿಂಡರ್ ಬೆಲೆ ಎಷ್ಟು?

ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಪ್ರತಿ ತಿಂಗಳು ಬದಲಾಗುತ್ತಿರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ತೈಲ ಬೆಲೆಗಳಿಗೆ ಅನುಗುಣವಾಗಿ ಇವುಗಳನ್ನು ನಿಗದಿಪಡಿಸಲಾಗುತ್ತದೆ.

14.2 ಕೆಜಿ ಗೃಹಬಳಕೆಯ ಸಿಲಿಂಡರ್: ಪ್ರಸ್ತುತ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದು ಸಿಲಿಂಡರ್ ಬೆಲೆ ಅಂದಾಜು 800 ರಿಂದ 850 ರೂಪಾಯಿಗಳ ಆಸುಪಾಸಿನಲ್ಲಿದೆ (ಸ್ಥಳೀಯ ತೆರಿಗೆಗೆ ಅನುಗುಣವಾಗಿ ವ್ಯತ್ಯಾಸವಾಗಬಹುದು).

ವಾಣಿಜ್ಯ ಸಿಲಿಂಡರ್ (19 ಕೆಜಿ): ಇದರ ಬೆಲೆ ಸುಮಾರು 1700 ರಿಂದ 1900 ರೂಪಾಯಿಗಳವರೆಗೆ ಇರುತ್ತದೆ.

ಇದನ್ನೂ ಓದಿ: Deepika Scholarship 2026-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ವಾರ್ಷಿಕ ₹30,000 ಆರ್ಥಿಕ ನೆರವು!

How To Get LPG Cylinder Subsidy-ಗ್ಯಾಸ್ ಸಬ್ಸಿಡಿ ಪಡೆಯಲು ಅನುಸರಿಸಬೇಕಾದ ಕ್ರಮಗಳು:

ನಿಮಗೆ ಸಬ್ಸಿಡಿ ಸಿಗುತ್ತಿಲ್ಲವೆಂದಾದರೆ, ಈ ಕೆಳಗಿನ ದಾಖಲೆಗಳು ಅಪ್‌ಡೇಟ್ ಆಗಿವೆಯೇ ಎಂದು ಖಚಿತಪಡಿಸಿಕೊಳ್ಳಿ:

ಇ-ಕೆವೈಸಿ (e-KYC) ಕಡ್ಡಾಯ: ಇತ್ತೀಚಿನ ನಿಯಮದಂತೆ ಪ್ರತಿಯೊಬ್ಬ ಗ್ಯಾಸ್ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಬಯೋಮೆಟ್ರಿಕ್ ಅಥವಾ ಆಧಾರ್ ಮೂಲಕ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಆಧಾರ್ ಲಿಂಕ್ (Aadhaar Seeding): ನಿಮ್ಮ ಆಧಾರ್ ಕಾರ್ಡ್ ಗ್ಯಾಸ್ ಕನೆಕ್ಷನ್‌ಗೆ ಲಿಂಕ್ ಆಗಿರಬೇಕು.

ಬ್ಯಾಂಕ್ ಖಾತೆ ಜೋಡಣೆ (DBTL): ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು (NPCI Mapping). ಆಗ ಮಾತ್ರ 'ನೇರ ನಗದು ವರ್ಗಾವಣೆ' (DBT) ಮೂಲಕ ಹಣ ನಿಮ್ಮ ಖಾತೆಗೆ ಬರುತ್ತದೆ.

ಇದನ್ನೂ ಓದಿ: Akrama-Sakrama-ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ಸಬ್ಸಿಡಿಯಲ್ಲಿ ವಿದ್ಯುತ್ ಸಂಪರ್ಕ!

LPG Cylinder Subsidy Issue-ಗ್ಯಾಸ್ ಸಬ್ಸಿಡಿ ಸ್ಥಗಿತವಾಗಿದ್ದರೆ ಏನು ಮಾಡಬೇಕು?

ಒಂದು ವೇಳೆ ನೀವು ಸಿಲಿಂಡರ್ ಪಡೆದಿದ್ದರೂ ಸಬ್ಸಿಡಿ ಹಣ ಜಮೆಯಾಗದಿದ್ದರೆ ಈ ಕ್ರಮಗಳನ್ನು ಕೈಗೊಳ್ಳಿ:

ಗ್ಯಾಸ್ ಏಜೆನ್ಸಿ ಸಂಪರ್ಕಿಸಿ: ನಿಮ್ಮ ಹತ್ತಿರದ ಗ್ಯಾಸ್ ವಿತರಕರ ಬಳಿ ಹೋಗಿ ನಿಮ್ಮ ಕೆವೈಸಿ (KYC) ಸ್ಟೇಟಸ್ ಪರಿಶೀಲಿಸಿ.

ಬ್ಯಾಂಕ್ ಪರಿಶೀಲನೆ: ಕೆಲವು ಬಾರಿ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೆ ಹಣ ಜಮೆಯಾಗುವುದಿಲ್ಲ. ನಿಮ್ಮ ಆಧಾರ್ ಮ್ಯಾಪಿಂಗ್ ಆಗಿದೆಯೇ ಎಂದು ಬ್ಯಾಂಕ್‌ನಲ್ಲಿ ವಿಚಾರಿಸಿ.

ಟೋಲ್ ಫ್ರೀ ಸಂಖ್ಯೆ: ಸಬ್ಸಿಡಿ ಸಮಸ್ಯೆಗೆ ದೂರು ನೀಡಲು ಕೇಂದ್ರ ಸರ್ಕಾರದ ಸಹಾಯವಾಣಿ ಸಂಖ್ಯೆ 1800-233-3555 ಗೆ ಕರೆ ಮಾಡಬಹುದು.

ಆನ್‌ಲೈನ್ ದೂರು: MyLPG ಪೋರ್ಟಲ್‌ನಲ್ಲಿ 'Grievance' ವಿಭಾಗದಲ್ಲಿ ನಿಮ್ಮ ದೂರನ್ನು ದಾಖಲಿಸಬಹುದು.

ಗ್ಯಾಸ್ ಸಬ್ಸಿಡಿಯು ಬಡ ಮತ್ತು ಮಧ್ಯಮ ವರ್ಗದವರಿಗೆ ದೊಡ್ಡ ಆಸರೆಯಾಗಿದೆ. ನಿಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಬ್ಸಿಡಿ ಸೌಲಭ್ಯವನ್ನು ಪಡೆದುಕೊಳ್ಳಿ. ಬೆಲೆ ಏರಿಕೆಯ ಈ ಕಾಲದಲ್ಲಿ ಸಣ್ಣ ಮೊತ್ತದ ಸಬ್ಸಿಡಿಯೂ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: