- Advertisment -
HomeNew postsMahila nigama yojana-ಉದ್ಯೋಗಿನಿ ಯೋಜನೆಯಡಿ 1.5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Mahila nigama yojana-ಉದ್ಯೋಗಿನಿ ಯೋಜನೆಯಡಿ 1.5 ಲಕ್ಷ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Last updated on September 30th, 2024 at 02:37 pm

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಬರುವ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ(mahila nigama yojane application) 2024-25ನೇ ಸಾಲಿನ ವಿವಿಧ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ನಾಗರಿಕ ಸಮಾಜದಲ್ಲಿ ದುರ್ಬಲ ಮತ್ತು ಶೋಷಿತ ಹಾಗೂ ಅಸಹಾಯಕ ಸ್ಥಿತಿಯಲ್ಲಿರುವ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಡಗೊಳಿಸಲು ರಾಜ್ಯ ಸರಕಾರದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವನ್ನು(mahila nigama) ಸ್ಥಾಪನೆ ಮಾಡಿ ಈ ನಿಗಮ ಮೂಲಕ ಪ್ರತಿ ವರ್ಷ ಹಲವು ಸಹಾಯಧನ ಆಧಾರಿತ ಯೋಜನೆಗಳ ಮೂಲಕ ಇಂತಹ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

ಪ್ರಸ್ತುತ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಯೋಜನೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಯೋಜನೆವಾರು  ಸಹಾಯಧನ ಮಾಹಿತಿ ಸೇರಿದಂತೆ ಇತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಕೊನೆಯ ದಿನಾಂಕದ ಒಳಗಾಗಿ ಅಗತ್ಯ ದಾಖಲಾತಿಗಳ ಸಮೇತ ಅರ್ಜಿ ಸಲ್ಲಿಸಿ ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Krushi Pumpset-ಕೃಷಿ ಪಂಪ್ ಸೆಟ್ ಹೊಂದಿರುವವರು ತಪ್ಪದೇ ಈ ಕೆಲಸವನ್ನು ಮಾಡುವುದು ಕಡ್ಡಾಯ!

mahila nigama yojane-2024: ಮಹಿಳಾ ನಿಗಮದಿಂದ ಅರ್ಜಿ ಆಹ್ವಾನಿಸಿದ ಯೋಜನೆಗಳ ವಿವರ ಹೀಗಿದೆ:

1) ಉದ್ಯೋಗಿ ಯೋಜನೆ/Udyogini Yojane.

2) ಚೇತನ ಯೋಜನೆ/Chetana Yojane.

3) ಧನ್ಯಶ್ರೀ ಯೋಜನೆ/Dhanyashree yojane.

4) ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ/Lingatva alpa punarvasti yojane.

5) ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ/Devadasi mahila punarvasati yojane.

1) Udyogini Yojane-ಉದ್ಯೋಗಿ ಯೋಜನೆ:

ಉದ್ಯೋಗಿ ಯೋಜನೆಯಡಿ ನಿಗಮದಿಂದ ಮಹಿಳೆಯರಿಗೆ ಆದಾಯ ತರುವಂತಹ ಉತ್ಪನ್ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವ-ಉದ್ಯೋಗವನ್ನು ಆರಂಭಿಸಲು ಈ ಯೋಜನೆಯಡಿ ಬ್ಯಾಂಕ್ ಮೂಲಕ ಸಾಲ ಮತ್ತು ನಿಗಮದಿಂದ ಸಾಲಕ್ಕೆ ಸಹಾಯಧನ ನೀಡಲಾಗುತ್ತದೆ.

ಇದನ್ನೂ ಓದಿ: Indian Air Force Jobs-2024: ವಾಯುಪಡೆಯಲ್ಲಿ 12th ಪಾಸಾದವರಿಗೆ ಹಲವು ಹುದ್ದೆಗಳ ಅವಕಾಶ!

ಉದ್ಯೋಗಿ ಯೋಜನೆ ಸಹಾಯಧನ ವಿವರ:

A) ಸಾಮಾನ್ಯ ವರ್ಗದವರಿಗೆ:

ಸಾಮಾನ್ಯ ವರ್ಗದವರಿಗೆ ಒಟ್ಟು 3 ಲಕ್ಷದವರೆಗೆ ಬ್ಯಾಂಕ್ ಮೂಲಕ ಸಾಲ ಪಡೆಯಲು ಅವಕಾಶವಿದ್ದು ಈ ಸಾಲಕ್ಕೆ ಶೇ 30% ವರೆಗೆ ನಿಗಮದಿಂದ ಸಹಾಯಧನವನ್ನು ನೀಡಲಾಗುತ್ತದೆ.

B) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:

ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಕನಿಷ್ಟ 1 ಲಕ್ಷ ದಿಂದ ಗರಿಷ್ಟ 3 ಲಕ್ಷದವರೆಗೆ ಬ್ಯಾಂಕ್ ಮೂಲಕ ಸಾಲ ಪಡೆದುಕೊಂಡು ಈ ಸಾಲಕ್ಕೆ ಶೇ 50% ವರೆಗೆ ನಿಗಮದಿಂದ ಸಹಾಯಧನವನ್ನು ಪಡೆಯಬಹುದು.

ಇದನ್ನೂ ಓದಿ: Vidyarthi vethana-2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

2) Chetana Yojane-ಚೇತನ ಯೋಜನೆ:

ಚೇತನ ಯೋಜನೆಯಡಿ ಸ್ವ-ಉದೋಗವನ್ನು ಮಾಡಿಕೊಂಡು ಆದಾಯ ತೆಗೆದುಕೊಳ್ಳಲು ಆಸಕ್ತಿಯಿರುವ ಅರ್ಹ ಮಹಿಳೆಯರಿಗೆ ರೂ 30,000/- ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ.

3) Dhanyashree yojane-ಧನ್ಯಶ್ರೀ ಯೋಜನೆ:

ಧನ್ಯಶ್ರೀ ಯೋಜನೆಯಡಿ ಅರ್ಜಿ ಸಲ್ಲಿಸಲು ಅರ್ಹ ಮಹಿಳೆಯರು ಸ್ವಂತ ಉದ್ದಿಮೆಯನ್ನು ಆರಂಭಿಸಲು ರೂ 30,000/- ಅರ್ಥಿಕ ನೆರವನ್ನು ಪಡೆಯಬಹುದು.

4) Lingatva alpa punarvasti yojane:-ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯ ಮೂಲಕ ಅರ್ಹ ಮಹಿಳಾ ಫಲಾನುಭವಿಗಳಿಗೆ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ರೂ 30,000/- ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: free vermicompost and dairy training- ಉಚಿತ ಡೈರಿ ಮತ್ತು ಎರೆಹುಳು ಗೊಬ್ಬರ ಉತ್ಪಾದನೆ ತರಬೇತಿಗೆ ಅರ್ಜಿ!

5) Devadasi mahila punarvasati yojane-ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ:

ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಡಿ ಅರ್ಹರಿಗೆ ಅಂದರೆ 1993-94 ಮತ್ತು 2007-08ರ ಸಮೀಕ್ಷೆಯಲ್ಲಿ ಗುರುತಿಸಿರುವ ಮಾಜಿ ದೇವದಾಸಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರೂ 30,000/- ಪ್ರೋತ್ಸಾಹಧನ ನೀಡಲಾಗುತ್ತದೆ.

Last date for mahila nigama application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 21 ಆಗಸ್ಟ್ 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಸೆಪ್ಟಂಬರ್ 2024

How to apply for mahila nigama yojana-ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಮೇಲೆ ವಿವರಿಸಿರುವ ಎಲ್ಲಾ ಯೋಜನೆಗಳಿಗೆ ಅರ್ಹ ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: RVNL Recruitment 2024- ರೈಲು ವಿಕಾಸ ನಿಗಮದಲ್ಲಿ ವ್ಯವಸ್ಥಾಪಕ ಹುದ್ದೆಗಳ ಭರ್ತಿ!ವೇತನ 2 ಲಕ್ಷ ರೂ. ವರೆಗೆ ಸಂಬಳ!

Online application link-ಅರ್ಜಿ ಸಲ್ಲಿಸಲು ಲಿಂಕ್: Appy Now

Documents for online application-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ ಪ್ರತಿ.
2) ಬ್ಯಾಂಕ್ ಪಾಸ್ ಬುಕ್.
3) ರೇಶನ್ ಕಾರ್ಡ.
4) ಪೋಟೊ.
5) ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

For more information-ಹೆಚ್ಚಿನ ಮಾಹಿತಿಗಾಗಿ:

  • official notification copy-ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಲು ಲಿಂಕ್: Download Now
  • mahila nigama office address-ಜಿಲ್ಲಾವಾರು ಕಚೇರಿಗಳ ವಿಳಾಸ: Click here
  • mahila nigama official website-ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವೆಬ್ಸೈಟ್: Click here
  • mahila nigama helpline-ಸಹಾಯವಾಣಿ: 080-26632973

- Advertisment -
LATEST ARTICLES

Related Articles

- Advertisment -

Most Popular

- Advertisment -