Mahindra Sarathi Scholarship-ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

December 8, 2025 | Siddesh
Mahindra Sarathi Scholarship-ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ವತಿಯಿಂದ 2025-2026 ನೇ ಸಾಲಿನಲ್ಲಿ ಮಹೀಂದ್ರಾ ಸಾರಥಿ(Mahindra Sarathi Scholarship)ಅಭಿಯಾನದ ಅಡಿಯಲ್ಲಿ 11 ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ ಓದುತ್ತಿರುವ ಬಾಲಕಿಯರಿಗೆ 10,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಆರ್ಥಿಕ ಸವಾಲುಗಳ ಹೊರತಾಗಿಯೂ ತಮ್ಮ ಶಿಕ್ಷಣವನ್ನು(Mahindra CSR Scholarship) ಮುಂದುವರಿಸಲು ದೃಢನಿಶ್ಚಯ ಹೊಂದಿರುವ ಟ್ರಕ್ ಚಾಲಕರ ಹೆಣ್ಣುಮಕ್ಕಳನ್ನು ಬೆಂಬಲಿಸಲು ಸಮರ್ಪಿಸಲಾಗಿದೆ. ಟ್ರಕ್ ಚಾಲಕ ಕುಟುಂಬಗಳ ಅನೇಕ ಹುಡುಗಿಯರು ಆರ್ಥಿಕ ಸಂಕಷ್ಟಗಳಿಂದಾಗಿ ತಮ್ಮ ಅಧ್ಯಯನವನ್ನು ನಿಲ್ಲಿಸುವ ಕಷ್ಟಕರ ಆಯ್ಕೆಯನ್ನು ಎದುರಿಸುತ್ತಾರೆ.

ಇದನ್ನೂ ಓದಿ: Business Loan Subsidy-ಮಹಿಳಾ ನಿಗಮದಿಂದ ಮಹಿಳೆಯರಿಗೆ ಸ್ವಂತ ಉದ್ದಿಮೆ ಆರಂಭಿಸಲು ₹1.5 ಲಕ್ಷ ಸಬ್ಸಿಡಿ!

ಆದ್ದರಿಂದ ಮಹೀಂದ್ರಾ ಸಾರಥಿ ಅಭಿಯಾನವು10,000 ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಅದನ್ನು ಬದಲಾಯಿಸುವ ಗುರಿಯನ್ನು ಹೊಂದಿದ್ದು, ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದಲ್ಲದೆ, ಅವರ ಶೈಕ್ಷಣಿಕ ಕನಸುಗಳನ್ನು ಆತ್ಮವಿಶ್ವಾಸದಿಂದ ಮುಂದುವರಿಸಲು ಸಹಾಯಕವಾಗಿದೆ.

ಪ್ರಸ್ತುತ ಈ ಲೇಖನದಲ್ಲಿ ಅರ್ಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವೆಲ್ಲ ಮಾನದಂಡಗಳನ್ನು ಪಾಲನೆ ಮಾಡಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Free Sewing Machine-ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Last date to apply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2025

Scholorship Amount-ಇದರ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಮಹೀಂದ್ರಾ ಲಿಮಿಟೆಡ್‌ನ ವತಿಯಿಂದ ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿನಿಯರಿಗೆ 10,000 ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

Who can Aapply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ ವಿದ್ಯಾರ್ಥಿನಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯು 11 ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅರ್ಜಿದಾರರು ಮಾನ್ಯ ವಾಣಿಜ್ಯ ಚಾಲನಾ ಪರವಾನಗಿ ಹೊಂದಿರುವ ಟ್ರಕ್ ಅಥವಾ ಬಸ್ ಚಾಲಕನ ಮಗಳಾಗಿರಬೇಕು .

ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Kotak Scholarship-ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ₹1.5 ಲಕ್ಷ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Documents required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ವಿದ್ಯಾರ್ಥಿನಿಯ ಆಧಾರ್ ಕಾರ್ಡ/Aadhar Card

ಹಿಂದಿನ ವರ್ಷದ ಶೈಕ್ಷಣಿಕ ಅಂಕಪಟ್ಟಿ/Marks Card

10ನೇ ತರಗತಿಯ ಅಂಕಪಟ್ಟಿ/10 Marks card.

ಪ್ರಸ್ತುತ ವರ್ಷದ ಪ್ರವೇಶ ಪತ್ರ/Entrance Certificate.

ಬ್ಯಾಂಕ್ ಪಾಸ್‌ಬುಕ್/Bank Passbook.

ಫೋಟೊ/Photocopy.

ಇದನ್ನೂ ಓದಿ: Best Organic Farmer-ಉತ್ತಮ ಸಾವಯವ ಕೃಷಿ ಪದ್ದತಿ ಅಳವಡಿಸಿಕೊಂಡ ರೈತರಿಗೆ 50,000/- ಮೊತ್ತದ ಪ್ರಶಸ್ತಿ!

ಇದನ್ನೂ ಓದಿ: Solar Pumpset Subsidy-ಶೇ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ ಸೆಟ್ ಇಂದೇ ಅರ್ಜಿ ಸಲ್ಲಿಸಿ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನಗಳು:

ಮಹೀಂದ್ರಾ ಲಿಮಿಟೆಡ್‌ನ ವತಿಯಿಂದ ಮಹೀಂದ್ರಾ ಸಾರಥಿ ಅಭಿಯಾನದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿನಿಯರಿಗೆ ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಪಾಲನೆ ಮಾಡಿ ಅರ್ಜಿ ಸಲ್ಲಿಸಬಹುದು.

Step-1: ವಿದ್ಯಾರ್ಥಿನಿಯರು ಮೊದಲು ಇಲ್ಲಿ ಕ್ಲಿಕ್ " Online Application " ಮಾಡಿ ಅಧಿಕೃತ ವಿದ್ಯಾರ್ಥಿವೇತನದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಅದೇ ಪುಟದಲ್ಲಿ ಕಾಣಿಸುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ ಮೊದಲ ಬಾರಿಗೆ ಈ ತಂತ್ರಾಂಶವನ್ನು ಭೇಟಿ ನೀಡುತ್ತಿರುವ ವಿದ್ಯಾರ್ಥಿಗಳು “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಮಾಡಿ User ID ಮತ್ತು Password ಅನ್ನು ರಚನೆ ಮಾಡಿಕೊಂಡು ಹೊಸ ಖಾತೆಯನ್ನು ರಚಿಸಿಕೊಂಡು ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.

Step-3: “Login” ಆದ ನಂತರ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಇಲ್ಲಿ ಅವಶ್ಯವಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: TATA Scholarship-ಟಾಟಾ ಗ್ರೂಪ್‌ ಕಂಪನಿ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ 15,000/- ವಿದ್ಯಾರ್ಥಿವೇತನ!

More Information-ವಿದ್ಯಾರ್ಥಿವೇತನ ಯೋಜನೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: