Marriage Registration-ಮದುವೆ ನೋಂದಣಿ ಈಗ ಮತ್ತಷ್ಟು ಸುಲಭ! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ!

February 27, 2026 | Siddesh
Marriage Registration-ಮದುವೆ ನೋಂದಣಿ ಈಗ ಮತ್ತಷ್ಟು ಸುಲಭ! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ!
Share Now:

ಇಂದಿನ ಈ ಡಿಜಿಟಲ್ ಯುಗದಲ್ಲಿ ಸರ್ಕಾರಿ ಸೇವೆಗಳು ಇಂದು ಜನರ ಮನೆ ಬಾಗಿಲಿಗೆ ಬಂದು ಸೇರುತ್ತವೆ ಎಂದು ಹೇಳಿದರೆ ತಪ್ಪಾಗಲಾರದು ಈ ಹಿಂದೆ ಮದುವೆ ಪ್ರಮಾಣ ಪತ್ರವನ್ನು(Online Marriage Registration) ಪಡೆಯಬೇಕೆಂದರೆ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಿದ್ದಲ್ಲ ಆದರೆ ಈಗ ಈ ವ್ಯವಸ್ಥೆಯು ಬದಲಾಗಿದೆ. ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಮದುವೆ ಪ್ರಮಾಣ ಪತ್ರವನ್ನು ಕಾವೇರಿ 2.0 ಪೋರ್ಟಲ್(Kaveri Portal) ಅನ್ನು ಬಳಸಿಕೊಂಡು ದಂಪತಿಗಳು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಹೇಗೆ ನೋಂದಣಿ ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆಯಿಂದ ಅವಕಾಶ ನೀಡಲಾಗಿದ್ದು ಎಂಬುದನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Online Land Documents-'ಇ-ಚಾವಡಿ' ಮೂಲಕ ನಿಮ್ಮ ಗ್ರಾಮದ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಯಲ್ಲಿ!

ಈ ಮದುವೆ ಪ್ರಮಾಣ ಪತ್ರ ಎಂದರೆ ಕೇವಲ ಒಂದು ಕಾಗದದ ತುಣುಕಲ್ಲ ಇದು ಇಬ್ಬರೂ ದಂಪತಿಗಳ ನಡುವಿನ ಸಂಬಂಧವನ್ನು ಗುರುತಿಸುವ ಕಾನೂನು ಬದ್ಧವಾದ ದಾಖಲೆಯಾಗಿದೆ. ಪ್ರಸ್ತುತ ಈ ಲೇಖನದಲ್ಲಿ ಆನ್ಲೈನ್ ಮೂಲಕ ಮದುವೆ ಪ್ರಮಾಣ ಪತ್ರವನ್ನು(Marriage Registration Application) ಪಡೆಯುವುದು ಹೇಗೆ? ನೋಂದಣಿಯನ್ನು ಮಾಡಲು ಅಗತ್ಯ ದಾಖಲಾತಿಗಳಾವುವು. ಈ ಮದುವೆ ಪ್ರಮಾಣ ಪತ್ರದಿಂದಾಗುವ ಪ್ರಯೋಜನಗಳಾವುವು ಇನ್ನಿತರ ಹೆಚ್ಚಿನ ಮಾಹಿತಿಯನ್ನು ತಿಳಿಸಲಾಗಿದೆ.

Marriage Registration In Karnataka-ಮದುವೆ ನೋಂದಣಿಯ ವಿಧಗಳಾವುವು?

ಭಾರತದಲ್ಲಿ ಪ್ರಮುಖವಾಗಿ ಮದುವೆ ನೋಂದಣಿಯನ್ನು ಮಾಡಲು ಈ ಕೆಳಗೆ ತಿಳಿಸಿದ ಎರಡು ಕಾಯ್ದೆಗಳ ಅಡಿಯಲ್ಲಿ ನೋಂದಣಿಯನ್ನು ಮಾಡಬಹುದು :

1) ಹಿಂದೂ ವಿವಾಹ ಕಾಯ್ದೆ 1955:

ಈ ಕಾಯ್ದೆಯ ಅಡಿಯಲ್ಲಿ ಹುಡುಗ ಹುಡುಗಿ ಇಬ್ಬರು ಸಹ ಇಂದು ಬೌದ್ಧ ಜೈನ ಅಥವಾ ಸಿಖ್ ಧರ್ಮಕ್ಕೆ ಸೇರಿದವರಾಗಿರಬೇಕು.

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

2) ವಿಶೇಷ ವಿವಾಹ ಕಾಯ್ದೆ 1954:

ದಂಪತಿಗಳು ಇಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರೆ ಅಥವಾ ಅಂತರ್ಧರ್ಮಿಯ ವಿವಾಹವಾಗಿದ್ದರೆ ಈ ಕಾಯ್ದೆಯಡಿ ನೊಂದಣಿ ಮಾಡಬೇಕು.

Documents For Marriage Registration-ಮದುವೆ ನೋಂದಣಿಯನ್ನು ಮಾಡಲು ಅಗತ್ಯ ದಾಖಲಾತಿ ಗಳಾವುವು?

  • ವಧು ಹಾಗೂ ವರನ ಆಧಾರ್ ಕಾರ್ಡ್/Aadhar Card
  • ಮತದಾರರ ಗುರುತಿನ ಚೀಟಿ/Voter Id
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ/SSLC Marks Card
  • ಜನನ ಪ್ರಮಾಣ ಪತ್ರ/Birth Certificate (ವರನಿಗೆ 21 ವರ್ಷ ವಧುವಿಗೆ 18 ವರ್ಷ ಆಗಿರಬೇಕು)
  • ರೇಷನ್ ಕಾರ್ಡ್/Ration Card
  • ಮದುವೆ ಆಮಂತ್ರಣ ಪತ್ರ/Marriage Invitation Card
  • ಮದುವೆಯ ಫೋಟೋಗಳು/Marriage Photo
  • ಇಬ್ಬರು ಸಾಕ್ಷಿಗಳು ಹಾಗೂ ಅವರ ಗುರುತಿನ ಚೀಟಿ

ಇದನ್ನೂ ಓದಿ: Mutation-ಕಂದಾಯ ಇಲಾಖೆ ಇನ್ಮುಂದೆ ಮ್ಯುಟೇಶನ್ ಪ್ರಕ್ರಿಯೆ ಸರಳ ಮತ್ತು ಸುಲಭ!

Marriage Registration Benefits-ಮದುವೆ ಪ್ರಮಾಣ ಪತ್ರದಿಂದಾಗುವ ಪ್ರಯೋಜನಗಳಾವುವು?

ಕಾನೂನು ಬದ್ಧವಾಗಿ ಪ್ರತಿ ಪತ್ನಿ ಎಂದು ಸರ್ಕಾರದ ದೃಷ್ಟಿಯಲ್ಲಿ ಸಾಬೀತುಪಡಿಸಲು ಈ ಪತ್ರ ಪ್ರಮುಖವಾಗಿದೆ.

ಬ್ಯಾಂಕಿಂಗ್ ಸೇವೆಗಳು ಹಾಗೂ ಇನ್ಸೂರೆನ್ಸ್ ಕ್ಲೈಮ್ ಮಾಡಲು ಸಹಾಯವಾಗುತ್ತದೆ.

ಪ್ರತಿ ಅಥವಾ ಪತ್ನಿಯ ಆಸ್ತಿ ಅಥವಾ ವಾರ ಸತ್ವ ಹಕ್ಕು ಪಡೆಯಲು ಅಗತ್ಯವಾದ ಪ್ರಮುಖ ದಾಖಲೆಯಾಗಿದೆ.

ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಪ್ರಮುಖ ಪತ್ರ ಇದಾಗಿದೆ.

ತಮ್ಮ ಮಕ್ಕಳ ಜನನ ಪ್ರಮಾಣ ಪತ್ರದಲ್ಲಿ ತಾಯಿ ತಂದೆ ವಿವರಗಳನ್ನು ದಾಖಲೆ ಮಾಡಲು ಸಹಾಯಕವಾಗಿದೆ.

ಇದನ್ನೂ ಓದಿ: Free Sewing Training-ಕೆನರಾ ಬ್ಯಾಂಕ್‌ನಿಂದ 30 ದಿನದ ಉಚಿತ ಹೊಲಿಗೆ ತರಬೇತಿಗೆ ಅರ್ಜಿ!

Online Marriage Registration Method-ಆನ್ಲೈನ್ ಮೂಲಕ ನೋಂದಣಿ ಮಾಡುವ ವಿಧಾನ ಹೇಗೆ?

ಕರ್ನಾಟಕದಲ್ಲಿ Kaveri online services ( kaveri 2.0) ಪೋರ್ಟಲಿಗೆ ಭೇಟಿ ನೀಡಿ ಆನ್ಲೈನ್ ಮೂಲಕ ನೊಂದಣಿಯನ್ನು ಮಾಡಬಹುದು.

Step-1: ಅರ್ಜಿದಾರರು ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ Online Marriage Registration Application ಮೇಲೆ ಕ್ಲಿಕ್ ಮಾಡಿ ಕಾವೇರಿ 2.0 ವೆಬ್ಸೈಟ್ಗೆ ಭೇಟಿ ನೀಡಿ.

ಇದನ್ನೂ ಓದಿ: Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

Online Marriage Registration

Step-2: ವೆಬ್ಸೈಟ್ ಗೆ ಬೇಟಿ ನೀಡಿದ ನಂತರ " Register as a new user" ಬಟನ್ ಮೇಲೆ ಕ್ಲಿಕ್ ಮಾಡಿ ಹೆಸರು ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಹೊಸ ಖಾತೆಯನ್ನು ರಚಿಸಿ. ನಂತರ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಆಗಬೇಕು.

Step-3: ಲಾಗಿನ್ ಆದ ನಂತರ ಅದೇ ಪುಟದಲ್ಲಿ ಕಾಣುವ "registration of marriage" ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

Step-4: ತದನಂತರ ವಧು ಹಾಗೂ ವರನ ವಯಕ್ತಿಕ ವಿವರಗಳನ್ನು ಹಾಗೂ ಮದುವೆ ದಿನಾಂಕ ಸ್ಥಳವನ್ನು ಭರ್ತಿ ಮಾಡಿ.

ಇದನ್ನೂ ಓದಿ: Agniveer Recruitment-2026ರ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ!ಇಂದೇ ನೋಂದಣಿ ಮಾಡಿ!

Step-5: ನಂತರ ನೀವು ಯಾವ ಉಪನಂದನಾಧಿಕಾರಿ ಕಚೇರಿಯಲ್ಲಿ ನೊಂದಣಿ ಮಾಡಲು ಇಚ್ಛಿಸುತ್ತಿರೋ ಆ ಆಯ್ಕೆಯನ್ನು ಕ್ಲಿಕ್ ಮಾಡಿ ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು.

Step-6: ಅರ್ಜಿ ಸಲ್ಲಿಸಿದ ನಂತರ ನಿಗದಿಪಡಿಸಿದ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ ಕಚೇರಿಗೆ ಭೇಟಿ ನೀಡಲು ದಿನಾಂಕ ಹಾಗೂ ಸಮಯವನ್ನು ಕಾಯ್ದಿರಿಸಿಕೊಳ್ಳಬೇಕು.

Step-7: ಕಚೇರಿಗೆ ಭೇಟಿ ಮಾಡಿದ ನಂತರ ಅರ್ಜಿಯನ್ನು ಪರಿಶೀಲಿಸಿದ ನಂತರ ನಿಮ್ಮ ಮೊಬೈಲಿಗೆ ಎಸ್ಎಮ್ಎಸ್ ಮೂಲಕ ಸಂದೇಶ ಬರುತ್ತದೆ ನೀವು ಅದನ್ನು ಬಳಸಿ ಕಾವೇರಿ ಪೋರ್ಟಲ್ಲಿಗೆ ಲಾಗಿನ್ ಆಗಿ "Download digitally signed certificate " ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನೊಂದಣಿ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: