Model Question Papers-SSLC ಮಾದರಿ ಪ್ರಶ್ನೆ-ಉತ್ತರ ಪತ್ರಿಕೆ ಬಿಡುಗಡೆ! ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?

February 18, 2026 | Siddesh
Model Question Papers-SSLC ಮಾದರಿ ಪ್ರಶ್ನೆ-ಉತ್ತರ ಪತ್ರಿಕೆ ಬಿಡುಗಡೆ! ಮೊಬೈಲ್ ನಲ್ಲೇ ಡೌನ್ಲೋಡ್ ಮಾಡುವುದು ಹೇಗೆ?
Share Now:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಪರೀಕ್ಷೆ ಹತ್ತಿರ ಬರುತ್ತಿದ್ದಂತೆ(SSLC Model Question Papers) ಸಹಜವಾಗಿಯೇ ಆತಂಕ ಮೂಡುವುದು ಸಾಮಾನ್ಯ. ಈ ಆತಂಕವನ್ನು ದೂರ ಮಾಡಿ ಆತ್ಮವಿಶ್ವಾಸ ಹೆಚ್ಚಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಬಿಡುಗಡೆ ಮಾಡಿದೆ. ಇದು ಕೇವಲ ಪ್ರಶ್ನೆಗಳ ಗುಚ್ಛವಲ್ಲ, ಬದಲಾಗಿ ಪರೀಕ್ಷೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಇರುವ ದಿಕ್ಸೂಚಿಯಾಗಿದೆ.

ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯಲ್ಲಿ(SSLC Exam In Karnataka) ಯಾವ ರೀತಿಯ ಪ್ರಶ್ನೆಗಳು ಬರಬಹುದು, ಅಂಕಗಳ ವಿಭಜನೆ ಹೇಗಿರುತ್ತದೆ ಮತ್ತು ಸಮಯ ನಿರ್ವಹಣೆ ಮಾಡುವುದು ಹೇಗೆ ಎಂಬ ಸ್ಪಷ್ಟ ಚಿತ್ರಣ ಸಿಗುತ್ತದೆ. ಅದರಲ್ಲೂ ಮಂಡಳಿಯೇ(SSLC Model Question Papers Download)ನೀಡಿರುವ ಮಾದರಿ ಉತ್ತರ ಪತ್ರಿಕೆಗಳನ್ನು ಗಮನಿಸಿದರೆ, ಒಂದು ಪ್ರಶ್ನೆಗೆ ಎಷ್ಟು ಮತ್ತು ಹೇಗೆ ಉತ್ತರಿಸಿದರೆ ಪೂರ್ಣ ಅಂಕಗಳನ್ನು ಪಡೆಯಬಹುದು ಎಂಬ ರಹಸ್ಯ ನಿಮಗರ್ಥವಾಗುತ್ತದೆ. ಇದು ನಿಮ್ಮ ಓದಿನ ಹಾದಿಯನ್ನು ಸುಗಮಗೊಳಿಸುತ್ತದೆ.

ಇದನ್ನೂ ಓದಿ: lost property documents-ಆಸ್ತಿ ಪತ್ರ ಕಳೆದುಹೋಗಿದೆಯೇ? ಮರಳಿ ಪಡೆಯುವುದು ಹೇಗೆ ಇಲ್ಲಿದೆ ಮಾಹಿತಿ!

ಈಗಿನ ಡಿಜಿಟಲ್ ಯುಗದಲ್ಲಿ ಈ ಎಲ್ಲ ಮಾಹಿತಿಗಳು ನಿಮ್ಮ ಬೆರಳ ತುದಿಯಲ್ಲೇ ಇವೆ. ವಿದ್ಯಾರ್ಥಿಗಳು ಸೈಬರ್ ಸೆಂಟರ್‌ಗಳಿಗೆ ಅಲೆಯುವ ಅಗತ್ಯವಿಲ್ಲದೆ, ತಮ್ಮಲ್ಲಿರುವ ಸ್ಮಾರ್ಟ್‌ಫೋನ್ ಮೂಲಕವೇ ಅಧಿಕೃತ ವೆಬ್‌ಸೈಟ್‌ನಿಂದ(SSLC) ಇವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸರಳ ಸೌಲಭ್ಯವನ್ನು ಬಳಸಿಕೊಂಡು ಯೋಜಿತವಾಗಿ ಅಭ್ಯಾಸ ಮಾಡಿದರೆ ಅತ್ಯುತ್ತಮ ಅಂಕಗಳನ್ನು ಗಳಿಸುವುದು ಖಂಡಿತ ಕಷ್ಟವಲ್ಲ.

Model Question Papers and Model Answers for SSLC Examinations-ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ವಿದ್ಯಾರ್ಥಿಗಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ SSLC ಮಾದರಿ ಪ್ರಶ್ನೆ-ಉತ್ತರ ಪತ್ರಿಕೆಗಳನ್ನು ನಿಮ್ಮ ಮೊಬೈಲ್ ಮೂಲಕವೇ ಈ ಕೆಳಗಿನ ಹಂತಗಳನ್ನು ಅನುಸರಿಸಿ https://kseeb.karnataka.gov.in/ ವೆಬ್ಸೈಟ್ ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು:

Step-1: ಪ್ರಥಮ ಹಂತದಲ್ಲಿ ವಿದ್ಯಾರ್ಥಿಗಲು ಈ SSLC Model Question Papers and Model Answers ಬಟನ್ ಮೇಲೆ ಕ್ಲಿಕ್ ಮಾಡಿ ಮಂಡಳಿಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Agriculture Land Sketch-ರೈತರಿಗೊಂದು ಸಿಹಿಸುದ್ದಿ: ನಿಮ್ಮ ಜಮೀನಿನ ‘ಇ-ಸ್ಕೆಚ್’ ಈಗ ಮೊಬೈಲ್‌ನಲ್ಲೇ ಲಭ್ಯ!

Model Question Papers

ಇದನ್ನೂ ಓದಿ: Toilet Room Subsidy-ಶೌಚಾಲಯ ನಿರ್ಮಾಣಕ್ಕೆ 20 ಸಾವಿರ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಕ್ರ.ಸಂ 7 ರಲ್ಲಿ ಕಾಣಿಸುವ "ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಉತ್ತರಗಳು
2025 – 26/Model Question Papers and Model Answers for 2025-26 SSLC Examinations" ಆಯ್ಕೆಯ ಮುಂದಿನ ಕಾಲಂ ನಲ್ಲಿರುವ Click Here ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಈ ಪೇಜ್ ನಲ್ಲಿ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಮಾದರಿ ಉತ್ತರಗಳು ಲಭ್ಯವಿದ್ದು ಒಂದು ವಿಷಯದ ಬಟನ್ ಮೇಲೆ ಕ್ಲಿಕ್ ಮಾಡಿ Download ಬಟನ್ ಮೇಲೆ ಕ್ಲಿಕ್ ಮಾಡಿ ಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಬಹುದು.

ಇದನ್ನೂ ಓದಿ: Mudra Loan-ಮುದ್ರಾ ಯೋಜನೆಯಡಿ ಸ್ವಂತ ಉದ್ದಿಮೆಗೆ ಸಾಲ ಪಡೆಯುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ!

SSLC Centum Answer Papers-2025: ಶೇ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಸಹ ಲಭ್ಯ:

ಹಿಂದಿನ ಶೈಕ್ಷಣಿಕ ಸಾಲಿನಲ್ಲಿ SSLC ಅಲ್ಲಿ ವಿಷಯವಾರು ಶೇ 100 ಕ್ಕೆ 100 ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಸಹ ಈ ಜಾಲತಾಣದಲ್ಲಿ ಮಂಡಳಿಯಿಂದ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು ಈ ಕೆಳಗಿನ ವಿಧಾನವನ್ನು ಅನುಸರಿಸಿ ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಬಹುದು.

Step-1: ಮೊದಲಿಗೆ ಈ ಲಿಂಕ್ SSLC Old Student Answer Papers Download ಮೇಲೆ ಕ್ಲಿಕ್ ಮಾಡಿ ಅಧಿಕೃತ ಮಂಡಳಿಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

Step-2: ಈ ಪುಟದಲ್ಲಿ ಕೆಳಗೆ ಕ್ರ.ಸಂ 11 ರಲ್ಲಿ ಕಾಣಿಸುವ "2024 - 25 ಎಸ್.ಎಸ್.‌ಎಲ್.ಸಿ ಯ ಶೇಕಡ 100 ಅಂಕ ಪಡೆದ ಉತ್ತರ ಪತ್ರಿಕೆಗಳು" ಬಟನ್ ಮುಂದೆ ಇರುವ Click Here ಬಟನ್ ಮೇಲೆ ಕ್ಲಿಕ್ ಮಾಡಿ

Step-3: ಇಲ್ಲಿ ವಿಷಯವಾರು ಆಯ್ಕೆಗಳು ಇಗುತ್ತವೆ ಒಂದೊಂದರ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆ ವಿಷಯದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಯ ಉತ್ತರ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು ನೀವು ಅಭ್ಯಾಸ ಮಾಡಬಹುದು.

ಇದನ್ನೂ ಓದಿ: PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

Study Method-ಅಭ್ಯಾಸ ಮಾಡುವ ಸರಿಯಾದ ವಿಧಾನ:

ಕೇವಲ ಪ್ರಶ್ನೆಗಳನ್ನು ಓದಬೇಡಿ. ಪರೀಕ್ಷಾ ಕೊಠಡಿಯಲ್ಲಿ ಕುಳಿತಂತೆ ಭಾವಿಸಿ, 3 ಗಂಟೆಗಳ ಸಮಯ ನಿಗದಿಪಡಿಸಿ ಉತ್ತರಿಸಲು ಪ್ರಯತ್ನಿಸಿ.

ನೀವು ಬರೆದ ಉತ್ತರಗಳನ್ನು ಮಂಡಳಿ ಬಿಡುಗಡೆ ಮಾಡಿದ ಮಾದರಿ ಉತ್ತರಗಳೊಂದಿಗೆ ತಾಳೆ ನೋಡಿ. ಎಲ್ಲಿ ತಪ್ಪು ಮಾಡಿದ್ದೀರಿ ಎಂಬುದು ತಿಳಿಯುತ್ತದೆ.

ಯಾವ ಭಾಗದಲ್ಲಿ ನಿಮಗೆ ಹೆಚ್ಚು ಅಂಕ ಕಡಿತವಾಗುತ್ತಿದೆಯೋ, ಆ ಪಾಠಗಳನ್ನು ಮತ್ತೊಮ್ಮೆ ಆಳವಾಗಿ ಓದಿ. ವಿದ್ಯಾರ್ಥಿಗಳೇ, ನಿಮ್ಮಲ್ಲಿರಲಿ ಆತ್ಮವಿಶ್ವಾಸ!

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಜಮಾ ವಿವರವನ್ನು ತಿಳಿಯುವುದು ಹೇಗೆ?

ಪರೀಕ್ಷೆ ಎಂದರೆ ಭಯವಲ್ಲ, ಅದು ನಿಮ್ಮ ಜ್ಞಾನದ ಪ್ರದರ್ಶನವಷ್ಟೇ. ಈ ಕೆಳಗಿನ ಅಂಶಗಳನ್ನು ನೆನಪಿಡಿ:

ಧೈರ್ಯವಾಗಿರಿ: ಪರೀಕ್ಷೆಯ ಬಗ್ಗೆ ಅತಿಯಾದ ಆತಂಕ ಬೇಡ. "ನಾನು ಓದಿದ್ದೇನೆ, ನಾನು ಬರೆಯಬಲ್ಲೆ" ಎಂಬ ಧನಾತ್ಮಕ ಭಾವನೆ ನಿಮ್ಮಲ್ಲಿರಲಿ.

ಯೋಜಿತ ಓದು: ಕೊನೆಯ ಕ್ಷಣದ ಗಡಿಬಿಡಿಗಿಂತ ದಿನಕ್ಕೆ ಇಷ್ಟು ಗಂಟೆ ಎಂದು ಪ್ರತಿ ವಿಷಯಕ್ಕೂ ಸಮಯ ಮೀಸಲಿಡಿ.

ಆರೋಗ್ಯದ ಕಡೆ ಗಮನವಿರಲಿ: ಸಾಕಷ್ಟು ನೀರು ಕುಡಿಯಿರಿ, ಪೌಷ್ಟಿಕ ಆಹಾರ ಸೇವಿಸಿ ಮತ್ತು ಕನಿಷ್ಠ 6-7 ಗಂಟೆಗಳ ನಿದ್ರೆ ಮಾಡಿ. ದೈಹಿಕ ಆರೋಗ್ಯವಾಗಿದ್ದರೆ ಮನಸ್ಸು ಚುರುಕಾಗಿ ಕೆಲಸ ಮಾಡುತ್ತದೆ.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ. ಯಶಸ್ಸು ನಿಮ್ಮದಾಗಲಿ!

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: