MSP Scheme in Karnataka-ಬೆಂಬಲ ಬೆಲೆಯಲ್ಲಿ ಶೇಂಗಾ,ಸೂರ್ಯಕಾಂತಿ ಸೇರಿದಂತೆ 5 ಉತ್ಪನ್ನಗಳ ಖರೀದಿ ಆರಂಭ! ಬೆಲೆ ಎಷ್ಟು?

October 13, 2025 | Siddesh
MSP Scheme in Karnataka-ಬೆಂಬಲ ಬೆಲೆಯಲ್ಲಿ ಶೇಂಗಾ,ಸೂರ್ಯಕಾಂತಿ ಸೇರಿದಂತೆ 5 ಉತ್ಪನ್ನಗಳ ಖರೀದಿ ಆರಂಭ! ಬೆಲೆ ಎಷ್ಟು?
Share Now:

ಕರ್ನಾಟಕ ರಾಜ್ಯ ಸರಕಾರದ ಕೃಷಿ ಮಾರಾಟ ಇಲಾಕೆ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ(APMC) ವತಿಯಿಂದ 2025-26ನೇ ಸಾಲಿನ ಬೆಂಬಲ ಬೆಲೆ(MSP)ಯೋಜನೆಯಡಿ ಸೂರ್ಯಕಾಂತಿ,ಹೆಸರುಕಾಳು,ಉದ್ದು,ಸೋಯಾಬೀನ್,ಶೇಂಗಾ, ಒಟ್ಟೂ 5 ಉತ್ಪನ್ನಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ಆರಂಭಿಸಲು ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಪ್ರತಿ ವರ್ಷದಂತೆ ರೈತರ ಉತ್ಪನ್ನಕ್ಕೆ ಬೆಂಬಲ ಬೆಲೆಯನ್ನು(Bembala Bele Kharidi Kendra)ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಬೆಂಬಲ ಬೆಲೆ ಯೋಜನೆ ಅಡಿ ರೈತರಿಂದ ನೇರವಾಗಿ ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಲು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ತಮ್ಮ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Self Employment Loan Scheme-ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆಯಡಿ ಸಬ್ಸಿಡಿಯಲ್ಲಿ ₹2.0 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

ರೈತರು ಬೆಂಬಲ ಬೆಲೆಯಲ್ಲಿ(Minimum Support Price) ಪ್ರಸ್ತುತ ಸೂರ್ಯಕಾಂತಿ,ಹೆಸರುಕಾಳು,ಉದ್ದು,ಸೋಯಾಬೀನ್,ಶೇಂಗಾ, ಉತ್ಪನ್ನಗಳನ್ನು ಮಾರಾಟ ಮಾಡಲು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು ಇದಕ್ಕಾಗಿ ನೋಂದಣಿಯನ್ನು ಮಾಡಿಸಲು ಅನುಸರಿಸಬೇಕಾದ ಕ್ರಮಗಳೇನು? ಉತ್ಪನ್ನವಾರು ಸರಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಎಷ್ಟು? ನೋಂದಣಿ ಮಾಡಿಕೊಳ್ಳಲು ಅಗತ್ಯ ದಾಖಲೆಗಳೇನು? ಇನ್ನಿತರೆ ಅಗತ್ಯ ಮಾಹಿತಿಯನ್ನು ತಿಳಿಸಲಾಗಿದೆ.

Crop Wise MSP Price List-ಬೆಳೆವಾರು ಬೆಂಬಲ ಬೆಲೆ:

ಕೇಂದ್ರ ಸರಕಾರವು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಖರೀದಿ ಮಾಡಲು ನಿಗದಿಪಡಿಸಿರುವ ಬೆಳೆವಾರು ಬೆಂಬಲ ಬೆಲೆ ವಿವರ ಹೀಗಿದೆ:

  • ಸೂರ್ಯಕಾಂತಿ- ರೂ 7,721/-
  • ಹೆಸರುಕಾಳು- ರೂ 8,768/-
  • ಉದ್ದು- ರೂ 7,800/-
  • ಸೋಯಾಬೀನ್- ರೂ 5,328/-
  • ಶೇಂಗಾ- ರೂ 7,263/-

ಇದನ್ನೂ ಓದಿ: PM Svanidi Yojane 2025-ಪಿಎಂ ಸ್ವನಿಧಿ ಯೋಜನೆ ಎಂದರೇನು? ಎಷ್ಟು ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ!

Bembala Bele Yojane-ಯಾವೆಲ್ಲ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗಿದೆ?

ರಾಜ್ಯ ಕೃಷಿ ಮಾರಾಟ ಮಂಡಳಿಯಿಂದ ರಾಜ್ಯ ವಿವಿಧ ಜಿಲ್ಲೆಯಲ್ಲಿ ಸೂರ್ಯಕಾಂತಿ,ಹೆಸರುಕಾಳು,ಉದ್ದು,ಸೋಯಾಬೀನ್,ಶೇಂಗಾ ಉತ್ಪನ್ನಗಳನ್ನು ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು ಬೆಳೆವಾರು ಯಾವೆಲ್ಲ ಜಿಲ್ಲೆಯಲ್ಲಿ ಕೇಂದ್ರ ಆರಂಭಿಸಲಾದೆ ಎನ್ನುವ ವಿವರ ಹೀಗಿದೆ:

ಸೂರ್ಯಕಾಂತಿ:- ಬಾಗಲಕೋಟೆ,ಬಳ್ಳಾರಿ,ಮೈಸೂರು,ರಾಯಚೂರು,ವಿಜಯಪುರ,ವಿಜಯನಗರ ಮತ್ತು ಯಾದಗಿರಿ.
ಹೆಸರುಕಾಳು:- ಕಲಬುರಗಿ,ಯಾದಗಿರಿ,ಹಾವೇರಿ,ಗದಗ,ಬಾಗಲಕೋಟೆ,ಕೊಪ್ಪಳ,ಬೀದರ್,ಬೆಳಗಾವಿ,ವಿಜಯಪುರ,ತುಮಕೂರು,ಹಾಸನ,ಧಾರವಾಡ,ಮೈಸೂರು ಮತ್ತು ಚಾಮರಾಜನಗರ
ಉದ್ದು:- ಕಲಬುರಗಿ,ಬೀದರ್,ಯಾದಗಿರಿ,ಗದಗ,ಧಾರವಾಡ,ವಿಜಯಪುರ,ಬಾಗಲಕೋಟೆ ಮತ್ತು ಬೆಳಗಾವಿ
ಸೋಯಾಬೀನ್:- ಬೀದರ್,ಬೆಳಗಾವಿ,ಧಾರವಾಡ,ಹಾವೇರಿ,ಯಾದಗಿರಿ,ಕಲಬುರಗಿ ಮತ್ತು ಬಾಗಲಕೋಟೆ.
ಶೇಂಗಾ:- ಕೊಪ್ಪಳ,ಧಾರವಾಡ,ಹಾವೇರಿ,ಬಳ್ಳಾರಿ,ಚಿತ್ರದುರ್ಗ,ಗದಗ,ಬಾಗಲಕೋಟೆ,ದಾವಣಗೆರೆ,ರಾಯಚೂರು,ತುಮಕೂರು ಮತ್ತು ವಿಜಯನಗರ.

ಇದನ್ನೂ ಓದಿ: Bajaj scholarship 2025-ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 8 ಲಕ್ಷ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

    Minimum Support Price Scheme Notification-ಉತ್ಪನ್ನ ಖರೀದಿ ಕುರಿತು ಪ್ರಕಟಣೆ ಪ್ರತಿ:

    ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

    MSP Scheme in Karnataka

    ಇದನ್ನೂ ಓದಿ: SSLC Exam Fee-ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ! ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ?

    Minimum Support Price Registration-ನೋಂದಣಿ ಮಾಡಿಕೊಳ್ಳುವುದು ಹೇಗೆ?

    ರೈತರು ಸೂರ್ಯಕಾಂತಿ,ಹೆಸರುಕಾಳು,ಉದ್ದು,ಸೋಯಾಬೀನ್,ಶೇಂಗಾ ಉತ್ಪನ್ನಗಳನ್ನು ಬೆಂಬಲೆ ಬೆಲೆಯಲ್ಲಿ ಮಾರಾಟ ಮಾಡಲು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿ ತಪ್ಪಿದ್ದಲ್ಲಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಈ ನಿಟ್ಟಿನಲ್ಲಿ ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಅಗತ್ಯ ದಾಖಲೆಯನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಖರೀದಿ ಕೇಂದ್ರ ಅಥವಾ ನಿಮ್ಮ ತಾಲೂಕಿನ APMC ಕಚೇರಿ ಭೇಟಿ ಮಾಡಿ ಉತ್ಪನ್ನವನ್ನು ಮಾರಾಟ ಮಾಡಲು ನೋಂದಣಿಯನ್ನು ಮಾಡಿಕೊಳ್ಳಿ.

    ಇದನ್ನೂ ಓದಿ: Vidyasiri Scholarship 2025-ವಿದ್ಯಾ ಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

    Documents For Farmer Registration-ನೋಂದಣಿಗೆ ಅಗತ್ಯ ದಾಖಲೆಗಳು:

    ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂಚಿತವಾಗಿ ನೋಂದಣಿಯನ್ನು ಮಾಡಿಕೊಳ್ಳಲು ರೈತರು ಒದಗಿಸಬೇಕಾದ ದಾಖಲೆಗಳು ಹೀಗಿವೆ:

    • ರೈತರ ಆಧಾರ್ ಕಾರ್ಡ
    • ಬ್ಯಾಂಕ್ ಪಾಸ್ ಬುಕ್
    • ಜಮೀನಿನ ಪಹಣಿ
    • ಜಮೀನಿನ ಮಾಲೀಕರು ಖುದ್ದು ಹಾಜರಿದ್ದು ಬೆರಳಚ್ಚನ್ನು ನೀಡಬೇಕು.
    • ಮೊಬೈಲ್ ನಂಬರ್

    Bembala Bele Yojane Helpline-ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಹಾಯವಾಣಿ- 1800 425 1522
    Krishi Marata Ilake Website-ಅಧಿಕೃತ ವೆಬ್ಸೈಟ್-Click Here

    Tags:
    WhatsApp Group Join Now
    Telegram Group Join Now
    Siddesh

    Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

    Visit Website
    Share Now: