HomeNew postsಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ.

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ.

ಉದ್ಯೋಗ ಖಾತ್ರಿ ಯೋಜನೆಯಡಿ ಕುರಿ, ದನ, ಕೋಳಿ, ಹಂದಿ ಸಾಕಾಣಿಕೆಗೆ ಶೆಡ್ ನಿರ್ಮಾಣ ಮಾಡಲು ಸಹಾಯಧನ ಪಡೆಯಬವುದು. 57,000 ಸಾವಿರದಿಂದ 87,000 ಸಾವಿರದ ವರೆಗೆ ಈ ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ.

ಉದ್ಯೋಗ ಖಾತ್ರಿಯಡಿ ಶೆಡ್ ನಿರ್ಮಿಸಲು ಸಹಾಯಧನ ವಿವರ ಹೀಗಿದೆ:

ದನದ ಶೆಡ್ ನಿರ್ಮಾಣ ರೂ.57,000/-
ಕುರಿ/ಮೇಕೆ ಶೆಡ್ ನಿರ್ಮಾಣ ರೂ.70,000/-
ಕೋಳಿ ಶೆಡ್‌ ನಿರ್ಮಾಣ ರೂ. 60000/-
ಹಂದಿ ಶೆಡ್ ನಿರ್ಮಾಣ ರೂ. 87000/-
ಅಜೋಲ ತೊಟ್ಟಿ ನಿರ್ಮಾಣ ರೂ. 16000/-

ಎಲ್ಲಿ ಅರ್ಜಿ ಸಲ್ಲಿಸಬೇಕು?

ಈಗ ಚುನಾವಣೆ ಇರುವುದರಿಂದ ಈ ಚುನವಾಣೆ ಮುಗಿದ ನಂತರ ನಿಮ್ಮ ಗ್ರಾಮ ಪಂಚಾಯತ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಕ್ರಿಯ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿಸಬೇಕು ಇದಾದ ನಂತರ ನೀವು ಕಾಮಗಾರಿಯನ್ನು ಪ್ರಾರಂಭಿಸಬಹುದು.

ಇದನ್ನೂ ಓದಿ: ನರೇಗಾ ಯೋಜನೆ ವೈಯಕ್ತಿಕ ಕಾಮಗಾರಿಗಳ ದರ ಪರಿಷ್ಕರಣೆ.

ಇದರ ಜೊತೆಗೆ ಆರ್ಥಿಕ ಸ್ವಾವಲಂಬನೆಗಾಗಿ ಉದ್ಯೋಗ ಖಾತರಿ ಯೋಜನೆಯಡಿ ನರ್ಸರಿ ಸಸಿಗಳನ್ನು ಬೆಳೆಸಲು ಮಹಿಳಾ ಸ್ವಸಹಾಯ ಸಂಘಗಳಿಗೂ ಅವಕಾಶವಿರುತ್ತದೆ. ಅಪೌಷ್ಠಿಕತೆ ನಿವಾರಣೆಗೆ ವೈಯಕ್ತಿಕ ಪೌಷ್ಠಿಕ ತೋಟ ನಿರ್ಮಿಸಿಕೊಳ್ಳಬವುದು.

ಅಗತ್ಯ ದಾಖಲಾತಿಗಳು:

1)ಉದ್ಯೋಗ ಚೀಟಿ.
2)ಆಧಾರ್ ಕಾರ್ಡ್ ಪ್ರತಿ
3)ಬ್ಯಾಂಕ್ ಪಾಸ್ ಬುಕ್ ಪ್ರತಿ
4)ಪೋಟೋ
5)ಜಮೀನ ಪಹಣಿ

ಕೂಲಿದರ ವಿವರ:

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ವರ್ಷಕ್ಕೆ 100 ದಿನಗಳವರೆಗೆ ಒಂದು ದಿನಕ್ಕೆ 309/- ರೂ ಕೂಲಿ ಪಡೆಯಬವುದು.

ನರೇಗಾ ಯೋಜನೆ ಸಹಾಯವಾಣಿ: 1800 425 8666

Most Popular

Latest Articles

Related Articles