Nikon India scholarship-ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

November 14, 2025 | Siddesh
Nikon India scholarship-ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!
Share Now:

ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 2025-2026 ನೇ ಸಾಲಿನ ನಿಕಾನ್ ವಿದ್ಯಾರ್ಥಿವೇತನ(Nikon scholarship 2025 India) ಕಾರ್ಯಕ್ರಮದ ಅಡಿಯಲ್ಲಿ ಛಾಯಾಗ್ರಹಣ ಸಂಬಂಧಿತ ಕೋರ್ಸ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನ ಯೋಜನೆಯ ಮುಖ್ಯ ಉದ್ದೇಶವು ಸೃಜನಶೀಲ ಪ್ರತಿಭೆಯನ್ನು ಉತ್ತೇಜಿಸಿ, ಅವರ ಕೌಶಲ್ಯಗಳನ್ನು(Nikon India scholarship) ಮತ್ತಷ್ಟು ವಿಕಸನಗೊಳಿಸುವುದಾಗಿದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಗಳಿಲ್ಲದೆ ವೃತ್ತಿಪರ ಛಾಯಾಗ್ರಹಣ ಕೋರ್ಸ್‌ಗಳನ್ನು ಕಲಿಯಲು ಅವಕಾಶ ನೀಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Mahindra Scholarship-ಮಹೀಂದ್ರ ಸಂಸ್ಥೆಯಿಂದ ರೂ 6,000/- ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

ಈ ಯೋಜನೆ ಮೂಲಕ ನಿಕಾನ್ ಸಂಸ್ಥೆ ಯುವ ದೃಶ್ಯ ಕಥೆಗಾರರ ಶಿಕ್ಷಣವನ್ನು ಬೆಂಬಲಿಸುವುದರೊಂದಿಗೆ, ಅವರು ಆತ್ಮವಿಶ್ವಾಸದಿಂದ(Nikon India student scholarship) ತಮ್ಮ ಆಸಕ್ತಿಯನ್ನು ವೃತ್ತಿಯನ್ನಾಗಿ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.

ಪ್ರಸ್ತುತ ಈ ಲೇಖನದಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಹರಿರುತ್ತಾರೆ? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲ ಹಂತಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: KSRTC Flybus Service-ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಫ್ಲೈ ಬಸ್ ಸೇವೆ ಆರಂಭ!

Who Can APply For Scholorship-ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರರ ಅಭ್ಯರ್ಥಿಯು ಭಾರತದ ಖಾಯಂ ಪ್ರಜೆಯಾಗಿರಬೇಕು.

ಅಭ್ಯರ್ಥಿಯು ಪ್ರಸ್ತುತ ವೃತ್ತಿಪರ ಛಾಯಾಗ್ರಹಣ ಸಂಬಂಧಿತ ಕೋರ್ಸ್ (ಕನಿಷ್ಠ 3 ತಿಂಗಳ ಅವಧಿ) ಕಲಿತಿರಬೇಕು.

ಅಭ್ಯರ್ಥಿಯು ದ್ವಿತೀಯ ಪಿಯುಸಿ ಯನ್ನು ಉತ್ತೀರ್ಣರಾಗಿರಬೇಕು.

ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 6,00,000 ಮೀರಿರಬಾರದು.

ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಬುಡ್ಡಿ4 ಸ್ಟುಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

Last Date For Apply-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 28 ನವೆಂಬರ್ 2025

ಇದನ್ನೂ ಓದಿ: Krishi Mela Bengalure-2025: ಬೆಂಗಳೂರು ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ!

Scholorship Amoubt-ಈ ಯೋಜನೆಯಡಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಡಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ 1,00,000 ರೂಪಾಯಿಗಳವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ: ವಿದ್ಯಾರ್ಥಿವೇತನದ ಮೊತ್ತವು ವಿದ್ಯಾರ್ಥಿಯು ಸಲ್ಲಿಸುವ ನಿಜವಾದ ಶುಲ್ಕ ರಚನೆಯನ್ನು ಆಧರಿಸಿರುತ್ತದೆ.

Documents Required-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಅಭ್ಯರ್ಥಿಯ ಆಧಾರ್ ಕಾರ್ಡ/Aadhar Card

ಅಭ್ಯರ್ಥಿಯ ದ್ವಿತೀಯ ಪಿಯುಸಿ ಅಂಕಪಟ್ಟಿ/PUC Markscard

ಇತ್ತೀಚೆಗೆ ಪೂರ್ಣಗೊಂಡ ಕೋರ್ಸ್‌ನ ಅಂಕಪಟ್ಟಿ/Cource Markscard

ಪ್ರಸ್ತುತ ವರ್ಷದ ಪ್ರವೇಶ ಶುಲ್ಕ ರಶೀದಿ/Current year's admission fee receipt

ಆದಾಯ ಪ್ರಮಾಣಪತ್ರ/Income Cetificate

ಬ್ಯಾಂಕ್ ಪಾಸ್ ಪುಸ್ತಕ/Bank Passbook

ಫೋಟೊ/Photocopy

ಇದನ್ನೂ ಓದಿ: Muthoot Finance Scholarship-ಮುತ್ತೊಟ್ ಫೈನಾನ್ಸ್ ನಿಂದ ₹2.40 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

nikon scholorship

ಇದನ್ನೂ ಓದಿ: Sportsman Incentive-ಕ್ರ‍ೀಡಾಪಟುಗಳಿಗೆ 10 ಲಕ್ಷದ ವರೆಗೆ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಅಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ:

ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಡಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಮೊದಲಿಗೆ ಈ ಲಿಂಕ್ "Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಅದೇ ಪುಟದಲ್ಲಿ ಕಾಣುವ ನಿಕಾನ್ ವಿದ್ಯಾರ್ಥಿವೇತನ ಆಯ್ಕೆಯ ಮುಂದೆ ಕಾಣಿಸುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: Bike Repair Training-ಉಚಿತ 30 ದಿನದ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ!

Step-3: ನಂತರ "Not Registered Yet ? Create an account" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಎಲ್ಲಾ ವಿವರವನ್ನು ಭರ್ತಿ ಮಾಡಿ User Id ಮತ್ತು Password ಅನ್ನು ಸಿದ್ದ ಮಾಡಿಕೊಂಡು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.

Step-4: ತದನಂತರ ಅರ್ಜಿ ನಮೂನೆಯು ಓಪನ್ ಆಗುತ್ತದೆ ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: