NLM Subsidy Yojana-NLM ಯೋಜನೆಯಡಿ ಶೇ 50% ಸಬ್ಸಿಡಿಯಲ್ಲಿ ಉದ್ದಿಮೆ ಪ್ರಾರಂಭಿಸಲು ಅವಕಾಶ!

December 17, 2025 | Siddesh
NLM Subsidy Yojana-NLM ಯೋಜನೆಯಡಿ ಶೇ 50% ಸಬ್ಸಿಡಿಯಲ್ಲಿ ಉದ್ದಿಮೆ ಪ್ರಾರಂಭಿಸಲು ಅವಕಾಶ!
Share Now:

ಕೇಂದ್ರ ಸರಕಾರದಿಂದ ರಾಷ್ಟ್ರೀಯ ಜಾನುವಾರು ಮಿಷನ್(NLM Yojana Application) ಯೋಜನೆಯಡಿ ಗ್ರಾಮೀಣ ಕೋಳಿ ಹ್ಯಾಚರಿ ಘಟಕ, ಕುರಿ-ಮೇಕೆ ತಳಿ ಸಂವರ್ಧನಾ ಘಟಕ ಸೇರಿದಂತೆ ಇನ್ನಿತರ ಘಟಕಗಳನ್ನು ಆರಂಭಿಸಲು ಶೇ 50% ಸಹಾಯಧನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದ್ದು ಇಂದಿನ ಅಂಕಣದಲ್ಲಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಲಾಗಿದೆ.

ರಾಷ್ಟ್ರೀಯ ಜಾನುವಾರು ಮಿಷನ್(NLM Scheme) ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಘಟಕವಾರು ಎಷ್ಟು ಸಬ್ಸಿಡಿಯನ್ನು ಒದಗಿಸಲಾಗುತ್ತದೆ? ಈ ಯೋಜನೆಯಡಿ ಆರಂಭಿಸಬಹುದಾದ ಘಟಕಗಳು ಯಾವುವು? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು, ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿ.

ಇದನ್ನೂ ಓದಿ: Women SHG Subsidy-ಮಹಿಳೆಯರಿಗೆ ಗುಡ್ ನ್ಯೂಸ್! ಮಹಿಳಾ ಸ್ವ-ಸಹಾಯ ಯೋಜನೆಯಡಿ 2.00 ಲಕ್ಷ ಸಹಾಯಧನ!

ಪ್ರಸ್ತುತ ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ಯುವ ಕೃಷಿಕರು ಗ್ರಾಮೀಣ ಭಾಗದಲ್ಲಿ ಲಾಭದಾಯಕ ಕೃಷಿಯನ್ನು(NLM Scheme Application) ಮುನ್ನೆಡೆಸಿಕೊಂಡು ಹೋಗಲು ಕೃಷಿ ಜೊತೆಗೆ ಉಪಕಸುಬುಗಳಾದ ಕುರಿ-ಮೇಕೆ, ಹೈನುಗಾರಿಕೆ, ಕೋಳಿ,ಹಂದಿ ಸಾಕಾಣಿಕೆ ಕ್ಷೇತ್ರದಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಅತೀ ಮುಖ್ಯವಾಗಿ ಈ ನಿಟ್ಟಿನಲ್ಲಿ ಈ ಉದ್ದಿಮೆಯನ್ನು ಆರಂಭಿಸಲು ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಶೇ 50% ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ.

NLM Subsidy Amount-ಯಾವೆಲ್ಲ ಉದ್ದಿಮೆ ಆರಂಭಿಸಬಹುದು? ಸಬ್ಸಿಡಿ ಮೊತ್ತವೇಷ್ಟು?

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸಬ್ಸಿಡಿಯನ್ನು ಪಡೆದು ಈ ಕೆಳಗಿನ ಪಟ್ಟಿಯಲ್ಲಿರುವ ಉದ್ದಿಮೆಯನ್ನು ಪ್ರಾರಂಭಿಸಲು ಸಹಾಯಧನವನ್ನು ಪಡೆಯಬಹುದು.

1)  ಗ್ರಾಮೀಣ ಕೋಳಿ ಉದ್ದಿಮ ಅಭಿವೃದ್ಧಿ (1000 ದೇಶಿ ಮಾತೃಕೋಳಿ ಘಟಕ + ಹ್ಯಾಚರಿ ಘಟಕ+ಮರಿಗಳ ಸಾಕಾಣಿಕೆ ಘಟಕ) Rural Poultry Entrepreneurship Programme-ಘಟಕ ವೆಚ್ಚ ರೂ. 50.00 ಲಕ್ಷಕ್ಕೆ ಸಹಾಯಧನ ಶೇ 50% ರಷ್ಟು ಗರಿಷ್ಟ 25.00 ಲಕ್ಷ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: PMFME Application-ಸ್ವಂತ ಉದ್ದಿಮೆ ಆರಂಭಿಸಲು ಶೇ 50% ಗರಿಷ್ಠ ₹15 ಲಕ್ಷ ಸಬ್ಸಿಡಿ! ಇಂದೇ ಅರ್ಜಿ ಸಲ್ಲಿಸಿ!

2) ಕುರಿ-ಮೇಕೆ ತಳಿ ಸಂವರ್ಧನಾ ಘಟಕ (500+25) Entrepreneur in small ruminant sector (Sheep and goat farming) ಘಟಕಕ್ಕೆ ಗರಿಷ್ಟ ಯೋಜನಾ ವೆಚ್ಚ ರೂ 1 ಕೋಟಿ ನಿಗದಿಪಡಿಸಲಾಗಿದ್ದು ಗರಿಷ್ಠ-ರೂ.50 ಲಕ್ಷ ದವರೆಗೆ ಸಹಾಯಧನವನ್ನು ಪಡೆಯಬಹುದು.

3) ಹಂದಿ ತಳಿ ಸಂವರ್ಧನಾ ಘಟಕ (100+10) Piggery entrepreneurship ಘಟಕ ವೆಚ್ಚ ರೂ. 60.00 ಲಕ್ಷ ಇದಕ್ಕೆ ಸಹಾಯಧನ ಶೇ 50% ರಷ್ಟು ಗರಿಷ್ಟ 30.00 ಲಕ್ಷ

4) ರಸಮೇವು ಉತ್ಪಾದನಾ ಘಟಕ (ವಾರ್ಷಿಕ 2000-2500 ಮೆ.ಟನ್‌ ಉತ್ಪಾದನೆ) Silage making unit for entrepreneurs (Production capacity 2000-2500 MT Per Annum). ಇದಕ್ಕೆ ಸಹಾಯಧನ ಶೇ.50 ರಷ್ಟು ಒಂದು ಘಟಕಕ್ಕೆ ಗರಿಷ್ಟ ಯೋಜನಾ ವೆಚ್ಚ ರೂ 1 ಕೋಟಿ ನಿಗದಿಪಡಿಸಲಾಗಿದ್ದು ಗರಿಷ್ಠ-ರೂ.50 ಲಕ್ಷ ದವರೆಗೆ ಸಹಾಯಧನವನ್ನು ಪಡೆಯಬಹುದು.

ಇದನ್ನೂ ಓದಿ: Udyam Certificate-ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸೌಲಭ್ಯ ಪಡೆಯಲು ಈ ದಾಖಲೆ ಕಡ್ಡಾಯ! ಈ ದಾಖಲೆ ಪಡೆಯುವುದು ಹೇಗೆ!

ಸಬ್ಸಿಡಿಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಕೋಷ್ಠಕವನ್ನು ನೋಡಿ:

ಇದನ್ನೂ ಓದಿ: Free Embroidery Training-ಮಹಿಳೆಯರಿಗೆ ಸಿಹಿ ಸುದ್ದಿ ಉಚಿತ ಎಂಬ್ರಾಯ್ಡರಿ ಕಲಿಕೆ ತರಬೇತಿ!

Who Can Apply For NLM Scheme-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಭ್ಯರ್ಥಿಯ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು.
ಉದ್ದಿಮೆಯನ್ನು ಪ್ರಾರಂಭಿಸುವ ಕ್ಷೇತ್ರದಲ್ಲಿ ಅನುಭವನ್ನು ಹೊಂದಿರುವುದು ಕಡ್ಡಾಯ.
ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಸಿಬಿಲ್ ಉತ್ತಮವಾಗಿರಬೇಕು.

How To Apply For NLM Scheme-ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯಲ್ಲಿರುವ ತಾಲ್ಲೂಕಿನ ಪಶುವೈದ್ಯಾಧಿಕಾರಿಯನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Subsidy Scheme-ವೃತ್ತಿ ಪ್ರೋತ್ಸಾಹ ಸಾಲ ಯೋಜನೆಯಡಿ 1.00 ಲಕ್ಷ ಸಹಾಯಧನ! ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

Required Documents For NLM Yojana-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಅರ್ಜಿದಾರರ ಆಧಾರ್ ಕಾರ್ಡ
  • ಪಾನ್ ಕಾರ್ಡ್
  • ವೋಟರ್ ಐಡಿ
  • ರೇಶನ್ ಕಾರ್ಡ
  • ಬ್ಯಾಂಕ್ ಪಾಸ್ ಬುಕ್
  • ರದ್ದುಗೊಳಿಸಿದ ಚೆಕ್
  • 6 ತಿಂಗಳ ಬ್ಯಾಂಕ್ ಖಾತೆ ಸ್ಟೇಟ್ಮೆಂಟ್
  • ಜಾತಿ ಪ್ರಮಾಣ ಪತ್ರ
  • ವಿದ್ಯಾರ್ಹತೆ ಪ್ರಮಾಣ ಪತ್ರ
  • ವಿದ್ಯುತ್ ಬಿಲ್
  • ಯೋಜನೆ ಘಟಕ ಸ್ಥಾಪನೆ ಜಾಗದಲ್ಲಿ ನಿಂತು ಜಿಪಿಎಸ್ ಪೋಟೊ
  • ಪಹಣಿ/ಬಾಡಿಗೆ ಒಪ್ಪಿಗೆ ಪತ್ರ
  • ಅನುಭವ ಪ್ರಮಾಣ ಪತ್ರ(ಪಶುವೈದ್ಯರಿಂದ)

ಇದನ್ನೂ ಓದಿ: Bank OTS Scheme-ರಿಯಾಯಿತಿಯಲ್ಲಿ ಬ್ಯಾಂಕಿನ ಸಾಲ ಇತ್ಯರ್ಥ ಮಾಡಲು ನೂತನ ಯೋಜನೆ ಜಾರಿ!

For More Information-ಹೆಚ್ಚಿನ ಮಾಹಿತಿಗಾಗಿ:

ಯೋಜನೆಯ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: