Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!

January 5, 2026 | Siddesh
Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!
Share Now:

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಹಳೆಯ ಪಹಣಿ/ಮುಟೇಶನ್/ಇನ್ನಿತರೆ ದಾಖಲೆಗಳನ್ನು(Agriculture Land Documents) ಪಡೆಯಲು ಕಂದಾಯ ಇಲಾಖೆಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ತಿಂಗಳು ಗಟ್ಟಲೆ ಕಾಯುವ ಅವಶ್ಯಕತೆ ಇನ್ನುಂದೆ ಇರುವುದಿಲ್ಲ ಈಗಾಗಲೇ ಕಂದಾಯ ಇಲಾಖೆಯಿಂದ ಈ ನಿಯಮಕ್ಕೆ ಶಾಶ್ವತ ಪರಿಹಾರವನ್ನು ಜಾರಿಗೆ ತರಲಾಗಿದ್ದು ಭೂ ಸುರಕ್ಷಾʼ ಎನ್ನುವ ವಿನೂತನ ಯೋಜನೆಯ ಮೂಲಕ ಜಮೀನಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸ್ಕಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದೆ.

ಇಂದಿನ ಅಂಕಣದಲ್ಲಿ ಭೂ ಸುರಕ್ಷಾ ಯೋಜನೆ(Bhu Suraksha Yojana) ಎಂದರೇನು? ಇದರಿಂದ ರೈತರಿಗೆ ಅಗುವ ಪ್ರಯೋಜನಗಳೇನು? ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಹಳೆಯ ದಾಖಲೆಗಳನ್ನು ಇಲ್ಲಿ ಪಡೆಯುವುದು ಹೇಗೆ ಇದಕ್ಕಾಗಿ ಅನುಸರಿಸಬೇಕಾದ ಕ್ರಮಗಳೇನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದ್ದು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ ಇತರರಿಗೂ ಮಾಹಿತಿ ತಿಳಿಸಲು ಸಹಕರಿಸಿ.

ಇದನ್ನೂ ಓದಿ: Kuri Sakanike Tarabeti-ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

ಇದಲ್ಲದೇ ರೈತರು ಸ್ವಂತ ತಮ್ಮ ಮೊಬೈಲ್ ಮೂಲಕವೇ ಯಾವುದೇ ಕಚೇರಿಯನ್ನು ಭೇಟಿ ಮಾಡದೇ ಕಂದಾಯ ಇಲಾಖೆಯ ಅಧಿಕೃತ Records Room ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಗದಿತ ಶುಲ್ಕವನ್ನು ಪಾವತಿ ಮಾಡಿ ದಾಖಲೆಯನ್ನು ಮೊಬೈಲ್ ನಲ್ಲೇ ಪಡೆಯಲು ಅವಕಾಶವನ್ನು ನೀಡಲಾಗಿದ್ದು ಈ ಕುರಿತು ಸಹ ಇಂದಿನ ಅಂಕಣದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

What Is Bhu Suraksha Yojane-ಏನಿದು ಭೂ ಸುರಕ್ಷಾ ಯೋಜನೆ?

ರೈತರು ಈ ಹಿಂದೆ ಅರ್ಜಿಯನ್ನು ಸಲ್ಲಿಸಿ ತಮ್ಮ ಕೃಷಿ ಜಮೀನಿಗೆ ಸಂಬಂಧಪಟ್ಟ ಹಳೆಯ ದಾಖಲೆಗಳನ್ನು ಕಂದಾಯ ಇಲಾಖೆಯಿಂದ ಪಡೆಯಬೇಕಾಗಿತ್ತು ಇದಕ್ಕೆ ಹೆಚ್ಚು ಸಮಯ ಮತ್ತು ಪದೇ ಪದೇ ಇಲಾಕೆಯ ಕಚೇರಿಯನ್ನು ರೈತರು ಭೇಟಿ ಮಾಡಬೇಕಾಗಿತ್ತು ಆದರೆ ಈಗ ಇದಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು ಭೂ ಸುರಕ್ಷಾ ಯೋಜನೆ ಮೂಲಕ ಜಮೀನಿನ ಎಲ್ಲಾ ಹಳೆಯ ದಾಖಲೆಗಳನ್ನು ಸ್ಕಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹ ಮಾಡಲಾಗಿದ್ದು ರೈತರು ನೇರವಾಗಿ ಕಂದಾಯ ಇಲಾಕೆಯ ರೇಕಾರ್ಡ ರೂಂ ವಿಭಾಗವನ್ನು ಭೇಟಿ ಮಾಡಿ ನಿಗದಿತ ಶುಲ್ಕವನ್ನು ಪಾವತಿ ಮಾಡಿ ಅಲ್ಲೇ ದಾಖಲೆಯನ್ನು ಪಡೆಯಬಹುದು.

ಅಥವಾ ರೈತರು ತಮ್ಮ ಮೊಬೈಲ್ ನಲ್ಲಿ ಕಂದಾಯ ಇಲಾಖೆಯ Records Room ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಅಗತ್ಯ ವಿವರವನ್ನು ಒದಗಿಸಿ ದಾಖಲೆಯನ್ನು ಪಡೆಯಲು ನಿಗದಿತ ಶುಲ್ಕವನ್ನು ಪಾವತಿ ಮಾಡಿ ತಮ್ಮ ಮೊಬೈಲ್ ನಲ್ಲೇ ದಾಖಲೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Yashaswini Card-ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಕೆ ಆರಂಭ!

Land Records Digital Method- ರ‍ೇಕಾರ್ಡ್ ರೂಮ್ ಡಿಜಿಟಲ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?

ರೈತರು ತಮ್ಮ ಜಮೀನಿನ ಮಾಲೀಕತ್ವಕ್ಕೆ ಸಂಬಂಧಪಟ್ಟ ಮೂಲ ಮತ್ತು ಹಳೆಯ ದಾಖಲೆಗಳನ್ನು ಪಡೆಯಲು ಈ ಹಿಂದೆ ತಾಲ್ಲೂಕು ಆಫೀಸ್ ಅಥವಾ ತಹಶೀಲ್ದಾರ್ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಪಡೆಯಬೇಕಿತ್ತು ಅದರೆ ಈಗ ರೈತರೇ ಸ್ವಂತ ಮೊಬೈಲ್ ಅಥವಾ ಕಂದಾಯ ಇಲಾಖೆಯ ತಹಶೀಲ್ದಾರ್ ಕಚೇರಿಯ ರ‍ೇಕಾರ್ಡ್ ರೂಮ್ ವಿಭಾಗದಲ್ಲಿ ಆನ್ಲೈನ್ ಮೂಲಕ ಶೀಘ್ರವಾಗಿ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯಬಹುದು.

How To Apply For Online Land Records-ರೈತರು ತಮ್ಮ ಮೊಬೈಲ್ ಮೂಲಕವೇ ದಾಖಲೆ ಪಡೆಯಬಹುದು:

ಕೃಷಿಕರು ಕಂದಾಯ ಇಲಾಖೆಯ ಅಧಿಕೃತ "ಭೂ ಸುರಕ್ಷಾ" ಯೋಜನೆಯ Records Room ತಂತ್ರಾಂಶವನ್ನು ಭೇಟಿ ಮಾಡಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಿ ಶುಲ್ಕವನ್ನು ಪಾವತಿ ಮಾಡಿ ದಾಖಲೆಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಪ್ರಥಮ ಹಂತದಲ್ಲಿ "Online Application For Land Records" ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ Records Room ತಂತ್ರಾಂಶವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Poultry Shed Subsidy-ಕುಕ್ಕುಟ ಸಂಜೀವಿನಿ ಯೋಜನೆಯಡಿ ಉಚಿತ ಕೋಳಿಮರಿ, ಶೆಡ್ ಸಹಾಯಧನ ಪಡೆಯಲು ಅರ್ಜಿ!

Online Land Records

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

Step-2: ತದನಂತರ ಈ ಪೇಜ್ ನಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಅನ್ನು ನಮೂದಿಸಿ "ಓಟಿಪಿ ರಚಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ OTP ಅನ್ನು ಹಾಕಿ "ಲಾಗಿನ್" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಭೇಟಿ ಮಾಡಿ.

Step-3: ಇದಾದ ಬಳಿಕ ಈ ಪೇಜ್ ನಲ್ಲಿ ಮೊಬೈಲ್ ನಂಬರ್ ಪಕ್ಕದ ಕಾಲಂ ನಲ್ಲಿ ಕಾಣುವ "Generate OTP" ಬಟನ್ ಮೇಲೆ ಕ್ಲಿಕ್ ಮಾಡಿ OTP ಅನ್ನು ನಮೂದಿಸಿ ಪಕ್ಕದ ಕಾಲಂ ನಲ್ಲಿ OTP ಅನ್ನು ಹಾಕಿ "OTP ಪರಿಶೀಲಿಸಿ/Verify OTP" ಬಟನ್ ಮೇಲೆ ಕ್ಲಿಕ್ ಮಾಡಿ ಬಳಿಕ ನಿಮ್ಮ ಹೆಸರು ಮತ್ತು ವಿಳಾಸ,ಮೈಲ್ ಐಡಿಯನ್ನು ಹಾಕಿ "ಉಳಿಸಿ/Save" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಪ್ರೊಪೈಲ್ ವಿವರವನ್ನು ರಚನೆ ಮಾಡಿಕೊಳ್ಳಿ.

Step-4: ಇಲ್ಲಿ "ಕಡತ ವಿನಂತಿಯನ್ನು ನಮೂದಿಸಿ /Enter File Request" ಕಾಲಂ ನಲ್ಲಿ ಕಡತದ ವಿವರವನ್ನು ಭರ್ತಿ ಮಾಡಿ "Next" ಆಯ್ಕೆಯ ಮೇಲೆ ಕ್ಲಿಕ್ ಮಾಡಿ "ಗ್ರಾಮದಲ್ಲಿ ಶೋಧಿಸಿ/Search withi the village" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ/ತಾಲೂಕು/ಹೋಬಳಿ/ಗ್ರಾಮ/ಪೈಲ್/ರಿಜಿಸ್ಟರ್ ಆಯ್ಕೆಯನ್ನು ಮಾಡಿಕೊಂಡು ಸರ್ವೆ ನಂಬರ್ ಹಾಕಿ ಹುಡುಕಿ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೇಕಾದ ದಾಖಲೆಯನ್ನು ಅಯ್ಕೆ ಮಾಡಿಕೊಂಡು "Next" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-5: ಬಳಿಕ ಕೊನೆಯಲ್ಲಿ finish ಆಯ್ಕೆಯೆ ಮೇಲೆ ಕ್ಲಿಕ್ ಮಾಡಿ ದಾಖಲೆಯನ್ನು ಪಡೆಯಲು ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸ್ವೀಕೃತಿಯನ್ನು ಪಡೆಯಿರಿ.

ಇದನ್ನೂ ಓದಿ: Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

ರಾಜ್ಯದಲ್ಲಿದೆ 100 ಕೋಟಿ ಪುಟ ದಾಖಲೆ ಈ ಪೈಕಿ 50 ಕೋಟಿಗೂ ಅಧಿಕ ಪುಟಗಳ ಸ್ಕ್ಯಾನ್ ಪೂರ್ಣ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದ ಎಲ್ಲಾ ತಹಶೀಲ್ದಾರ್ ಕಚೇರಿಗಳಲ್ಲಿ ಭೂ ದಾಖಲೆಗೆ ಸಂಬಂಧಿಸಿ 100 ಕೋಟಿಗೂ ಅಧಿಕ ಭೂ ದಾಖಲೆಗಳಿವೆ ಎಂದು ಅಂದಾಜಿಸಲಾಗಿದೆ. ಈ ಪೈಕಿ 50 ಕೋಟಿಗೂ ಅಧಿಕ ಪುಟಗಳನ್ನು ಈಗಾಗಲೇ ಸ್ಕ್ಯಾನ್ ಮಾಡಲಾಗಿದೆ. ಬಾಕಿ ಉಳಿದಿರುವ ದಾಖಲೆಗಳನ್ನು ಸಹ ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚನೆಯನ್ನು ನೀಡಲಾಗಿದ್ದು ಈ ಕೆಲಸ ತಹಶೀಲ್ದಾರ್ ಕಚೇರಿಗಳಿಗೆ ಸೀಮಿತವಾಗದೆ ಉಪವಿಭಾಗಾಧಿಕಾರಿ-ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ದಾಖಲೆಗಳನ್ನೂ ಸ್ಕ್ಯಾನ್ ಮಾಡಲು ನಿರ್ಧರಿಸಲಾಗಿದೆ. ಇಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: