HomeNew postsParihara - 34 ಲಕ್ಷ ರೈತರ ಖಾತೆಗೆ ಈ ದಿನ ಜಮಾ ಅಗಲಿದೆ 2 ನೇ...

Parihara – 34 ಲಕ್ಷ ರೈತರ ಖಾತೆಗೆ ಈ ದಿನ ಜಮಾ ಅಗಲಿದೆ 2 ನೇ ಕಂತಿನ ಬರ ಪರಿಹಾರ!

ಕೇಂದ್ರ ಸರಕಾರದಿಂದ ಈಗಾಗಲೇ ಎನ್.ಡಿ.ಆರ್.ಎಫ್(NDRF) ಮಾರ್ಗಸೂಚಿಯನ್ವ ರಾಜ್ಯಕ್ಕೆ ಕಳೆದ ವಾರ 3498 ಕೋಟಿ ಬರ ಪರಿಹಾರ ಜಮಾ ಅಗಿದ್ದು ಈ ಹಣ ರೈತರ ಖಾತೆಗೆ ಯಾವಾಗ?(bara parihara 2nd installment date) ವರ್ಗಾವಣೆ ಅಗಲಿದೆ ಎನ್ನುವ ಪ್ರಶ್ನೆಗೆ ಕಂದಾಯ ಇಲಾಖೆ ಅಧಿಕಾರಿಗಳು ಉತ್ತರ ನೀಡಿದ್ದು ಇದರ ವಿವರವನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. 

ನಮ್ಮ ರಾಜ್ಯದಲ್ಲಿ ಒಟ್ಟು 240 ತಾಲೂಕುಗಳಲ್ಲಿ 223 ತಾಲೂಕುಗಳು ತೀರ್ವ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿದ್ದು, ಈ ತಾಲೂಕಿನ ರೈತರಿಗೆ ಅರ್ಥಿಕವಾಗಿ ಸಹಾಯ ನೀಡಲು ಈ ಹಣವನ್ನು(bara parihara 2nd installment) ರಾಜ್ಯ ಸರಕಾರದಿಂದ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ಕಂದಾಯ ಇಲಾಖೆ ಸಚಿವ ಮಾಹಿತಿ ಹಂಚಿಕೊಂಡಿದ್ದು.

ಈ ಮೊದಲು ರಾಜ್ಯ ಸರಕಾರದಿಂದ ರೈತರ ಖಾತೆಗೆ ಮೊದಲ ಕಂತಿನ ಬರ ಪರಿಹಾರದ ಹಣವಾಗಿ ರೂ 2,000 ವನ್ನು ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗಿದ್ದು ಇದೇ ಮಾದರಿಯನ್ನು ಅನುಸರಿಸಿ 2ನೇ ಕಂತಿನ ಪರಿಹಾರದ ಹಣವನ್ನು ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

Bara parihara 2nd installment date: 34 ಲಕ್ಷ ರೈತರ ಖಾತೆಗೆ ಈ ದಿನ ಜಮಾ ಅಗಲಿದೆ 2 ನೇ ಕಂತಿನ ಬರ ಪರಿಹಾರ:

ಬರ ಪರಿಹಾರವನ್ನು ನೇರ ನಗದು ವರ್ಗಾವಣೆ ಮಾದರಿಯನ್ನು ಅನುಸರಿಸಿ ನೇರವಾಗಿ ಯಾವುದೇ ಮಧ್ಯವರ್ತಿಗೆ ಅವಕಾಶ ನೀಡದೆ ರೈತರ ಖಾತೆಗೆ ಹಣ ವಾರ್ಗಾವಣೆ ಮಾಡಲು ಒಟ್ಟು 34 ಲಕ್ಷ ರೈತರ ಖಾತೆಯನ್ನು ಆಯ್ಕೆ ಮಾಡಿಕೊಂಡಿದ್ದು ಈ ಎಲ್ಲಾ ರೈತರ ಖಾತೆಗೆ ಇನ್ನು 3-4 ದಿನಗಳಲ್ಲಿ ಜಿಲ್ಲಾವಾರು ಹಂತ ಹಂತವಾಗಿ ಅಂದರೆ ಮೇ 07 ರ ಒಳಗಾಗಿ ಬರ ಪರಿಹಾರದ ಹಣ ವರ್ಗಾವಣೆ ಅಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ಡಾರೆ.

ಇದನ್ನೂ ಓದಿ: Bele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Parihara 2nd installment- ಕೇಂದ್ರದ ಎಲ್ಲಾ ಹಣ ರೈತರ ಖಾತೆಗೆ!

ಮಳೆ ಕೊರೆತೆಯಿಂದ ರೈತಾಪಿ ವರ್ಗಕ್ಕೆ ತೀರ್ವ ನಷ್ಟವಾಗಿದ್ದು ಪ್ರಸ್ತುತ ಕೇಂದ್ರದಿಂದ ಬಿಡುಗಡೆಯಾಗಿರುವ ಪೂರ್ಣ ಮೊತ್ತವನ್ನು ಬೆಳೆ ನಷ್ಟ ಪರಿಹಾರ ನೀಡಲು ಬಳಕೆ ಮಾಡಿಕೊಂಡು ಎಲ್ಲಾ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು ಮತ್ತು ಕುಡಿಯುವ ನೀರು, ಜಾನುವಾರು ಮೇವು, ಜೀವನೋಪಾಯ ನಷ್ಟದ ಪರಿಹಾರ ವಿತರಣೆಗೆ ರಾಜ್ಯ ಸರಕಾರದಿಂದ ವೆಚ್ಚ ಭರಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಕಂದಾಯ ಸಚಿವ ಮಾಹಿತಿ ತಿಳಿಸಿದ್ದಾರೆ.

Parihara DBT status check-ನಿಮ್ಮ ಖಾತೆಗೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:


ರೈತರು ಬ್ಯಾಂಕ್ ಶಾಖೆ ಭೇಟಿ ಮಾಡದೆ ತಮ್ಮ ಮೊಬೈಲ್ ನಲ್ಲಿಯೇ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಪರಿಹಾರದ ಹಣ ಜಮಾ ಅಗಿದಿಯೋ ಅಥವಾ ಇಲ್ಲವೋ? ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಪರಿಶೀಲಿಸಿಕೊಳ್ಳಬಹುದು.

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Download DBT karnataka ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಅಧಾರ್ ಕಾರ್ಡ ನಂಬರ್ ಮತ್ತು ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಈ ಅಪ್ಲಿಕೇಶನ್ ಲಾಗಿನ್ ಅಗಬೇಕು.

ಲಾಗಿನ್ ಅದ ಬಳಿಕ ಪಾವತಿ ಸ್ಥಿತಿ/Payment Status ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ “ಬೆಳೆ ನಷ್ಟಕ್ಕೆ ಇನ್‌ಪುಟ್ ಸಬ್ಸಿಡಿ” ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಬರ ಪರಿಹಾರ ಯಾವ ದಿನ ಜಮಾ ಅಗಿದೆ? ಎಷ್ಟು ಮೊತ್ತ? UTR ನಂಬರ್, ಬ್ಯಾಂಕ್ ಹೆಸರು ಇತ್ಯಾದಿ ವಿವರ ತೋರಿಸುತ್ತದೆ.

ಇದನ್ನೂ ಓದಿ: land registration- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

Village wise Parihara Farmer list-ಪರಿಹಾರ ವಿತರಣೆಗೆ ಅರ್ಹರಿರುವ ನಿಮ್ಮ ಹಳ್ಳಿಯ ರೈತರ ಪಟ್ಟಿ ನೋಡುವ ವಿಧಾನ:

Step-1: ಪ್ರಥಮದಲ್ಲಿ ಈ ಕೊಂಡಿಯ ಮೇಲೆ ಕ್ಲಿಕ್ ಮಾಡಿ Village wise Parihara Farmer list  ಪರಿಹಾರ ತಂತ್ರಾಂಶವನ್ನು ಪ್ರವೇಶ ಮಾಡಬೇಕು. ತದನಂತರದಲ್ಲಿ “Select year/ವರ್ಷ ಸೆಲೆಕ್ಟ್ ಮಾಡಿ”, Select season/ಋತು ಆಯ್ಕೆ ಮಾಡಿ, Calamity Type/ವಿಪತ್ತಿನ ವಿಧ ಮತ್ತು ನಿಮ್ಮ District/ಜಿಲ್ಲೆ, Taluk/ತಾಲ್ಲೂಕು, Hobli/ಹೋಬಳಿ,  ಮತ್ತು ನಿಮ್ಮ Village/ಗ್ರಾಮ/ಹಳ್ಳಿಯನ್ನು ಆಯ್ಕೆ ಮಾಡಿ “Get Report” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: “Get Report” ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ ಇಲ್ಲಿ “ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Payment Details” ಎಂದು ಕಾಣಿಸುತ್ತದೆ ಇದರ ಕೆಳಗೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಮೊದಲ ಕಂತಿನ ರೂ 2,000 ಬರ ಪರಿಹಾರ ಜಮಾ ಅಗಿದೆ ಎನ್ನುವ ರೈತರ ಪಟ್ಟಿಯನ್ನು ತೋರಿಸುತ್ತದೆ ಈ ಪಟ್ಟಿಯಲ್ಲಿರುವವರಿಗೆ ಎರಡನೇ ಕಂತಿನ ಬರ ಪರಿಹಾರದ ಹಣ ಜಮಾ ಅಗಲಿದೆ. ಒಂದೊಮ್ಮೆ ಪಟ್ಟಿಯಲ್ಲಿ ನಿಮ್ಮ ಹೆಸರು ಇರದಿದ್ದಲ್ಲಿ ನಿಮ್ಮ ಹಳ್ಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ಈ ಸಂಬಂಧ ವಿಚಾರಣೆ ಮಾಡಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಬೇಕು.

Most Popular

Latest Articles

Related Articles