Parihara amount-ಕಂದಾಯ ಇಲಾಖೆಯಿಂದ ₹ 297 ಕೋಟಿ ಪರಿಹಾರ ಬಿಡುಗಡೆ! ಯಾವುದಕ್ಕೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ವಿವರ!

December 16, 2024 | Siddesh
Parihara amount-ಕಂದಾಯ ಇಲಾಖೆಯಿಂದ ₹ 297 ಕೋಟಿ ಪರಿಹಾರ ಬಿಡುಗಡೆ! ಯಾವುದಕ್ಕೆ ಎಷ್ಟು ಪರಿಹಾರ? ಇಲ್ಲಿದೆ ಸಂಪೂರ್ಣ ವಿವರ!
Share Now:

ಕಂದಾಯ ಇಲಾಖೆಯಿಂದ ಈ ವರ್ಷ ರಾಜ್ಯದಲ್ಲಿ ಅತಿವೃಷ್ಟಿಯ ಪರಿಣಾಮದಿಂದ ಉಂಟಾಗಿರುವ ಬೆಳೆ ಮತ್ತು ಆಸ್ತಿ ಹಾನಿಗೆ(Parihara amount) ಒಟ್ಟು ₹297 ಇಲ್ಲಿಯವರೆಗೆ ಕೋಟಿ ಪರಿಹಾರವನ್ನು ನೇರ ನಗದು ವರ್ಗಾವಣೆಯ(DBT) ಮೂಲಕ ಜಮಾ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ಹಂಚಿಕೊಂಡಿದ್ದು ಇದರ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮೂಡಬಿದ್ರೆ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ಅವರ ಕಲಾಪದಲ್ಲಿ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ(Krish byre gouda)ಅವರು ಒಟ್ಟು ಈ ವರ್ಷ ₹297 ಕೋಟಿ ಅತಿವೃಷ್ಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ ಎಂದು ಲಿಖಿತ ಉತ್ತರದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಕಂದಾಯ ಇಲಾಖೆಯಿಂದ(Revenue Department) ಬಿಡುಗಡೆ ಮಾಡಿರುವ ಹಾನಿ ಪರಿಹಾರವನ್ನು ರೈತರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳಬಹುದು? ಮತ್ತು ಮನೆ ಮತ್ತು ಬೆಳೆ ಹಾನಿಗೆ ಎಷ್ಟು ಮೊತ್ತದ ಪರಿಹಾರ ನಿಗದಿಪಡಿಸಲಾಗಿದೆ? ಇತ್ಯಾದಿ ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?

Crop loss amount-ಶಾಸಕರ ಪ್ರಶ್ನೆ-1: ರಾಜ್ಯದಲ್ಲುಂಟಾದ ಅತಿವೃಷ್ಟಿಯ ಪರಿಣಾಮಗಳು ಹಾಗೂ ಸರ್ಕಾರದ ಸಕಾಲಿಕ ಪರಿಹಾರ ಕ್ರಮಗಳಾವುವು?

ಕಂದಾಯ ಸಚಿವರ ಉತ್ತರ: ರಾಜ್ಯದಲ್ಲಿ 2024ನೇ ಸಾಲಿನ ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ ಸುರಿದ ಮಳೆಯಿಂದಾಗಿ ಬೆಳೆಹಾನಿ(Bele hani), ಮನೆಹಾನಿ, ಮಾನವ ಜೀವಹಾನಿ, ಜಾನುವಾರುಗಳ ಜೀವಹಾನಿ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ನಷ್ಟ ಉಂಟಾಗಿರುತ್ತದೆ.

ಈ ಎಲ್ಲಾ ರೀತಿಯ ಹಾನಿಗಳಿಗೆ (ಮನೆ ಹಾನಿ ಹೊರತುಪಡಿಸಿ) ಕೇಂದ್ರ ಗೃಹ ಸಚಿವಾಲಯದ SDRF ಮಾರ್ಗಸೂಚಿಗಳನ್ವಯ ಜಂಟಿ ಸಮೀಕ್ಷೆ ನಡೆಸಿ ಸಮೀಕ್ಷಾ ವರದಿಯನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಅನುಮೋದಿಸಿರುವ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ DBT ಮುಖಾಂತರ ನೇರವಾಗಿ ಪರಿಹಾರದ ಹಣವನ್ನು ಪಾವತಿಸಲಾಗಿದೆ. ಅಲ್ಲದೆ, ಹಿಂಗಾರು ಮಳೆಯಿಂದಾಗಿ ಆಗಿರುವ ಹಾನಿಯ ಬಗ್ಗೆ ಪರಿಹಾರ ಪಾವತಿ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ.

2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮತ್ತು ಹಿಂಗಾರು ಮಳೆಯಿಂದ ಹಾನಿಯಾದ ವಾಸದ ಮನೆಗಳಿಗೆ ಈ ಕೆಳಗಿನಂತೆ ನೀಡಲಾಗಿರುತ್ತದೆ.

ಇದನ್ನೂ ಓದಿ: Sheep farming loan Subsidy-ಕುರಿ ಸಾಕಾಣಿಕೆ ಆರಂಭಿಸಲು ಶೇ 50% ರಷ್ಟು ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಮನೆ ಹಾನಿ ಪ್ರಮಾಣಪಾವತಿಸಬೇಕಾದ ಮೊತ್ತ(ಲಕ್ಷಗಳಲ್ಲಿ)
ಅತೀ ಸಣ್ಣ ಪ್ರಮಾಣದ ಮನೆ ಹಾನಿ(ಶೇ 15-20%)₹6,500
ಮದ್ಯಮ ಪ್ರಮಾಣದ ಹಾನಿ(ಶೇ 20-50%)₹30,000
ಹೆಚ್ಚು ಪ್ರಮಾಣದ ಹಾನಿ(ಶೇ 50-75%)₹50,000
ಸಂಪೂರ್ಣ ಹಾನಿ ಅಧಿಕೃತ ಮನೆ(ಶೇ 75-100%)₹1,20,000
ಸಂಫೂರ್ಣ ಹಾನಿ ಅನಧಿಕೃತ ಮನೆ₹1,00,000

ಸಂಪೂರ್ಣ ಹಾನಿಯಾದ ಅಧಿಕೃತ ವಾಸದ ಮನೆಗಳಿಗೆ ಪ್ರಾರಂಭಿಕ ಹಂತದಲ್ಲಿ ರೂ ಪರಿಹಾರವನ್ನು ಜಿಲ್ಲಾಧಿಕಾರಿಗಳವರ ಹಂತದಲ್ಲಿ ಪಾವತಿಸಲು ಮತ್ತು ಇದರ ಜೊತೆಗೆ ಹೆಚ್ಚುವರಿಯಾಗಿ ವಸತಿ ಇಲಾಖೆಯು ಅನುಷ್ಥಾನಗೊಳಿಸುವ ದೇವರಾಜ್ ಅರಸು ವಸತಿ ಯೋಜನೆಯಡಿ ಮನೆ ನೀಡಲು ಅವಕಾಶವನ್ನು ನೀಡಲಾಗಿರುತ್ತದೆ ಎಂದು ಉತ್ತರಿಸಿದ್ದಾರೆ.

2024 ಸಾಲಿನ ಪೂರ್ವ ಮುಂಗಾರು, ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಬೆಳೆ ಹಾನಿ, ಮನೆ ಹಾನಿ ಮಾನವ ಹಾನಿ, ಜಾನುವಾರು ಹಾನಿಯ ವಿವರಗಳು ಹಾಗೂ ತತ್ಸಂಬಂಧ ನಿಯಮಾನುಸಾರ ಅರ್ಹತೆಯನುಸಾರ ಪಾವತಿಸಿರುವ ಪರಿಹಾರದ ವಿವರಗಳು ಕೆಳಗಿನಂತಿರುತ್ತದೆ.

ಇದನ್ನೂ ಓದಿ: Best Insurance Plan-2024: ಸಾರ್ವಜನಿಕರಿಗೆ ಭರ್ಜರಿ ಆಫರ್! ಕೇವಲ ₹599ರೂಗೆ ₹5 ಲಕ್ಷ ವಿಮೆ ಪಡೆಯಲು ಅರ್ಜಿ!

bele parihara hana

ಪೂರ್ವ ಮುಂಗಾರು-2024:

ಹಾನಿಯ ವಿವರಗಳುಒಟ್ಟು ಹಾನಿಪಾವತಿಸಿರುವ ಪರಿಹಾರದ ಮೊತ್ತ(ಲಕ್ಷಗಳಲ್ಲಿ)
ಮಾನವ ಹಾನಿ57₹285.00
ಜಾನುವಾರು ಹಾನಿ469₹86.49
ಮನೆ ಹಾನಿ1362₹216.14
ಬೆಳೆ ಹಾನಿ2591₹439.14

ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!

ಮುಂಗಾರು-2024:

ಹಾನಿಯ ವಿವರಗಳುಒಟ್ಟು ಹಾನಿಪಾವತಿಸಿರುವ ಪರಿಹಾರದ ಮೊತ್ತ(ಲಕ್ಷಗಳಲ್ಲಿ)
ಮಾನವ ಹಾನಿ100₹285.00
ಜಾನುವಾರು ಹಾನಿ52287.75
ಮನೆ ಹಾನಿ158516217.88
ಬೆಳೆ ಹಾನಿ773399493.57

ಇದನ್ನೂ ಓದಿ: Yashasvini Card-2024: ಯಶಸ್ವಿನಿ ಕಾರ್ಡ್ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ! ಹೊಸ ಅರ್ಜಿ ಸಲ್ಲಿಸಲು ಅವಕಾಶ!

ಹಿಂಗಾರು-2024:

ಹಾನಿಯ ವಿವರಗಳುಒಟ್ಟು ಹಾನಿಪಾವತಿಸಿರುವ ಪರಿಹಾರದ ಮೊತ್ತ(ಲಕ್ಷಗಳಲ್ಲಿ)
ಮಾನವ ಹಾನಿ33165
ಜಾನುವಾರು ಹಾನಿ19232.69
ಮನೆ ಹಾನಿ49641916.61
ಬೆಳೆ ಹಾನಿ824499145.94

Bele parihara status- ರೈತರು ತಮಗೆ ಪರಿಹಾರ ಹಣ ಜಮಾ ಅಗಿರುವ ವಿವರವನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವ ವಿಧಾನ:

ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಮನೆಯಲ್ಲೆ ಇದ್ದು ಯಾವುದೇ ಸರಕಾರಿ ಕಚೇರಿ ಅಲೆದಾಡದೇ ಮೊಬೈಲ್ ನಲ್ಲೇ ಪರಿಹಾರದ ಹಣ ಜಮಾ ವಿವರವನ್ನು ಪಡೆಯಬಹುದು.

Step-1: ಇಲ್ಲಿ ಒತ್ತಿ Bele Parihara Payment ಅಧಿಕೃತ Parihara ತಂತ್ರಾಂಶವನ್ನು ಪ್ರವೇಶ ಮಾಡಬೇಕು.

parihara status check

Step-2: ಬಳಿಕ ಇಲ್ಲಿ ವರ್ಷ ಆಯ್ಕೆಯಲ್ಲಿ "2024-25" ಎಂದು ಆಯ್ಕೆ ಮಾಡಿಕೊಂಡು ಋತು, ವಿಪತ್ತಿನ ವಿಧ, ಜಿಲ್ಲೆ ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂದು ವರದಿ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬೆಳೆ ಹಾನಿ ಪರಿಹಾರ ಜಮಾ ಅಗಿದೆ ಎನ್ನುವ ಸಂಪೂರ್ಣ ವಿವರ ತೋರಿಸುತ್ತದೆ.

WhatsApp Group Join Now
Telegram Group Join Now
Share Now: