HomeNew postsParihara New order-ರೈತರಿಗೆ ಬರ ಪರಿಹಾರ ವಿತರಣೆ ಕುರಿತು ನೂತನ ಆದೇಶ ಪ್ರಕಟ!

Parihara New order-ರೈತರಿಗೆ ಬರ ಪರಿಹಾರ ವಿತರಣೆ ಕುರಿತು ನೂತನ ಆದೇಶ ಪ್ರಕಟ!

ರೈತರ ಖಾತೆಗೆ ಬರ ಪರಿಹಾರ ವಿತರಣೆ ಮತ್ತು ಖಾತೆಗೆ ಜಮಾ ಅಗಿರುವ ಹಣ ಪಾವತಿ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ನೂತನ ಆದೇಶ(Parihara New order) ಹೊರಡಿಸಲಾಗಿದೆ.

ಈ ಆದೇಶದಲ್ಲಿ ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದ್ದು ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

2023ರ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ತೀರ್ವ ಮಳೆ ಕೊರತೆಯಿಂದ ಉಂಟಾದ ಬೀಕರ ಬರದಿಂದ ಬೆಳೆ ನಷ್ಟದಿಂದಾಗಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸ್ವಲ್ಪ ಮಟ್ಟಿಗೆ ಅರ್ಥಿಕವಾಗಿ ನೆರವಾಗಲು NDRF ಮಾರ್ಗಸೂಚಿಯನ್ವಯ ನಿಗದಿಪಡಿಸಿರುವ ಬೆಳೆ ನಷ್ಟ ಪರಿಹಾರವನ್ನು ಹಿಂದಿನ ವಾರ ರೈತರ ಖಾತೆಗೆ ಜಮಾ ಮಾಡಲಾಗಿದ್ದು ಈ ಹಣವನ್ನು ರೈತರಿಗೆ ವಿತರಣೆ ಮಾಡುವ ಕುರಿತು ನೂತನ ಆದೇಶದ ವಿವರ ಈ ಕೆಳಗಿನಂತಿದೆ.

ಇದನ್ನೂ ಓದಿ: Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!

Parihara New order details-ನೂತನ ಆದೇಶದ ವಿವರ ಹೀಗಿದೆ:

ರಾಜ್ಯ ಮತ್ತು ಕೇಂದ್ರದಿಂದ NDRF ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆ ಬೆಳೆಯುವ ರೈತರಿಗೆ 2.5 ಎಕರೆಗೆ 8,500 ರೂ ಮತ್ತು ನೀರಾವರಿ ಬೆಳೆಗೆ 17,000 ರೂ, ಬಹುವಾರ್ಷಿಕ ಬೆಳೆಗೆ 22,500 ರೂ ರಂತೆ ಎರಡು ಕಂತುಗಳಲ್ಲಿ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗಿದ್ದು ಈ ಹಣವನ್ನು ಯಾವುದೇ ಕಾರಣಕ್ಕೂ ಬ್ಯಾಂಕಿನವರು ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದ್ದು ಬರ ಪರಿಹಾರದ ಸಂಪೂರ್ಣ ಹಣವನ್ನು ರೈತರಿಗೆ ನೀಡತಕ್ಕದ್ದು ಎಂದು ತಿಳಿಸಲಾಗಿದೆ.

Reason for parihara payment failed-ಬರ ಪರಿಹಾರ ನಿಮಗೆ ಜಮಾ ಆಗಿಲ್ಲದಿದ್ದರೆ ಎಲ್ಲಿ ವಿಚಾರಿಸಬೇಕು?

ಈಗಾಗಲೇ ರಾಜ್ಯದ್ಯಂತ ಬಹುತೇಕ ರೈತರ ಖಾತೆಗೆ ಬರ ಪರಿಹಾರ ಜಮಾ ಅಗಿದ್ದು ಒಂದಿಷ್ಟು ರೈತರ ಖಾತೆಗೆ ತಾಂತ್ರಿಕ ಕಾರಣಗಳಿಂದ ಪರಿಹಾರದ ಹಣ ವರ್ಗಾವಣೆ ಅಗಿರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ರೈತರು ಪರಿಹಾರದ ಹಣ ಜಮಾ ಆಗಿಲ್ಲದಿದ್ದರೆ ಒಮ್ಮೆ ನಿಮ್ಮ ಹಳ್ಳಿಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ(VA)ಯನ್ನು ಅಥವಾ ನಿಮ್ಮ ಹೋಬಳಿಯ ಕೃಷಿ ಇಲಾಕೆಯ ರೈತ ಸಂಪರ್ಕ ಕೇಂದ್ರವನ್ನು ಕಚೇರಿ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಹಣ ವರ್ಗಾವಣೆ ಸ್ಥಿತಿ ಕುರಿತು ವಿಚಾರಿಸಬಹುದು.

ಇದನ್ನೂ ಓದಿ: Parihara bank details-ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

Parihara payment failed status-ಪರಿಹಾರದ ಹಣ ಜಮಾ ಅಗದಿರಲು ತಾಂತ್ರಿಕ ಕಾರಣಗಳ ವಿವರ ಹೀಗಿದೆ:

1) ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಜೋಡಣೆ ಮಾಡದಿರುವುದು.

2) FID ಅಲ್ಲಿ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡದಿರುವುದು ಮತ್ತು FID ನಂಬರ್ ರಚನೆ ಮಾಡಿಕೊಳ್ಳದಿರುವುದು.

3) ಆಧಾರ್ ಕಾರ್ಡ ಮತ್ತು ವೈಯಕ್ತಿಕ ವಿವರ ತಾಳೆ(Miss match) ಅಗದಿರುವುದು.

4) IFSC ಕೋಡ್ ತಪ್ಪಾಗಿರುವುದು.

ಇದನ್ನೂ ಓದಿ: Village administrative officer-1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

Most Popular

Latest Articles

Related Articles