Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

October 10, 2025 | Siddesh
Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!
Share Now:

ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ತೆಗೆದುಕೊಳ್ಳಲಾಗಿದ್ದು ಇನ್ನು ಮುಂದೆ ರಾಜ್ಯದ್ಯಂತ ಮಹಿಳಾ ನೌಕರಿಗೆ ಪ್ರತಿ ತಿಂಗಳು 1 ದಿನ ಋತುಚಕ್ರ ರಜೆಯನ್ನು(Period Leave Policy) ಹೆಚ್ಚುವರಿಯಾಗಿ ನೀಡಲು ಸಭೆಯಲ್ಲಿ ಅಧಿಕೃತ ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯದ ಮಹಿಳಾ ನೌಕರರ ಬಹು ದಿನಗಳ ಬೇಡಿಕೆಯಲ್ಲಿ ಒಂದಾದ ಋತುಚಕ್ರ ರಜೆಗೆ ರಾಜ್ಯ ಸರಕಾರ(Karnataka) ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಈ ನಿರ್ಣಯವು ಖಾಸಗಿ ಮತ್ತು ಸರಕಾರಿ, ಅರೇ ಸರಕಾರಿ ಎಲ್ಲಾ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಅನ್ವಯ ಅಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Shadi Bhagya Scheme-"ಶಾದಿ ಭಾಗ್ಯ" ಯೋಜನೆಯಡಿ ವಿವಾಹಕ್ಕೆ ರೂ. 50,000 ಸಹಾಯಧನ ಪಡೆಯಲು ಅರ್ಜಿ!

ಇಂದಿನ ಅಂಕಣದಲ್ಲಿ ಪ್ರತಿ ತಿಂಗಳು ನೀಡುವ 1 ದಿನ ಋತುಚಕ್ರ ರಜೆಯು(Period Leave Policy In karnataka) ಯಾರಿಗೆಲ್ಲ ಅನ್ವಯಸಲಿದೆ? ಈ ನಿರ್ಣಯದ ಕುರಿತು ಒಂದಿಷ್ಟು ಪ್ರಮುಖ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Article Highlights-ಹೈಲೈಟ್ಸ್:

  • ಪ್ರತಿ ತಿಂಗಳು ಮಹಿಳಾ ನೌಕರರಿಗೆ 1 ದಿನ ಋತುಚಕ್ರ ರಜೆ.
  • ಸರ್ಕಾರಿ ಹಾಗೂ ಸಹಕಾರಿ, ಖಾಸಗಿ ನೌಕರರಿಗೆ ಅನ್ವಯ.
  • ಆರೋಗ್ಯ ಮತ್ತು ಮಾನಸಿಕ ಆರಾಮದ ದೃಷ್ಟಿಯಿಂದ ಮಹತ್ವದ ನಿರ್ಧಾರ.
  • ಮಹಿಳಾ ನೌಕರರಿಂದ ಹಾಗೂ ಜನರಿಂದ ಭಾರಿ ಮೆಚ್ಚುಗೆ.

ಇದನ್ನೂ ಓದಿ: SSLC Exam Fee-ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ! ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ?

Ladies Periods Holiday In Karnataka-ಯಾರಿಗೆಲ್ಲ ಈ ನಿರ್ಣಯದ ಪ್ರಯೋಜನ ಸಿಗಲಿದೆ?

ರಾಜ್ಯ ಸರಕಾರದಿಂದ ನಿನ್ನೆ ನಡೆದ ಸಚಿವ ಸಂಬಪುಟ ಸಭೆಯಲ್ಲಿ ತೆಗೆದುಕೊಂಡಿರುವ ಐತಿಹಾಸಿಕ ತೀರ್ಮಾನವಾಗಿರುವ ರಾಜ್ಯದ್ಯಂತ ಮಹಿಳಾ ನೌಕರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 1 ದಿನ ಋತುಚಕ್ರ ಸಮಯದಲ್ಲಿ ನೀಡುವ ರಜೆಯು ಯಾರಿಗೆಲ್ಲ ಅನ್ವಯಸಿದೆ ಎನ್ನುವ ವಿವರ ಹೀಗಿದೆ:

  • ಸರಕಾರಿ ಕಚೇರಿ ಮಹಿಳಾ ನೌಕರರು.
  • ಅರೇ ಸರಕಾರಿ, ಕೋ-ಆಪರೇಟಿವ್ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ನೌಕರರು.
  • ಖಾಸಗಿ ಸಂಸ್ಥೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೂ ಸಹ ಇದರ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: Sukanya Samriddhi Yojane- ಪೋಸ್ಟ್ ಆಫೀಸ್‌ನಲ್ಲಿ ಅತೀ ಹೆಚ್ಚು ಬಡ್ಡಿ ನೀಡುವ ಯೋಜನೆ!

Period Leave Policy

CM Of Karnataka-ನಾಡಿನ ಲಕ್ಷಾಂತರ ಹೆಣ್ಣುಮಕ್ಕಳ ಆಶಯ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಾಡಿನ ಲಕ್ಷಾಂತರ ಹೆಣ್ಣುಮಕ್ಕಳು, ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟವನ್ನು ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನವನ್ನು ನಮ್ಮ ಸರ್ಕಾರವು ಕೈಗೊಂಡಿದೆ.

ಸರ್ಕಾರವು ಮಾನವೀಯ ಕಾಳಜಿಯನ್ನು, ತನ್ನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮಾತೃ ಹೃದಯವನ್ನು ಹೊಂದಿದ್ದಾಗ ಮಾತ್ರ ಇಂಥದ್ದೊಂದು ನಿರ್ಣಯ ಕೈಗೊಳ್ಳಲು ಸಾಧ್ಯ. ಈ ಐತಿಹಾಸಿಕ ನಿರ್ಣಯವನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಾವು ಕೈಗೊಂಡಿದ್ದೇವೆ ಎಂಬುದನ್ನು ನಿಮ್ಮೊಂದಿಗೆ ಅತ್ಯಂತ ಸಂತೋಷದಿಂದ ಹಂಚಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ: Anganavadi Worker Recruitment-ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ!

Period Leave Policy-ಯಾವಾಗಿನಿಂದ ಜಾರಿ?

ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತುತ ಕೈಗೊಂಡಿರುವ ಮಹಿಳಾ ನೌಕರಿಗೆ 1 ದಿನ ಋತುಚಕ್ರ ರಜೆ ನಿಯಮವು ಮುಂದಿನ ತಿಂಗಳಿ ನಿಂದಲೇ ಜಾರಿಗೆ ಬರಲಿದೆ.

Ladies Periods Holiday-ರಾಜ್ಯದ ಮಹಿಳಾ ನೌಕರರಿಂದ ಪ್ರಶಂಸೆ:

ರಾಜ್ಯ ಸರ್ಕಾರದಿಂದ ಮಹಿಳಾ ನೌಕರರಿಗೆ ನೀಡಿರುವ ಹೊಸ ಸೌಲಭ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈಗಿನಿಂದ ಸರ್ಕಾರಿ, ಸಹಕಾರಿ ಹಾಗೂ ಕೆಲವು ಖಾಸಗಿ ಸಂಸ್ಥೆಗಳ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನ “ಋತುಚಕ್ರ ರಜೆ” ನೀಡಲಾಗುತ್ತದೆ.

ಇದನ್ನೂ ಓದಿ: Dasara Holidays For Schools-ಬ್ರ‍ೇಕಿಂಗ್ ನ್ಯೂಸ್ ದಸರಾ ರಜೆ ಅ.18 ರವರೆಗೆ ವಿಸ್ತರಣೆ ಮಾಡಿದ ರಾಜ್ಯ ಸರಕಾರ!

ಈ ನಿರ್ಧಾರದಿಂದ ಮಹಿಳಾ ನೌಕರರ ಆರೋಗ್ಯ ಮತ್ತು ಮಾನಸಿಕ ಆರಾಮದತ್ತ ಸರ್ಕಾರದ ಸಂವೇದನಾಶೀಲ ನಿಲುವು ಸ್ಪಷ್ಟವಾಗಿದೆ. ಹಲವು ವರ್ಷಗಳಿಂದ ಈ ಬೇಡಿಕೆ ಬಾಕಿ ಉಳಿದಿದ್ದರೂ, ಈಗ ಸರ್ಕಾರ ಅದನ್ನು ಜಾರಿಗೊಳಿಸಿರುವುದು ದೊಡ್ಡ ಸಂತೋಷದ ವಿಷಯವಾಗಿದೆ ಎಂದು ಮಹಿಳಾ ನೌಕರರು ಸಂತಸವನ್ನು ಹೊರಹಾಕಿದ್ದಾರೆ.

ಮಹಿಳೆಯರು ಋತುಚಕ್ರದ ಸಮಯದಲ್ಲಿ ಶಾರೀರಿಕ ತೊಂದರೆ ಅನುಭವಿಸುವುದು ಸಹಜ. ಈ ಸಂದರ್ಭದಲ್ಲಿ ಕಡ್ಡಾಯ ಹಾಜರಾತಿ ಒತ್ತಡದಿಂದ ಕೆಲಸದ ಪರಿಣಾಮಕಾರಿತ್ವ ಕುಸಿಯುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಹೆಜ್ಜೆ “ಮಹಿಳಾ ಸಬಲೀಕರಣದ ನೂತನ ಅಧ್ಯಾಯ” ಎಂದು ಹೇಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: