PF Amount Withdrawal-ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ! ಇನ್ಮುಂದೆ ಶೇ 75% ಹಣ ವಿತ್ ಡ್ರಾ ಮಾಡಬಹುದು!

October 23, 2025 | Siddesh
PF Amount Withdrawal-ಪಿಎಫ್ ನಿಯಮದಲ್ಲಿ ಭಾರೀ ಬದಲಾವಣೆ! ಇನ್ಮುಂದೆ ಶೇ 75% ಹಣ ವಿತ್ ಡ್ರಾ ಮಾಡಬಹುದು!
Share Now:

ಕೇಂದ್ರ ಸರಕಾರದಿಂದ ಉದ್ಯೋಗಿಗಳಿಗೆ ಇಪಿಎಫ್(PF Account) ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯಲ್ಲಿನ ಉಳಿತಾಯ ಹಣವನ್ನು ಈ ಹಿಂದೆ ನಿರ್ಧಿಷ್ಟ ಪ್ರಮಾಣದಲ್ಲಿ ಇಂತಿಷ್ಟೇ ಭಾರಿ ವಿತ್ ಡ್ರಾ(PF Amount Withdrawal) ಮಾಡಲು ಅವಕಾಶವಿತ್ತು ಅದರೆ ಈ ಎಲ್ಲಾ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಿ ಹೊಸ ವಿತ್ ಡ್ರಾ 2025 ನಿಯಮವನ್ನು ಜಾರಿಗೆ ತರಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರಕಾರವು ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ನೀಡಲು ಇಪಿಎಫ್ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಯನ್ನು(PF Amount Withdrawal Rules) ಒದಗಿಸಲಾಗುತ್ತದೆ ಉದ್ಯೋಗಿಗಳು ತಾವು ಕೆಲಸ ಮಾಡುವ ಸಂಸ್ಥೆವತಿಯಿಂದ ನೀಡುವ ವೇತನದಲ್ಲಿ ಇಂತಿಷ್ಟು ಹಣ ಮತ್ತು ಕಂಪನಿವತಿಯಿಂದ ಒಂದಿಷ್ಟು ಹಣ ಒದಗಿಸಲಾಗುತ್ತದೆ.

ಇದನ್ನೂ ಓದಿ: Mahindra Scholarship-ಮಹೀಂದ್ರಾ ಎಂಪವರ್‌ಹರ್ ಸ್ಕಾಲರ್‌ಶಿಪ್ ರೂ 5,500/- ಪಡೆಯಲು ಅರ್ಜಿ ಅಹ್ವಾನ!

ಪಿಎಫ್ ಒಂದು ನಾವು ಕಂಪನಿಯಲ್ಲಿ(PF Withdrawal)ಕೆಲಸ ಮಾಡುವ ದಿನಗಳಲ್ಲಿ ನಾವು ಮತ್ತು ನಮ್ಮ ಉದ್ಯೋಗದಾತರು/ಕಂಪನಿ ಸೇರಿ ಪ್ರತಿ ತಿಂಗಳು ನಿರ್ಧಿಷ್ಟ ಪ್ರಮಾಣದಲ್ಲಿ ಉಳಿಸುವ ಒಂದು ಹಣಕಾಣಿಸ ಭದ್ರತೆ ಈ ಹಣವು ನಿವೃತ್ತಿ ನಂತರ ನಮ್ಮ ಪಿಂಚಣಿಯ ಆಧಾರವಾಗಿರುತ್ತದೆ. ಈ ಹಿಂದೆ ಇದ್ದ ನಿಯಮದ ಪ್ರಕಾರ ಪಿಎಫ್ ಖಾತೆಯಲ್ಲಿರುವ ಹಣವನ್ನು ಮದುವೆ,ಮನೆ ಖರೀದಿ,ಮಕ್ಕಳ ಶಿಕ್ಷಣ ಅಥವಾ ತುರ್ತು ಅನಾರೋಗ್ಯದ ವೇಳೆಯಲ್ಲಿ ಇಂತಿಷ್ಟು ಶೇಕಡವಾರು ಹಣವನ್ನು ಈ ಖಾತೆಯಿಂದ ವಿತ್ ಡ್ರಾ ಮಾಡಲು ಅಗತ್ಯ ಅರ್ಜಿ ನಮೂನೆ ಮತ್ತು ಸೂಕ್ತ ದಾಖಲೆ/ರಶೀದಿ ಸಲ್ಲಿಸಿ ಹಣ ಹಿಂಪಡೆಯಲು ಅವಕಾಶವಿತ್ತು ಈ ಪದ್ದತಿಯನ್ನು ಮತ್ತಷ್ಟು ಸರಳ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.

PF Amount Withdrawal Old Rules-ಈ ಹಿಂದೆ ಇದ್ದ ನಿಯಮ:

ಹಳೆಯ ನಿಯಮದ ಪ್ರಕಾರ ಪಿಎಫ್ ಖಾತೆಯಲ್ಲಿನ ಉಳಿತಾಯದ ಹಣವನ್ನು ಆರ್ಥಿಕ ಸಂಕಷ್ಟ ಸನ್ನಿವೇಶದಲ್ಲಿ ಹಿಂಪಡೆಯಲು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಇಲ್ಲಿ ಯಾವ ಉದ್ದೇಶಕ್ಕಾಗಿ ಹಣವನ್ನು ಪಡೆಯಲಾಗುತ್ತಿದೆ ಎನ್ನುವ ಮಾಹಿತಿಯನ್ನು ಹಾಕಿ ಪೂರಕ ರಶೀದಿ/ದಾಖಲೆಗಳನ್ನು ಸಲ್ಲಿಸಿಬೇಕಿತ್ತು ಕೇಲವು ಸನ್ನಿವೇಶದಲ್ಲಿ ಅರ್ಜಿ ತಿರಸ್ಕಾರವು ಸಹ ಅಗುತ್ತಿದ್ದವು. ಇದರಿಂದ ಪಿಎಫ್ ಖಾತೆದಾರರಿಗೆ ತುಂಬಾ ತೊಂದರೆ ಅಗುತ್ತಿತ್ತು.

ಇದನ್ನೂ ಓದಿ: B-Khata To A-Khata-ಇನ್ಮುಂದೆ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆಯಿರಿ!

PF Amount Withdrawal New Rules-ಹೊಸ ನಿಯಮದ ವಿವರ:

ನೂತನ ಪಿಎಫ್ ವಿತ್ ಡ್ರಾ 2025 ನಿಯಮದ ಪ್ರಕಾರ ಹಣವನ್ನು ವಿತ್ ಡ್ರಾ ಮಾಡಲು ಮೂರು ವಿಭಾಗಳನ್ನು ಮಾಡಲಾಗಿದ್ದು ನಿರ್ದಿಷ್ಟ ಉದ್ದೇಶವನ್ನು ನೀಡಿ ಅರ್ಜಿಯನ್ನು ಸಲ್ಲಿಸಿ ಪಿಎಫ್ ಹಣವನ್ನು ಕ್ಲೇಮ್/ವಿತ್ ಡ್ರಾ ಮಾಡಬಹುದು ಇದಕ್ಕಾಗಿ ಯಾವುದೇ ದಾಖಲೆ/ರಶೀದಿಯನ್ನು ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಹಣ ಹಿಂಪಡೆಯಲು 3 ವಿಭಾಗದ ಮಾಹಿತಿ ವಿವರ ಈ ಕೆಳಗಿನಂತಿವೆ:

1) Essential Needs/ ಅವಶ್ಯಕ ಅಗತ್ಯಗಳಿಗಾಗಿ: ಈ ವಿಭಾಗದಲ್ಲಿ ಶಿಕ್ಷಣ,ಮದುವೆ, ಆರೋಗ್ಯ ಬರುತ್ತದೆ.

2) Housing Needs/ಮನೆ ಸಂಬಂಧಿತ ಅಗತ್ಯ ಕೆಲಸಕ್ಕೆ: ಹೊಸ ಮನೆ ಖರೀದಿ ಸಮಯದಲ್ಲಿ, ಮನೆ ನಿರ್ಮಾಣಕ್ಕಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿರುವುದನ್ನು ಮರುಪಾವತಿ ಮಾಡಲು, ಹೊಸ ಮನೆ ನಿರ್ಮಾಣ ಸಮಯದಲ್ಲಿ ಹಿಂಪಡೆಯಬಹುದು.

3) Special Circumastances/ವಿಶೇಷ ಪರಿಸ್ಥಿತಿಗಳು: ಉದ್ಯೋಗ ಕಳೆದಕೊಂಡಾಗ, ಪ್ರಕೃತಿ ವಿಕೋಪದಿಂದ ಉಂಟಾದ ನಷ್ಟದ ಸಮಯದಲ್ಲಿ ಇತ್ಯಾದಿ ಸನ್ನಿವೇಶದಲ್ಲಿ ಈ ಕಾರಣವನ್ನು ನೀಡಿ ಪಿಎಫ್ ಖಾತೆಯಿಂದ ಹಣವನ್ನು ವಿತ್ ಡ್ರಾ ಮಾಡಬಹುದು.

ಈ ಹಿಂದೆ ಇದ ನಿಯಮದಲ್ಲಿ ಈ ಮೇಲೆನ ಕಾರಣಗಳನ್ನು ನೀಡಿ ಕ್ಲೇಮ್ ಫಾರ್ಮ್ ಅನ್ನು ಭರ್ತಿ ಮಾಡಿ ಕೊನೆಯಲ್ಲಿ ಮದುವೆ ಇದ್ದರೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಮತ್ತು ಖರ್ಚಿನ ರಶೀದಿಯನ್ನು ಅಪ್ಲೋಡ್ ಮಾಡಬೇಕಾಗಿತ್ತು ಅದರೆ ನೂತನ ನಿಯಮದ ಪ್ರಕಾರ ಕ್ಲೇಮ್ ಫಾರ್ಮ್ ಅನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿದರೆ ಸಾಗುತ್ತದೆ.

ಇದನ್ನೂ ಓದಿ: Best Farmer Award-ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಶ್ರೇಷ್ಠ ತೋಟಗಾರಿಕಾ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಗೆ ಅರ್ಜಿ ಆಹ್ವಾನ!

PF status

PF Amount Withdrawal-ಈಗ ನಿಮ್ಮ ಪಿಎಫ್ ಖಾತೆಯಿಂದ ಶೇ 75% ಹಣ ಹಿಂಪಡೆಯಬಹುದು:

ಪಿಎಫ್ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡಲು ಇದ್ದ ಹಳೆಯ ನಿಯಮದ ಪ್ರಕಾರ ಕೇವಲ Employee contribution(ಉದ್ಯೋಗಿಯ ಕೊಡುಗೆ) ನಲ್ಲಿರುವ ಹಣದಿಂದ ಮಾತ್ರ ಹಿಂಪಡೆಯಲು ಅವಕಾಶವಿತ್ತು ಅದರೆ ಈಗ ನಿಮ್ಮ ಮತ್ತು ಕಂಪನಿಯ ಇಬ್ಬರ ಭಾಗದ ಉಳಿತಾಯ ಹಣವನ್ನು ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ.

ಉದಾಹರಣೆಗೆ: ನಿಮ್ಮ ಪಿಎಫ್ ಖಾತೆಯಲ್ಲಿ ₹8.0 ಲಕ್ಷ ಉಳಿತಾಯದ ಹಣ ಇದ್ದರೆ ಇದರಲ್ಲಿ ಶೇ 75% ಅಂದರೆ ₹6.0 ಲಕ್ಷ ಹಣವನ್ನು ವಿತ್ ಡ್ರಾ ಮಾಡಲು ನೂತನ ನಿಯಮದಲ್ಲಿ ಅವಕಾಶ ನೀಡಲಾಗಿದೆ.

PF Amount Withdrawal Limit-ವಿತ್ ಡ್ರಾ ಮಿತಿ ಹೆಚ್ಚಳ:

ಈ ಹಿಂದಿನ ನಿಯಮದ ಪ್ರಕಾರ ಪಿಎಫ್ ಖಾತೆಯನ್ನು ಹೊಂದಿರುವ ಖಾತೆದಾರರು ಶಿಕ್ಷಣ ಮತ್ತು ಮದುವೆ ಉದ್ದೇಶಕ್ಕಾಗಿ ಕೇವಲ 3 ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶವಿತ್ತು ಅದರೆ ಪ್ರಸ್ತುತ ಹೊಸ ನಿಯಮದ ಪ್ರಕಾರ ಮಕ್ಕಳ ಶಿಕ್ಷಣಕ್ಕಾಗಿ ಪಿಎಫ್ ಖಾತೆಯಿಂದ 10 ಬಾರಿ ಮತ್ತು ಮದುವೆ ಉದ್ದೇಶಕ್ಕಾಗಿ 5 ಬಾರಿ ಹಣವನ್ನು ಪಿಎಫ್ ಖಾತೆಯಿಂದ ಹಿಂಪಡೆಯಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಂಬಲ ಬೆಲೆಯಲ್ಲಿ ಹತ್ತಿ ಖರೀದಿಗೆ ನೋಂದಣಿ ಪ್ರಾರಂಭ!

PF Account Status-ಪಿಎಫ್ ಖಾತೆ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ:

ಪಿಎಫ್ ಖಾತೆದಾರರು ತಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ? ಕ್ಲೈಮ್ ಸ್ಟೇಟಸ್ ಸೇರಿದಂತೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಿರುವ ಕೇಂದ್ರ ಸರಕಾರದ ಅಧಿಕೃತ ಪಿಎಫ್ ವೆಬ್ಸೈಟ್ ಅನ್ನು ಭೇಟಿ ಮಾಡಿ ಚೆಕ್ ಮಾಡಬಹುದು.

PF Website-ಪಿಎಫ್ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: