PM Kisan 21th Installment-ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ನಿಗಧಿ!

November 15, 2025 | Siddesh
PM Kisan 21th Installment-ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ಅಧಿಕೃತ ದಿನಾಂಕ ನಿಗಧಿ!
Share Now:

ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan) ಯೋಜನೆಯಡಿ ದೇಶದ 9 ಕೋಟಿ ರೈತರ ಖಾತೆಗೆ 21ನೇ ಕಂತಿನ ಹಣವನ್ನು(PM Kisan 21th Installment) ವರ್ಗಾವಣೆ ಮಾಡಲು ಅಧಿಕೃತ ದಿನಾಂಕವನ್ನು ನಿಗಧಿ ಮಾಡಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶಾದ್ಯಂತ ರೈತರಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ನೆರವನ್ನು ನಾಲ್ಕು ತಿಂಗಳಿಗೆ ರೂ 2,000/- ದಂತೆ ಒಟ್ಟು ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡಲಾಗುತ್ತಿದ್ದು, ಪ್ರಸ್ತುತ ಕೇಂದ್ರ ಸರಕಾರವು 21ನೇ ಕಂತಿನ ಹಣ ವರ್ಗಾವಣೆಗೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.

ಇದನ್ನೂ ಓದಿ: Nikon India scholarship-ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಇಂದಿನ ಅಂಕಣದಲ್ಲಿ ರೈತರ ಖಾತೆಗೆ ಯಾವ ದಿನ 21ನೇ ಕಂತಿನ ರೂ ಜಮಾ ಅಗಲಿದೆ? 21ನೇ ಕಂತಿನ ಹಣವನ್ನು ಪಡೆಯಲು ರೈತರು ಅನುಸರಿಸಬೇಕಾದ ಅಗತ್ಯ ಕ್ರಮಗಳಾವುವು? ಪಿಎಂ ಕಿಸಾನ್ ಹಣ ಜಮಾ ಸ್ಥಿತಿಯನ್ನು ತಮ್ಮ ಮೊಬೈಲ್ ಮೂಲಕ ಹೇಗೆ ಚೆಕ್ ಮಾಡಿಕೊಳ್ಳುವುದು? ಈ ಕುರಿತು ಸಂಪೂರ್ಣ ವಿವರವನ್ನು ಇಲ್ಲಿ ತಿಳಿಸಲಾಗಿದೆ.

PM Kisan 21th Installment Date-ದೇಶದ 9 ಕೋಟಿ ರೈತರ ಖಾತೆಗೆ 21ನೇ ಕಂತಿನ ಹಣ ವರ್ಗಾವಣೆ:

ಕೇಂದ್ರ ಸರಕಾರವು ದೇಶ 9 ಕೋಟಿ ರೈತರ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21ನೇ ಕಂತಿನ ರೂ 2,000/- ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗುತ್ತಿದ್ದು ಇದರ ಅಂಕ-ಅಂಶ ವಿವರ ಮತ್ತು ಬಿಡುಗಡೆ ದಿನಾಂಕ ಹೀಗಿದೆ:

  • 21ನೇ ಕಂತಿನ ಹಣ ವರ್ಗಾವಣೆ ದಿನಾಂಕ- 19 ನವೆಂಬರ್ 2025
  • ಒಟ್ಟು ರೈತರ ಸಂಖ್ಯೆ- 9 ಕೋಟಿ
  • 21ನೇ ಕಂತಿನ ಒಟ್ಟು ಹಣ- ₹18,000 ಕೋಟಿ
  • ಇಲ್ಲಿಯವರೆಗೆ ಈ ಯೋಜನೆಯಡಿ ಒಬ್ಬ ರೈತರ ಖಾತೆಗೆ ಜಮಾ ಅಗಿರುವ ಕಂತು- 20 ಕಂತುಗಳು
  • ಒಬ್ಬ ರೈತರ ಖಾತೆಗೆ ಜಮಾ ಅಗಿರುವ ಒಟ್ಟು ಮೊತ್ತ- ₹40,000/-

ಇದನ್ನೂ ಓದಿ: Mahindra Scholarship-ಮಹೀಂದ್ರ ಸಂಸ್ಥೆಯಿಂದ ರೂ 6,000/- ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿ ಆಹ್ವಾನ!

21th Installment PM Kisan Beneficiary List-21ನೇ ಕಂತಿನ ಅರ್ಥಿಕ ನೆರವನ್ನು ಪಡೆಯಲು ಅರ್ಹ ರೈತರ ಪಟ್ಟಿ ಬಿಡುಗಡೆ:

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 21ನೇ ಕಂತಿನ ಅರ್ಥಿಕ ನೆರವನ್ನು ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಕೇಂದ್ರದ ಅಧಿಕೃತ www.pmkisan.gov.in ವೆಬ್ಸಈತ್ ನಲ್ಲಿ ಪ್ರಕಟಿಸಲಾಗಿದ್ದು ರೈತರು ತಮ್ಮ ಮೊಬೈಲ್ ಮೂಲಕ ಈ ಕೆಳಗಿನ ಹಂತಗಳನ್ನು ಅನುಸರಿಸಿ ನಿಮ್ಮ ಹಳ್ಳಿಯ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬಹುದು.

Step-1: ಪ್ರಥಮ ಹಂತದಲ್ಲಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ PM Kisan Beneficiary List ಮಾಡಿ ಅಧಿಕೃತ ಕೇಂದ್ರ ಸರಕಾರದ ಕೃಷಿ ಮಂತ್ರಾಲಯದ ಪಿಎಂ ಕಿಸಾನ್ ತಂತ್ರಾಂಶವನ್ನು ಬೇಟಿ ಮಾಡಿ.

Step-2: ನಂತರ ಈ ಪುಟದಲ್ಲಿ ರಾಜ್ಯ/State , ನಿಮ್ಮ ಜಿಲ್ಲೆ/District , ತಾಲ್ಲೂಕು/Sub-District , Block , ಹಳ್ಳಿ/Village ಹೆಸರನ್ನು ಆಯ್ಕೆ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ 21ನೇ ಕಂತಿನ ಹಣ ಪಡೆಯಲು ಅರ್ಹರಿರುವ ಪಟ್ಟಿ ತೆರೆದುಕೊಳ್ಳುತ್ತದೆ ಒಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: KSRTC Flybus Service-ಬೆಂಗಳೂರು ವಿಮಾನ ನಿಲ್ದಾಣದಿಂದ ದಾವಣಗೆರೆಗೆ ಫ್ಲೈ ಬಸ್ ಸೇವೆ ಆರಂಭ!

PM Kisan 21th Installment

ಇದನ್ನೂ ಓದಿ: Krishi Mela Bengalure-2025: ಬೆಂಗಳೂರು ಜಿಕೆವಿಕೆಯಲ್ಲಿ ಇಂದಿನಿಂದ 4 ದಿನ ಕೃಷಿ ಮೇಳ!

PM Kisan Status Check On Mobile-ಪಿಎಂ ಕಿಸಾನ್ ಹಣ ಜಮಾ ವಿವರವನ್ನು ಚೆಕ್ ಮಾಡುವುದು ಹೇಗೆ?

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮಾ ಅಗಿದೆ ಮತ್ತು 21ನೇ ಕಂತಿನ ಹಣ ಜಮಾ ಬಿಡುಗಡೆಯಾದ ಬಳಿಕ ಈ ವಿವರವನ್ನು ಚೆಕ್ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

Step-1: ರೈತರು ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ PM Kisan Status Check ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಈ ವೆಬ್ ಪೇಜ್ ನಲ್ಲಿ ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣಿಸುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Get OTP" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸುವ OTP ಅನ್ನು "Enter OTP" ಕಾಲಂ ನಲ್ಲಿ ಹಾಕಿ "Get Data" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಕಂತಿನವಾರು ಬಿಡುಗಡೆ ಅಗಿರುವ ಪಿಎಂ ಕಿಸಾನ್ ಯೋಜನೆಯ ಹಣದ ಜಮಾ ವಿವರ ಕಾಣಿಸುತ್ತದೆ. ಇಲ್ಲಿ ಹಣ ಜಮಾ ದಿನಾಂಕ,UTR Details,ಇನ್ನಿತರೆ ಬ್ಯಾಂಕ್ ವಿವರವನ್ನು ಇಲ್ಲಿ ಕಾಣಬಹುದು.

ಇದನ್ನೂ ಓದಿ: Muthoot Finance Scholarship-ಮುತ್ತೊಟ್ ಫೈನಾನ್ಸ್ ನಿಂದ ₹2.40 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

PM Kisan Registration Number-ಪಿಎಂ ಕಿಸಾನ್ ರಿಜಿಸ್ಟ್ರೇಷನ್ ನಂಬರ್ ತಿಳಿಯುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಅಧಿಕೃತ ಜಾಲತಾಣದಲ್ಲಿ ಕೆಳಗಿನ ಹಂತಗಳನ್ನು ಅನುಸರಿಸಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ನಂಬರ್ ಅನ್ನು ತೆಗೆದುಕೊಳ್ಳಬಹುದು ಈ ರಿಜಿಸ್ಟ್ರೇಷನ್ ನಂಬರ್ ಇದ್ದರೆ ಮಾತ್ರ ಪಿಎಂ ಕಿಸಾನ್ ಹಣ ಜಮಾ ವಿವರವನ್ನು ತಿಳಿಯಲು ಸಾಧ್ಯವಾಗುತ್ತದೆ.

Step-1: ಇಲ್ಲಿ ಕ್ಲಿಕ್ ಮಾಡಿ "PM Kisan Registration Number" ಅಧಿಕೃತ ವೆಬ್ಸೈಟ್ ಭೇಟಿ ಮಾಡಿದ ಬಳಿಕ "Know Your Registration Number" ವೆಬ್ ಪೇಜ್ ಒಪನ್ ಅಗುತ್ತದೆ.

Step-2: ತದನಂತರ ಈ ಪುಟದಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಪಕ್ಕದಲ್ಲಿ ಕಾಣಿಸುವ ಕ್ಯಾಪ್ಚ್ ಕೋಡ್ ಹಾಕಿ "Get Mobile OTP" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ Get Data ಬಟನ್ ಮೇಲ್ ಕ್ಲಿಕ್ ಮಾಡಿದರೆ ನಿಮ್ಮ ಪಿಎಂ ಕಿಸಾನ್ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಕಾಣಿಸುತ್ತದೆ. ಈ ನಂಬರ್ ಅನ್ನು ಒಂದು ಕಡೆ ನಮೂದಿಸಿಕೊಂಡು ಪಿಎಂ ಕಿಸಾನ್ ಹಣದ ಜಮಾ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Sportsman Incentive-ಕ್ರ‍ೀಡಾಪಟುಗಳಿಗೆ 10 ಲಕ್ಷದ ವರೆಗೆ ಪ್ರೋತ್ಸಾಹಧನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಅಹ್ವಾನ!

PM Kisa eKYC-21ನೇ ಕಂತಿನ ಹಣ ಪಡೆಯಲು ಈ ಮಾಹಿತಿ ಚೆಕ್ ಮಾಡಿ:

ಇ-ಕೆವೈಸಿ ಪೂರ್ಣಗೊಂಡಿರಬೇಕು.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ ಲಿಂಕ್ ಅಗಿರಬೇಕು.
ನಿಮ್ಮ ಜಮೀನಿನ ವಿವರಕ್ಕೂ ಮತ್ತು ಆಧಾರ್ ವಿವರ ತಾಳೆಯಾಗಿರಬೇಕು.

ಗಮನಿಸಿ: ನಿಮಗೆ 20ನೇ ಕಂತಿನ ಹಣ ಜಮಾ ಅಗಿದ್ದರೆ ಯಾವುದೇ ತಾಂತ್ರಿಕ ತೊಂದರೆ ಇಲ್ಲದೆ ನಿಮ್ಮ ಖಾತೆಗೆ 21ನೇ ಕಂತಿನ ಹಣ ಜಮಾ ಅಗುತ್ತದೆ ಒಂದೊಮ್ಮೆ ತಾಂತ್ರಿಕ ದೋಷದಿಂದ 20ನೇ ಕಂತಿನ ಹಣ ಜಮಾ ಅಗದ್ದಿದ್ದರೆ ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲಾತಿ ಸಲ್ಲಿಸಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಿ.

ಇದನ್ನೂ ಓದಿ: Bike Repair Training-ಉಚಿತ 30 ದಿನದ ದ್ವಿಚಕ್ರ ವಾಹನ ರಿಪೇರಿ ಮತ್ತು ಸರ್ವಿಸಿಂಗ್ ತರಬೇತಿಗೆ ಅರ್ಜಿ ಆಹ್ವಾನ!

PM Kisan Helpline-ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261 ಅಥವಾ 1800-115-526
PM Kisan Website-ಹೆಚ್ಚಿನ ಮಾಹಿತಿಗಾಗಿ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್- Click Here
PM Kisan Twitter/X Account-ಪಿಎಂ ಕಿಸಾನ್ ಟ್ವಿಟರ್/ಎಕ್ಸ್-Follow Now

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: