HomeNew postsPM-kisan-2024: ಕಿಸಾನ್ ಸಮ್ಮಾನ್ ರೂ 2,000 ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

PM-kisan-2024: ಕಿಸಾನ್ ಸಮ್ಮಾನ್ ರೂ 2,000 ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PMKISAN) ಯೋಜನೆಯಡಿ 16 ನೇ ಕಂತಿನ ಹಣ ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರೈತರು ಒಮ್ಮೆ ಸರಕಾರದ FRUITS PMKISAN ತಂತ್ರಾಂಶವನ್ನು ಭೇಟಿ ಮಾಡಿ ಹಳ್ಳಿವಾರು ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ? ಎಂದು ಈ ಅಂಕಣದಲ್ಲಿ ವಿವರಿಸಿರುವ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.

ಕೇಂದ್ರ ಸರಕಾರದಿಂದ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣವನ್ನು ಇದೇ ತಿಂಗಳು ಅಂದರೆ 28 ಫೆಬ್ರವರಿ 2024 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯರು ಏಕ ಕಾಲಕ್ಕೆ ದೇಶದ 9 ಕೋಟಿ ರೈತರ ಖಾತೆಗೆ ರೂ 2,000 ಸಾವಿರವನ್ನು ಜಮಾ ಮಾಡಲಿದ್ದಾರೆ.

ಇದನ್ನೂ ಓದಿ: Horticulture training- 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ! ರೂ 1,750 ಮಾಸಿಕ ಶಿಷ್ಯವೇತನ.

Fruits Pmkisan- ಕಿಸಾನ್ ಸಮ್ಮಾನ್ ರೂ 2,000 ಪಡೆಯಲು ಅರ್ಹರಿರುವ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ:

ರೈತರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ರಾಜ್ಯ ಮತ್ತು ಕೇಂದ್ರ ಸರಕಾರದ ಎರಡು ತಂತ್ರಾಂಶವನ್ನು ಭೇಟಿ ಮಾಡಿ ಹಳ್ಳಿವಾರು ಈ ಯೋಜನೆಯಡಿ ರೂ 2,000 ಪಡೆಯಲು ಅರ್ಹರಿವರು ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ? ಇಲ್ಲವಾ? ಎಂದು ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ ಲಿಂಕ್ pmkisan farmer list ಮೇಲೆ ಕ್ಲಿಕ್ ಮಾಡಿ ರಾಜ್ಯ ಸರಕಾರದ ಅಧಿಕೃತ FRUITS PMKISAN ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.  

Step-2: ತದನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ವನ್ನು ಆಯ್ಕೆ ಮಾಡಿಕೊಂಡು “ವೀಕ್ಷಿಸು” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈ ರೀತಿ ಹಂತಗಳನ್ನು ಅನುಸರಿಸಿದ ಬಳಿಕ ನಿಮ್ಮ ಹಳ್ಳಿಯಲ್ಲಿ ಈ ಯೋಜನೆಯಡಿ ರೂ 2,000 ಪಡೆಯಲು ಅರ್ಹರಿರುವ ರೈತರ ಪಟ್ಟಿ ತೋರಿಸುತ್ತದೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ? ಎಂದು ನೀವು ಒಮ್ಮೆ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Senior citizen bus pass- ಹಿರಿಯ ನಾಗರಿಕರಿಗೆ ರಿಯಾಯಿತಿ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಗಮನಿಸಿ: ರೈತರು ಈ ಪಟ್ಟಿಯಲ್ಲಿ ತಮ್ಮ ಹೆಸರಿರುವುದರ ಜೊತೆಗೆ “ಸ್ಥಿತಿ” ವಿಭಾಗದಲ್ಲಿ “Approved” ಎಂದು ತೋರಿಸಬೇಕು ಮತ್ತು ಪಕ್ಕದಲ್ಲಿ ಕಾಣಿಸುವ “PMKISAN ಗೆ ಕಳುಹಿಸಲಾಗಿದ” ಕಾಲಂ ನಲ್ಲಿ “YES” ಎಂದು ತೋರಿಸಬೇಕು ಹೀಗಿದ್ದರೆ ಮಾತ್ರ ನಿಮ್ಮ 16 ನೇ ಕಂತಿನ ಹಣ ಜಮಾ ಅಗುತ್ತದೆ.

ಒಂದೊಮ್ಮೆ “NO” ಎಂದು ಇದ್ದರೆ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿದಾರರ ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ/ಉತಾರ್/RTC ಸಲ್ಲಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿ ಸ್ಥಗಿತವಾಗಿದೆ ಎಂದು ಪರಿಶೀಲಿಸಿಕೊಳ್ಳಬೇಕು.

Pmkisan farmer list- ಕೇಂದ್ರ ಸರಕಾರದ ಅಧಿಕೃತ PM-kisan ವೆಬ್ಸೈಟ್ ಭೇಟಿ ಮಾಡಿ ಹಳ್ಳಿವಾರು ಅರ್ಹ ಪಟ್ಟಿ ನೋಡುವ ವಿಧಾನ:

ರೈತರು ರಾಜ್ಯ ಸರಕಾರದ Fruits pmkisan ವೆಬ್ಸೈಟ್ ಭೇಟಿ ಮಾಡಿ ಯಾವ ವಿಧಾನ ಅನುಸರಿಸಿ ಹಳ್ಳಿವಾರು ಅರ್ಹ ಪಟ್ಟಿಯನ್ನು ನೋಡಬಹುದು ಎಂದು ಮೇಲೆ ತಿಳಿಸಲಾಗಿದೆ ಅದೇ ರೀತಿ ಮತ್ತೊಂದು ವಿಧಾನ ಅನುಸರಿಸಿ ಕೇಂದ್ರ ಸರಕಾರದ pmkisa.gov.in ವೆಬ್ಸೈಟ್ ಭೇಟಿ ಮಾಡಿ ಹೇಗೆ ಅರ್ಹ ರೈತರ ಪಟ್ಟಿಯನ್ನು ನೋಡಬಹುದು ಎಂದು ನಮ್ಮ ಪುಟದ ಹಿಂದಿನ ಅಂಕಣದಲ್ಲಿ ವಿವರಿಸಿದ್ದೆವೆ ಇಲ್ಲಿ ಕ್ಲಿಕ್:- click here ಮಾಡಿ ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Yashaswini card- ಯಶಸ್ವಿನಿ ಕಾರ್ಡ ಮಾಡಿಸಿಕೊಳ್ಳುವವರಿಗೆ ಇದು ಕೊನೆಯ ಅವಕಾಶ! 5 ಲಕ್ಷ ಉಚಿತ ನಗದು ರಹಿತ ಚಿಕಿತ್ಸೆ.

Pradhana mantri kisan samman nidhi yojana- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಿನ್ನೆಲೆ:

ಭಾರತ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ದಿನಾಂಕ. 01.12.2018 ರಿಂದ ಅನ್ವಯವಾಗುವಂತೆ ಫೆಬ್ರವರಿ 2019 ರಿಂದ ಅನುಷ್ಠಾನಗೊಳಿಸಲಾಗುತ್ತಿದೆ. 

ಸದರಿ ಯೋಜನೆಯಡಿ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಉತ್ತಮ ಪರಿಕರಗಳನ್ನು ಬಳಸಿ ಬೆಳೆಗಳ ಆರೋಗ್ಯ ನಿರ್ವಹಣೆ ಹಾಗು ಹೆಚ್ಚಿನ ಇಳುವರಿ ಪಡೆದು ನಿರೀಕ್ಷಿತ ಆದಾಯ ಗಳಿಸಲು ನೆರವಾಗುವ ಉದ್ದೇಶದಿಂದ ಸಾಗುವಳಿ ಭೂಮಿ ಹೊಂದಿರುವ (01.02.2019 ರಳೊಳಗಾಗಿ ಸ್ವಾಧೀನದಲ್ಲಿರುವ /ಭೂದಾಖಲೆಯಲ್ಲಿ ಹೆಸರಿರುವ) ಎಲ್ಲಾ ಅರ್ಹ ರೈತ ಕುಟುಂಬ (ಒಂದು ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು)ಕ್ಕೆ ವಾರ್ಷಿಕ ರೂ.6000/-ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. 

ಸದರಿ ನೆರವನ್ನು ರೂ.2000/-ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ.

ಇದನ್ನೂ ಓದಿ: PM kisan 16th installment- ಪಿ ಎಂ ಕಿಸಾನ್ ಯೋಜನೆಯ 16ನೇ ಕಂತಿನ ರೂ 2,000 ಈ ದಿನ ರೈತರ ಖಾತೆಗೆ ಜಮಾ ಅಗಲಿದೆ! ಇಲ್ಲಿದೆ ಅರ್ಹ ರೈತರ ಪಟ್ಟಿ ನೋಡಲು ವೆಬ್ಸೈಟ್ ಲಿಂಕ್. 

ಇನ್ನು ಹೆಚ್ಚಿನ ಮಾಹಿತಿಗಾಗಿ:

ಕೃಷಿ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೊಬೈಲ್ ನಂಬರ್: Download Now
ಕೇಂದ್ರದ ಅಧಿಕೃತ ಪಿ.ಎಂ-ಕಿಸಾನ್ ವೆಬ್ಸೈಟ್: Click here
ರಾಜ್ಯದ ಅಧಿಕೃತ ಪಿ.ಎಂ-ಕಿಸಾನ್ ವೆಬ್ಸೈಟ್: Click here
ಪಿ ಎಂ ಕಿಸಾನ್ ಅರ್ಜಿ ಸ್ಥಿತಿ ಚೆಕ್ ಮಾಡಲು: PM kisan status check
ಪಿ ಎಂ ಕಿಸಾನ್ ಹಳ್ಳಿವಾರು ಪಟ್ಟಿ: PM-kisan farmer list
ಪಿ.ಎಂ ಕಿಸಾನ್ ಯೋಜನೆಯ ಕುರಿತು ನಮ್ಮ ಪುಟದ ಇತರೆ ಅಂಕಣಗಳು: click here

Most Popular

Latest Articles

Related Articles