PM Kisan Amount-ಪಿಎಂ ಕಿಸಾನ್ ಆರ್ಥಿಕ ನೆರವು ಏರಿಕೆ ನಿರೀಕ್ಷೆ!

January 12, 2026 | Siddesh
PM Kisan Amount-ಪಿಎಂ ಕಿಸಾನ್ ಆರ್ಥಿಕ ನೆರವು ಏರಿಕೆ ನಿರೀಕ್ಷೆ!
Share Now:

ಪ್ರಸ್ತುತ ಕೇಂದ್ರ ಸರಕಾರದಿಂದ ದೇಶದ 9 ಕೋಟಿ ರೈತರ ಖಾತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ(PM Kisan) ವಾರ್ಷಿಕ ರೂ 6,000/- ಆರ್ಥಿಕ ನೆರವನ್ನು ಒದಗಿಸಲಾಗುತ್ತಿದ್ದು ಈ ಬಾರಿಯ ಬಜೆಟ್ ನಲ್ಲಿ ಈ ಮೊತ್ತವನ್ನು ಹೆಚ್ಚಳ ಮಾಡುವ ಸಾಧ್ಯತೆಯಿದ್ದು ಈ ಕುರಿತು ಒಂದಿಷ್ಟು ಅಗತ್ಯ ವಿವರವನ್ನು ಹಂಚಿಕೊಳ್ಳಲಾಗಿದೆ.

ನವದೆಹಲಿಯಲ್ಲಿ ಸಂಸತ್ ಅಧಿವೇಶನವು ಜನವರಿ 28 ರಿಂದ ಪಾರಂಭವಾಗಲಿದ್ದು ಫೆಬ್ರವರಿ 01 ರಂದು 2026 ವರ್ಷದ ಕೇಂದ್ರ ಬಜೆಟ್ ಮಂಡನೆ ಅಗಲಿದ್ದು ಈ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ(Kisan Samman Yojane) ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ 2,000/- ದಂತೆ ವಾರ್ಷಿಕ ರೂ 6,000/- ಆರ್ಥಿಕ ನೆರವನ್ನು ಹೆಚ್ಚಳ ಮಾಡುವ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bele Parihara-ಈ ಜಿಲ್ಲೆಯ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆ!

ಮಾರುಕಟ್ಟೆಯಲ್ಲಿ ಪ್ರಸ್ತುತ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಡೀಸೆಲ್ ಬೆಲೆಯು ಏರಿಕೆಯಾಗಿದ್ದು ಇದರಿಂದಾಗಿ ಕೃಷಿ ಬಳಕೆಯ ಪರಿಕರಗಳ ಬೆಲೆಯು ಸಹ ಏರಿಕೆಯಾಗಿರುವುದರಿಂದ ರೈತರಿಗೆ ಆರ್ಥಿಕವಾಗಿ ನೆರವನ್ನು ಒದಗಿಸಲು ಪಿಎಂ ಕಿಸಾನ್(PM Kisan)ಯೋಜನೆಯಡಿ ಈ ಹಿಂದೆ ಒದಗಿಸುತ್ತಿದ್ದ ಆರ್ಥಿಕ ನೆರವನ್ನು ಹೆಚ್ಚಳ ಮಾಡಲು ಕೇಂದ್ರ ಸರಕಾರವು ಪ್ರಸ್ತಾವನೆಯನ್ನು ಸಲ್ಲಿಸುವ ನಿರೀಕ್ಷೆ ಇದೆ.

PM Kisan Yojana Amount Hike News-6 ಸಾವಿರದಿಂದ 10 ಸಾವಿರಕ್ಕೆ ಏರಿಕೆ ನಿರೀಕ್ಷೆ:

ಸರಕಾರದ ಮೂಲಗಳ ಪ್ರಕಾರ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ಮೂರು ಕಂತುಗಳಲ್ಲಿ ಒದಗಿಸುವ ರೂ 6,000/- ಆರ್ಥಿಕ ನೆರವನ್ನು ರೂ 10,000/- ಸಾವಿರಕ್ಕೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಕೇಂದ್ರವು ಹೊಂದಿದೆ.

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

PM Kisan Scheme Details-ಪಿಎಂ ಕಿಸಾನ್ ಅಂಕಿ-ಅಂಶ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕೆಲವು ಪ್ರಮುಖ ಅಂಕಿ-ಅಂಶಗಳ ಮಾಹಿತಿ ಈ ಕೆಳಗಿನಂತಿದೆ:

  • ಯೋಜನೆ ಜಾರಿ ವರ್ಷ- 2019
  • ಇಲ್ಲಿಯವರೆಗೆ ಒಟ್ಟು ಬಿಡುಗಡೆಯಾದ ಕಂತುಗಳು- 21 ಕಂತುಗಳು
  • ಒಟ್ಟು ಫಲಾನುಭವಿ ರೈತರ ಸಂಖ್ಯೆ- 9 ಕೋಟಿ
  • ಒಬ್ಬ ಫಲಾನುಭವಿಗೆ ಜಮಾ ಅದ ಒಟ್ಟು ಮೊತ್ತ- - ₹42,000/-

ಇದನ್ನೂ ಓದಿ: Dairy Shed Subsidy-ಗ್ರಾಮ ಪಂಚಾಯಿತಿಯಿಂದ ದನದ ಶೆಡ್ ನಿರ್ಮಾಣಕ್ಕೆ ರೂ 57,000 ಪಡೆಯುವುದು ಹೇಗೆ!

PM Kisan Farmers List- ನಿಮ್ಮ ಹಳ್ಳಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಪಡೆಯುವ ವಿಧಾನ:

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಹಳ್ಳಿವಾರು ಅರ್ಹರಿರುವ ರೈತರ ಪಟ್ಟಿಯನ್ನು ಕೃಷಿಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಪಡೆಯಬಹುದು.

Step-1: ರೈತರು ತಮ್ಮ ಮೊಬೈಲ್ ನಲ್ಲಿ ಮೊದಲಿಗೆ ಈ PM Kisan Farmers List ಲಿಂಕ್ ಮೇಲ್ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ತದನಂತರ ಈ ಪೇಜ್ ನಲ್ಲಿ ಕಾಣುವ ರಾಜ್ಯ/State , ನಿಮ್ಮ ಜಿಲ್ಲೆ/District , ತಾಲ್ಲೂಕು/Sub-District , Block , ಹಳ್ಳಿ/Village ಹೆಸರನ್ನು ಆಯ್ಕೆ ಮಾಡಿಕೊಂಡು "Get Report" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ಪಟ್ಟಿ ತೆರೆದುಕೊಳ್ಳುತ್ತದೆ ಒಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Free Pumpset Repair-ಉಚಿತ 30 ದಿನದ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

PM Kisan Status Check On Mobile-ಈ ಯೋಜನೆಯ ಹಣ ಜಮಾ ವಿವರವನ್ನು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು?

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮಾ ಅಗಿದೆ ಮತ್ತು ಕಂತಿನವಾರು ಜಮಾ ಅಗಿರುವ ಹಣದ ಜಮಾ ವಿವರವನ್ನು ಸಹ ಇಲ್ಲಿ ನೋಡಬಹುದು.

Step-1: ಮೊದಲ ಹಂತದಲ್ಲಿ ರೈತರು ಈ PM-Kisan Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ 2 ತಿಂಗಳ ಬಾಕಿ ಹಣ ಬಿಡುಗಡೆ ನೂತನ ಮಾಹಿತಿ ಪ್ರಕಟ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

PM Kisan News

Step-2: ಇದಾದ ಬಳಿಕ ಈ ಪೇಜ್ ನಲ್ಲಿ ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ಕಾಣಿಸುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Get OTP" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ತದನಂತರ ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸುವ OTP ಅನ್ನು "Enter OTP" ಕಾಲಂ ನಲ್ಲಿ ಹಾಕಿ "Get Data" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಕಂತಿನವಾರು ಬಿಡುಗಡೆ ಅಗಿರುವ ಪಿಎಂ ಕಿಸಾನ್ ಯೋಜನೆಯ ಹಣದ ಜಮಾ ವಿವರ ಕಾಣಿಸುತ್ತದೆ. ಇಲ್ಲಿ ಹಣ ಜಮಾ ದಿನಾಂಕ,UTR Details,ಇನ್ನಿತರೆ ಬ್ಯಾಂಕ್ ವಿವರವನ್ನು ಇಲ್ಲಿ ಕಾಣಬಹುದು.

PM Kisan Helpline-ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ 155261 ಅಥವಾ 1800-115-526
Kisan Samman Website-ಹೆಚ್ಚಿನ ಮಾಹಿತಿಗಾಗಿ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: