PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!

February 15, 2026 | Siddesh
PM-Kisan Amount-22 ಸಾವಿರ ರೈತರಿಗೆ ಸಿಹಿ ಸುದ್ದಿ: ಶೀಘ್ರವೇ ಬಿಡುಗಡೆಯಾಗಲಿದೆ ಪಿಎಂ-ಕಿಸಾನ್ ಬಾಕಿ ಹಣ!
Share Now:

ಬೆಂಗಳೂರು: ತಾಂತ್ರಿಕ ಕಾರಣಗಳಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಹಣದಿಂದ ವಂಚಿತರಾಗಿದ್ದ ರಾಜ್ಯದ ಸಾವಿರಾರು ರೈತರಿಗೆ ಕೊನೆಗೂ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಲ್ಲಿಸಿದ್ದ ಮನವಿಯ ಮೇರೆಗೆ, ಸುಮಾರು 22 ಸಾವಿರಕ್ಕೂ ಹೆಚ್ಚು ಅರ್ಹ ಫಲಾನುಭವಿಗಳನ್ನು ಪಾವತಿ ಪಟ್ಟಿಗೆ ಸೇರಿಸಲಾಗಿದೆ. ಈ ಕ್ರಮದಿಂದಾಗಿ ಕಳೆದ ಕೆಲವು ಸಮಯದಿಂದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ರೈತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಂತಾಗಿದೆ.

ಈ ಪ್ರಕ್ರಿಯೆಯು ರಾಜ್ಯ ಸರ್ಕಾರವು(PM-Kisan Amount) ನೀಡಿದ ದೃಢೀಕರಣದ ಆಧಾರದ ಮೇಲೆ ನಡೆದಿದ್ದು, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಚಲುವರಾಯಸ್ವಾಮಿ ಅವರು, "ರಾಜ್ಯದ ರೈತರ ಹಿತದೃಷ್ಟಿಯಿಂದ ನಾವು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ, ನ್ಯಾಯ ಒದಗಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ" ಎಂದು ತಿಳಿಸಿದ್ದಾರೆ. ಉಳಿದಿರುವ ಇತರ ಅರ್ಹ ರೈತರ ದಾಖಲೆಗಳ ಪರಿಶೀಲನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Vehicle Loan Noc-ವಾಹನ ಮಾಲೀಕರಿಗೆ ಬಿಗ್ ರಿಲೀಫ್! ಈಗ ವಾಹನ ಸಾಲ ಚುಕ್ತಾ ಮಾಡುವುದು ಭಾರೀ ಸುಲಭ!

ಈ ಮಹತ್ವದ ನಿರ್ಧಾರದಿಂದಾಗಿ ಅರ್ಹ ರೈತರಿಗೆ ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ಸಿಗುವಂತಾಗಿದೆ. 2025ರ ಡಿಸೆಂಬರ್‌ನಲ್ಲಿ ಪತ್ರ ಬರೆದು ಈ ಕುರಿತು ಗಮನ ಸೆಳೆಯಲಾಗಿತ್ತು. ಪ್ರಸ್ತುತ ಗುರುತಿಸಲಾದ 22 ಸಾವಿರ ಫಲಾನುಭವಿಗಳಿಗೆ 22ನೇ ಕಂತಿನ ಪಾವತಿ(PM-Kisan 22th Installment)ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದ್ದು, ಇವರ ಬ್ಯಾಂಕ್ ಖಾತೆಗಳಿಗೆ ಶೀಘ್ರದಲ್ಲೇ ಹಣ ಜಮೆಯಾಗಲಿದೆ ಎಂದು ವರದಿ ತಿಳಿಸಿದೆ.

PM-Kisan 22th Installment Date-ರೈತರ ಖಾತೆಗೆ 22ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು?

ಸಾಮಾನ್ಯವಾಗಿ ಪಿಎಂ ಕಿಸಾನ್ ಯೋಜನೆಯಡಿ ಒಟ್ಟು ಒಂದು ವರ್ಷದಲ್ಲಿ 3 ಕಂತಿಗಳಲ್ಲಿ ನಾಲ್ಕು ತಿಂಗಳಿಗೆ ಒಮ್ಮೆ ಅರ್ಹ ಫಲಾನುಭವಿಗಳಿ DBT ಮೂಲಕ ನೇರವಾಗಿ ರೂ 2,000/- ಆರ್ಥಿಕ ನೆರವನ್ನು ಬಿಡುಗಡೆ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಇಲ್ಲಿಯವರೆಗೆ 21 ನೇ ಕಂತಿನ ವರಗೆ ಹಣ ಬಿಡುಗಡೆ ಮಾಡಲಾಗಿದ್ದು 22 ಕಂತಿನ ಹಣವನ್ನು ಮಾರ್ಚ-2026 ಕೊನೆಯ ವಾರ‍ ಅಥವಾ ಎಪ್ರಿಲ್-2026 ಮೊದಲನೆ ವಾರ ರೈತರ ಖಾತೆಗೆ ಜಮಾ ಅಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Gruhalakshmi Amount-ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ! ಜಮಾ ವಿವರವನ್ನು ತಿಳಿಯುವುದು ಹೇಗೆ?

PM-Kisan Total Installment-ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಬಿಡುಗಡೆ ಮಾಡಲಾಗಿದೆ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಒಟ್ಟು 21 ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು ತಲಾ ರೂ 2,000/- ದಂತೆ ಒಟ್ಟು 42,000/- ರೂ ಆರ್ಥಿಕ ನೆರವು ಒದಗಿಸಲಾಗಿದೆ.

PM-Kisan Yojana-ಪಿಎಂ ಕಿಸಾನ್ ಯೋಜನೆಯ ರೈತರು ತಪ್ಪದೇ ಅನುಸರಿಸಬೇಕಾದ ಕ್ರಮಗಳು ಯಾವುವು:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರು ಯಾವುದೇ ತಾಂತ್ರಿಕ ಅಡೆಚಣೆಗಳಿಲ್ಲದೇ ನಿರಂತರವಾಗಿ ಆರ್ಥಿಕ ನೆರವನ್ನು ಪಡೆಯಲು ಈ ಕೆಳಗಿನ ಕ್ರಮಗಳನ್ನು ತಪ್ಪದೇ ಅನುಸರಿಸಿ.

ಇ-ಕೆವೈಸಿ ನವೀಕರಿಸಿ: ಆಧಾರ್ ಕಾರ್ಡ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಈ ಯೋಜನೆಯ ಆರ್ಥಿಕ ನೆರವು ಜಮಾ ಅಗಲಿದ್ದು ನಿಮ್ಮ ಬ್ಯಾಂಕ್ ಖಾತೆ ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಇ-ಕೆವೈಸಿ ಅಪ್ದೇಟ್ ಅಗಿರುವುದನ್ನು ಖಚಿತಪಡಿಸಿಕೊಳ್ಳಿ.

ಇದನ್ನೂ ಓದಿ: Shakti Yojane Smart Card-ಇನ್ಮುಂದೆ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸಲು ಆಧಾರ್ ಬದಲು ಸ್ಮಾರ್ಟ್ ಕಾರ್ಡ್!

ಆಧಾರ್ ಲಿಂಕ್: ಈ ಯೋಜನೆಯ ಹಣವು ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಅಗಲಿರುವ ಕಾರಣ ಎಲ್ಲಾ ಅರ್ಜಿದಾರರು ತಪ್ಪದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಬೇಕು.

ಭೂ ದಾಖಲೆಗಳ ಅಪ್‌ಡೇಟ್: ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಜಮೀನಿನ ಮಾಲೀಕತ್ವದಲ್ಲಿ ಯಾವುದೇ ಬಗ್ಗೆ ಬದಲಾವಣೆಗಳನ್ನು ಮಾಡಿಸಿದ್ದರೆ ಕೂಡಲೇ ಈ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ನಿಮ್ಮ ಅರ್ಜಿಯಲ್ಲಿ ಭೂ ವಿವರವನ್ನು ನವೀಕರಿಸಿ.

ಇದನ್ನೂ ಓದಿ: Free Skill Training-31 ದಿನದ ಉಚಿತ ಎಂಬ್ರಾಯಡರಿ ತರಬೇತಿ ಪಡೆಯಲು ಅರ್ಜಿ ಆಹ್ವಾನ!

PM-Kisan Beneficiary List-2026: ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಹ ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಪಡೆಯುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲೇ ಕೇಂದ್ರ ಸರಕಾರದ ಅಧಿಕೃತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಕೆಳಗಿನ ವಿಧಾನವನ್ನು ಅನುಸರಿಸಿ ಈ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಒಂದೆರಡು ಕ್ಲಿಕ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ಈ PM-Kisan Beneficiary List ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಿಸಾನ್ ಸಮ್ಮಾನ್ ಜಾಲತಾಣವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Grama Sahayaka Pension-ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ರೂ. 5.00 ಲಕ್ಷ ಇಡಿಗಂಟು ಸೌಲಭ್ಯಕ್ಕೆ ಆದೇಶ ಪ್ರಕಟ!

PM-Kisan amount

Step-2: ಇದಾದ ನಂತರ ಇಲ್ಲಿ ಮುಖಪುಟದಲ್ಲಿ ಕಾಣಿಸುವ "Beneficiary List" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಇಲ್ಲಿ ರಾಜ್ಯ/ಜಿಲ್ಲೆ/ತಾಲ್ಲೂಕು/ಹಳ್ಳಿ ಹೆಸರನ್ನು ಆಯ್ಕೆ ಮಾಡಿಕೊಂಡು "Get Report" ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯ ಅರ್ಹ ರೈತರ ಪಟ್ಟಿ ತೋರಿಸುತ್ತದೆ.

PM-Kisan Status-ಪಿಎಂ ಕಿಸಾನ್ ಹಣ ಜಮಾ ವಿವರವನ್ನು ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಫಲಾನುಭವಿ ರೈತರು ಈ ಕೆಳಗಿನ ವಿಧಾನವನ್ನು ಅನುಸರಿಸಿ ಇಲ್ಲಿಯವರೆಗೆ ಈ ಯೋಜನೆ ಅಡಿಯಲ್ಲಿ ಜಮಾ ಅಗಿರುವ ಕಂತಿನವಾರು 21 ನೇ ಕಂತಿನವರೆಗಿನ ಹಣದ ವಿವರವನ್ನು ತಿಳಿಯಬಹುದು.

Step-1: ಇಲ್ಲಿ ಕ್ಲಿಕ್ PM Kisan Statuts Check ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿದ ಬಳಿಕ ಮುಖಪುಟದಲ್ಲಿ ಕೆಳಗೆ ಕಾಣಿಸುವ "Know Your Statuts" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯ Registration Number ಅನ್ನು ಹಾಕಿ ಕ್ಯಾಪ್ಚ್ ಕೋಡ್ ನಮೂದಿಸಿ Get OTP ಬಟನ್ ಮೇಲೆ ಕ್ಲಿಕ್ ಮಾಡಿ OTP ನಮೂದಿಸಿ ಮುಂದಿನ ಪೇಜ್ ಭೇಟಿ ಮಾಡಿ.

Step-2: ಈ ಪೇಜ್ ನಲ್ಲಿ ಕಂತಿನವಾರು ಯಾವ ದಿನ ಹಣ ಜಮಾ ಅಗಿದೆ? ಬ್ಯಾಂಕ್ ಖಾತೆ ಕೊನೆಯ ನಾಲ್ಕು ನಂಬರ್, UTR ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ತೋರಿಸುತ್ತದೆ.

ಗಮನಿಸಿ: ನಿಮ್ಮ ಅರ್ಜಿಯ Registration Number ಅನ್ನು ತೆಗೆದುಕೊಳ್ಳಲು "Know Your Registration No" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸುವಾಗ ನೀಡಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಅಗತ್ಯ ವಿವರವನ್ನು ಸಲ್ಲಿಸಿ Registration Number ಅನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: