PM Svanidi Yojane 2025-ಪಿಎಂ ಸ್ವನಿಧಿ ಯೋಜನೆ ಎಂದರೇನು? ಎಷ್ಟು ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ!

October 12, 2025 | Siddesh
PM Svanidi Yojane 2025-ಪಿಎಂ ಸ್ವನಿಧಿ ಯೋಜನೆ ಎಂದರೇನು? ಎಷ್ಟು ಸಾಲ ಪಡೆಯಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

ಕೇಂದ್ರ ಸರಕಾರವು ಬೀದಿ ಬದಿಯ ವ್ಯಾಪಾರಿಗಳಿಗೆ ಪ್ರಾಥಮಿಕ ಹಂತದಲ್ಲಿ ಬಂಡವಾಳವನ್ನು ಪೂರೈಸಿಕೊಳ್ಳಲು ಬ್ಯಾಂಕ್ ಸಹಯೋಗದಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಮತ್ತು ಸಾಲದ ಮೇಲೆ ಸಬ್ಸಿಡಿಯನ್ನು ಒದಗಿಸಲು ಪಿಎಂ ಸ್ವನಿಧಿ ಯೋಜನೆಯನ್ನು(PM Svanidi) ಜಾರಿಗೆ ತರಲಾಗಿದ್ದು, ಇಂದಿನ ಲೇಖನದಲ್ಲಿ ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಅನೇಕ ಜನರಿಗೆ ಪಿಎಂ ಸ್ವನಿಧಿ ಯೋಜನೆ(PM Svanidi Scheme) ಎಂದರೇನು? ಈ ಯೋಜನೆ ಅಡಿಯಲ್ಲಿ ಯಾರೆಲ್ಲ ಪ್ರಯೋಜನ ಪಡೆದುಕೊಳ್ಳಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಅಗತ್ಯವಿರುವವರಿಗೆ ಮಾಹಿತಿ ತಲುಪಿಸಲು ಸಹಕರಿಸಿ.

ಇದನ್ನೂ ಓದಿ: Bajaj scholarship 2025-ಇಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ 8 ಲಕ್ಷ ವಿದ್ಯಾರ್ಥಿ ವೇತನ! ಈಗಲೇ ಅರ್ಜಿ ಸಲ್ಲಿಸಿ.

ಪಿಎಂ ಸ್ವನಿಧಿ- "ಪ್ರಧಾನ ಮಂತ್ರಿ ಬೀದಿ ಬದಿ ಮಾರಾಟಗಾರರ ಆತ್ಮನಿರ್ಭರ ನಿಧಿ ಯೋಜನೆ(PM Svanidi Yojane Application)" ಪ್ರಸ್ತುತ ಈ ಯೋಜನೆಯಡಿ ಬೀದಿ ಬದಿಯಲ್ಲಿ ವಿವಿಧ ಬಗ್ಗೆಯ ವ್ಯಾಪಾರವನ್ನು ಮಾಡುವ ಉದ್ದಿಮೆಗಳಿಗೆ ಅತೀ ಕಡಿಮೆ ಬಡ್ಡಿಯಲ್ಲಿ ವಾಣಿಜ್ಯ ಮತ್ತು ರಾಷ್ಟ್ರಿಕೃತ ಬ್ಯಾಂಕ್ ಮೂಲಕ ಮೂರು ಹಂತದಲ್ಲಿ ಸಾಲವನ್ನು ಒದಗಿಸಲಾಗುತ್ತದೆ.

PM Svanidhi Eligibility-ಪಿಎಂ ಸ್ವನಿಧಿ ಯೋಜನೆ ಅಡಿ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಪಿಎಂ ಸ್ವನಿಧಿ- "ಪ್ರಧಾನ ಮಂತ್ರಿ ಬೀದಿ ಬದಿ ಮಾರಾಟಗಾರರ ಆತ್ಮನಿರ್ಭರ ನಿಧಿ ಯೋಜನೆ" ಅನ್ನು ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸಣ್ಣ ವ್ಯಾಪಾರಿಗಳಿಗೆ ಬಂಡವಾಳವನ್ನು ಕೃಡೀಕರಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ರಸ್ತೆ ಬದಿಯಲ್ಲಿ ವ್ಯಾಪಾರವನ್ನು ನಡೆಸುವವರು ಅರ್ಜಿ ಸಲ್ಲಿಸಬಹುದು ಅರ್ಹ ವ್ಯಾಪಾರಿಗಳ ಪಟ್ಟಿ ಹೀಗಿದೆ.

ರಸ್ತೆಯ ಬದಿಯಲ್ಲಿ ತರಕಾರಿ ಅಂಗಡಿಯವರು,ಪಾನ್ ಶಾಪ್,ಲಾಂಡ್ರಿ,ಹಣ್ಣು ವ್ಯಾಪಾರಿಗಳು,ಕುಶಲಕರ್ಮಿಗಳ ಉತ್ಪನ್ನ ಮಾರಾಟಗಾರರು,ಪುಸ್ತಕ ಮಾರಾಟಗಾರರು ಸೇರಿದಂತೆ ಎಲ್ಲಾ ಬಗ್ಗೆಯ ದಿನನಿತ್ಯ ವಸ್ತುಗಳನ್ನು ಮಾರಾಟ ಮಾಡುವವರು ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ: Vidyasiri Scholarship 2025-ವಿದ್ಯಾ ಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

How To Apply For PM Svanidi Scheme-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಇರುವ ಶಾಖೆಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ಅರ್ಜಿ ಸಲ್ಲಿಸಬಹುದು ಅಥವಾ ಈ ಅಂಕಣದಲ್ಲಿ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

PM Svanidi Loan Amount-ಪಿಎಂ ಸ್ವನಿಧಿ ಯೋಜನೆಯಡಿ ಎಷ್ಟು ಸಾಲ ಪಡೆಯಬಹುದು?

ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಅರ್ಹ ಅರ್ಜಿದಾರರು ರೂ 10,000/- ದಿಂದ ರೂ 50,000/- ದವರೆಗೆ ಮೂರು ಹಂತದಲ್ಲಿ ಸಾಲವನ್ನು ಪಡೆಯಬಹುದು.

ಮೊದಲಿಗೆ ಬ್ಯಾಂಕ್ ಮೂಲಕ ಮೊದಲ ಕಂತಿನಲ್ಲಿ ರೂ 10,000/- ವರ್ಗಾವಣೆ ಮಾಡಲಾಗುತ್ತದೆ ಮೊದಲ ಕಂತನ್ನು ಸರಿಯಾದ ಸಮಯದಲ್ಲಿ ಭರ್ತಿ ಮಾಡಿದ ಬಳಿಕ ಎರಡನೇ ಹಂತದಲ್ಲಿ ರೂ 20,000/- ಒದಗಿಸಲಾಗುತ್ತದೆ ಈ ಹಣವನ್ನು ಮರುಪಾವತಿ ಮಾಡಿದ ಬಳಿಕ ಮತ್ತೆ ರೂ 50,000/- ಸಾಲವನ್ನು ಪಡೆಯಬಹುದು.

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

PM Svanidi Interest Subsidy-ಶೇ. 7ರಷ್ಟು ಬಡ್ಡಿ ಸಬ್ಸಿಡಿ ನೀಡಲಾಗುತ್ತದೆ?

ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಮೂಲಕ ಒದಗಿಸುವ ಒಟ್ಟು ಸಾಲಕ್ಕೆ ಶೇ. 7ರಷ್ಟು ವಾರ್ಷಿಕ ಬಡ್ದಿ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದನ್ನು ಮೂರು ತಿಂಗಳಿಗೆ ಒಮ್ಮೆ ನೇರವಾಗಿ ಫಲಾನುಭವಿಯ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ.

PM Svanidi Scheme Last Date-ಪಿಎಂ ಸ್ವನಿಧಿ ಯೋಜನೆ ವಿಸ್ತರಣೆ:

ಕೇಂದ್ರ ಸರಕಾರವು ಈ ಯೋಜನೆಯನ್ನು ಕೋರೊನಾ ಲಾಕ್ ಡೌನ್ ಸಮಯದಲ್ಲಿ ಅಂದರೆ 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು ಜಾರಿಗೆ ತರಲಾಗಿತ್ತು ಮೊದಲಿಗೆ 2024ರ ಡಿಸೆಂಬರ್ 31ರವರೆ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬಳಿಕ ಈ ಯೋಜನೆಯಿಂದ ಬೀದಿಬದಿ ವ್ಯಾಪಾರಿಗಳಿಗೆ ಸಾಕಷ್ಟು ಲಾಭವಾಗುತ್ತಿರುವುದು ಗಮನಿಸಿ ಪ್ರಸ್ತುತ 31 ಡಿಸೆಂಬರ್ 2030 ರವರೆಗೆ ಈ ಯೋಜನೆಯನ್ನು ವಿಸ್ತರಣೆ ಮಾಡಿ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: SSLC Exam Fee-ಎಸ್ಸೆಸ್ಸೆಲ್ಸಿ ಪರೀಕ್ಷಾ ಶುಲ್ಕ ಏರಿಕೆ! ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ?

PM Svanidi Online Application-ಪಿಎಂ ಸ್ವನಿಧಿ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಇಲ್ಲಿ ಕ್ಲಿಕ್ "PM Svanidi Online Application" ಮಾಡಿ ಪಿಎಂ ಸ್ವನಿಧಿ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Sukanya Samriddhi Yojane- ಪೋಸ್ಟ್ ಆಫೀಸ್‌ನಲ್ಲಿ ಅತೀ ಹೆಚ್ಚು ಬಡ್ಡಿ ನೀಡುವ ಯೋಜನೆ!

PM Svanidi

Step-2: ಜಾಲತಾಣವನ್ನು ಪ್ರವೇಶ ಮಾಡಿದ ಬಳಿಕ ಈ ಪೇಜ್ ನಲ್ಲಿ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಹಾಕಿ ಕ್ಯಾಪ್ಚ್ ಕೋಡ್ ನಮೂದಿಸಿ "Request OTP" ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ದಾಖಲೆಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Anganavadi Worker Recruitment-ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ!

Required Documents For PM Svanidi-ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆ ಸಲ್ಲಿಸಬೇಕು?

ಪಿಎಂ ಸ್ವನಿಧಿ- "ಪ್ರಧಾನ ಮಂತ್ರಿ ಬೀದಿ ಬದಿ ಮಾರಾಟಗಾರರ ಆತ್ಮನಿರ್ಭರ ನಿಧಿ ಯೋಜನೆ" ಅಡಿಯಲ್ಲಿ ಫಲಾನುಭವಿಗಳು ಸಾಲವನ್ನು ಪಡೆಯಲು ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ.

  • ಅರ್ಜಿದಾರರ ಆಧಾರ್ ಕಾರ್ಡ್
  • ಗುರುತಿನ ಚೀಟಿ/ವೋಟರ್ ಐಡಿ ಕಾರ್ಡ್
  • ವಾಹನಾ ಚಾಲನಾ ಪರವಾನಗಿ ಪತ್ರ.
  • ಮನ್ರೇಗಾ ಕಾರ್ಡ್
  • ಪ್ಯಾನ್ ಕಾರ್ಡ್
  • ಸ್ಥಳೀಯ ಸಂಸ್ಥೆಯಿಂದ(ಗ್ರಾಮ ಪಂಚಾಯತಿ/ಮುನ್ಸಿಪಾಲಿಟಿ) ವ್ಯಾಪಾರ ಅನುಮತಿ ಪರವಾನಗಿ ಪತ್ರ.
  • ಬ್ಯಾಂಕ್ ಪಾಸ್​ಬುಕ್ ಅಥವಾ ಅಕೌಂಟ್ ಸ್ಟೇಟ್ಮೆಂಟ್ ಪ್ರತಿ.

More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು:

PM Svanidi Scheme Website-ಯೋಜನೆಯ ಅಧಿಕೃತ ಜಾಲತಾಣ-Click Here
PM Svanidi Twitter Account-ಯೋಜನೆಯ ಎಕ್ಸ್/ಟ್ವಿಟರ್ ಖಾತೆ-Follow Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: