PUC Marks Card-ಪಿಯುಸಿ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ!

April 10, 2026 | Siddesh
PUC Marks Card-ಪಿಯುಸಿ ಅಂಕಪಟ್ಟಿಯನ್ನು ಮೊಬೈಲ್‌ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಮಾಹಿತಿ!
Share Now:

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ(2nd PUC Marks Card Download) ಫಲಿತಾಂಶವನ್ನು ದಿನಾಂಕ 09-04-2026 ರಂದು ಯಶಸ್ವಿಯಾಗಿ ಪ್ರಕಟಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕುತೂಹಲಕ್ಕೆ ತೆರೆ ಬಿದ್ದಿದ್ದು, ಈಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ನೋಡುವುದರ ಜೊತೆಗೆ ಅಧಿಕೃತ ಅಂಕಪಟ್ಟಿಯನ್ನು ಪಡೆಯಲು ಕಾತರರಾಗಿದ್ದಾರೆ. ಈ ಬಾರಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಂಡಲಿಯು ಫಲಿತಾಂಶ ಪ್ರಕಟವಾದ ತಕ್ಷಣವೇ ಡಿಜಿಟಲ್ ಅಂಕಪಟ್ಟಿಗಳನ್ನು ಲಭ್ಯವಾಗುವಂತೆ ಮಾಡಿದೆ.

ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಕೇಂದ್ರ ಸರ್ಕಾರದ ಅಧಿಕೃತ 'ಡಿಜಿಲಾಕರ್' (Digilocker) ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯಲು ಕಾಲೇಜುಗಳಿಗೆ ಅಲೆಯುವ ಅವಶ್ಯಕತೆ ಇಲ್ಲದೆ, ತಮ್ಮ ಮೊಬೈಲ್ ಮೂಲಕವೇ ಎಲ್ಲಿ ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಡಿಜಿಟಲ್ ಅಂಕಪಟ್ಟಿಯು ಭೌತಿಕ ಅಂಕಪಟ್ಟಿಯಷ್ಟೇ ಅಧಿಕೃತ ಮಾನ್ಯತೆಯನ್ನು ಹೊಂದಿರುವುದು ವಿಶೇಷ.

ಇದನ್ನೂ ಓದಿ: 2nd PUC Result-2026: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟ!ಇಲ್ಲಿದೆ ವೆಬ್ಸೈಟ್ ಲಿಂಕ್!

ವಿದ್ಯಾರ್ಥಿಗಳು ಡಿಜಿಲಾಕರ್ ಅಪ್ಲಿಕೇಶನ್‌ನಲ್ಲಿ ಲಾಗಿನ್ ಆಗುವಾಗ ತಮ್ಮದೇ ಆದ ಆಧಾರ್ ಸಂಖ್ಯೆಯನ್ನು ಬಳಸಬೇಕು. ಪೋಷಕರ ಆಧಾರ್ ಬಳಸಿದರೆ ಅಂಕಪಟ್ಟಿ(2nd PUC Marks Card) ದೊರೆಯುವುದಿಲ್ಲ ಎಂಬ ನಿಯಮವನ್ನು ಮಂಡಳಿ ಸ್ಪಷ್ಟಪಡಿಸಿದೆ. ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಸಾಧನೆಯ ಅಂಕಪಟ್ಟಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು:

How To Get PUC Markscard In DigiLocker-ಡಿಜಿಲಾಕರ್ ಮೂಲಕ ಅಂಕಪಟ್ಟಿ ಪಡೆಯುವುದು ಹೇಗೆ?

Step-1: ವಿದ್ಯಾರ್ಥಿಗಳು ಮೊದಲಿಗೆ ಈ Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಸರಕಾರದ ಅಧಿಕೃತ ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: Toll Plazas New Rules-ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ನಗದು ವ್ಯವಹಾರಕ್ಕೆ ಬ್ರೇಕ್: ಏಪ್ರಿಲ್ 10 ರಿಂದ ಹೊಸ ನಿಯಮ ಜಾರಿ!

ಇದನ್ನೂ ಓದಿ: SSLC Key Answer-SSLC ಪರೀಕ್ಷೆ 1ರ ಕೀ ಉತ್ತರಗಳು ಬಿಡುಗಡೆ: ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!

Step-2: ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡ ಬಳಿಕ ಒಪನ್ ಮಾಡಿ ವಿದ್ಯಾರ್ಥಿಯ ಅಂಕಿಯ ಆಧಾರ್ ಕಾರ್ಡ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ Home ಪೇಜ್ ನಲ್ಲಿ Search ಬಟನ್ ಕಾಣಿಸುತ್ತದೆ ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ Karnataka school ಎಂದು ಸರ್ಚ ಮಾಡಿದರೆ Class 2n PUC Marck Card ಎನ್ನುವ ಆಯ್ಕೆ ಕಾಣಿಸುತ್ತದೆ.

Step-4: Class 2n PUC Marck Card ಈ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು ಕಾಣಿಸುತ್ತದೆ ಬಳಿಕ ನಿಮ್ಮ ರೂಲ್ ನಂಬರ್ ಹಾಕಿ ವರ್ಷ-2026 ಎಂದು ಸೆಲೆಕ್ಟ್ ಮಾಡಿಕೊಂಡು Get Document ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಪಿಯುಸಿ ಅಂಕಿಪಟ್ಟಿ ಗೋಚರಿಸುತ್ತದೆ.

ಇದನ್ನೂ ಓದಿ: HSRP Number Plate-ಹಳೆಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯ: ಸಾರಿಗೆ ಇಲಾಖೆಯ ಖಡಕ್ ಸೂಚನೆ!

ವಿಶೇಷ ಸೂಚನೆ: ವಿದ್ಯಾರ್ಥಿಗಳು ಅಂಕಪಟ್ಟಿಯನ್ನು ಪಡೆಯಲು ತಪ್ಪದೇ ತಮ್ಮದೇ ಅದ ಆಧಾರ್ ಕಾರ್ಡ ನಂಬರ್ ಅನ್ನು ನಮೂದಿಸಬೇಕು. ಪೋಷಕರ ಆಧಾರ್ ಕಾರ್ಡ ನಂಬರ್ ಹಾಕಿ ಲಾಗಿನ್ ಅದರೆ ಅಂಕಪಟ್ಟಿ ತೋರಿಸುವುದಿಲ್ಲ.

Required Documents-ಅಂಕಪಟ್ಟಿ ಡೌನ್ಳೋಡ್ ಮಾಡಿಕೊಳ್ಳಲು ಅವಶ್ಯವಿರುವ ದಾಖಲೆಗಳು:

ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಮೂಲಕ ನನ್ನ ತಮ್ಮನ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಅಲ್ಲಿ ಅವಶ್ಯವಿರುವ ದಾಖಲೆಗಳು ಯಾವುವು ಎಂದು ನಿಮಗೆ ಅನುಕೂಲವಾಗಲು ಈ ಕೆಳಗನ ಪಟ್ಟಿಯಲ್ಲಿ ನಮೂದಿಸಿದ್ದೇನೆ.

  • ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar Card
  • ಪರೀಕ್ಷೆ ರೊಲ್ ನಂಬರ್/Roll Number
  • ಆಧಾರ್ ಕಾರ್ಡ ಲಿಂಕ್ ಇರುವ ಮೊಬೈಲ್ ನಂಬರ್/Mobile OTP

ಇದನ್ನೂ ಓದಿ: FID Number-ರಸಗೊಬ್ಬರ ಮಾಫಿಯಾಗೆ ‘ಫ್ರೂಟ್ಸ್’ ಬ್ರೇಕ್: ಇನ್ಮುಂದೆ FID ನಂಬರ್ ಇದ್ದರೆ ಮಾತ್ರ ಗೊಬ್ಬರ!

PUC Markscard Download Video-ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳುವ ಬಗ್ಗೆ ವಿಡಿಯೋ ಮೂಲಕ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ- Watch Now

ವಿದ್ಯಾರ್ಥಿಯ ಅನುಭವದ ಮಾತು:

"ಮೊದಲೆಲ್ಲಾ ರಿಸಲ್ಟ್ ಬಂದ ಮೇಲೆ ಮಾರ್ಕ್ಸ್ ಕಾರ್ಡ್ ಕೈ ಸೇರಲು ವಾರಗಟ್ಟಲೆ ಕಾಯಬೇಕಿತ್ತು. ಆದರೆ ಈ ಬಾರಿ ಡಿಜಿಲಾಕರ್ ಮೂಲಕ ಫಲಿತಾಂಶ ಬಂದ ಕೆಲವೇ ನಿಮಿಷಗಳಲ್ಲಿ ನನ್ನ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಂಡೆ. ಉನ್ನತ ಶಿಕ್ಷಣದ ದಾಖಲಾತಿಗೆ ಇದು ತುಂಬಾ ಸಹಕಾರಿಯಾಗಿದೆ. ಮನೆಯಲ್ಲೇ ಕುಳಿತು ಅಧಿಕೃತ ಅಂಕಪಟ್ಟಿ ಪಡೆಯುವ ಈ ವ್ಯವಸ್ಥೆ ನಮಗೆ ತುಂಬಾ ಸಮಯ ಉಳಿಸಿದೆ."

— ಕಿರಣ್ ಕುಮಾರ್, ದ್ವಿತೀಯ ಪಿಯುಸಿ ವಿದ್ಯಾರ್ಥಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: