Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!ಇಂದೇ ಅರ್ಜಿ ಸಲ್ಲಿಸಿ!

March 24, 2026 | Siddesh
Ration Card Correction-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಪ್ರಾರಂಭ!ಇಂದೇ ಅರ್ಜಿ ಸಲ್ಲಿಸಿ!
Share Now:

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಕಳೆದ ಹಲವು ದಿನಗಳಿಂದ ರೇಷನ್ ಕಾರ್ಡ್‌ನಲ್ಲಿ(Ration Card Correction Application) ತಿದ್ದುಪಡಿ ಹಾಗೂ ಹೊಸ ಸದಸ್ಯರ ಹೆಸರನ್ನು ಸೇರಿಸಲು ಕಾಯುತ್ತಿದ್ದ ನಾಗರಿಕರಿಗೆ ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಪಡಿತರ ಚೀಟಿಯು ಕೇವಲ ಅಕ್ಕಿ ಪಡೆಯುವ ಕಾರ್ಡ್ ಆಗಿರದೆ, ಸರ್ಕಾರದ ವಿವಿಧ ಗ್ಯಾರಂಟಿ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯ ದಾಖಲೆಯಾಗಿರುವುದರಿಂದ, ಈ ತಿದ್ದುಪಡಿ ಪ್ರಕ್ರಿಯೆಯು ಅತ್ಯಂತ ಮಹತ್ವದ್ದಾಗಿದೆ.

ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನಿರ್ದಿಷ್ಟ ಕಾಲಮಿತಿಯೊಳಗೆ ತಿದ್ದುಪಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆದೇಶ ಹೊರಡಿಸಿದೆ. ರೇಷನ್ ಕಾರ್ಡ್‌ನಲ್ಲಿ(Ration Card) ಮಗುವಿನ ಹೆಸರನ್ನು ಸೇರಿಸುವುದು, ಮೃತರ ಹೆಸರನ್ನು ಕೈಬಿಡುವುದು ಅಥವಾ ವಿಳಾಸ ಬದಲಾವಣೆಯಂತಹ ಅಗತ್ಯ ಕೆಲಸಗಳನ್ನು ಪೂರೈಸಲು ಇದು ಸರಿಯಾದ ಸಮಯವಾಗಿದೆ. ತಾಂತ್ರಿಕ ಕಾರಣಗಳಿಂದ ಈ ಹಿಂದೆ ವಿಳಂಬವಾಗಿದ್ದ ಪ್ರಕ್ರಿಯೆಗೆ ಈಗ ಚಾಲನೆ ಸಿಕ್ಕಿದ್ದು, ಸಾರ್ವಜನಿಕರು ನಿಗದಿತ ಅವಧಿಯೊಳಗೆ ತಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಇಲಾಖೆ ಸೂಚಿಸಿದೆ.

ಇದನ್ನೂ ಓದಿ: Free CCTV Training-ಉಚಿತ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ವಿಶೇಷವಾಗಿ ಮೈಸೂರು ಸರ್ವರ್ ವಿಭಾಗದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಚುರುಕಿನಿಂದ ಆರಂಭವಾಗಿದ್ದು, ಉಳಿದ ಜಿಲ್ಲೆಗಳ ಜನರು ತಮ್ಮ ಹತ್ತಿರದ ಸೇವಾ ಕೇಂದ್ರಗಳನ್ನು(Ration Card Correction Online Application) ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಯಾವುದೇ ವಿಳಂಬ ಮಾಡದೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸುವುದು ಸೂಕ್ತ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಈ ಪ್ರಕ್ರಿಯೆಯು ನಾಗರಿಕರಿಗೆ ಸುಲಭವಾಗುವಂತೆ ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Ration Card Correction 2026-ಯಾವೆಲ್ಲ ತಿದ್ದುಪಡಿಗಳನ್ನು ಮಾಡಿಸಲು ಅರ್ಜಿ ಸಲ್ಲಿಸಬಹುದು?

ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಅಗತ್ಯ ತಿದ್ದುಪಡಿಗಳನ್ನು ಮಾಡಿಸಲು ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಲು ಪ್ರಸ್ತುತ ಅವಕಾಶ ನೀಡಲಾಗಿದೆ.

ಹೊಸ ಸದಸ್ಯರ ಸೇರ್ಪಡೆ: ಕುಟುಂಬಕ್ಕೆ ಹೊಸದಾಗಿ ಸೇರಿದವರ ಹೆಸರು ಸೇರಿಸುವುದು.

ಹೆಸರು ತೆಗೆದುಹಾಕುವುದು: ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರನ್ನು ವಜಾ ಮಾಡುವುದು.

ವಿಳಾಸ ಬದಲಾವಣೆ: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಸ್ತವ್ಯ ಬದಲಾಗಿದ್ದರೆ ವಿಳಾಸ ತಿದ್ದುಪಡಿ.

ಇ-ಕೆವೈಸಿ (e-KYC): ಸದಸ್ಯರ ಆಧಾರ್ ಜೋಡಣೆ ಮತ್ತು ದೃಢೀಕರಣ.

ಮುಖ್ಯಸ್ಥರ ಬದಲಾವಣೆ: ಕುಟುಂಬದ ಯಜಮಾನ ಅಥವಾ ಯಜಮಾನಿಯ ಬದಲಾವಣೆ.

ಫೋಟೋ ತಿದ್ದುಪಡಿ: ಸದಸ್ಯರ ಹಳೆಯ ಫೋಟೋ ಬದಲಿಸಿ ಹೊಸ ಫೋಟೋ ಅಪ್‌ಡೇಟ್ ಮಾಡುವುದು.

ಇದನ್ನೂ ಓದಿ: ATM Card-ಎಟಿಎಂ ಗ್ರಾಹಕರೇ ಗಮನಿಸಿ: ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ ಹೊಸ ನಿಯಮಗಳು!

Ration Card Correction

ಇದನ್ನೂ ಓದಿ: Pan Card New Rules-ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ; ಏನಿದು ಬದಲಾವಣೆ?

Documents Required For Ration Card Correction-ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:

ಪಡಿತರ ಚೀಟಿಯಲ್ಲಿ ವಿವಿಧ ಬಗ್ಗೆಯ ತಿದ್ದುಪಡಿಯನ್ನು ಮಾಡಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅಗತ್ಯವಾಗಿ ಒದಗಿಸಬೇಕಾದ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

ಮಕ್ಕಳ ಹೆಸರನ್ನು ಸೇರಿಸಲು: ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್.

ಹೊಸ ಸದಸ್ಯರ (6 ವರ್ಷ ಮೇಲ್ಪಟ್ಟ) ಸೇರ್ಪಡೆಗೆ: ಆಧಾರ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರ.

ಹೆಸರು ತೆಗೆದುಹಾಕಲು: ಮರಣ ಪ್ರಮಾಣ ಪತ್ರ.

ವಿಳಾಸ ಬದಲಾವಣೆಗೆ: ಹೊಸ ವಿಳಾಸದ ಅಧಿಕೃತ ದಾಖಲೆ ಮತ್ತು ಹಳೆಯ ರೇಷನ್ ಕಾರ್ಡ್ ಪ್ರತಿ.

ಸಾಮಾನ್ಯ ದಾಖಲೆಗಳು: ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆ.

ಇದನ್ನೂ ಓದಿ: Ration Card-2026: ರೇಶನ್ ಕಾರ್ಡದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ!

How To Apply For Ration Card Correction-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ನಾಗರಿಕರು ತಮ್ಮ ಹತ್ತಿರದ ಗ್ರಾಮ ಒನ್ (Gram One) ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.

Ration Card Correction Application Status-ಅರ್ಜಿ ಸ್ಥಿತಿಯನ್ನು ಚೆಕ್ ಮಾಡುವುದು ಹೇಗೆ?

ನಾಗರಿಕರು ಅಗತ್ಯ ದಾಖಲೆಗಳ ಸಮೇತ ರೇಶನ್ ಕಾರ್ಡ ತಿದ್ದುಪಡಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ತಮ್ಮ ಅರ್ಜಿ ಸ್ಥಿತಿಯನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

Step-1: ಅರ್ಜಿದಾರರು ಮೊದಲಿಗೆ ಈ "Ration Card Correction Status Check" ಲಿಂಕ್ ಮೇಲೆ ಒತ್ತಿ ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: KSOU Admission-2026: ರಾಜ್ಯದ ಮುಕ್ತ ವಿವಿಯಿಂದ 2025-26ನೇ ಸಾಲಿನ ಪ್ರವೇಶಾತಿಗೆ ಅರ್ಜಿ ಆಹ್ವಾನ!

Step-2: ಇದಾದ ನಂತರ ಈ ಪೇಜ್ ನಲ್ಲಿ ಕಾಣಿಸುವ "e-status" ಬಟನ್ ಮೇಲೆ ಕ್ಲಿಕ್ ಮಾಡಿ "New/Existing RC Requests Status" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ ಯಾವ ಸರ್ವರ್ ವಿಭಾಗದಲ್ಲಿ ಬರುತ್ತದೆ ಎನ್ನುವುದರ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಭೇಟಿ ಮಾಡಿ.

Step-3: ಬಳಿಕ ಈ ಪುಟದಲ್ಲಿ "Ration Card Amendment Request Status/ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೇಶನ್ ಕಾರ್ಡ ನಂಬರ್ ಮತ್ತು ಅರ್ಜಿ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ ನಿಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: