- Advertisment -
HomeGovt Schemesನಿಮ್ಮ ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವುದು ಹೇಗೆ? ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ.

ನಿಮ್ಮ ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವುದು ಹೇಗೆ? ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ.

Last updated on October 1st, 2024 at 06:37 am

ನಮ್ಮ ದೈನಂದಿನ ಜೀವನದಲ್ಲಿ ಆಧಾರ್ ಕಾರ್ಡ ನಂತರ ಅತ್ಯಗತ್ಯ ದಾಖಲೆಗಳಲ್ಲಿ ಒಂದಾದ ರೇಶನ್ ಕಾರ್ಡ ಕುರಿತು ಈ ಅಂಕಣದಲ್ಲಿ ಕೆಲವು ಮಾಹಿತಿಯನ್ನು ವಿವರಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಅನೇಕ ಯೋಜನೆಯಡಿ ಅರ್ಥಿಕ ನೆರವು ಪಡೆಯಲು ರೇಶನ್ ಕಾರ್ಡ ಸಲ್ಲಿಸುವುದು ಅತ್ಯಗತ್ಯ್ ಉದಾಹರಣೆ ಯೋಜನೆಗಳು ಹೀಗಿವೆ ಗೃಹ ಲಕ್ಷ್ಮೀ, ಆರೋಗ್ಯ ಸಂಬಂಧಿಸಿದ ವಿಮೆ ಯೋಜನೆಗಳು- ಯಶಸ್ವಿನಿ  ಯೋಜನೆ ಇತ್ಯಾದಿ, ನರೇಗಾ ಯೋಜನೆಯಡಿ ಜಾಬ್ ಕಾರ್ಡ ಪಡೆಯಲು ಬಿ. ಪಿ. ಎಲ್ ಕಾರ್ಡ ಒದಗಿಸಬೇಕಾಗುತ್ತದೆ ಹೀಗೆ ಅನೇಕ ಯೋಜನೆಗಳಿಗೆ ರೇಶನ್ ಕಾರ್ಡ ಅವಶ್ಯಕ.

ಅದ್ದರಿಂದ ನಿಮ್ಮ ರ‍ೇಶನ್ ಕಾರ್ಡನಲ್ಲಿ ಎಷ್ಟ ಜನ ಮನೆ ಸದಸ್ಯರ ಹೆಸರು ಇದೆ? ಕಾರ್ಡ ಸಕ್ರಿಯವಾಗಿದಿಯೇ? ರ‍ೇಶನ್ ಕಾರ್ಡನಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಯಾರದ್ದು ಇದೆ ಎಂದು ತಿಳಿಯುವ ವಿಧಾನದ ಹೇಗೆ ಎಂದು ಈ ಕೆಳಗೆ ವಿವರಿಸಲಾಗಿದೆ.

ರೇಶನ್ ಕಾರ್ಡ್ ಸಕ್ರಿಯವಾಗಿರುವುದನ್ನು ತಿಳಿಯುವ ವಿಧಾನ:

ರಾಜ್ಯ ಸರಕಾರದ ಅಧಿಕೃತ ಮಾಹಿತಿಯನ್ನು ಒದಗಿಸುವ ಮಾಹಿತಿ ಕಣಜ ಜಾಲಾತಾಣ ಈ https://mahitikanaja.karnataka.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ರೇಶನ್ ಕಾರ್ಡ/ಪಡಿತರ ಚೀಟಿಯ 12 ಅಂಕಿಯ ಸಂಖ್ಯೆಯನ್ನು ನಮೂದಿಸಿ “ಸಲ್ಲಿಸಿ” ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕಾರ್ಡ ಸ್ಥಿತಿ ವಿಭಾಗದಲ್ಲಿ “ಸಕ್ರಿಯ” ಎಂದು ಗೋಚರಿಸಿದ್ದರೆ ನಿಮ್ಮ ರೇಶನ್ ಕಾರ್ಡ ಸಕ್ರಿಯವಾಗಿದೆ ಎಂದು.

ಕುಟುಂಬದ ಮುಖ್ಯಸ್ಥರ ವಿವರ ತಿಳಿಯುವ ವಿಧಾನ:

ಮಾಹಿತಿ ಕಣಜ ವೆಬ್ಸೈಟ್ ನ https://mahitikanaja.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಿಲ್ಲೆ ಮತ್ತು ರೇಶನ್ ಕಾರ್ಡ್ ನಂಬರ್ ಹಾಕಿ ವಿವರ ಪಡೆದ ನಂತರ ಕುಟುಂಬ ಸದಸ್ಯರ ವಿವರಗಳು ವಿಭಾಗದಲ್ಲಿ ಮೊದಲಿಗೆ ತೋರಿಸುವ ಹೆಸರಿನ ಮುಂದೆ ಕುಟುಂಬದ ಮುಖ್ಯಸ್ಥರು ಎಂದು ನಮೂದಿಸಿರುತ್ತದೆ.

ಇದರ ಜೊತೆಗೆ ರೇಶನ್ ಕಾರ್ಡನಲ್ಲಿ ಎಷ್ಟು ಜನ ಇದ್ದರೆ ಮತ್ತು ಅವರ ಜನ್ಮ ದಿನಾಂಕ ವಯಸ್ಸು ಇತ್ಯಾದಿ ಮಾಹಿತಿ ಇಲ್ಲಿ ಗೋಚರಿಸುತ್ತದೆ.

ಇದನ್ನೂ ಓದಿ: ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ?

ರೇಶನ್ ಕಾರ್ಡ ನಂಬರ್ ಎಲ್ಲಿ ಇರುತ್ತದೆ:

ನಿಮ್ಮ ಪಡಿತರ ಚೀಟಿ ಅಥವಾ ರೇಶನ್ ಕಾರ್ಡನ ಮುಖ ಪುಟದ ಬಲ ಬದಿಯಲ್ಲಿ ಪಡಿತರ ಚೀಟಿಯ ಸಂಖ್ಯೆ/Ration card no ಕಾಲಂ ನ ಮುಂದೆ 12 ಅಂಕಿಯ  ರೇಶನ್ ಕಾರ್ಡ ನಂಬರ್ ನಮೂದಿಸಲಾಗಿರುತ್ತದೆ.

ಚಿತ್ರ ಸಹಿತ ವಿವರಣ:

- Advertisment -
LATEST ARTICLES

Related Articles

- Advertisment -

Most Popular

- Advertisment -