HomeGovt Schemesರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

ರೇಷ್ಮೆ ಕೃಷಿ ಆರಂಭಿಸಲು ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಬವುದು!

ರೇಷ್ಮೆ ಕೃಷಿ ಮಾಡಲು 1 ಎಕರೆ ಪ್ರದೇಶದಲ್ಲಿ ಹೊಸ ಹಿಪ್ಪು ನೇರಳೆ ತೋಟ ಸ್ಥಾಪನೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅರ್ಥಿಕವಾಗಿ ಸಹಾಯಧನವನ್ನು ಪಡೆಯಬವುದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ:

ಆಸಕ್ತ ರೈತರು ತಮ್ಮ ಭಾಗದ ಗ್ರಾಮ ಪಂಚಾಯತ ಭೇಟಿ ಮಾಡಿ ಕ್ರಿಯಾ ಯೋಜನೆಯಲ್ಲಿ ನಿಮ್ಮ ಹೆಸರನ್ನು ಸೇರಿ ಬೇಕಾಗುತ್ತದೆ. ನಂತರ ತಾಲ್ಲೂಕಿನ ರೇಷ್ಮೆ ಇಲಾಖೆಯ ಕಚೇರಿ ಭೇಟಿ ಮಾಡಿ ನರೇಗಾ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಬೇಕಾಗುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸಬೇಕು.

ಕಾಮಗಾರಿ ಅನುಷ್ಥಾನ ವಿಧಾನ:

ಗ್ರಾಮ ಪಂಚಾಯತಿಯಲ್ಲಿ ಕ್ರಿಯಾ ಯೋಜನೆ ಅನುಮೋದನೆ ಅದ ನಂತರ ರೇಷ್ಮೆ ಇಲಾಖೆ ಅಧಿಕಾರಿಗಳು ಫಲಾನುಭವಿ ರೈತರಿಂದ ಅಗತ್ಯ ದಾಖಲಾತಿ ಪಡೆದು ಕಾಮಕಾರಿ ಆರಂಭಿಸಲು ವರ್ಕ್ ಆರ್ಡರ್ ಕೊಡುತ್ತಾರೆ.

2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 1 ಎಕರೆ ಪ್ರದೇಶದಲ್ಲಿ ಹೊಸ ಹಿಪ್ಪು ನೇರಳೆ ತೋಟ ಸ್ಥಾಪನೆಗೆ ಬೇಕಾಗುವ ದಾಖಲಾತಿಗಳು ವಿವರ:

1. ಚಾಲ್ತಿ ಆರ್.ಟಿ.ಸಿ ಉತ್ತಾರ

2. ಆಧಾರ ಕಾರ್ಡ ಝರಾಕ್ಸ್‌ ಪ್ರತಿ

3. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್‌ ಪ್ರತಿ

4. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಇಲಾಖೆಗಳ ಮತ್ತು ಗ್ರಾಮ ಪಂಚಾಯತ್ 04 ಎನ್.ಓ.ಸಿ ಪತ್ರ.

5. ರೂ. 20 ಖಾಲಿ ಬಾಂಡ ( 1st ಪಾರ್ಟಿ- ಫಲಾನುಭವಿ 2nd ಪಾರ್ಟಿ ರೇಷ್ಮೆ ಇಲಾಖೆ)

6. ಜಾತಿ ಪ್ರಮಾಣ ಪತ್ರ (ಎಸ್.ಸಿ – ಎಸ್.ಟಿ ವರ್ಗದವರಿಗೆ ಮಾತ್ರ)

7. ಸಣ್ಣ ಹಿಡುವಳಿ ಪತ್ರ ( ಸಾಮಾನ್ಯ ವರ್ಗದವರಿಗೆ ಮಾತ್ರ)

8. ಜಂಟಿ ಖಾತೆ ಇದ್ದಲ್ಲಿ ರೂ.20 ಬಾಂಡ್ ಫಲಾನುಭವಿ ಬಿಟ್ಟು ಉಳಿದವರ ಒಪ್ಪಿಗೆ ಪತ್ರ (ನೋಟರಿ ಆಗಬೇಕು)

9. ಫಲಾನುಭವಿಯ ಜಾಬ್ ಕಾರ್ಡ ಝರಾಕ್ಸ್‌ ಪ್ರತಿ

10. ಪಾರ್ಮ್‌ ನಂ – 6 

11. ಹಿಪ್ಪು ನೇರಳೆ ತೋಟದ 2 ಹಂತದ ಪೋಟೋ.

12. ಫಲಾನುಭವಿ ನಿಂತಿರುವ ಖಾಲಿ ಜಮೀನಿನ ಪೋಟೋ.


ಇದನ್ನೂ ಓದಿ: ಕರ್ನಾಟಕ ಮಳೆ ಮುನ್ಸೂಚನೆ | 29-06-2023

13. ಕೂಲಿ ಆಳುಗಳಿಂದ ರೇಷ್ಮೆ ಸಸಿ ನಾಟಿ ಮಾಡುತ್ತಿರುವ ಪೋಟೊ (ಸೂಚನೆ : ಕಡ್ಡಿ ನಾಟಿ ಮಾಡುತ್ತಿರುವ ಪೋಟೊ ತೆಗೆಯಬೇಡಿರಿ)

14. ಗ್ರಾಮ ಪಂಚಾಯತ್ ಕ್ರೀಯಾ ಯೋಜನೆ ಪತ್ರ.

ರೇಷ್ಮೆ ಇಲಾಖೆ ಸಹಾಯವಾಣಿ: 9900881100

ನರ‍ೇಗಾ ಯೋಜನೆ ಸಹಾಯವಾಣಿ: 1800-425-8666

ರೇಷ್ಮೆ ಇಲಾಖೆ ವೆಬ್ಸೈಟ್: https://sericulture.karnataka.gov.in/

Most Popular

Latest Articles

Related Articles