ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಅಹ್ವಾನ! ಈ ಕೇಂದ್ರಗಳಲ್ಲಿ 25ಕ್ಕೂ ಹೆಚ್ಚಿನ ವಿವಿಧ ಬಗ್ಗೆಯ ತರಬೇತಿ ಲಭ್ಯ.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾ ಉತ್ತರಕನ್ನಡ ಜಿಲ್ಲೆ ವತಿಯಿಂದ ಮಹಿಳೆಯರಿಗೆ ಸ್ವ-ಉದ್ಯೋಗ ಆರಂಭಿಸಲು ಉಚಿತ ಹೊಲಿಗೆ ತರಬೇತಿಗೆ ಅರ್ಜಿ ಅಹ್ವಾನ ಮಾಡಲಾಗಿದೆ.

ಈ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ   ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳಿಗೆ ಅಗತ್ಯ ಕೌಶಲ್ಯ  ಮತ್ತು ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ಪಡೆಯಲು ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತದೆ.

ಶಿಕ್ಷಣ ವಂಚಿತರಿಗೆ ಅಥವಾ ನಿರುದ್ಯೋಗಿಗಳಿಗೆ ಉದ್ಯೋಗ ಹೊಂದಲು ಒಂದು ಉತ್ತಮ ಅವಕಾಶ ಇದಾಗಿದೆ.

ತರಬೇತಿಯ ವಿವರಗಳು :-

ತರಬೇತಿ ಅವಧಿ: 30 ದಿನಗಳು

ತರಬೇತಿಯ ದಿನಾಂಕ:- 03.07.2023 ರಿಂದ 01.08.2023 ರವರೆಗೆ

ವಯಸ್ಸಿನ ಮಿತಿ : 18 ರಿಂದ 45 ವರ್ಷ

ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ.

ಅಗತ್ಯ ದಾಖಲಾತಿಗಳು:

ಗ್ರಾಮೀಣ ಭಾಗದ BPL ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳು ನಾಲ್ಕು ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಆಧಾರ ಕಾರ್ಡ್, ಪಾನ್ ಕಾರ್ಡ್ ಇವುಗಳ ಎರಡು ಝರಾಕ್ಸ್ ಪ್ರತಿ ತಪ್ಪದೇ ತರಬೇಕು.

ವಿಶೇಷ ಸೂಚನೆ: ಹೊಲಿಯಲು ಬೇಕಾಗಿರುವ ಸಾಮಾಗ್ರಿಗಳು ಸಂಸ್ಥೆ ನೀಡುತ್ತದೆ. ಬಟ್ಟೆಗಳನ್ನು ಮಾತ್ರ ನೀವು ತರಬೇಕು.

ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಇತರೆ ತರಬೇತಿಗಾಗಿ ಸಂಪರ್ಕಿಸಿ:- 9538281989, 9449860007, 9916783825, 8880444612

ವಿಳಾಸ: ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ,

ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ. – 581343 

website: canarabankrsetikumta.org 

E-mail: canarabankrsetikumta@gmail.com 

ಇದನ್ನೂ ಓದಿ: ಮೊಬೈಲ್ ನಲ್ಲಿ ನಿಮ್ಮ ಗ್ರಾಮದ ಸರ್ವೆ ನಂಬರ್ ಸಹಿತ ನಕ್ಷೆ ಡೌನ್ಲೋಡ್ ಮಾಡುವುದು ಹೇಗೆ? 

ಎಲ್ಲಾ ಜಿಲ್ಲೆಗಳಲ್ಲಿ ಇವೆ ಈ ತರಬೇತಿ ಕೇಂದ್ರಗಳು:

ಸ್ವ-ಉದ್ಯೋಗ ಪ್ರಾರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ಮತ್ತು ಬ್ಯಾಂಕ್ ಗಳಿಂದ ಸಾಲ ಪಡೆಯಲು ಸೂಕ್ತ ಮಾರ್ಗದರ್ಶನ ನೀಡಲು ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲಿಯೂ ಈ ತರಬೇತಿ ಕೇಂದ್ರಗಳಿದ್ದು https://docs.google.com/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯ ಕೇಂದ್ರದ ವಿವರ ಪಡೆಯಬವುದು.

ಈ ಕೇಂದ್ರದಲ್ಲಿ ಪಡೆಯಬವುದಾದ ಇತರೆ ತರಬೇತಿ ಕಾರ್ಯಕ್ರಮಗಳು:

10 ದಿವಸಗಳ ತರಬೇತಿಗಳು:

  • ಗೃಹೋಪಯೋಗಿ ವಸ್ತುಗಳ ತಯಾರಿಕೆ(ಫಿನೈಲ್, ಸೋಪ್, ಅಗರಬತ್ತಿ, ಮೇಣಬತ್ತಿ ಇತ್ಯಾದಿ).
  • ಹೈನುಗಾರಿಕೆ ಮತ್ತು ಎರೆಹುಳ ತಯಾರಿಕೆ.
  • ಪೇಪರ್ ಕವರ್, ಎನ್ ವಲಪ್ ಮತ್ತು ಫೈಲ್ ತಯಾರಿಕೆ
  • ಕೋಳಿ ಸಾಕಾಣಿಕೆ
  • ಫಾಸ್ಟ್ ಫುಡ್ ಅಂಗಡಿಯ ಉದ್ಯಮಿ
  • ಹಪ್ಪಳ, ಉಪ್ಪಿನಕಾಯಿ ಮತ್ತು ಮಸಾಲೆ ಪದಾರ್ಥಗಳ ತಯಾರಿಕೆ ತರಬೇತಿ.
  • ಬೇಕರಿ ಉತ್ಪನ್ನಗಳ ತಯಾರಿಕೆ.
  • ವಾಣಿಜ್ಯ ಕೃಷಿ.
  • ಜೇನು ಸಾಕಾಣಿಕೆ.
  • ಅಣಬೆ ತಯಾರಿಕೆ.
  • ಅಂಗವಿಕಲರಿಗೆ ಉದ್ಯಮಶೀಲತಾ ತರಬೇತಿ.

13 ದಿವಸಗಳ ತರಬೇತಿಗಳು:

  • ಚಿಕ್ಕ ಆಟಿಕೆ ವಸ್ತುಗಳ ತಯಾರಿಕೆ.
  • ಸಿ.ಸಿಟಿ.ವಿ ಕ್ಯಾಮೆರಾ, ಅಲಾರ್ಮ್, ಹೊಗೆ ಶೋಧನಾ ಯಂತ್ರ ಕೂಡಿಸುವುದು ಮತ್ತು ರಿಪೇರಿ.

30 ದಿವಸಗಳ ತರಬೇತಿಗಳು:

  • ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ತರಬೇತಿ
  • ಟೇಲರಿಂಗ್ವ
  • ಸ್ತ್ರ ವಿನ್ಯಾಸ(ಪುರುಷರಿಗೆ/ಮಹಿಳೆಯರಿಗೆ)
  • ಮೊಬೈಲ್ ಪೋನ್ ರಿಪೇರಿ.
  • ಫೋಟೋ ಮತ್ತು ವಿಡಿಯೋಗ್ರಾಫಿ,
  • ಗೃಹ ಬಳಕೆಯ ವಿದ್ಯುತ್ ಉಪಕರಣಗಳ ದುರಸ್ತಿ, ಮೋಟಾರ್ ರಿವಂಡಿಂಗ್ ಮತ್ತು ಪಂಪ್ ಸೆಟ್ ದುರಸ್ತಿ.
  • ದ್ವಿಚಕ್ರ ವಾಹನ ದುರಸ್ತಿ.
  • ಎಲ್.ಇ. ಡಿ, ಎಲ್. ಸಿ . ಡಿ , ಟಿ.ವಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ.
  • ಕಂಪ್ಯೂಟರ್ ಅಕೌಂಟಿಂಗ್, ಜಿ. ಎಸ್. ಟಿ.
  • ಪ್ಲಂಬಿಂಗ್, ಸೋಲಾರ್, ಮಳೆ ನೀರು ಕೊಯ್ಲು ನಿರ್ವಹಣೆ.
  • ಏರ್ ಕಂಡಿಶನರ್ ಮತ್ತು ರೆಪ್ರಿಜರೇಟರ್ ದುರಸ್ತಿ.

45 ದಿವಸಗಳ ತರಬೇತಿ:

  • ಕಂಪ್ಯೂಟರ್ ಡಿ. ಟಿ .ಪಿ.
  • ಕಂಪ್ಯೂಟರ್ ಹಾರ್ಡವೆರ್ ಮತ್ತು ನೆಟ್ ವರ್ಕಿಂಗ್ ತರಬೇತಿ.

ಇದನ್ನೂ ಓದಿ: 2023-24 ನೇ ಸಾಲಿನ ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಪ್ರಾರಂಭ! ಯಾವ ಬೆಳೆಗೆ ಎಷ್ಟು ಮೊತ್ತ ಪಾವತಿಸಬೇಕು?