RTC Crop Name-ಇನ್ನು ಮುಂದೆ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವುದು ಬಾರಿ ಸುಲಭ!

July 13, 2025 | Siddesh
RTC Crop Name-ಇನ್ನು ಮುಂದೆ ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವುದು ಬಾರಿ ಸುಲಭ!
Share Now:

ರೈತರು ಪಹಣಿಯಲ್ಲಿ ಬೆಳೆ ಮಾಹಿತಿಯನ್ನು(RTC Crop Information) ದಾಖಲಿಸಲು ರಾಜ್ಯ ಸರ್ಕಾರದಿಂದ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು ಸರಳ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಬೆಳೆ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲಿ ದಾಖಲಿಸಲು ಅವಕಾಶವಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪಹಣಿಯಲ್ಲಿ ದಾಖಲಾದ ಬೆಳೆ ಮಾಹಿತಿಯು(Pahani Bele Mahiti)ಬಹುತೇಕ ಎಲ್ಲಾ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಅತ್ಯವಶ್ಯಕವಾಗಿದ್ದು ಅದ್ದರಿಂದ ಪಹಣಿಯಲ್ಲಿ ಬೆಳೆ ಮಾಹಿತಿ ಸರಿಯಾಗಿ ದಾಖಲಾಗುವುದು ಅತೀ ಮುಖ್ಯವಾಗಿದೆ.

ಇದನ್ನೂ ಓದಿ: Weed Mat Subsidy-ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

ಪ್ರಸ್ತುತ ಈ ಲೇಖನದಲ್ಲಿ ರೈತರೇ ತಮ್ಮ ಮೊಬೈಲ್ ನಲ್ಲೇ ಜಮೀನಿನ ಬೆಳೆ ಮಾಹಿತಿಯನ್ನು(RTC Crop Information)ಅಪ್ಲಿಕೇಶನ್ ಮೂಲಕ ದಾಖಲಿಸಲು ಅವಕಾಶವಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ಈ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

RTC Crop Information Details-ಪಹಣಿಯಲ್ಲಿನ ಬೆಳೆ ಮಾಹಿತಿ ದಾಖಲಿಸುವುದರ ಪ್ರಾಮುಖ್ಯತೆ:

ಪಹಣಿಯಲ್ಲಿ ರೈತರು ಬೆಳೆ ಮಾಹಿತಿಯನ್ನು ಸರಿಯಾಗಿ ಏಕೆ ದಾಖಲಿಸಬೇಕು ಎನ್ನುವುದರ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಪಟ್ಟಿಯ ವಿವರ ಈ ಕೆಳಗಿನಂತಿದೆ:

ಬೆಳೆ ವಿಮೆ,ಬೆಳೆ ಹಾನಿ ಪರಿಹಾರ,ಬೆಂಬಲ ಬೆಲೆ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಹಣಿಯಲ್ಲಿ ಬೆಳೆ ಮಾಹಿತಿಯು ಸರಿಯಾಗಿ ದಾಖಲಾಗಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Post Office Franchise-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಅವಕಾಶ! ತಿಂಗಳಿಗೆ 50,000 ಆದಾಯ!

ಕೃಷಿ,ತೋಟಕಾರಿಕೆ,ಪಶುಸಂಗೋಪನೆ ಇಲಾಖೆಯ ಮೂಲಕ ಸಬ್ಸಿಡಿ ಆಧಾರಿತ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಾಅಗಿರುವುದು ಕಡ್ಡಾಯವಾಗಿದೆ.

ಬೆಳೆ ವಿಮೆ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಮಾಹಿತಿ ಅತೀ ಮುಖ್ಯವಾಗಿದೆ.

ಇದನ್ನೂ ಓದಿ: Free Mobile Repair Training-1 ತಿಂಗಳ ಉಚಿತ ಮೊಬೈಲ್ ರಿಪೇರಿ ತರಬೇತಿ! ಬ್ಯಾಂಕಿನಿಂದ ಸಾಲ ಸೌಲಭ್ಯ!

crop survey

Crop Survey-ಬೆಳೆ ಸಮೀಕ್ಷೆ ಮೂಲಕ ಬೆಳೆ ಮಾಹಿತಿಯನ್ನು ದಾಖಲಿಸಲು ರೈತರಿಗೆ ಅವಕಾಶ:

ರೈತರೇ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು Crop Survey ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಿಸಲು ಅವಕಾಶವಿದ್ದು ಈ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೈ ಸ್ಟೋರ್ ಭೇಟಿ ಮಾಡಿ ಡೌನ್ಲೋಡ್ ಮಾಡಿಕೊಂಡು ರೈತರು ತಮ್ಮ ಜಮೀನಿನ ಜಿಪಿಎಸ್ ಆಧಾರಿತ ಪೋಟೋವನ್ನು ತೆಗೆದು ಬೆಳೆ ಮಾಹಿತಿಯನ್ನು ದಾಖಲಿಸುವುದರ ಮೂಲಕ ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ರೈತರೇ ನಮೂದಿಸಲು ಅವಕಾಶವಿರುತ್ತದೆ.

RTC Crop Information-ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ದಾಖಲಿಸುವ ವಿಧಾನ:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಕೃಷಿ ಇಲಾಖೆಯಿಂದ ಕಳೆದ 2-3 ವರ್ಷದಿಂದ Farmer Crop Survey ಮೊಬೈಲ್ ಅಪ್ಲಿಕೇಶನ್ ಮೂಲಕ ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ರೈತರೇ ದಾಖಲಿಸಲು ಅವಕಾಶವನ್ನು ಮಾಡಿಕೊಟ್ಟಿದ್ದು ಈ ಕೆಳಗೆ ವಿವರಿಸಿರುವ ಹಂತಗಳನ್ನು ಬೆಳೆ ವಿವರವನ್ನು ಪಹಣಿ/ಉತಾರ್/RTC ಅಲ್ಲಿ ದಾಖಲಿಸಲು ಅವಕಾಶವಿರುತ್ತದೆ.

Step-1: ಮೊದಲ ಹಂತದಲ್ಲಿ ಇಲ್ಲಿ ಕ್ಲಿಕ್ ಮಾಡಿ Kharif Farmer Crop Survey App ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: Scholarship-MBA ವ್ಯಾಸಂಗಕ್ಕೆ ₹2.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Bele Samikshe

Step-2: ಇದಾದ ನಂತರ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು 3 ರಿಂದ 4 ಬಾರಿ allow ಎಂದು ತೋರಿಸುವ ಆಯ್ಕೆಗೆ ಟಿಕ್ ಮಾಡಿ ಬಳಿಕ "Agree" ಬಟನ್ ಮೇಲೆ ಕ್ಲಿಕ್ ಮಾಡಿ "E-KYC ಮೂಲಕ ಆಧಾರ್ ದೃಡೀಕರಿಸಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ರೈತರ ಅಧಾರ್ ಕಾರ್ಡ ನಂಬರ್ ಅನ್ನು ನಮೂದಿಸಿ "ಸಹಮತಿ ಇದೆ" ಎಂದು ಕ್ಲಿಕ್ ಮಾಡಿಕೊಂಡು ಕೆಳಗಡೆ ದೃಡೀಕರಣ ವಿಧಾನವನ್ನು ಆಯ್ಕೆ ಮಾಡಿ ಅಲ್ಲಿ OTP ಮೇಲೆ ಕ್ಲಿಕ್ ಮಾಡಿ "ಓಟಿಪಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿಬೇಕು.

Step-3: ನಂತರ ಮೊಬೈಲ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಿ ಇದಾದ ನಂತರ "ಸಲ್ಲಿಸಿ" ಬಟನ್ ಮೇಲೆ ಒತ್ತಿದರೆ ನಿಮ್ಮ ಎಲ್ಲಾ ವಿವರ ಇಲ್ಲಿ ತೋರಿಸುತ್ತದೆ. ಇಲ್ಲಿ ಮೊಬೈಲ್ ನಂಬರ್ ಹಾಕಿ "ಸಕ್ರಿಯಗೊಳಿಸಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಮೇಲೆ ತಿಳಿಸಿರುವ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ ನಿಮ್ಮ ಸರ್ವೆ ನಂಬರ್ ಗಳು ಇಲ್ಲಿ ಗೋಚರಿಸುತ್ತವೆ ಬಳಿಕ ನಿಮ್ಮ ಜಮೀನಿನ್ನು ಭೇಟಿ ಮಾಡಿ ಒಂದು ಒಂದು ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಿ "ಬೆಳೆ ವಿವರ ದಾಖಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಈಗ ತಾವು ಆ ಸರ್ವೆ ನಂಬರ್ ನಲ್ಲಿ ಬೆಳೆದಿರುವ ಬೆಳೆ ವಿವರವನ್ನು ಹಾಕಿ ಬೆಳೆಯ 2 ಪೋಟೋ ಕ್ಲಿಕ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕು.

ಇದನ್ನೂ ಓದಿ: PM Yasasvi Scholarship-ಪಿಎಂ ಯಶಸ್ವಿ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Crop survey Upload- ಬೆಳೆ ವಿವರವನ್ನು ಅಪ್ಲೋಡ್ ಮಾಡಿ:

ಬೆಳೆ ಸಮೀಕ್ಷೆ ಅಪ್ಲಿಕೇಶನ್ ಮೂಲಕ ಸಮೀಕ್ಷೆಯನ್ನು ಮಾಡಿದ ಬಳಿಕ ಈ ಮಾಹಿತಿಯನ್ನು ಅಪ್ಲೋಡ್ ಮಾಡುವುದ ಕಡ್ಡಾಯವಾಗಿದೆ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು "ಅಪ್ಲೋಡ್ ಮಾಡಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬೆಳೆ ಸಮೀಕ್ಷೆಯ ಅಂತಿಮ ವರದಿಯನ್ನು ಅಪ್ಲೋಡ್ ಮಾಡಬೇಕು.

Bele Samikshe-ಹಿಂದಿನ ವರ್ಷದ ಬೆಳೆ ಮಾಹಿತಿ ಚೆಕ್ ಮಾಡಿಕೊಳ್ಳುವ ವಿಧಾನ:

ರೈತರು ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಾದ ಬೆಳೆ ಮಾಹಿತಿಯನ್ನು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಬೆಳೆ ವಿವರವನ್ನು ಚೆಕ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

ಇದನ್ನೂ ಓದಿ: PMAY Yojana-ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹2.5 ಲಕ್ಷ ಸಬ್ಸಿಡಿ!ಈಗಲೇ ಅರ್ಜಿ ಸಲ್ಲಿಸಿ!

Crop Survey App Helpline- ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು:

ಸಹಾಯವಾಣಿ ಸಂಖ್ಯೆ: 18004253553

ಬೆಳೆ ವಿವರ ದಾಖಲಾತಿ ಹೇಗೆ ಮಾಡುವುದು ಎನ್ನುವ ಮಾಹಿತಿಯ ಕುರಿತು ಅಗತ್ಯ ಮಾಹಿತಿಯನ್ನು ಪಡೆಯಲು ನಿಮ್ಮ ಗ್ರಾಮಕ್ಕೆ ಕೃಷಿ ಇಲಾಖೆಯಿಂದ ನೇಮಿಸಿರುವ ಖಾಸಗಿ ನಿವಾಸಿ(PR)ಯನ್ನು ಅಥವಾ ನಿಮ್ಮ ಹಳ್ಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.

WhatsApp Group Join Now
Telegram Group Join Now
Share Now: