Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!

October 14, 2025 | Siddesh
Sainik School Admission 2025-ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅವಕಾಶ! ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

ನಮ್ಮ ದೇಶದಲ್ಲಿರುವ ವಿವಿಧ ಸೈನಿಕ ಶಾಲೆಯಲ್ಲಿ 2026-27 ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ಮತ್ತು 9ನೇ ತರಗತಿ ಪ್ರವೇಶ(Sainik School Admission) ಪಡೆಯಲು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರವೇಶ ಪರೀಕ್ಷೆಯನ್ನು ಬರೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡುವ ಗುರಿಯನ್ನು ಹಾಕಿಕೊಂಡಿರುವ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಅವಕಾಶ ಇಲ್ಲಿದೆ ನಮ್ಮ ದೇಶದಲ್ಲಿ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಸೈನಿಕ ಶಾಲೆಯಲ್ಲಿ ವ್ಯಾಸಂಗ ಮಾಡಲು ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಪರೀಕ್ಷೆಯನ್ನು ಬರೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: Reels Competition-ಪರಿಸರ ಸಂರಕ್ಷಣೆ ಕುರಿತು ರೀಲ್ಸ್ ಮಾಡಿ 50,000/- ಬಹುಮಾನ ಗೆಲ್ಲಿ!

ಸೈನಿಕ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯಲು ಅರ್ಹತಾ ಪರೀಕ್ಷೆಯನ್ನು ಬರೆಯಲು ಆನ್ಲೈನ್ ಮೂಲಕ ಪ್ರಸ್ತುತ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಮುಖ ದಿನಾಂಕಗಳು ಯಾವುವು? ಇದರ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

Sainik School Admission Eligibility Criteria-ಪ್ರವೇಶಕ್ಕಾಗಿ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು:

  • ಸೈನಿಕ ಶಾಲೆಯಲ್ಲಿ 6 ನೇ ತರಗತಿ ಮತ್ತು 9ನೇ ತರಗತಿ ವ್ಯಾಸಂಗ ಮಾಡಲು ಪ್ರವೇಶವನ್ನು ಪಡೆಯಲು ವಿದ್ಯಾರ್ಥಿಯು ಅಖಿಲ ಭಾರತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಿರಬೇಕು.
  • ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು.
  • ವಿದ್ಯಾರ್ಥಿಯ ವಯಸ್ಸು 31 ಮಾರ್ಚ್ 2026ಕ್ಕೆ ಅಂದರೆ 6ನೇ ತರಗತಿ ಪ್ರವೇಶ ಪಡೆಯಲು 10-12 ವರ್ಷ ಭರ್ತಿಯಾಗಿರಬೇಕು.
  • 6ನೇ ತರಗತಿ ಪ್ರವೇಶ ಪಡೆಯಲು ವಿದ್ಯಾರ್ಥಿಯು ಈ ಶೈಕ್ಷಣಿಕ ವರ್ಷದಲ್ಲಿ 5ನೇ ತರಗತಿ ಪಾಸಾಗಿರಬೇಕು.
  • ಇದೇ ರೀತಿ 9ನೇ ತರಗತಿ ಪ್ರವೇಶ ಪಡೆಯಲು ವಿದ್ಯಾರ್ಥಿಯು ಈ ಶೈಕ್ಷಣಿಕ ವರ್ಷದಲ್ಲಿ 8ನೇ ತರಗತಿ ಪಾಸಾಗಿರಬೇಕು.
  • ವಿದ್ಯಾರ್ಥಿಯ ವಯಸ್ಸು 31 ಮಾರ್ಚ್ 2026ಕ್ಕೆ ಅಂದರೆ 9ನೇ ತರಗತಿ ಪ್ರವೇಶ ಪಡೆಯಲು 13-15 ವರ್ಷ ಭರ್ತಿಯಾಗಿರಬೇಕು.

ಇದನ್ನೂ ಓದಿ: Sheep Farming Training-ಆರ್ ಸೆಟ್ ಸಂಸ್ಥೆಯಿಂದ ಉಚಿತ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ!

Sainik School Admission Important Dates-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಸೈನಿಕ ಶಾಲೆಯಲ್ಲಿ 6ನೇ ಮತ್ತು 9ನೇ ತರಗತಿಗೆ ಪ್ರವೇಶ ಪಡೆಯಲು ಸಂಬಂಧಪಟ್ಟ ಬೋರ್ಡ್ ನಿಂದ ಅರ್ಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಮುಖ ದಿನಾಂಕಗಳ ಪಟ್ಟಿ ಹೀಗಿದೆ:

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ- 10 ಆಕ್ಟೋಬರ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಆಕ್ಟೋಬರ್ 2025
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ- 31 ಆಕ್ಟೋಬರ್ 2025
  • ಅರ್ಜಿ ತಿದ್ದುಪಡಿಗೆ ಅವಕಾಶ- 02 ನವೆಂಬರ್ 2025 ರಿಂದ 04 ನವೆಂಬರ್ 2025
  • ಪ್ರವೇಶ ಪರೀಕ್ಷೆ ದಿನಾಂಕ- ಜನವರಿ 2026 ಕೊನೆಯಲ್ಲಿ

ಇದನ್ನೂ ಓದಿ: Period Leave Policy-ರಾಜ್ಯದ್ಯಂತ ಮಹಿಳಾ ನೌಕರಿಗೆ ಭರ್ಜರಿ ಸಿಹಿ ಸುದ್ದಿ: ಪ್ರತಿ ತಿಂಗಳು 1 ದಿನ ಋತುಚಕ್ರ ರಜೆ!

Sainik School Admission

Sainik School Admission Online Application-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ "Sainik School Admission Online Application" ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ ಬರುವ "New Registration" ಬಟನ್ ಮೇಲೆ ಕ್ಲಿಕ್ ಮಾಡಿ ಕೆಳಗೆ ಸ್ಕ್ರ‍ೋಲ್ ಮಾಡಿ Click Here to Proceed ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಬಳಕೆದಾರ ಐಡಿ ಮತ್ತು ಪಾರ್ವಡ್ ಅನ್ನು ರಚನೆ ಮಾಡಿಕೊಳ್ಳಬೇಕು.

Step-3: ಇದಾದ ಬಳಿಕ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ User ID ಮತ್ತು Password ಹಾಕಿ ಲಾಗಿನ್ ಅದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: MSP Scheme in Karnataka-ಬೆಂಬಲ ಬೆಲೆಯಲ್ಲಿ ಶೇಂಗಾ,ಸೂರ್ಯಕಾಂತಿ ಸೇರಿದಂತೆ 5 ಉತ್ಪನ್ನಗಳ ಖರೀದಿ ಆರಂಭ! ಬೆಲೆ ಎಷ್ಟು?

Required Documents For Application-ಅರ್ಜಿ ಸಲ್ಲಿಸಲು ದಾಖಲೆಗಳು:

  • ವಿದ್ಯಾರ್ಥಿಯ ಆಧಾರ್ ಕಾರ್ಡ
  • ನಿವಾಸಿ ದೃಡೀಕರಣ ಪ್ರಮಾಣ ಪತ್ರ
  • ಪೋಟೋ
  • ಶಾಲಾ ವ್ಯಾಸಂಗ ಪ್ರಮಾಣ ಪತ್ರ
  • ಹಿಂದಿನ ತರಗತಿ ಅಂಕಪಟ್ಟಿ

For More Information-ಹೆಚ್ಚಿನ ಮಾಹಿತಿಗಾಗಿ ಅಗತ್ಯ ವಿವರ:

Sanik School Admission Helpline-ಸಹಾಯವಾಣಿ- 011-40759000
Sanik School Official Website-ಅಧಿಕೃತ ವೆಬ್ಸೈಟ್-Click Here
Sanik School Admission Notification-ಪ್ರವೇಶದ ಪ್ರಕಟಣೆ ಕೈಪಿಡಿ ಪ್ರತಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: