Sheep Farming Scheme-ಕುರಿ ಮೇಕೆ ಸಾಕಾಣಿಗೆಕೆ 43,750 ರೂ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

January 9, 2026 | Siddesh
Sheep Farming Scheme-ಕುರಿ ಮೇಕೆ ಸಾಕಾಣಿಗೆಕೆ 43,750 ರೂ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?
Share Now:

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅಡಿಯಲ್ಲಿ ಸರ್ಕಾರವು ಗ್ರಾಮೀಣ ಬಡ, ಹಿಂದುಳಿದ(Amrutha Swabhimani Kurigahi Yojane) ವರ್ಗಗಳ ಹಾಗೂ ದುರ್ಬಲ ವರ್ಗದ ಕುಟುಂಬಗಳ ಆರ್ಥಿಕವಾಗಿ ಸಹಾಯವನ್ನು ಮಾಡಲು ಕುರಿ ಮೇಕೆ ಸಾಕಾಣಿಗೆಕೆ 43,750 ರೂ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಕುರಿ–ಮೇಕೆ ಸಾಕಾಣಿಕೆ ಶಾಶ್ವತ ಆದಾಯವನ್ನು(sheep farming scheme) ನೀಡುವ ಪ್ರಮುಖ ವೃತ್ತಿಯಾಗಿದ್ದು, ಅದೆಷ್ಟೋ ಸಾವಿರಾರು ಕುಟುಂಬಗಳ ಜೀವನವನ್ನು ಸಾಗಿಸಲು ಸಹಾಯಕಾರಿಯಾಗಿದ್ದು, ಸ್ವಯಂ ಉದ್ಯೋಗ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಉದ್ಯೋಗ ಅವಕಾಶವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: A-Khata-ನಗರ ಪ್ರದೇಶದ ಬಿ-ಖಾತಾ ಆಸ್ತಿಗಳಿಗೆ ಎ-ಖಾತಾ ವಿತರಣೆಗೆ ಸಚಿವ ಸಂಪುಟದಲ್ಲಿ ನಿರ್ಣಯ!

ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಈ ಯೋಜನೆಯ ಅಡಿಯಲ್ಲಿ ಸಿಗುವ ಸಹಾಯಧನವೆಷ್ಟು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.

Amrutha Swabhimani Kurigahi Yojane-ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಎಂದರೇನು?

ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯ ಅಡಿಯಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಕುರಿ ಅಥವಾ ಮೇಕೆ ಸಾಕಾಣಿಕೆ ಪ್ರಾರಂಭಿಸಲು ಆರ್ಥಿಕವಾಗಿ ಬೆಂಬಲ ನೀಡಲಾಗುತ್ತದೆ. ಹಾಗೆಯೇ ರೈತರ ಸ್ವಾವಲಂಬನೆ ಮತ್ತು ಮಹಿಳಾ ಸಬಲೀಕರಣವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶ.

ಈ ಯೋಜನೆಯಡಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ₹1,75,000/- ಗಳ ಘಟಕ ವೆಚ್ಚದಲ್ಲಿ 20+1 ಕುರಿ/ಮೇಕೆ ಘಟಕಗಳನ್ನು ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ. 50 ರಷ್ಟು ಎನ್.ಸಿ.ಡಿ.ಸಿ ವತಿಯಿಂದ ಸಾಲ, ಶೇ. 25 ರಷ್ಟು ರಾಜ್ಯ ಸರ್ಕಾರದ ಸಹಾಯಧನ ಮತ್ತು ಉಳಿದ ಶೇ. 25 ರಷ್ಟು ಫಲಾನುಭವಿಯ ವಂತಿಕೆಯಾಗಿರುತ್ತದೆ.

ಇದನ್ನೂ ಓದಿ: SIM Card-ಹೊಸ ಸಿಮ್ ಕಾರ್ಡ ಖರೀದಿಗೆ ಈ ನಿಯಮ ಪಾಲಿಸುವುದು ಕಡ್ದಾಯ!

Purpose of this Scheme-ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು?

ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಸ್ವಯಂ ಉದ್ಯೋಗವನ್ನು ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ.

ಮಹಿಳೆಯರು, ಯುವಕರು, ಹಿಂದುಳಿದ ವರ್ಗದವರಿಗೆ ಆರ್ಥಿಕ ಸಬಲೀಕರಣವನ್ನು ಕಡಿಮೆ ಮಾಡಲು.

ಪಶು ಸಂಪತ್ತಿನ ಅಭಿವೃದ್ದಿ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಬಲಪಡಿಸುವುದು.

ಕುರಿ–ಮೇಕೆ ಸಾಕಾಣಿಕೆಯ ಮೂಲಕ ತಿಂಗಳಾ-ವಾರ್ಷಿಕ ಆದಾಯ ಹೆಚ್ಚಿಸುವುದು.

ಕುರಿ ಮತ್ತು ಮೇಕೆ ಸಾಕಾಣಿಕೆಯನ್ನು ಉದ್ಯಮವಾಗಿ ಅಭಿವೃದ್ಧಿಪಡಿಸುವುದು.

ಇದನ್ನೂ ಓದಿ: Kuri Shed Subsidy-ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಾಣಕ್ಕೆ ರೂ 70,000 ಪಡೆಯುವುದು ಹೇಗೆ!

Subsidy Amount details-ಈ ಯೋಜನೆಯಡಿ ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ?

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅಡಿಯಲ್ಲು ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡಲು ಅರ್ಹವಿರುವ ಅಭ್ಯರ್ಥಿಗಳಿಗೆ ಒಟ್ಟು ₹1,75,000 ವೆಚ್ಚದ ಕುರಿ ಸಾಕಾಣಿಕೆ ಘಟಕವನ್ನು ನೀಡಲಾಗುತ್ತದೆ.

ಆರ್ಥಿಕ ವಿಭಾಗಮೊತ್ತವಿವರಣೆ
ಸರ್ಕಾರಿ ಸಹಾಯಧನ₹43,750ಮರುಪಾವತಿ ಮಾಡುವಂತಿಲ್ಲ
ಬ್ಯಾಂಕ್ ಸಾಲ (NCDC)₹87,500ಕಂತುಗಳಲ್ಲಿ ಕಟ್ಟುವ ಹಣ
ಸ್ವಂತ ವಂತಿಕೆ₹43,750ಅಭ್ಯರ್ಥಿಯ ಹೂಡಿಕೆ
ಒಟ್ಟು ಘಟಕ ವೆಚ್ಚ₹1,75,00020 + 1 ಕುರಿ ಘಟಕ

ಇದನ್ನೂ ಓದಿ: Whatsapp Banking-ಗ್ರಾಹಕರಿಗೆ ಸಿಹಿ ಸುದ್ದಿ: ಈಗ ವಾಟ್ಸಾಪ್ ನಲ್ಲೇ ಬ್ಯಾಂಕಿಂಗ್ ಸೇವೆ ಲಭ್ಯ!

Uses of this Scheme-ಈ ಯೋಜನೆಯಡಿ ದೊರೆಯುವ ಪ್ರಮುಖ ಲಾಭಗಳು:

ಕಡಿಮೆ ಹೂಡಿಕೆಯಲ್ಲಿ ಕುರಿ/ಮೇಕೆ ಸಾಕಾಣಿಕೆ ಉದ್ಯಮ ಆರಂಭಿಸುವ ಅವಕಾಶ.

ಸರ್ಕಾರದಿಂದ ನೇರವಾಗಿ ಲಭ್ಯವಾಗುವ ಸಹಾಯಧನದ ಬೆಂಬಲ.

ಬ್ಯಾಂಕ್ ಮೂಲಕ ಸುಲಭ ಸಾಲ ಸೌಲಭ್ಯ ಪಡೆಯುವ ಸಾಧ್ಯತೆ.

ಕುರಿ ಸಾಕಾಣಿಕೆಯಿಂದ ವರ್ಷಪೂರ್ತಿ ಸ್ಥಿರ ಮತ್ತು ಹೆಚ್ಚುವರಿ ಆದಾಯ.

ಮನೆಯ ಇತರ ಸದಸ್ಯರಿಗೂ ಉದ್ಯೋಗ ಅವಕಾಶ ನಿರ್ಮಾಣ.

ಗ್ರಾಮೀಣ ಜೀವನದಲ್ಲೇ ಸ್ವಾವಲಂಬನೆ ಸಾಧಿಸುವ ಉತ್ತಮ ಮಾರ್ಗ.

ಇದನ್ನೂ ಓದಿ: Morarji Desai admission-ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಆರಂಭ!

Who Can Apply-ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.

ಅರ್ಜಿದಾರರು ಸ್ಥಳೀಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾಗಿರಬೇಕು.

ಕುರಿ ಸಾಕಾಣಿಕೆಗೆ ಕನಿಷ್ಠ 1,000 ಚದರ ಅಡಿ ಜಾಗ ಹೊಂದಿರಬೇಕು.

ಅಭ್ಯರ್ಥಿಯು FRUITS ಪೋರ್ಟಲ್‌ನಲ್ಲಿ ರಿಜಿಸ್ಟರ್ ಮಾಡಿರಬೇಕು.

ಇದನ್ನೂ ಓದಿ: Bele Parihara Amount-ಬೆಳೆ ಹಾನಿ ಮತ್ತು ಬೆಳೆ ವಿಮೆ ಪರಿಹಾರದ ಹಣ ರೈತರ ಖಾತೆ!

Documents required-ಅರ್ಜಿ ಸಲ್ಲಿಸಲು ದಾಖಲಾತಿಗಳು?

ಆಧಾರ್ ಕಾರ್ಡ್
ರೇಷನ್ ಕಾರ್ಡ್
FRUITS ಪೋರ್ಟಲ್ ನೋಂದಣಿ ದೃಢೀಕರಣ
ಸಹಕಾರಿ ಸಂಘದ ಸದಸ್ಯತ್ವ ಪ್ರಮಾಣ ಪತ್ರ
ಜಾಗದ ದಾಖಲೆಗಳು
ಫೋಟೋ
ಬ್ಯಾಂಕ್ ಪಾಸ್‌ಬುಕ್

ಇದನ್ನೂ ಓದಿ: Online Land Records-ರೈತರು ಇನ್ಮುಂದೆ ತಮ್ಮ ಜಮೀನಿನ ದಾಖಲೆ ಪಡೆಯುವುದು ಭಾರೀ ಸುಲಭ!

Where To APply-ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು?

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯ ಅಡಿಯಲ್ಲು ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡಲು ಅರ್ಹವಿರುವ ಅಭ್ಯರ್ಥಿಗಳಿಗೆ ನಿಮ್ಮ ತಾಲೂಕಿನ ಪಶುಸಂಗೋಪನಾ ಇಲಾಖೆ ಅಥವಾ ಸಹಾಯಕ ನಿರ್ದೇಶಕರ ಕಚೇರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಕಚೇರಿ ಅರ್ಜಿಯನ್ನು ಸಲ್ಲಿಸಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: