SSLC Key Answer-SSLC ಪರೀಕ್ಷೆ 1ರ ಕೀ ಉತ್ತರಗಳು ಬಿಡುಗಡೆ: ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!

April 4, 2026 | Siddesh
SSLC Key Answer-SSLC ಪರೀಕ್ಷೆ 1ರ ಕೀ ಉತ್ತರಗಳು ಬಿಡುಗಡೆ: ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!
Share Now:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ರ ಕೀ ಉತ್ತರಗಳನ್ನು (Key Answers) ಅಧಿಕೃತವಾಗಿ ಪ್ರಕಟಿಸಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಂಡಳಿಯ ವೆಬ್‌ಸೈಟ್‌ನಲ್ಲಿ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ(SSLC and PUC Result) ಪ್ರಕ್ರಿಯೆಯು ಏಪ್ರಿಲ್ 5 ರಿಂದ 20 ರವರೆಗೆ ನಡೆಯಲಿದ್ದು, ಮಂಡಳಿಯ ತಾತ್ಕಾಲಿಕ ವೇಳಾಪಟ್ಟಿಯಂತೆ ಏಪ್ರಿಲ್ 24ರಂದು ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.

ದ್ವಿತೀಯ ಪಿಯುಸಿ ಪರೀಕ್ಷೆ-1ರ ಮೌಲ್ಯಮಾಪನ ಕಾರ್ಯ ಈಗಾಗಲೇ ಮುಕ್ತಾಯಗೊಂಡಿದ್ದು, ಅದರ ಫಲಿತಾಂಶವು ಏಪ್ರಿಲ್ 7 ರಿಂದ 12ರ ಮಧ್ಯೆ ಪ್ರಕಟವಾಗುವ ಸಾಧ್ಯತೆಯಿದೆ ಇರುತ್ತದೆ. ಈ ಬಾರಿ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ(SSLC) ಹಾಜರಾಗಿದ್ದು, ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಏನಾದರೂ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಸಹ ಮಂಡಳಿಯು ಅವಕಾಶ ಕಲ್ಪಿಸಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಕೀ ಉತ್ತರಗಳನ್ನು ಡೌನ್‌ಲೋಡ್(SSLC Exam Key Answer Download) ಮಾಡಿಕೊಳ್ಳಬಹುದು. ಆಕ್ಷೇಪಣೆ ಸಲ್ಲಿಸಲು ಬಯಸುವವರು ಏಪ್ರಿಲ್ 5 ರ ಸಂಜೆ 5:30 ರ ಒಳಗಾಗಿ ತಮ್ಮ ಮನವಿಯನ್ನು ಸಲ್ಲಿಸಬೇಕಾಗುತ್ತದೆ. ನಿಗದಿತ ಸಮಯದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ತಿಳಿಸಿದ್ದಾರೆ.

SSLC And PUC Exma Date-ಈ ಬಾರಿ ಪರೀಕ್ಷೆ ನಡೆದ ದಿನಾಂಕ:

2026ರ ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆದಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ದಿನಾಂಕ: 18 ಮಾರ್ಚ್ 2026 ರಿಂದ 02 ಏಪ್ರಿಲ್ 2026 ರವರೆಗೆ ನಡೆದಿತ್ತು.

SSLC And PUC Student Details-ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಿ-ಅಂಶ:

ಸುಮಾರು 8 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ.

ಪಿಯುಸಿ ಪರೀಕ್ಷೆಯನ್ನು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು.

SSLC Exam Key Answer Download Link-ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ಕೀ-ಉತ್ತರ ಪ್ರತಿಗಳನ್ನು ಡೌನ್ಲೋಡ್ ಮಾಡುವುದು ಹೇಗೆ?

ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ SSLC ಪರೀಕ್ಷೆ 1ರ ಕೀ ಉತ್ತರ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Step-1: ಮೊದಲಿಗೆ ನಿಮ್ಮ ಮೊಬೈಲ್‌ನಲ್ಲಿ ಈ SSLC Exam Key Answer Download Now ಲಿಂಕ್ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

SSLC Exam 2026

Step-2: ಮುಖಪುಟದಲ್ಲಿ ಕಾಣಿಸುವ 'SSLC Exam-1 Key Answers' ಎನ್ನುವ ವಿಭಾಗದ ಕೆಳಗೆ ಕಾಣಿಸುವ ವಿಷಯದ ಮೇಲೆ ಕ್ಲಿಕ್ ಮಾಡಿ.

Step-3: ಈಗ ವಿಷಯವಾರು ಕೀ ಉತ್ತರಗಳ ಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.

Step-4: ನಿಮಗೆ ಬೇಕಾದ ವಿಷಯದ ಕೀ ಉತ್ತರವನ್ನು ಆಯ್ಕೆ ಮಾಡಿ 'Download' ಬಟನ್ ಒತ್ತಿರಿ.

Step-5: ಡೌನ್‌ಲೋಡ್ ಆದ PDF ಫೈಲ್ ಮೂಲಕ ನಿಮ್ಮ ಉತ್ತರಗಳನ್ನು ತಾಳೆ ನೋಡಿ ಪರಿಶೀಲಿಸಿಕೊಳ್ಳಿ.

SSLC And Puc Exam Result Date-ಏಪ್ರಿಲ್ ನಲ್ಲಿ ಪಲಿತಾಂಶ ಪ್ರಕಟ ಸಾಧ್ಯತೆ:

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವು ಏಪ್ರಿಲ್ 7 ರಿಂದ 12ರ ಮಧ್ಯೆ ಪ್ರಕಟವಾಗುವ ಸಾಧ್ಯತೆಯಿದೆ ಇರುತ್ತದೆ. ಹಾಗೆಯೇ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಏಪ್ರಿಲ್ 24 ರಂದು ಪ್ರಕಟವಾಗುವ ನಿರೀಕ್ಷೆಯಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: