Tata Scholarship-ಟಾಟಾ ಕ್ಯಾಪಿಟಲ್ ಲಿಮಿಟೆಡ್‌ ವತಿಯಿಂದ 1.0 ಲಕ್ಷ ವಿದ್ಯಾರ್ಥಿವೇತನ! ಕೇವಲ 5 ದಿನ ಬಾಕಿ!

February 23, 2026 | Siddesh
Tata Scholarship-ಟಾಟಾ ಕ್ಯಾಪಿಟಲ್ ಲಿಮಿಟೆಡ್‌ ವತಿಯಿಂದ 1.0 ಲಕ್ಷ ವಿದ್ಯಾರ್ಥಿವೇತನ! ಕೇವಲ 5 ದಿನ ಬಾಕಿ!
Share Now:

2025-2026 ನೇ ಸಾಲಿನ ಟಾಟಾ ಕ್ಯಾಪಿಟಲ್ ಪಂಖ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಟಾಟಾ ಕ್ಯಾಪಿಟಲ್(Tata Scholarship Application) ಲಿಮಿಟೆಡ್ ವತಿಯಿಂದ ಪ್ರತಿಭಾನ್ವಿತ ಪದವಿದರ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಭಾರತದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಸಾಮಾನ್ಯ ಅಥವಾ ವೃತ್ತಿಪರ ಪದವಿ, ಪಾಲಿಟೆಕ್ನಿಕ್/ಡಿಪ್ಲೊಮಾ ಅಥವಾ ಐಟಿಐ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ(Tata Scholarship Amount) ಮಟ್ಟವನ್ನು ಅವಲಂಬಿಸಿ 10,000 ರಿಂದ 1,00,000 ವರೆಗಿನ ಗರಿಷ್ಠ ಮಿತಿಗೆ ಒಳಪಟ್ಟು ಅವರ ಬೋಧನಾ ಅಥವಾ ಕೋರ್ಸ್ ಶುಲ್ಕದ 80% ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಬಹುದು.

ಇದನ್ನೂ ಓದಿ: Senior Citizen Card-ನಿಮ್ಮ ವಯಸ್ಸು 60 ವರ್ಷ ದಾಟಿದೆಯೇ? ಹಾಗಾದರೆ ಈ ಸವಲತ್ತುಗಳನ್ನು ಪಡೆಯಿರಿ!

ಈ ಯೋಜನೆಯ ಅಡಿಯಲ್ಲಿ 1.0 ಲಕ್ಷ ವಿದ್ಯಾರ್ಥಿವೇತನ(Scholarship Application) ಪಡೆಯಲು ಯಾರೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳನ್ನು ಒದಗಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಈ ಯೋಜನೆಯ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ? ಇತರ ಹೆಚ್ಚಿನ ಎಲ್ಲಾ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Tata Scholarship Amount-ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?

ವಿದ್ಯಾರ್ಥಿವೇತನದ ಮೊತ್ತವು ಬೋಧನಾ ಶುಲ್ಕದ 80% ಆಗಿದ್ದು, ಗರಿಷ್ಠ 1 ಲಕ್ಷ ರೂಪಾಯಿ ಗಳ ವರೆಗೆ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಇದನ್ನೂ ಓದಿ: Farmer ID-ರೈತರ ಗಮನಕ್ಕೆ: ಕೃಷಿ ಇಲಾಖೆ ಸೌಲಭ್ಯ ಪಡೆಯಲು FID ಅಪ್‌ಡೇಟ್ ಕಡ್ಡಾಯ – ತಪ್ಪಿದರೆ ಸಬ್ಸಿಡಿ ಕಟ್!

Tata Scholarship Application Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಫೆಬ್ರವರಿ 2026

Tata Scholarship Eligibility Criteria-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.

ಶೈಕ್ಷಣಿಕ ಅರ್ಹತೆಯ ಆಧಾರದ ಮೇಲೆ ಭಾರತದ ಪ್ರತಿಷ್ಠಿತ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಸಂಸ್ಥೆಯಲ್ಲಿ ವೃತ್ತಿಪರ ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳು.
ಅರ್ಜಿದಾರರು ಕನಿಷ್ಠ 80% ಅಂಕಗಳನ್ನು ಗಳಿಸಿರಬೇಕು.

ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷ ಮೀರಿರಬಾರದು.

ಪ್ರತಿಷ್ಠಿತ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ವೃತ್ತಿಪರ ಸಂಸ್ಥೆಗಳಲ್ಲಿ ದಾಖಲಾಗಿರಬೇಕು.

ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ದಾಖಲಾದ ವಿದ್ಯಾರ್ಥಿಗಳು ಮತ್ತು ಜೀವಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭೂವಿಜ್ಞಾನ, ಅರಣ್ಯಶಾಸ್ತ್ರ, ಹವಾಮಾನಶಾಸ್ತ್ರ, ಪರಮಾಣು ವಿಜ್ಞಾನ, ಆಣ್ವಿಕ ರಸಾಯನಶಾಸ್ತ್ರ, ತಳಿಶಾಸ್ತ್ರ, ಪ್ಯಾಲಿಯಂಟಾಲಜಿ, ಮಾನವಶಾಸ್ತ್ರ, ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ಸೇರಿದಂತೆ ಇತರ ವಿಶೇಷ ವಿಜ್ಞಾನ ವಿಭಾಗಗಳು ಸೇರಿವೆ.

ಟಾಟಾ ಕ್ಯಾಪಿಟಲ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಇದನ್ನೂ ಓದಿ: Krishi Sadhaka-2026 ನೇ ಸಾಲಿನ 'ವಿ-ಸೂಪರ್ ಸ್ಟಾರ್ ರೈತ ಅಭಿಯಾನ’ಕ್ಕೆ ಚಾಲನೆ! ಯಾರೆಲ್ಲ ಭಾಗವಹಿಸಬಹುದು!

Required Documents For Tata Scholarship-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳವುವು?

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪ್ರವೇಶ ಪತ್ರ
  • ಆದಾಯ ಪ್ರಮಾಣಪತ್ರ.
  • ನಿವಾಸಿ ದೃಡೀಕರಣ ಪತ್ರ.
  • ವೈದ್ಯಕೀಯ ಪ್ರಮಾಣಪತ್ರ(ಅಗತ್ಯವಿದ್ದಲ್ಲಿ)
  • ಪಾಸ್‌ಪೋರ್ಟ್ ಸೈಜ್ ಫೋಟೋ

ಇದನ್ನೂ ಓದಿ: Property Registration-ಕಾವೇರಿ 2.0 ತಂತ್ರಾಂಶ ಬಿಡುಗಡೆ! ಇನ್ಮುಂದೆ ಆಸ್ತಿ ನೋಂದಣಿ ಸಂಪೂರ್ಣ ಕಾಗದ ರಹಿತ!

Tata Scholarship Online Application-ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬಹುದು?

ಟಾಟಾ ಕ್ಯಾಪಿಟಲ್ ಲಿಮಿಟೆಡ್‌ನ ವತಿಯಿಂದ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ "Tata Scholarship Online Application" ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Anganawadi Worker-ಮಹಿಳೆಯರಿಗೆ ಸುವರ್ಣಾವಕಾಶ: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಗೆ ಅರ್ಜಿ ಆಹ್ವಾನ!

Tata scholarship

Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿದಾರ ವಿದ್ಯಾರ್ಥಿಗಳು ಈ ಜಾಲತಾಣವನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೂಲಕ ಅಗತ್ಯ ವಿವರಗಳನ್ನು ನಮೂದಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಬೇಕಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

For More Information-ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಇಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: