HomeNew postsತೋಟಗಾರಿಕೆ ಮತ್ತು ಅರಣ್ಯ ಜಾತಿಯ ಸಸಿ ಪಡೆಯಲು ಅರ್ಜಿ ಅಹ್ವಾನ! 

ತೋಟಗಾರಿಕೆ ಮತ್ತು ಅರಣ್ಯ ಜಾತಿಯ ಸಸಿ ಪಡೆಯಲು ಅರ್ಜಿ ಅಹ್ವಾನ! 

ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಹಸಿರು ಪ್ರೀತಿಯನ್ನು ಜಾಗೃತ ಗೊಳಿಸಿ, ಜನರ ಬೇಡಿಕೆಗೆ ಅನುಸಾರವಾಗಿ ಸಸಿಗಳನ್ನು ಪೂರೈಸುವ ಜವಾಬ್ದಾರಿಯಿಂದ ವಿವಿಧ ಯೋಜನೆಗಳಡಿಯಲ್ಲಿ “ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಿಂದ” ಸೋಮವಾರಪೇಟೆ- ಕುಶಾಲನಗರ ರಸ್ತೆಯಲ್ಲಿ ಹುದುಗೂರು ಗ್ರಾಮದಲ್ಲಿರುವ ಸಾಮಾಜಿಕ ಅರಣ್ಯ ವಲಯದ ಸಸ್ಯಕ್ಷೇತ್ರದಲ್ಲಿ 50 ವಿವಿಧ ಸಸಿಗಳನ್ನು ಬೆಳಸಲಾಗಿದ್ದು ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ ( Job card ) ಹೊಂದಿರುವ ಬಿಪಿಎಲ್ ಕಾರ್ಡುದಾರು ಸದರಿ ಯೋಜನೆಯಲ್ಲಿ ಉಚಿತವಾಗಿ ಸಸಿಗಳನ್ನು ಪಡೆಯಬಹುದಾಗಿದೆ (ಷರತ್ತುಗಳು ಅನ್ವಯ) ಹಾಗೂ ಇತರೆ ಯೋಜನೆಗಳಲ್ಲಿ ಸರ್ಕಾರ ನಿಗಧಿ ಪಡಿಸಿರುವ 6×9 ಅಳತೆಯ ಚೀಲದ ಸಸಿಗಳು ಸಸಿ ಒಂದಕ್ಕೆ ರೂ 7.00 ಹಾಗೂ 8×12 ಅಳತೆಯ ಚೀಲದ ಸಸಿಗಳು ಸಸಿ ಒಂದಕ್ಕೆ ರೂ 23.60 ಗಳನ್ನು ಪಾವತಿಸಿ ಪಡೆದುಕೊಳ್ಳಬಹುದಾಗಿದೆ. 

ಕೊಡಗಿನಲ್ಲಿ ನಶಿಸುತ್ತಿರುವ ಕಾಡು ಜಾತಿಯ ಹಣ್ಣುಗಳ ಸಸಿಗಳು ಹಾಗೂ ಪ್ರಥಮ ಬಾರಿಗೆ ಜಾನುವಾರಿಗೆ ಉತ್ತಮ ಮೇವಿನ ಬೆಳೆಯಾದ “ಅಗಸ” ಸಸಿಗಳನ್ನು ಮತ್ತು ಮಣ್ಣಿನ ಸವಕಳಿ ತಡೆಯಲು ನೆಡಬಹುದಾದ ಲಾವಂಚ ಸಸಿಗಳು ಹಾಗು ಔಷಧೀಯ ಸಸಿಗಳನ್ನು ಬೆಳೆದಿರುವುದು ವಿಶೇಷ. ಅಪರೂಪವಾದ ಪಾರಿಜಾತ ಸಸಿಗಳು ಸಹ ಲಭ್ಯವಿರುತ್ತದೆ ಎಂದು  ವಲಯ ಅರಣ್ಯಾಧಿಕಾರಿಗಳು, ಸೋಮವಾರಪೇಟೆ ಇವರು ಪ್ರಕಟನೆ ಹೊರಡಿಸಿದ್ದಾರೆ. 

ಸಸಿಗಳನ್ನು ಪಡೆಯಲು ಒದಗಿಸಬೇಕಾದ ದಾಖಲಾತಿಗಳು: 

1. ಪಹಣಿ ಪತ್ರ (RTC)  2. ಬಿಪಿಎಲ್ ಕಾರ್ಡು (ಮನರೇಗಾ ಯೋಜನೆಗೆ ಮಾತ್ರ)  3. ಉದ್ಯೋಗ ಚೀಟಿ (Job Card)  (ಮನರೇಗಾ ಯೋಜನೆಗೆ ಮಾತ್ರ)  4. ಆಧಾರ್ ಕಾರ್ಡ್ 

ಇದೆ ರೀತಿ ಪ್ರತಿ ಜಿಲ್ಲೆಯಲ್ಲಿಯೂ ಅರಣ್ಯ ಇಲಾಖೆಯ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಈ ರೀತಿಯ ಸಸಿ ವಿತರಣೆ ಯೋಜನೆಗಳು ಮತ್ತು ಸಸಿ ಲಭ್ಯವಿದ್ದು ಒಮ್ಮೆ ಭೇಟಿ ಮಾಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬವುದಾಗಿದೆ.

 ಮಾಹಿತಿಗಾಗಿ ಸಂಪರ್ಕಿಸಿ: 

1. ಫಿರೋಜ್ ಖಾನ್ ಎಸ್.ಕೆ, ಉಪ ವಲಯ ಅರಣ್ಯಾಧಿಕಾರಿಗಳು : 9483646101

2. ಭವ್ಯ ಸಿ.ಕೆ , ಉಪ ವಲಯ ಅರಣ್ಯಾಧಿಕಾರಿಗಳು : 9008994572

3. ಅನಿಲ್ ಕುಮಾರ್ ಕೆ.ಬಿ, ಗಸ್ತು ಅರಣ್ಯ ಪಾಲಕರು : 9482108007,

4. ಶೀಥಲ್ ಪಿ.ಎಲ್, ತಾಂತ್ರಿಕ ಸಹಾಯಕರು, ಮನರೇಗಾ ( ಅರಣ್ಯ ): 8861340218

Most Popular

Latest Articles

Related Articles