HomeGovt Schemesuchitha holige yantra application-ಉಚಿತ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

uchitha holige yantra application-ಉಚಿತ ಹೊಲಿಗೆ ಯಂತ್ರ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತದಿಂದ ಉಚಿತ ಹೊಲಿಗೆ ಯಂತ್ರವನ್ನು(uchitha holige yantra) ಪಡೆಯಲು ಅರ್ಹ ಫಲಾನುಭವಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಉಚಿತ ಹೊಲಿಗೆ ಯಂತ್ರದ ಪ್ರಯೋಜನವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು? ಅರ್ಜಿ ಸಲ್ಲಿಸಲು ಬೇಕಾಗುವ ಸಲ್ಲಿಸಬೇಕಾದ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ ಇತ್ಯಾದಿ ವಿವರವನ್ನು ಪ್ರಕಟಿಸಲಾಗಿದೆ.

ಪ್ರತಿ ವರ್ಷ ಹಿಂದುಳಿದ ವರ್ಗಕ್ಕೆ ಸೇರಿದ ನಿರುದ್ಯೋಗಿ ಫಲಾನುಭವಿಗಳಿಗೆ ವಿವಿಧ ವಲಯಗಳಲ್ಲಿ ಸ್ವ-ಉದ್ಯೋಗ ಮಾಡಲು ಅರ್ಥಿಕವಾಗಿ ನೆರವು ನೀಡಲು ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ವಿವಿಧ ನಿಗಮಗಳಿಂದ ಉಚಿತವಾಗಿ ಹೊಲಿಗೆ ಯಂತ್ರವನ್ನು ನೀಡಲು ಅರ್ಜಿ ಆಹ್ವಾನಿಸಲಾಗುತ್ತಿದ್ದು ಇದರಂತೆ ಈ ವರ್ಷವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: Jamininna Ottuvari- 1.41 ಕೋಟಿ ಸರಕಾರಿ ಜಮೀನು ಭೂ ಒತ್ತುವರಿ ತೆರವು ಮಹತ್ವದ ಯೋಜನೆ ಜಾರಿ!

How can apply for sewing machine yojana-ಉಚಿತ ಹೊಲಿಗೆ ಯಂತ್ರ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಹಿಂದುಳಿದ ವರ್ಗಗಳ ಬಡ ಕುಟುಂಬದವರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದವರಾಗಿರಬೇಕು. 

2) ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರ ಪ್ರದೇಶದವರಿಗೆ ರೂ.98,000/-ಗಳು ಪಟ್ಟಣ ಪುದೇಶದವರಿಗೆ ರೂ.1,20,000/-ಗಳ ಒಳಗಿರಬೇಕು, 

3) ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು.

application last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಉಚಿತ ಹೋಲಿಗೆ ಯಂತ್ರ ಪಡೆಯಲು 31 ಆಗಸ್ಟ್ 2024ರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: pm kisan 18th installment date- ಪಿ ಎಂ ಕಿಸಾನ್ 18ನೇ ಕಂತಿನ ಹಣ ಈ ತಿಂಗಳಲ್ಲಿ ಬಿಡುಗಡೆ ಸಾಧ್ಯತೆ! ಹಣ ಪಡೆಯಲು ಇ-ಕೆವೈಸಿ ಮಾಡಿ!

Required documents for free sewing machine yojana- ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ/Aadhar card

2) ಬ್ಯಾಂಕ್ ಪಾಸ್ ಬುಕ್ ಪ್ರತಿ/Bank pass book

3) ರೇಷನ್ ಕಾರ್ಡ ಪ್ರತಿ/ration card

4) ಅರ್ಜಿದಾರರ ಪಾಸ್ ಪೋರ್ಟ್ ಪೋಟೋ/photo

5) ಹೋಲಿಗೆ ಯಂತ್ರ ತರಬೇತಿ ಪ್ರಮಾಣ ಪತ್ರ/ sewing machine training certificate

6) ಜಾತಿ ಮತ್ತು ಆದಾಯ ಪ್ರಮಾಣ ಪತ್ರ? caste and income certificate

7) ಮೊಬೈಲ್ ಸಂಖ್ಯೆ/mobile number

ನಿಗಮದ ವಿಶೇಷ ಸೂಚನೆಗಳು ಹೀಗಿದೆ:

1) ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ವಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

2) 2023-24ನೇ ಸಾಲಿನಲ್ಲಿ ಅರ್ಜಿಸಲ್ಲಿಸಿ ಸೌಲಭ್ಯ ಪಡೆಯದೇ ಇರುವ ಫಲಾಪೇಕ್ಷಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಇದನ್ನೂ ಓದಿ:  bele hani parihara-80 ಸಾವಿರ ಹೆಕ್ಟೇರ್ ಬೆಳೆ ನಾಶಕ್ಕೆ ಒಂದು ವಾರದೊಳಗಾಗಿ ರೈತರ ಖಾತೆಗೆ ಬೆಳೆ ಪರಿಹಾರ: ಸಚಿವ ಕೃಷ್ಣ ಬೈರೇಗೌಡ!

3) ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಆಧಾರ್ ಜೋಡಣೆಯಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆಧಾರ್ ಕಾರ್ಡ್ ನಲ್ಲಿರುವಂತೆ ಅರ್ಜಿದಾರರ ಹೆಸರು, (ಶ್ರೀ/ಶ್ರೀಮತಿ ಕುಮಾರಿ ಮುಂತಾದ ಮಾಹಿತಿಗಳೆಲ್ಲವು) ಇತರ ದಾಖಲಾತಿಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ವಾಸ್ ಪುಸ್ತಕದಲ್ಲಿಯೂ ಇದ್ದು ಹೊಂದಾಣಿಕೆಯಾಗಬೇಕು.

4) ಈ ಮೇಲ್ಕಂಡ ಎಲ್ಲಾ ಯೋಜನೆಗಳಡಿಯಲ್ಲಿ ಸೌಲಭ್ಯ ಒದಗಿಸಲು ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

uchitha olige yantra arji- ಅರ್ಜಿ ಸಲ್ಲಿಸುವ ವಿಧಾನ:

ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿಗಳನ್ನು ಸೇವಾಸಿಂಧು ವೋರ್ಟಲ್ (http://sevasindhu.karnataka.gov.in) ಮುಖಾಂತರ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳನ್ನು ನೇರವಾಗಿ ಭೇಟಿ ಮಾಡಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ. 

ಇದನ್ನೂ ಓದಿ:  karmika elake yojane-ತಾಯಿ ಮಗು ಸಹಾಯ ಹಸ್ತ ಯೋಜನೆ, ರೂ 6,000 ಅರ್ಥಿಕ ನೆರವು ಪಡೆಯಲು ಅರ್ಜಿ ಆಹ್ವಾನ!

For more information- ಹೆಚ್ಚಿನ ಮಾಹಿತಿಗಾಗಿ:

devaraj arasu nigama helpline numbers- ಸಹಾಯವಾಣಿ ಸಂಖ್ಯೆಗಳು: 80-22374832, 8050770004, 805077000

ನಿಗಮದ ಅಧಿಕೃತ ವೆಬ್ಸೈಟ್: Click here

Most Popular

Latest Articles

Related Articles