Valmiki Nigama Subsidy Yojane-ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

August 20, 2025 | Siddesh
Valmiki Nigama Subsidy Yojane-ವಾಲ್ಮೀಕಿ ನಿಗಮದಿಂದ ವಿವಿಧ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
Share Now:

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಮತ್ತು ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದಿಂದ(Valmiki Nigama Susbidy Schemes) 6 ಕ್ಕೂ ಹೆಚ್ಚಿನ ಸಹಾಯಧನ ಆಧಾರಿತ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗೆ ಸಬ್ಸಿಡಿಯನ್ನು ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾಸಲಾಗಿದೆ.

2025-26 ನೇ ಸಾಲಿನಲ್ಲಿ ಫಲಾನುಭವಿ ಆಧಾರಿತ ಸಹಾಯಧನ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಅಭ್ಯರ್ಥಿಗಳಿಗೆ ಸ್ವಂತ ಉದ್ಯೋಗವನ್ನು(Valmiki Nigama Susbidy Yojana) ಆರಂಭಿಸಲು ವಿವಿಧ ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Loan Interest Subsidy-ರೈತರಿಗೆ ಭರ್ಜರಿ ಸಿಹಿ ಸುದ್ದಿ!ಈ ಯೋಜನೆಯಡಿ ಸಿಗಲಿದೆ ಬಡ್ಡಿ ರಿಯಾಯಿತಿ!

ನಿಗಮಗಳಿಂದ ಯಾವೆಲ್ಲ ಯೋಜನೆಯಡಿ(Valmiki Nigama Yojanegalu) ಅರ್ಜಿ ಆಹ್ವಾನಿಸಲಾಗಿದೆ? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ? ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Last Date For Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಹ ಅರ್ಜಿದಾರರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಮತ್ತು ಮೇದಾರ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮ ದಿಂದ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಮುಖ ದಿನಾಂಕಗಳು:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ- 18 ಆಗಸ್ಟ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 17 ಸೆಪ್ಟೆಂಬರ್ 2025

ಇದನ್ನೂ ಓದಿ: Free Hostel Admission-ಉಚಿತ ಹಾಸ್ಟೆಲ್ ಪ್ರವೇಶ ಪಡೆಯಲು ಅರ್ಜಿ ಆಹ್ವಾನ!

How To Apply-ಅರ್ಜಿ ಸಲ್ಲಿಸುವುದು ಹೇಗೆ?

ನಿಗಮದ ವಿವಿಧ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಜಿದಾರ ಅಭ್ಯರ್ಥಿಗಳು ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್ ಕೇಂದ್ರವನ್ನು ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Selection Method-ಫಲಾನುಭವಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಒಮ್ಮೆ ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ಬಳಿಕ ಸಂಬಂಧಪಟ್ಟ ನಿಗಮದಿಂದ ದಾಖಲಾತಿಗಳ ಪರೀಶಿಲನೆಯನ್ನು ಮಾಡಲಾಗುತ್ತದೆ ಬಳಿಕ ಆ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಆಯ್ಕೆ ಸಮಿತಿಯ ಸಭೆಯಲ್ಲಿ ಅರ್ಜಿಗಳನ್ನು ಮಂಡಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: Car Subsidy Scheme-ಸ್ವಾವಲಂಬಿ ಸಾರಥಿ ಯೋಜನೆಯಡಿ ಕಾರು ಖರೀದಿಗೆ ₹4.00 ಲಕ್ಷ ಸಹಾಯಧನಕ್ಕೆ ಅರ್ಜಿ!

Karnataka Nigama Yojanegalu-ಯಾವೆಲ್ಲ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ?ಸಬ್ಸಿಡಿ ಮೊತ್ತ ಎಷ್ಟು?

1) ಭೂ ಒಡೆತನ ಯೋಜನೆ/Bhu Odetana Yojane: ಈ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಶೇ 50% ಸಹಾಯಧನವನ್ನು ಕೃಷಿ ಜಮೀನನ್ನು ಖರೀದಿ ಮಾಡಲು ಆಸಕ್ತಿಯನ್ನು ಹೊಂದಿರುವ ಅರ್ಹ ಅರ್ಜಿದಾರರಿಗೆ ನೀಡಲಾಗುತ್ತದೆ.

ಒಟ್ಟು ಘಟಕ ವೆಚ್ಚ ರೂ 25 ಲಕ್ಷಕ್ಕೆ ಶೇ 50% ಸಬ್ಸಿಡಿ ಯಂತೆ ರೂ 12.5 ಲಕ್ಷ ಒದಗಿಸಲಾಗುತ್ತದೆ. ಉಳಿದ ಸಾಲದ ಮೊತ್ತಕ್ಕೆ ಶೇ 4% ಬಡ್ಡಿದರದಂತೆ ಫಲಾನುಭವಿಗಳು ಬ್ಯಾಂಕ್ ನಲ್ಲಿ ಸಾಲವನ್ನು ಮರುಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ.

2) ಬೋರ್ವೆಲ್ ಕೊರೆಸಲು ಸಹಾಯಧನ/Ganaga Kalyana Yojane: ಗಂಗಾ ಕಲ್ಯಾಣ ಯೋಜನೆಯಡಿ 1.20 ಎಕರೆಯಿಂದ 5.0 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಕೊಳವೆಬಾವಿಯನ್ನು ಕೊರೆದು ಪಂಪ್ ಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಲು ನೀರಾವರಿ ಸೌಲಭ್ಯವನ್ನು ಹೊಂದಲು ಒಟ್ಟು ಘಟಕ ವೆಚ್ಚ ₹4.75 ಲಕ್ಷ/3.75 ಲಕ್ಷಕ್ಕೆ ₹4.0 ಲಕ್ಷದ ವರೆಗೆ ಸಬ್ಸಿಡಿಯನ್ನು ಒದಗಿಸಲಾಗುತ್ತದೆ ಉಳಿದ ಮೊತ್ತವನ್ನು ಸಾಲದ ರೂಪದಲ್ಲಿ ನೀಡಲಾಗುತ್ತದೆ.

ಇದನ್ನೂ ಓದಿ: Whatsapp Chatbot-ನಾಗರಿಕರಿಗೆ ಗ್ರಾಮ ಪಂಚಾಯತಿ ಯೋಜನೆಗಳನ್ನು ತಲುಪಿಸಲು ಇನ್ಮುಂದೆ ವಾಟ್ಸಾಪ್ ಚಾಟ್‌ಬಾಟ್‌ ಬಳಕೆ!

3) ಸ್ವಾವಲಂಬಿ ಸಾರಥಿ ಯೋಜನೆ/Swalambi Sarati Yojane: ನೀರುದ್ಯೋಗಿ ಯುವಕರು ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆ ಮೂಲಕ ಸಬ್ಸಿಡಿಯಲ್ಲಿ ಸರಕು ವಾಹನ/ಹಳದಿ ಬೋರ್ಡ್ ಟ್ಯಾಕ್ಸಿ ಅನ್ನು ಖರೀದಿ ಮಾಡಲು ಶೇ 75% ಅಥವಾ ಗರಿಷ್ಠ ರೂ ₹4.00 ಲಕ್ಷ ಸಬ್ಸಿಡಿಯನ್ನು ನೀಡಲಾಗುತ್ತದೆ.

4) ಎರಡು ಎಮ್ಮೆ/ಹಸು ಖರೀದಿಗೆ ಸಬ್ಸಿಡಿ/Hainugarike Subsidy Yojane: ಹೈನುಗಾರಿಕೆ ಕೈಗೊಳ್ಳಲು ಎರಡು ಎಮ್ಮೆ/ಹಸುಗಳನ್ನು ಖರೀದಿ ಮಾಡಲು ಶೇ 50% ರಷ್ಟು ಗರಿಷ್ಠ 1.25 ಲಕ್ಷ ಸಹಾಯಧನವನ್ನು ಈ ಯೋಜನೆಯಡಿ ಪಡೆಯಬಹುದು.

5) ವ್ಯಾಪಾರ ಸಾಲ ಯೋಜನೆ/Business Loan Subsidy Yojana: ವ್ಯಾಪಾರ ಮತ್ತು ಇತರೆ ಉದ್ದೇಶಗಳಿಗೆ(ತರಕಾರಿ/ಹಣ್ಣಿನ ಅಂಗಡಿ ಇನ್ನಿತರೆ ವ್ಯಾಪಾರವನ್ನು ಆರಂಭಿಸಲು) ಒಟ್ಟು ಘಟಕೆ ವೆಚ್ಚದ ಶೇ 70% ರಷ್ಟು ರೂ 2.00 ಲಕ್ಷದ ವರೆಗೆ ಸಬ್ಸಿಡಿಯನ್ನು ಈ ಯೋಜನೆಯ ಮೂಲಕ ಪಡೆಯಲು ಅವಕಾಶವಿರುತ್ತದೆ.

6) ಸ್ವಯಂ ಉದ್ಯೋಗ ನೇರಸಾಲ ಯೋಜನೆಗಳು: ಕಿರು ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ನಿಗಮಗಳಿಂದ ಸಾಲ ಮತ್ತು ಸಹಾಯಧನವನ್ನು ಈ ಯೋಜನೆಯಡಿ ನೀಡಲಾಗುತ್ತದೆ.

ಇದನ್ನೂ ಓದಿ: Borewell Subsidy-ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಹಾಯಧನಕ್ಕೆ ಅರ್ಜಿ ಅಹ್ವಾನ!

7) ಮೈಕ್ರ‍ೋ ಕ್ರೆಡಿಟ್(ಪ್ರೇರಣಾ)ಯೋಜನೆ/Micro Finance Scheme: ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಗಳಿಗೆ ಈ ಯೋಜನೆಯ ಮೂಲಕ ಸಾಲ ಮತ್ತು ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಒಟ್ಟು ಘಟಕ ವೆಚ್ಚ ರೂ 5.00 ಲಕ್ಷಕ್ಕೆ ರೂ 2.50 ಲಕ್ಷ ಸಹಾಯಧನ ಮತ್ತು ಉಳಿದ ರೂ 2.50 ಲಕ್ಷಕ್ಕೆ ಶೇ 4% ರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ.

Online Application-ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಹಂತ-1: ಅಭ್ಯರ್ಥಿಗಳು ಮೊದಲಿಗೆ "Apply Now" ಇಲ್ಲಿ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಅನ್ನು ಪ್ರವೇಶ ಮಾಡಬೇಕು.

ಹಂತ-2: ಇದಾದ ಬಳಿಕ "ಇಲಾಖೆಗಳು ಮತ್ತು ಸೇವೆ" ಬಟನ್ ಮೇಲೆ ಕ್ಲಿಕ್ ಮಾಡಿ ಬಲಬದಿಯಲ್ಲಿ ಕಾಣುವ "Search" ವಿಭಾಗದಲ್ಲಿ"ಯೋಜನೆಯ ಹೆಸರುಗಳನ್ನು" ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಅಧಿಖೃತ ಅರ್ಜಿ ಫಾರಂ ತೆರೆದುಕೊಳ್ಳುತ್ತದೆ.

ಹಂತ-3: ಇಲ್ಲಿ ಕೆಳಗೆ ಗೋಚರಿಸುವ "ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ" ಬಟನ್ ಮೇಲೆ ಕ್ಲಿಕ್ ಮಾಡಿ, ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಿ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: UPSC Free Coaching-ಉಚಿತ UPSC ಮತ್ತು KAS ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ಅರ್ಜಿ ಆಹ್ವಾನ!

Important Notice For Applicant-ಅರ್ಜಿದಾರರಿಗೆ ನಿಗಮದಿಂದ ವಿಶೇಷ ಪ್ರಕಟಣೆಗಳ ವಿವರ ಹೀಗಿದೆ:

2023-24 ಮತ್ತು 2024-25ನೇ ಸಾಲಿನಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಶ್ಯಕತೆ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೊತೆಗೆ ನಿಗಮದ ನಿರ್ದೇಶಕ ಮಂಡಳಿ ವಿವೇಚನಾ ಕೋಟ ಮತ್ತು ಸರಕಾರದ ಸಾಂಸ್ಥಿಕ ಕೋಟಾದಡಿ ಸಲ್ಲಿಸುವ ಅರ್ಜಿಗಳನ್ನು ಸಹ ಸೇವಾ ಸಿಂಧು ಪೋರ್ಟಲ್ ಮೂಲಕವೇ ಸಲ್ಲಿಸಬೇಕು ಎಂದು ನಿಗಮದಿಂದ ಸೂಚಿಸಲಾಗಿದೆ.

Valmikki Nigama Official Website-ಹೆಚ್ಚಿನ ಮಾಹಿತಿ ಪಡೆಯಲು ನಿಗಮದ ಅಧಿಕೃತ ವೆಬ್ಸೈಟ್ ಲಿಂಕ್- Click Here
Valmikki Nigama Helpline-ಸಹಾಯವಾಣಿ- 1902

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: