Weed Mat Subsidy-ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

July 12, 2025 | Siddesh
Weed Mat Subsidy-ತೋಟಗಾರಿಕೆ ಇಲಾಖೆಯಿಂದ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!
Share Now:

ಕರ್ನಾಟಕ ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ತೋಟಗಾರಿಕೆ ಇಲಾಖೆಯಿಂದ(Horticulture Department) MIDH ಯೋಜನೆಯಡಿ ರೈತರಿಗೆ ವೀಡ್ ಮ್ಯಾಟ್ ಖರೀದಿಸಿ ತಮ್ಮ ತೋಟದಲ್ಲಿ ಹಾಕಿಕೊಂಡು ಕಳೆ ನಿರ್ವಹಣೆಯನ್ನು ಮಾಡಲು 1 ಲಕ್ಷ ಸಹಾಯಧನವನ್ನು ಒದಗಿಸಲಾಗುತ್ತಿದೆ.

ಏನಿದು ವೀಡ್ ಮ್ಯಾಟ್ ? ಇದರ ಬಳಕೆಯಿಂದ ರೈತರಿಗೆ ಅಗುವ ಪ್ರಯೋಜನಗಳೇನು? ರೈತರು ತಮ್ಮ ತೋಟದಲ್ಲಿ ವೀಡ್ ಮ್ಯಾಟ್(Weed Mat Subsidy Application) ಅನ್ನು ಬಳಸುವುದು ಹೇಗೆ ಇದರ ಕುರಿತು ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Post Office Franchise-ಪೋಸ್ಟ್ ಆಫೀಸ್ ಫ್ರಾಂಚೈಸಿ ಪಡೆಯಲು ಅವಕಾಶ! ತಿಂಗಳಿಗೆ 50,000 ಆದಾಯ!

ಇದರ ಜೊತೆಗೆ ರೈತರು ತೋಟಗಾರಿಕೆ ಇಲಾಖೆ(Karnataka Horticulture Department) ಮೂಲಕ ಸಹಾಯಧನದಲ್ಲಿ ವೀಡ್ ಮ್ಯಾಟ್ ಖರೀದಿಸಲು ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿ, ಸಬ್ಸಿಡಿ ವಿವರ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದ್ದು ಈ ಮಾಹಿತಿಯು ಉಪಯುಕ್ತವಾಗಿದ್ದಲ್ಲಿ ತಪ್ಪದೇ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

What Is Weed Mat-ಏನಿದು ವೀಡ್ ಮ್ಯಾಟ್? ರೈತರಿಗೆ ಇದರ ಬಳಕೆಯಿಂದಾಗುವ ಪ್ರಯೋಜನಗಳೇನು?

ವೀಡ್ ಮ್ಯಾಟ್ (Weed Mat) ಅಥವಾ ಕಳೆ ನಿಯಂತ್ರಣ ಮ್ಯಾಟ್ ಎನ್ನುವುದು ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಳಸುವ ಒಂದು ವಿಶೇಷ ರೀತಿಯ ಕೃತಕ ವಸ್ತುವಾಗಿದೆ. ಇದು ಸಾಮಾನ್ಯವಾಗಿ ಪಾಲಿಪ್ರೊಪಿಲೀನ್ (Polypropylene) ಅಥವಾ ಇತರ ಸಿಂಥೆಟಿಕ್ ಫೈಬರ್‌ಗಳಿಂದ ತಯಾರಿಸಲ್ಪಟ್ಟಿರುತ್ತದೆ. ಇದನ್ನು ಜಿಯೋಟೆಕ್ಸ್‌ಟೈಲ್ (Geotextile) ಫ್ಯಾಬ್ರಿಕ್ ಎಂದೂ ಕರೆಯುತ್ತಾರೆ. ವೀಡ್ ಮ್ಯಾಟ್‌ನ ಮುಖ್ಯ ಉದ್ದೇಶವೆಂದರೆ ಕೃಷಿ ಭೂಮಿ ಅಥವಾ ತೋಟದಲ್ಲಿ ಕಳೆ (Weed) ಬೆಳವಣಿಗೆಯನ್ನು ತಡೆಗಟ್ಟುವುದು,

ಜೊತೆಗೆ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳುವುದು, ಗಿಡಗಳಿಗೆ ಸೂಕ್ತ ವಾತಾವರಣವನ್ನು ಒದಗಿಸುವುದು ಮತ್ತು ಬೆಳೆ ಉತ್ಪಾದನೆಯನ್ನು ಹೆಚ್ಚಿಸುವುದು.ವೀಡ್ ಮ್ಯಾಟ್‌ಗಳು ವಿವಿಧ ಗಾತ್ರ, ದಪ್ಪ, ಮತ್ತು ಬಣ್ಣಗಳಲ್ಲಿ (ಸಾಮಾನ್ಯವಾಗಿ ಕಪ್ಪು, ಹಸಿರು, ಅಥವಾ ಬಿಳಿ) ಲಭ್ಯವಿರುತ್ತವೆ. ಇವು ಗಾಳಿ ಮತ್ತು ನೀರನ್ನು ಒಳಗೆ ಸೀಳಲು ಅವಕಾಶ ನೀಡುವಂತೆ ವಿನ್ಯಾಸಗೊಳಿಸಲಾಗಿದ್ದು, ಆದರೆ ಕಳೆಗಳ ಬೆಳವಣಿಗೆಗೆ ಅಗತ್ಯವಾದ ಸೂರ್ಯನ ಬೆಳಕನ್ನು ತಡೆಯುತ್ತವೆ.

ಇದನ್ನೂ ಓದಿ: Free Mobile Repair Training-1 ತಿಂಗಳ ಉಚಿತ ಮೊಬೈಲ್ ರಿಪೇರಿ ತರಬೇತಿ! ಬ್ಯಾಂಕಿನಿಂದ ಸಾಲ ಸೌಲಭ್ಯ!

Weed Mat Benefits For Farmers-ವೀಡ್ ಮ್ಯಾಟ್‌ನಿಂದ ರೈತರಿಗೆ ಆಗುವ ಪ್ರಯೋಜನಗಳು:

ವೀಡ್ ಮ್ಯಾಟ್‌ನ ಬಳಕೆಯಿಂದ ರೈತರಿಗೆ ಹಲವಾರು ಪ್ರಯೋಜನಗಳಿವೆ, ಇವು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಕೃಷಿ ಕಾರ್ಯಗಳನ್ನು ಸರಳಗೊಳಿಸುವಲ್ಲಿ ಸಹಾಯಕವಾಗಿವೆ

ಕಳೆ ನಿಯಂತ್ರಣ: ವೀಡ್ ಮ್ಯಾಟ್ ಕಳೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಇದು ಸೂರ್ಯನ ಬೆಳಕನ್ನು ಕಳೆಗಳಿಗೆ ತಲುಪದಂತೆ ತಡೆಯುವುದರಿಂದ ಕಳೆಗಳು ಬೆಳೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಕೃಷಿಕರು ಕಳೆ ತೆಗೆಯಲು ಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಕೃತಕ ರಾಸಾಯನಿಕ ಕಳೆನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಪರಿಸರ ಸ್ನೇಹಿಯಾಗಿರುತ್ತದೆ.

ಮಣ್ಣಿನ ತೇವಾಂಶ ಸಂರಕ್ಷಣೆ: ವೀಡ್ ಮ್ಯಾಟ್ ಮಣ್ಣಿನ ತೇವಾಂಶವನ್ನು ಆವಿಯಾಗದಂತೆ ತಡೆಯುತ್ತದೆ. ಇದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡಬಹುದು, ವಿಶೇಷವಾಗಿ ಬರಗಾಲದ ಪ್ರದೇಶಗಳಲ್ಲಿ ಇದು ಹೆಚ್ಚು ಉಪಯುಕ್ತವಾಗಿದೆ. ಇದು ಗಿಡಗಳ ಬೇರುಗಳಿಗೆ ಸ್ಥಿರವಾದ ತೇವಾಂಶವನ್ನು ಒದಗಿಸುತ್ತದೆ, ಇದರಿಂದ ಬೆಳೆ ಆರೋಗ್ಯಕರವಾಗಿ ಬೆಳೆಯುತ್ತದೆ.

ಮಣ್ಣಿನ ತಾಪಮಾನ ನಿಯಂತ್ರಣ: ವೀಡ್ ಮ್ಯಾಟ್ ಮಣ್ಣಿನ ತಾಪಮಾನವನ್ನು ಸ್ಥಿರವಾಗಿರಿಸುತ್ತದೆ, ಇದರಿಂದ ಬೇಸಿಗೆಯಲ್ಲಿ ಮಣ್ಣು ಅತಿಯಾಗಿ ಬಿಸಿಯಾಗುವುದನ್ನು ಮತ್ತು ಚಳಿಗಾಲದಲ್ಲಿ ತಂಪಾಗುವುದನ್ನು ತಡೆಯುತ್ತದೆ. ಇದು ಗಿಡಗಳ ಬೆಳವಣಿಗೆಗೆ ಸಹಾಯಕವಾಗಿದೆ.

ಇದನ್ನೂ ಓದಿ: Scholarship-MBA ವ್ಯಾಸಂಗಕ್ಕೆ ₹2.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Weed Mat

ಇದನ್ನೂ ಓದಿ: PM Yasasvi Scholarship-ಪಿಎಂ ಯಶಸ್ವಿ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಮಣ್ಣಿನ ಸವೆತ ತಡೆಗಟ್ಟುವಿಕೆ: ಮಳೆಯಿಂದಾಗಿ ಅಥವಾ ಗಾಳಿಯಿಂದಾಗಿ ಮಣ್ಣಿನ ಸವೆತವನ್ನು (Soil Erosion) ತಡೆಗಟ್ಟಲು ವೀಡ್ ಮ್ಯಾಟ್ ಸಹಾಯ ಮಾಡುತ್ತದೆ. ಇದು ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ಕೀಟ-ರೋಗ ನಿಯಂತ್ರಣ: ಕಳೆಗಳಿಲ್ಲದಿರುವುದರಿಂದ ಕೀಟಗಳು ಮತ್ತು ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ, ಏಕೆಂದರೆ ಕೆಲವು ಕೀಟಗಳು ಕಳೆಗಳ ಮೇಲೆ ಆಶ್ರಯ ಪಡೆಯುತ್ತವೆ. ವೀಡ್ ಮ್ಯಾಟ್‌ನಿಂದ ಮಣ್ಣಿನ ಶುಚಿತ್ವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಬೆಳೆ ಗುಣಮಟ್ಟ ಮತ್ತು ಇಳುವರಿ ಹೆಚ್ಚಳ: ಕಳೆಗಳ ಸ್ಪರ್ಧೆ ಇಲ್ಲದಿರುವುದರಿಂದ ಬೆಳೆಗಳಿಗೆ ಹೆಚ್ಚಿನ ಪೋಷಕಾಂಶಗಳು ಮತ್ತು ನೀರು ದೊರೆಯುತ್ತದೆ, ಇದರಿಂದ ಬೆಳೆಯ ಗುಣಮಟ್ಟ ಮತ್ತು ಇಳುವರಿ ಹೆಚ್ಚಾಗುತ್ತದೆ.

ಕಡಿಮೆ ಶ್ರಮ ಮತ್ತು ವೆಚ್ಚ: ಕೈಯಿಂದ ಕಳೆ ತೆಗೆಯುವ ಅಗತ್ಯವಿಲ್ಲದಿರುವುದರಿಂದ ಕಾರ್ಮಿಕರ ವೆಚ್ಚ ಕಡಿಮೆಯಾಗುತ್ತದೆ. ರಾಸಾಯನಿಕ ಕಳೆನಾಶಕಗಳ ಬಳಕೆ ಕಡಿಮೆಯಾದರಿಂದ ರಾಸಾಯನಿಕ ಗೊಬ್ಬರಗಳಿಗೆ ಖರ್ಚು ಕಡಿಮೆಯಾಗುತ್ತದೆ.

ಇದನ್ನೂ ಓದಿ: PMAY Yojana-ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹2.5 ಲಕ್ಷ ಸಬ್ಸಿಡಿ!ಈಗಲೇ ಅರ್ಜಿ ಸಲ್ಲಿಸಿ!

ದೀರ್ಘಕಾಲೀನ ಬಳಕೆ: ಉತ್ತಮ ಗುಣಮಟ್ಟದ ವೀಡ್ ಮ್ಯಾಟ್‌ಗಳು ಹಲವಾರು ವರ್ಷಗಳವರೆಗೆ (3-5 ವರ್ಷ ಅಥವಾ ಗುಣಮಟ್ಟದ ಆಧಾರದ ಮೇಲೆ) ಬಾಳಿಕೆ ಬರುತ್ತವೆ, ಇದರಿಂದ ಒಮ್ಮೆ ಹೂಡಿಕೆ ಮಾಡಿದರೆ ದೀರ್ಘಕಾಲೀನ ಪ್ರಯೋಜನವನ್ನು ಪಡೆಯಬಹುದು.

Weed Mat Susbidy-ವೀಡ್ ಮ್ಯಾಟ್ ಖರೀದಿಸಲು ಎಷ್ಟು ಸಬ್ಸಿಡಿ ಪಡೆಯಬಹುದು?

ರೈತರು ತಮ್ಮ ತೋಟದಲ್ಲಿ ವೀಡ್ ಮ್ಯಾಟ್ ಅನ್ನು ಹಾಕಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ MIDH ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಒಂದು ಚದರ ಮೀಟರ್ ವೀಡ್ ಮ್ಯಾಟ್ ಗೆ ರೂ 50/- ಸಹಾಯಧನದಂತೆ ಗರಿಷ್ಟ 1.0 ಲಕ್ಷದ ವರೆಗೆ ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Free Motor Repair-ಉಚಿತ ಎಲೆಕ್ಟ್ರಿಷಿಯನ್ ಮತ್ತು ಮೋಟರ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Order Copy-ಅಧಿಕೃತ ಆದೇಶದ ಪ್ರತಿ:

weed mat subsidy order copy

Weed Mat Eligibility-ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿದ ಮಾನದಂಡಗಳು:

  • ಫಲಾನುಭವಿಯ ಹೆಸರಿನಲ್ಲಿ ಜಮೀನು ಇರಬೇಕು.
  • ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು (Notary ರವರಿಂದ ದೃಡೀಕರಣ ಮಾಡಿಸಬೇಕು).
  • ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದಲ್ಲಿ ಮಾತ್ರ ಮರಣ ಪತ್ರ- ಸಕ್ಷಮ ಪ್ರಾಧಿಕಾರದಿಂದ, ಗ್ರಾಮ ಆಡಳಿತಾಧಿಕಾರಿಯಿಂದ ದೃಢೀಕರಿಸಿ. ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು.
  • ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದು, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು. ಮಹಿಳೆಯರ ಹೆಸರಿನಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಬೇಕು ಎಂದು ಅಧಿಕೃತ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Weed Mat Susbidy Application-ಅರ್ಜಿಯನ್ನು ಸಲ್ಲಿಸುವ ವಿಧಾನ:

ಆಸಕ್ತ ರೈತರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ತಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

  • ರೈತರ ಆಧಾರ್ ಕಾರ್ಡ/Aadhar Card
  • ಪೋಟೋ-2/Photo
  • ತೋಟಗಾರಿಕೆ ಬೆಳೆ ದೃಡೀಕರಣ ಪತ್ರ/Crop certificate
  • ಜಮೀನಿನ ಪಹಣಿ/ಊತಾರ್/RTC
  • ಬ್ಯಾಂಕ್ ಪಾಸ್ ಬುಕ್ ಪ್ರತಿ/Bankpass
  • ಮೊಬೈಲ್ ನಂಬರ್/Mobile

For more-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣ-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: